ಸ್ವಯಂಸೂಚನೆಗಳನ್ನು ತಯಾರಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು !

ಬಾಲಮಿತ್ರರೇ, ಸ್ವಯಂಸೂಚನೆಗಳನ್ನು ತಯಾರಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಈ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ…

೧. ಸ್ವಯಂಸೂಚನೆಯ ವಾಕ್ಯರಚನೆಯು ಸುಲಭ, ಕಡಿಮೆ ಮತ್ತು ಯೋಗ್ಯ ಶಬ್ದಗಳಲ್ಲಿರಬೇಕು.

ಸ್ವಯಂಸೂಚನೆಯ ರಚನೆಯು ಸುಲಭ, ಕಡಿಮೆ ಹಾಗೂ ಯೋಗ್ಯ ಶಬ್ದಗಳಲ್ಲಿರಬೇಕು. ಸ್ವಯಂಸೂಚನಾ ಪದ್ಧತಿ ೩ ರಲ್ಲಿ ಮಾತ್ರ ಸೂಚನೆಯು ೮-೧೦ ಸಾಲಿನದ್ದಾಗಿರಬೇಕು.

೨.ಸೂಚನೆಯಲ್ಲಿ ‘ಇಲ್ಲ, ಆಗುವುದಿಲ್ಲ, ಬೇಡ’ ಮುಂತಾದ ನಕಾರಾತ್ಮಕ ಶಬ್ದಗಳ ಉಪಯೋಗವನ್ನು ತಡೆಯಬೇಕು.

೧. ಅಯೋಗ್ಯ ಸೂಚನೆ : ಅಮ್ಮ ‘ದೂರದರ್ಶನವನ್ನು ಆರಿಸಿ ಅಧ್ಯಯನಕ್ಕೆ ಕುಳಿತುಕೋ’, ಎಂದು ಹೇಳಿದಾಗ ನಾನು ಕೋಪಗೊಳ್ಳುವುದಿಲ್ಲ.

೨. ಯೋಗ್ಯ ಸೂಚನೆ : ಅಮ್ಮ ‘ದೂರದರ್ಶನವನ್ನು ಆರಿಸಿ ಅಧ್ಯಯನಕ್ಕೆ ಕುಳಿತುಕೋ’, ಎಂದು ಹೇಳಿದಾಗ ಯಾವಾಗ ನನಗೆ ಸಿಟ್ಟು ಬರುವುದೋ, ಆಗ ನನಗೆ ಕೆಲವೇ ದಿನಗಳಲ್ಲಿ ಪರೀಕ್ಷೆಯು ಪ್ರಾರಂಭವಾಗಲಿರುವುದರಿಂದ ಅಮ್ಮ ನನಗೆ ಹಾಗೆ ಹೇಳುತ್ತಿದ್ದಾಳೆ ಎಂಬುದರ ಅರಿವಾಗುವುದು ಮತ್ತು ನಾನು ಶಾಂತನಾಗಿ ದೂರದರ್ಶನವನ್ನು ಆರಿಸಿ ಅಧ್ಯಯನಕ್ಕೆ ಕುಳಿತುಕೊಳ್ಳುವೆನು.

೩. ಸೂಚನೆಗಳು ವರ್ತಮಾನಕಾಲದಲ್ಲಿರಬೇಕು

ಸೂಚನೆಯಲ್ಲಿ ಭೂತಕಾಲವಿರಬಾರದು. ಸ್ವಯಂಸೂಚನಾಪದ್ಧತಿ ೧ ಹಾಗೂ ಸ್ವಯಂಸೂಚನಾಪದ್ಧತಿ ೨ ರ ಸೂಚನೆಗಳು ವರ್ತಮಾನಕಾಲದಲ್ಲಿದ್ದರೆ ಸ್ವಯಂಸೂಚನಾಬಪದ್ಧತಿ ೩ ರಲ್ಲಿ ಸೂಚನೆಯು ಸದ್ಯದ ವರ್ತಮಾನಕಾಲದಲ್ಲಿರುತ್ತದೆ.

೪. ತಮ್ಮ ಬಗ್ಗೆ ಉಲ್ಲೇಖಿಸುವುದು

ಸೂಚನೆಯಲ್ಲಿ ‘ನಾನು, ನನ್ನದು, ನನಗೆ, ನನ್ನ’ ಹೀಗೆ ತಮ್ಮ ಬಗ್ಗೆ ಉಲ್ಲೇಖಿಸಬೇಕು. ‘ನಮ್ಮ, ನಾವು, ನಮ್ಮದು’ ಹೀಗೆ ತಮ್ಮ ಬಗ್ಗೆ ಉಲ್ಲೇಖಿಸಬಾರದು.

೫. ಸೂಚನೆಯನ್ನು ಪ್ರಸಂಗಾನುರೂಪ ಯಥಾರ್ಥವಾಗಿ (ಸರಿಯಾಗಿ) ತಯಾರಿಸಬೇಕು.

