ವ್ಯಕ್ತಿತ್ವ ವಿಕಸನವಾಗಲು ಸ್ವಭಾವದೋಷ-ನಿರ್ಮೂಲನೆ ಏಕೈಕ ಉಪಾಯ !

‘ಬಾಲಮಿತ್ರರೆ, ನಮ್ಮ ಪ್ರಗತಿಯಲ್ಲಿ ಅಡಚಣೆಗಳನ್ನು ನಿರ್ಮಿಸುವ ಸ್ವಭಾವದೋಷಗಳ ನಿರ್ಮೂಲನೆಯ ಮಹತ್ವದ ಬಗ್ಗೆ ನಾವು ತಿಳಿದುಕೊಳ್ಳೋಣ.

೧. ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮಹತ್ತ್ವದ್ದಾಗಿರುವುದು

ರಾವಣನು ವಿಶ್ರವಾಋಷಿಗಳ ಪುತ್ರನಾಗಿದ್ದನು; ಆದರೆ ಹಿಂದೂ ಧರ್ಮವು ‘ಅವನ ಆದರ್ಶ ತೆಗೆದುಕೊಳ್ಳುವಂತಿಲ್ಲ’ ಎಂದು ಹೇಳಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು’ ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಸ್ವಲ್ಪದರಲ್ಲಿ ಹೇಳಬೇಕೆಂದರೆ ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ, ಎಂಬುದು ಮಹತ್ತ್ವದ್ದಾಗಿದೆ. ಸಂಸ್ಕಾರಗಳಿಂದಲೇ ನಮ್ಮಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು.’
– ಶ್ರೀ. ರಮೇಶ ಶಿಂದೆ, ’ಹಿಂದೂ ಜನಜಾಗೃತಿ ಸಮಿತಿ’ಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಕ್ತಾರರು

ಈಗ ನಾವು ಕೆಲವು ಸ್ವಭಾವದೋಷ, ಅದರಿಂದ ಆಗುವ ತಪ್ಪುಗಳು ಹಾಗೂ ಅದರ ಪರಿಣಾಮಗಳ ಅಧ್ಯಯನಮಾಡೋಣ.

೨. ಸ್ವಭಾವದೋಷದಿಂದ ಆಗುವ ತಪ್ಪುಗಳು ಹಾಗೂ ಅವುಗಳ ದುಷ್ಪರಿಣಾಮ

೨ ಅ. ಸ್ವಭಾವದೋಷ : ಆಲಸ್ಯ

ಉದಾಹರಣೆ

೧. ಬೆಳಿಗ್ಗೆ ತಡವಾಗಿ ಏಳುವುದು

೨. ಎದ್ದ ನಂತರ ಹಾಸಿಗೆ-ಹೊದಿಕೆಯನ್ನು ಮಡಚಿ ಇಡದಿರುವುದು

೩. ಸಮಯಕ್ಕೆ ಸರಿಯಾಗಿ ಅಧ್ಯಯನ ಮಾಡದಿರುವುದು

೪. ತಾಯಿಯು ಹೇಳಿದ ಕೆಲಸ ಮಾಡದಿರುವುದು

ದುಷ್ಪರಿಣಾಮ : ಬೆಳಿಗ್ಗೆ ತಡವಾಗಿ ಏಳುವುದರಿಂದ ತಯಾರಾಗಲು, ಶಾಲೆಗೆ ಹೋಗಲು ತಡವಾಗುತ್ತದೆ. ಇದರಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿ ಕಿರಿಕಿರಿಯಾಗುತ್ತದೆ.

