ತಮ್ಮಲ್ಲಿರುವ ದೋಷಗಳ ಪಟ್ಟಿ ಮಾಡಿ!

‘ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆ’ಯನ್ನು ಹೇಗೆ ನಡೆಸಬೇಕು?

ಮಕ್ಕಳೇ, ನಿಮ್ಮ ಶಾಲೆಯಲ್ಲಿ, ಪಕ್ಕದ ಮನೆಯಲ್ಲಿ, ಸ್ನೇಹಿತರಲ್ಲಿ ಒಂದೂ ದೋಷವಿಲ್ಲದವರು ಯಾರಾದರೂ ಇದ್ದಾರೆಯೇ ? ಯಾರೂ ಇಲ್ಲ ಅಲ್ಲವೇ ! ಪ್ರತಿಯೊಬ್ಬ ವ್ಯಕ್ತಿಯಲ್ಲಿ ಯಾವುದಾದರೂ ದೋಷಗಳು ಇದ್ದೇ ಇರುತ್ತವೆ. ಕೇವಲ ಈಶ್ವರನಲ್ಲಿ ಮಾತ್ರ ಯಾವುದೇ ದೋಷವಿಲ್ಲ; ಏಕೆಂದರೆ ಅವನು ಸರ್ವಗುಣಸಂಪನ್ನನಾಗಿದ್ದಾನೆ. ಸತತವಾಗಿ ಆನಂದದಲ್ಲಿರುವುದು, ಅವನ ಸ್ವಭಾವವಾಗಿದೆ. ಅವನಂತೆ ಆನಂದದಲ್ಲಿರಲು ಯಾವ ದೋಷಗಳನ್ನು ನಿವಾರಿಸುವುದು ಮತ್ತು ಯಾವ ಗುಣಗಳನ್ನು ವೃದ್ಧಿಸುವುದು ಆವಶ್ಯಕವಾಗಿದೆ, ಎಂಬುದನ್ನು ನೋಡೋಣ.

ಮುಂದೆ ಕೆಲವು ದೋಷ ಮತ್ತು ಅವುಗಳಿಗೆ ವಿರುದ್ಧವಾಗಿರುವ ಗುಣಗಳ ಪಟ್ಟಿಯನ್ನು ಕೊಡಲಾಗಿದೆ. ಮುಂದಿನ ದೋಷಗಳನ್ನು ಅಂದಾಜಿನಿಂದ ವರ್ಗೀಕರಿಸಲಾಗಿದೆ. ಅವುಗಳಲ್ಲಿಯೇ ಯಾವ ದೋಷವು ಹೆಚ್ಚು ತ್ರಾಸದಾಯಕ ಮತ್ತು ಯಾವ ದೋಷವು ಕಡಿಮೆ ತ್ರಾಸದಾಯಕ, ಎಂಬುದನ್ನು ನಿರ್ಧರಿಸಲು ಸಾಧ್ಯವಾಗಬೇಕೆಂದು ಈ ವರ್ಗೀಕರಣವನ್ನು ಮಾಡಲಾಗಿದೆ. ವರ್ಗೀಕರಣ ಮಾಡಿದ ಪ್ರತಿಯೊಂದು ಗುಂಪಿನಲ್ಲಿನ ದೋಷಗಳ ಕ್ರಮವನ್ನು ಮುಂದಿನಂತೆ ತೆಗೆದುಕೊಳ್ಳಲಾಗಿದೆ – ದೋಷಗಳ ಪೈಕಿ ಅವುಗಳಲ್ಲಿಯೇ ಅಧಿಕ ತ್ರಾಸದಾಯಕವಾಗಿರುವ ದೋಷಗಳನ್ನು ಮೊದಲು ತೆಗೆದುಕೊಂಡು ಕಡಿಮೆ ತ್ರಾಸದಾಯಕ ದೋಷಗಳನ್ನು ಇಳಿಕೆಯ ಕ್ರಮದಲ್ಲಿ ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬರ ಪ್ರಕೃತಿ ಮತ್ತು ಸ್ವಭಾವದೋಷಗಳಿಗನುಸಾರ ಪ್ರತಿಯೊಬ್ಬರ ಸಂದರ್ಭದಲ್ಲಿ ಈ ವರ್ಗೀಕರಣವು ಸ್ವಲ್ಪ ಬದಲಾಗಬಹುದು, ಉದಾ. ಪಟ್ಟಿಯಲ್ಲಿ ಕೊಟ್ಟಿರುವ ನಮಗೆ ಹೆಚ್ಚು ತ್ರಾಸದಾಯಕವಾಗಿರುವ ದೋಷವು ಇನ್ನೊಬ್ಬನಿಗೆ ಕಡಿಮೆ ತ್ರಾಸದಾಯಕವೆನಿಸಬಹುದು ಮತ್ತು ಪಟ್ಟಿಯಲ್ಲಿ ಕೊಟ್ಟಿರುವ ನಮಗೆ ಕಡಿಮೆ ತ್ರಾಸದಾಯಕವಾಗಿರುವ ದೋಷವು ಇನ್ನೊಬ್ಬನಿಗೆ ಹೆಚ್ಚು ತ್ರಾಸದಾಯಕವೆನಿಸಬಹುದು.