೫.೧. ಅಯೋಗ್ಯ ಸೂಚನೆ : ಯಾವಾಗ ನಾನು ಅವ್ಯವಸ್ಥಿತತನದಿಂದ ಕೃತಿಮಾಡುತ್ತಿರುವೆನೋ, ಆಗ ನನಗೆ ಅದರ ಅರಿವಾಗುವುದು ಮತ್ತು ನಾನು ವ್ಯವಸ್ಥಿತವಾಗಿ ಕೃತಿಯನ್ನು ಮಾಡುವೆನು.

೫.೨. ಕೆಲವು ಯೋಗ್ಯ ಸೂಚನೆಗಳು

೧. ಯಾವಾಗ ನಾನು ಶಾಲೆಯ ಚೀಲದಲ್ಲಿ ಪುಸ್ತಕಗಳನ್ನು ಅವ್ಯವಸ್ಥಿತವಾಗಿ ತುಂಬಿಸುತ್ತಿರುವೆನೋ, ಆಗ ನನಗೆ ಅದರ ಅರಿವಾಗುವುದು ಮತ್ತು ನಾನು ಒಂದು ಬದಿಯಲ್ಲಿ ವಹಿಗಳನ್ನು ಮತ್ತು ಇನ್ನೊಂದು ಬದಿಯಲ್ಲಿ ಪುಸ್ತಕಗಳನ್ನು ತುಂಬಿಸುವೆನು.

೨. ಯಾವಾಗ ನಾನು ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ತೆಗೆದಿಡುತ್ತಿರುತ್ತೇನೆಯೋ, ಆಗ ನನಗೆ ‘ಅವ್ಯವಸ್ಥಿತತನ’ ಈ ದೋಷದ ಅರಿವಾಗುವುದು ಮತ್ತು ನಾನು ಚಪ್ಪಲಿಗಳನ್ನು ವ್ಯವಸ್ಥಿತವಾಗಿ ತೆಗೆದಿಡುವೆನು.

೬. ಸ್ವಯಂಸೂಚನೆಯಲ್ಲಿ ಯೋಗ್ಯ ದೃಷ್ಟಿಕೋನವನ್ನು ಸೇರಿಸುವುದು ಉಪಯುಕ್ತವಾಗಿದೆ.

೬.೧. ಸಾಮಾನ್ಯ ಸ್ವಯಂಸೂಚನೆ : ಯಾವಾಗ ನಾನು ಕಪಾಟಿನಲ್ಲಿ ಬಟ್ಟೆಗಳನ್ನು ರಾಶಿಮಾಡಿ ಇಡುತ್ತಿರುತ್ತೇನೆಯೋ, ಆಗ ನನಗೆ ಅದರ ಅರಿವಾಗುವುದು ಮತ್ತು ನಾನು ಬಟ್ಟೆಗಳನ್ನು ಮಡಚಿ ಕಪಾಟಿನಲ್ಲಿ ವ್ಯವಸ್ಥಿತವಾಗಿಡುವೆನು.

೬.೨. ಯೋಗ್ಯ ದೃಷ್ಟಿಕೋನವಿರುವ ಸ್ವಯಂಸೂಚನೆ : ಯಾವಾಗ ನಾನು ಕಪಾಟಿನಲ್ಲಿ ಬಟ್ಟೆಗಳನ್ನು ರಾಶಿ ಮಾಡಿ ಇಡುತ್ತಿರುತ್ತೇನೆಯೋ, ಆಗ ‘ನನಗೆ ಆದರ್ಶ ಬಾಲಕನಾಗಬೇಕಾಗಿದೆ’, ಎಂಬುದರ ಅರಿವಾಗುವುದು ಮತ್ತು ನಾನು ಬಟ್ಟೆಗಳನ್ನು ಮಡಚಿ ಕಪಾಟಿನಲ್ಲಿ ವ್ಯವಸ್ಥಿತವಾಗಿಡುವೆನು.

೭. ಒಂದು ದೋಷವನ್ನು ತೆಗೆದುಕೊಂಡು ಅದಕ್ಕೆ ಸೂಚನೆಯನ್ನು ತಯಾರಿಸುವುದು

ಒಂದು ಸ್ವಯಂಸೂಚನೆಯಲ್ಲಿ ಒಂದೇ ದೋಷವನ್ನು ತೆಗೆದುಕೊಳ್ಳಬೇಕು, ಉದಾ. ವಿದ್ಯಾರ್ಥಿಯು ಯಾವುದಾದರೊಂದು ವಿಷಯವನ್ನು ಅಧ್ಯಯನ ಮಾಡದಿರುವುದರ ಹಿಂದೆ ‘ಏಕಾಗ್ರತೆಯ ಅಭಾವ’ ಮತ್ತು ‘ಅಧ್ಯಯನದ ಗಾಂಭೀರ್ಯತೆ ಇಲ್ಲದಿರುವುದು’, ಈ ೨ ದೋಷಗಳು ಇರಬಹುದು. ಇಂತಹ ಸಮಯದಲ್ಲಿ ಸೂಚನೆಯನ್ನು ತಯಾರಿಸುವಾಗ ಈ ಎರಡು ದೋಷಗಳಲ್ಲಿನ ಒಂದನ್ನು ತೆಗೆದುಕೊಂಡು ಸೂಚನೆಯನ್ನು ತಯಾರಿಸಬೇಕು.

Leave a Comment