೨ ಅ. ಸ್ವಭಾವದೋಷ : ಅವ್ಯವಸ್ಥೆ

ಉದಾಹರಣೆ
೧. ಬೆಳಿಗ್ಗೆ ಎದ್ದನಂತರ ಹಾಸಿಗೆ-ಹೊದಿಕೆಯನ್ನು ಯೋಗ್ಯ ರೀತಿಯಲ್ಲಿ ಮಡಚಿಡದಿರುವುದು

೨. ಪುಸ್ತಕ, ಪಟ್ಟಿ, ಲೇಖನಿ, ಕೈ ಗಡಿಯಾರ ಇತ್ಯಾದಿಗಳನ್ನು ಅಲ್ಲಲ್ಲಿ ಇಡುವುದು

೩. ಪುಸ್ತಕಗಳ ಕಪಾಟನ್ನು ಅವ್ಯವಸ್ಥಿತವಾಗಿಡುವುದು

೪. ಶಾಲೆಯ ಸಮವಸ್ತ್ರವನ್ನು ’ಹ್ಯಾಂಗರ್’ಗೆ ಹಾಕಿಡದೆ ಎಲ್ಲಿಬೇಕಾದರೆ ಅಲ್ಲಿ ಹಾಕುವುದು

೫. ಬಟ್ಟೆಗಳನ್ನು ಕಪಾಟಿನಲ್ಲಿ ಹರಡುವುದು ಅಥವಾ ಮುದ್ದೆ ಮಾಡಿ ಇಡುವುದು

ದುಷ್ಪರಿಣಾಮ : ಪ್ರತಿದಿನ ಉಪಯೋಗಿಸುವ ವಸ್ತುವನ್ನು ಅವ್ಯವಸ್ಥಿತವಾಗಿ, ಹಾಗೆಯೇ ಎಲ್ಲೆಲ್ಲೂ ಇಟ್ಟಿರುವುದರಿಂದ ಅವಶ್ಯಕತೆ ಇದ್ದಾಗ ಬೇಕಾದ ವಸ್ತುಗಳು ಸಿಗುವುದಿಲ್ಲ. ವಸ್ತುಗಳನ್ನು ಹುಡುಕುವುದರಲ್ಲಿ ನಮ್ಮೊಂದಿಗೆ ತಂದೆ-ತಾಯಿಯ ಸಮಯವೂ ವ್ಯರ್ಥವಾಗುತ್ತದೆ. ಆದುದರಿಂದ ಅವರು ನಮ್ಮ ಮೇಲೆ ಸಿಟ್ಟಾಗುತ್ತಾರೆ.

೨ ಇ.ಸ್ವಭಾವದೋಷ : ಉದ್ಧಟತನ ಅಥವಾ ಸಿಟ್ಟಿನಿಂದ ಮಾತನಾಡುವುದು

ಉದಾಹರಣೆ
೧. ಆಟ ಆಡಲು ಹೋಗುವಾಗ ತಾಯಿಯವರು ‘ಅರೆ, ಶಾಲೆಯ ಸಮವಸ್ತ್ರವನ್ನು ಬದಲಾಯಿಸಿ ಆಡಲಿಕ್ಕೆ ಹೋಗು’, ಎಂದು ಹೇಳಿದಾಗ ‘ನಾನು ಬದಲಿಸುವುದಿಲ್ಲ, ಹೋಗು’, ಎಂದು ಹೇಳುವುದು

೨. ತಾಯಿಯು ಅಂಗಡಿಯಿಂದ ಹಾಲು ತರಲು ಹೇಳಿದರೆ ’ನಾನೇ ಏಕೆ ಹೋಗಲಿ? ಅಣ್ಣನಿಗೆ ಹೇಳು’, ಎಂದು ಹೇಳುವುದು

೩. ದೂರದರ್ಶನದ (ಟಿ.ವಿ) ಕಾರ್ಯಕ್ರಮಗಳನ್ನು ನೋಡುತ್ತಿರುವಾಗ ತಾಯಿಯು ಅಧ್ಯಯನ ಮಾಡಲು ಹೇಳಿದರೆ ’ಏನಿದು, ನಾನು ಬೆಳಗ್ಗಿನಿಂದ ಸಾಕಷ್ಟು ಸಮಯ ಅಧ್ಯಯನ ಮಾಡಿದ್ದೇನೆ. ಈಗ ಸ್ವಲ್ಪ ಸಮಯ ದೂರದರ್ಶನವನ್ನು ನೋಡಿದರೆ ಏನಾಗುತ್ತದೆ’, ಎಂದು ಹೇಳುವುದು

೪. ತಾಯಿಯು ‘ದೂರದರ್ಶನ ಬಂದ ಮಾಡು, ಇಲ್ಲದಿದ್ದರೆ ತಂದೆಯವರಿಗೆ ಹೇಳುತ್ತೇನೆ’, ಎಂದು ಹೇಳಿದರೆ ‘ಕೇಬಲ್ ಸಂಪರ್ಕವನ್ನೇ ಕಡಿದು ಹಾಕೋಣ’ ಎಂದು ಸಿಟ್ಟಿನಿಂದ ಹೇಳುವುದು

೫. ತಿಂಡಿಯನ್ನು ಒಬ್ಬನೇ ತಿನ್ನುವುದನ್ನು ನೋಡಿ ತಂದೆಯವರು ‘ಅಕ್ಕನಿಗೂ ತಿಂಡಿ ಕೊಡು’, ಎಂದು ಹೇಳಿದಾಗ ’ನನಗೆ ನಿಮ್ಮ ತಿಂಡಿ ಬೇಡ’, ಎಂದು ಸಿಟ್ಟಿನಿಂದ ಹೇಳುವುದು

ದುಷ್ಪರಿಣಾಮ : ಮಕ್ಕಳೇ, ತಂದೆ-ತಾಯಿಯರಿಗೆ ’ನೀವು ಸಾಕಷ್ಟು ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಬೇಕು, ಹಾಗೆಯೇ, ನಿಮಗೆ ಇತರರ ಬಗ್ಗೆ ವಿಚಾರ ಮಾಡುವ ಅಭ್ಯಾಸವಾಗಬೇಕು’ ಎಂದು ಅನಿಸುತ್ತದೆ. ಅದಕ್ಕಾಗಿಯೇ ತಂದೆ ತಾಯಿಯರು ನಿಮಗೆ ಸಮಯೋಚಿತ ಸಲಹೆ ಕೊಡುತ್ತಾರೆ. ಆಗ ನೀವು ಉದ್ಧಟವಾಗಿ ಉತ್ತರಿಸಿದಲ್ಲಿ ನಿಮಗಾಗಿ ಸತತ ಕಷ್ಟಪಡುತ್ತಿರುವ ತಂದೆ ತಾಯಿಯರ ಮನಸ್ಸಿಗೆ ನೋವಾಗುತ್ತದೆ ಹಾಗೂ ಮನೆಯ ವಾತಾವರಣವು ಅಶಾಂತವಾಗುತ್ತದೆ.