ದೋಷ

ಗುಣ
೧. ಇತರರಿಗೆ ಹೆಚ್ಚು ತೊಂದರೆ ನೀಡುವ ದೋಷಗಳು
ಅ. ವಿಧ್ವಂಸಕ ವೃತ್ತಿ ಹಿತಕಾರಿ ಕಾರ್ಯ ಮಾಡುವುದು
ಆ. ಜಗಳವಾಡುವುದು ಇತರರೊಂದಿಗೆ ಹೊಂದಿಕೊಳ್ಳುವುದು, ಕ್ಷಮಾಶೀಲತೆ
ಇ. ಕೋಪಿಷ್ಠ ತಿಳುವಳಿಕೆಯುಳ್ಳವ, ಪ್ರೇಮಮಯಿ
ಈ. ಸಿಡಿಮಿಡಿಗೊಳ್ಳುವುದು ಸಂಯಮ, ಶಾಂತಸ್ವಭಾವ
ಉ. ಉದ್ಧಟತನ ನಮ್ರತೆ
ಊ. ಇತರರನ್ನು ಕೀಳಾಗಿ ಕಾಣುವುದು ಇತರರನ್ನು ಗೌರವಿಸುವುದು
ಋ. ಇತರರನ್ನು ಟೀಕಿಸುವುದು ಇತರರನ್ನು ಪ್ರಶಂಸಿಸುವುದು, ಇತರರ ಗುಣಗಳನ್ನು ಅಳವಡಿಸಿಕೊಳ್ಳುವುದು
ಎ. ಆದರಾತಿಥ್ಯ ಮಾಡದಿರುವುದು ಆದರಾತಿಥ್ಯ ಮಾಡುವುದು
ಏ. ಇತರರಿಗೆ ದೂಷಿಸುವುದು ಇತರರನ್ನು ಅರ್ಥಮಾಡಿಕೊಳ್ಳುವುದು
ಐ. ಪೂರ್ವಾಗ್ರಹಪೀಡಿತ ಪೂರ್ವಾಗ್ರಹಪೀಡಿತ ಇಲ್ಲದಿರುವುದು, ಸತತವಾಗಿ ವರ್ತಮಾನಕಾಲದಲ್ಲಿರುವುದು
ಒ. ಹಠಮಾರಿತನ ಇತರರೊಂದಿಗೆ ಹೊಂದಿಕೊಳ್ಳುವುದು, ಕೇಳುವ ವೃತ್ತಿ ಇರುವುದು, ಇತರರಇಚ್ಛೆಯಂತೆ ನಡೆದುಕೊಳ್ಳುವುದು, ನಕಾರಾತ್ಮಕ ಅಭಿಪ್ರಾಯವನ್ನುಇಟ್ಟುಕೊಳ್ಳದಿರುವುದು
ಓ. ಮನಸ್ಸಿಗೆ ಬಂದಂತೆ ವರ್ತಿಸುವುದು ನಿಯಮಿತತನ, ನಿಶ್ಚಿತತೆ, ಸಾತತ್ಯ
ಔ. ಸಮಯಪಾಲನೆ ಮಾಡದಿರುವುದು ಸಮಯಪಾಲನೆ ಮಾಡುವುದು
೨. ತನಗೆ ಹೆಚ್ಚು ತೊಂದರೆ ನೀಡುವ ದೋಷಗಳು
ಅ. ಹೊಟ್ಟೆಕಿಚ್ಚು, ಅಸೂಯೆ ಇತರರಿಂದ ಕಲಿಯುವ ವೃತ್ತಿ ಇರುವುದು, ಇತರರ ಬಗ್ಗೆ ಆದರವೆನಿಸುವುದು,ನಿರ್ಲೋಭಿ ವೃತ್ತಿ
ಆ. ಮತ್ಸರವೆನಿಸುವುದು ಇತರರ ಬಗ್ಗೆ ಆದರವೆನಿಸುವುದು, ಮತ್ಸರವೆನಿಸದಿರುವುದು, ಇತರರನ್ನು ಪ್ರೋತ್ಸಾಹಿಸುವುದು, ವೈರಭಾವವಿಲ್ಲದಿರುವುದು
ಇ. ಸಂಶಯ ವೃತ್ತಿ ನಿಸ್ಸಂಶಯ ವೃತ್ತಿ, ಇತರರ ಮೇಲೆ ವಿಶ್ವಾಸವನ್ನಿಡುವುದು, ಶೃದ್ಧೆ, ಸುರಕ್ಷತೆಯ

ಭಾವನೆ ಇರುವುದು

ಈ. ಗರ್ವಿಷ್ಠ ನಮ್ರತೆ ಇರುವುದು
ಉ. ಗರ್ವ, ಸೊಕ್ಕು ಗರ್ವ ಇಲ್ಲದಿರುವುದು, ವಿನಯಶೀಲನಾಗಿರುವುದು
ಊ. ಸುಳ್ಳು ಹೇಳುವುದು ಸತ್ಯ ಹೇಳುವುದು
ಋ. ಅಪ್ರಾಮಾಣಿಕ ಪ್ರಾಮಾಣಿಕ
ಎ. ಕೃತಘ್ನ ಕೃತಜ್ಞತೆಯೆನಿಸುವುದು
ಏ. ಪಶ್ಚಾತ್ತಾಪವಾಗದಿರುವುದು ಪಶ್ಚಾತ್ತಾಪವಾಗುವುದು, ದುಃಖವಾಗುವುದು
ಐ. ಭಾವನಾಶೀಲತೆ ಅಚಲ, ದೃಢ, ಸ್ಥಿರ
ಒ. ಗಾಂಭೀರ್ಯತೆಯ ಅಭಾವ ಗಾಂಭೀರ್ಯತೆ ಇರುವುದು, ಮಹತ್ವ ತಿಳಿಯುವುದು
ಓ. ಆಯೋಜನೆಯ ಅಭಾವ ಆಯೋಜನಾಬದ್ಧತೆ
ಔ. ಮರೆಗುಳಿತನ ನೆನಪಿನಲ್ಲಿಟ್ಟುಕೊಂಡು ಮಾಡುವುದು
ಅಂ. ಗಡಿಬಿಡಿ, ಅವಸರ ಸಮಾಧಾನದಿಂದ ಮಾಡುವುದು, ತಾಳ್ಮೆ
ಅಃ. ದುರ್ಲಕ್ಷ ಮಾಡುವುದು ಕಾಳಜಿಯಿಂದ ಕೃತಿಗಳನ್ನು ಮಾಡುವುದು
ಕ. ನಿಷ್ಕಾಳಜಿತನ ಕಾಳಜಿಯಿಂದ ಕೃತಿಗಳನ್ನು ಮಾಡುವುದು
ಖ. ಹಿಂಜರಿಯುವುದು, ಹೆದರುವುದು ದಿಟ್ಟತನ, ಧೈರ್ಯ, ಸಂಘರ್ಷ ಮಾಡುವ ವೃತ್ತಿಯಿರುವುದು, ಸಾಹಸಿ
ಗ. ಬೇಜವಾಬ್ದಾರ ಜವಾಬ್ದಾರಿಯುತ
ಘ. ಕರ್ತವ್ಯಪಾಲನೆ ಮಾಡದಿರುವುದು ಕರ್ತವ್ಯಪಾಲನೆ ಮಾಡುವುದು, ಕರ್ತವ್ಯದಕ್ಷ
ಙ. ಮನಃಪೂರ್ವಕ ಕಾರ್ಯವನ್ನು ಮಾಡದಿರುವುದು,ಮೈಗಳ್ಳತನ ಮನಃಪೂರ್ವಕ ಕಾರ್ಯವನ್ನು ಮಾಡುವುದು
ಚ. ದುಂದುವೆಚ್ಚ ಮಿತವ್ಯಯ
ಛ. ಮನೋರಾಜ್ಯದಲ್ಲಿ ವಿಹರಿಸುವುದು ವಸ್ತುಸ್ಥಿತಿಯ ವಿಚಾರ ಮಾಡುವುದು, ಸತತ ವರ್ತಮಾನಕಾಲದಲ್ಲಿರುವುದು
ಜ. ಏಕಾಂಗಿತನ ಸಂಘಪ್ರಿಯ, ಇತರರೊಂದಿಗಿರುವುದು
ಝ. ಇತರರ ತಪ್ಪುಗಳನ್ನು ನೋಡುವುದು ತನ್ನ ತಪ್ಪುಗಳೆಡೆಗೆ ಗಮನ ಕೊಡುವುದು, ಟೀಕೆ ಮಾಡದಿರುವುದು
ಞ. ಆಜ್ಞಾಪಾಲನೆ ಮಾಡದಿರುವುದು ಆಜ್ಞಾಪಾಲನೆ ಮಾಡುವುದು
ಟ. ನಾಚಿಕೆಯೆನಿಸುವುದು ನಿಃಸಂಕೋಚತನ, ಸಭಾಧೈರ್ಯ
ಠ. ಅವ್ಯವಸ್ಥಿತ ವ್ಯವಸ್ಥಿತ
೩. ತನಗೆ ಕಡಿಮೆ ತೊಂದರೆ ನೀಡುವ ದೋಷಗಳು
ಅ. ಆಲಸ್ಯ ತತ್ಪರತೆ, ಕಾರ್ಯತತ್ಪರ
ಆ. ಏಕಾಗ್ರತೆ ಇಲ್ಲದಿರುವುದು ಏಕಾಗ್ರತೆ ಇರುವುದು
ಇ. ಆತ್ಮವಿಶ್ವಾಸದ ಕೊರತೆ ಆತ್ಮವಿಶ್ವಾಸವಿರುವುದು
ಈ. ನಿರ್ಣಯಕ್ಷಮತೆಯ ಅಭಾವ ನಿರ್ಣಯಕ್ಷಮತೆ ಇರುವುದು
ಉ. ಮುಂದಾಳತ್ವದ ಅಭಾವ ಮುಂದಾಳತ್ವವಿರುವುದು, ಧೀರ, ಸಂಕೋಚ ಮಾಡದಿರುವುದು
ಊ. ಜಿಗುಟುತನದ ಅಭಾವ ಜಿಗುಟುತನ
ಋ. ಅನಾವಶ್ಯಕ ಮಾತನಾಡುವುದು ಮಿತಭಾಷಿ, ಆವಶ್ಯಕವಿರುವಷ್ಟೇ ಮಾತನಾಡುವುದು
ಎ. ಸ್ವಾರ್ಥಿ ನಿಸ್ವಾರ್ಥಿ, ಪರೋಪಕಾರಿ ವೃತ್ತಿ
ಏ. ಸಂಕುಚಿತ ವಿಚಾರ ವ್ಯಾಪಕ ವಿಚಾರ
ಐ. ಆತ್ಮಕೇಂದ್ರಿತತನ (ಕೇವಲ ಸ್ವಂತದ ವಿಚಾರವನ್ನೇ

ಮಾಡುವುದು)

ಇತರರ ವಿಚಾರ ಮಾಡುವುದು ಅಥವಾ ವ್ಯಾಪಕತ್ವ
ಒ. ತನ್ನ ವಸ್ತುಗಳನ್ನು ಇತರರಿಗೆ ಕೊಡದಿರುವುದು ತನ್ನ ವಸ್ತುಗಳನ್ನು ಇತರರಿಗೆ ಕೊಡುವುದು, ತ್ಯಾಗಿ
ಓ. ದಾನ ಮಾಡದಿರುವುದು ದಾನಶೂರ
ಔ. ಇತರರ ಬಗ್ಗೆ ಏನೂ ಅನಿಸದಿರುವುದು ಇತರರ ಬಗ್ಗೆ ಅಕ್ಕರೆಯೆನಿಸುವುದು, ಸ್ನೇಹಭಾವ, ಪ್ರೀತಿ (ನಿರಪೇಕ್ಷ ಪ್ರೇಮ)

ಮಕ್ಕಳೇ, ಮೇಲಿನ ದೋಷಗಳಲ್ಲಿನ ಕೆಲವು ದೋಷಗಳು ನಿಮ್ಮಲ್ಲಿವೆ, ಎಂದು ನಿಮಗೆ ಅನಿಸುತ್ತದೆಯೇ? ಹಾಗಾದರೆ ಮುಂದಿನಂತೆ ಮಾಡಿರಿ –

೧. ಮೇಲಿನ ಪಟ್ಟಿಯಲ್ಲಿನ ಯಾವ ದೋಷಗಳು ನಿಮ್ಮಲ್ಲಿವೆಯೋ, ಅವುಗಳ ಒಂದು ಪಟ್ಟಿಯನ್ನು ಮಾಡಿರಿ.

೨. ಮೇಲಿನ ಪಟ್ಟಿಯಲ್ಲಿರುವ ದೋಷಗಳಲ್ಲದೇ ಇತರ ದೋಷಗಳು ನಿಮ್ಮಲ್ಲಿದ್ದರೆ, ಅವುಗಳನ್ನೂ ನಿಮ್ಮ ಪಟ್ಟಿಯಲ್ಲಿ ಬರೆಯಿರಿ.

೩. ತಂದೆ-ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಸ್ನೇಹಿತರು ಮುಂತಾದವರಿಗೆ ನೀವು ಮಾಡಿದ ಪಟ್ಟಿಯಲ್ಲಿನ ದೋಷಗಳನ್ನು ತೋರಿಸಿ ಅವಲ್ಲದೇ, ಇತರ ದೋಷಗಳಿದ್ದರೆ, ಅವುಗಳನ್ನು ಹೇಳಲು ಅವರಿಗೆ ವಿನಂತಿಸಿರಿ.

Leave a Comment