ಸೂಚನಾಸತ್ರ

ಮಕ್ಕಳೇ, ನಮ್ಮ ಸ್ವಭಾವದೋಷಗಳನ್ನು ನಿವಾರಿಸಲು ನಾವು ಏನು ಮಾಡಬಹುದು ? ಸ್ವಭಾವದೋಷಗಳ ನಿವಾರಣೆಗಾಗಿ ಒಂದು ಬಾರಿ ೩ ಸ್ವಭಾವದೋಷಗಳಿಗೆ ಸ್ವಯಂಸೂಚನೆಗಳನ್ನು ಆಯ್ದುಕೊಳ್ಳಬೇಕು. ಈ ಪ್ರಕ್ರಿಯೆಗೆ ‘ಸೂಚನಾಸತ್ರ’ ಎಂದು ಹೇಳುತ್ತಾರೆ. ಸೂಚನಾಸತ್ರದಲ್ಲಿ ಮೊದಲು ಯಾವ ಸ್ವಭಾವದೋಷಗಳಿಗೆ ಸೂಚನೆ ಕೊಡಬೇಕು, ಆ ಸೂಚನೆಗಳನ್ನು ಯಾವಾಗ ಬದಲಾಯಿಸಬೇಕು, ದಿನದಲ್ಲಿ ಎಷ್ಟು ಬಾರಿ ಸೂಚನೆಗಳನ್ನು ಕೊಡಬೇಕು ಮುಂತಾದವುಗಳ ಚಿಂತನೆಯಾಗುತ್ತದೆ. ಸೂಚನಾಸತ್ರದ ಸ್ವರೂಪವನ್ನು ಮುಂದೆ ಸ್ಪಷ್ಟಗೊಳಿಸಲಾಗಿದೆ.

ಸ್ವಭಾವದೋಷಗಳ ಆಯ್ಕೆ

ಅ. ‘ಸ್ವಭಾವದೋಷ ತಖ್ತೆ’ಯನ್ನು ನೋಡಿ ತೀವ್ರ ಸ್ವಭಾವದೋಷಗಳನ್ನು ಗುರುತಿಸಬೇಕು : ಪ್ರತಿಯೊಬ್ಬರಲ್ಲಿಯೂ ಅನೇಕ ಸ್ವಭಾವದೋಷಗಳಿರುತ್ತವೆ. ತೀವ್ರವಾಗಿರುವ ಸ್ವಭಾವದೋಷಗಳನ್ನು ಮೊದಲು ದೂರಗೊಳಿಸುವುದು ಮಹತ್ವದ್ದಾಗಿದೆ. ತೀವ್ರ ಸ್ವಭಾವದೋಷಗಳನ್ನು ‘ಸ್ವಭಾವದೋಷ ತಖ್ತೆ’ಯನ್ನು ನೋಡಿ ಗುರುತಿಸಬೇಕು. ಯಾವುದಾದರೊಬ್ಬನ ತಖ್ತೆ’ಯಲ್ಲಿ ‘ಆಲಸ್ಯ’ ಈ ದೋಷದ ಬಗ್ಗೆ ಅನೇಕ ಪ್ರಸಂಗಗಳಿದ್ದರೆ, ಅವನಲ್ಲಿ ‘ಆಲಸ್ಯ’ ಈ ದೋಷವು ತೀವ್ರವಾಗಿದೆ, ಎಂದು ತಿಳಿಯಬೇಕು. ಆ ಹುಡುಗನು ವಿವಿಧ ಪ್ರಸಂಗಗಳಲ್ಲಿ ಪದೇಪದೇ ಕೋಪಗೊಳ್ಳುತ್ತಿದ್ದರೆ, ಅವನಲ್ಲಿ ‘ಕೋಪ’ ದೋಷವು ತೀವ್ರವಾಗಿದೆ ಎಂದು ತಿಳಿಯಬೇಕು.

ಆ. ಸ್ವಭಾವದೋಷಗಳನ್ನು ದೂರಗೊಳಿಸಲು ಪ್ರಾಧಾನ್ಯತೆಯನ್ನು ಹೇಗೆ ನಿರ್ಧರಿಸಬೇಕು ?

ಆ ೧. ಮೊದಲನೆಯ ಪ್ರಾಧಾನ್ಯತೆ : ತೀವ್ರ ಸ್ವಭಾವದೋಷಗಳಲ್ಲಿನ ಯಾವ ದೋಷಗಳಿಂದಾಗಿ ಇತರರಿಗೆ ಹೆಚ್ಚು ತೊಂದರೆಯಾಗುತ್ತದೆಯೋ, ಅಂತಹ ದೋಷಗಳನ್ನು ದೂರಗೊಳಿಸಲು ಮೊದಲನೆಯ ಪ್ರಾಧಾನ್ಯತೆಯನ್ನು ಕೊಡಬೇಕು. ಒಬ್ಬ ಹುಡುಗನಲ್ಲಿ ‘ಅವ್ಯವಸ್ಥಿತತನ’ ಮತ್ತು ‘ಉದ್ಧಟತನದಿಂದ ಮಾತನಾಡುವುದು’ ಈ ಎರಡೂ ದೋಷಗಳು ತೀವ್ರವಾಗಿವೆ ಎಂದಿಟ್ಟುಕೊಳ್ಳೋಣ. ‘ಅವ್ಯವಸ್ಥಿತತನ’ ಈ ದೋಷದಿಂದಾಗಿ ಇತರರಿಗಿಂತ ಆ ಹುಡುಗನಿಗೇ ಹೆಚ್ಚು ತೊಂದರೆಯಾಗಬಹುದು; ಆದರೆ ‘ಉದ್ಧಟತನದಿಂದ ಮಾತನಾಡುವುದು’ ಈ ದೋಷದಿಂದಾಗಿ ಇನ್ನೊಬ್ಬನ ಮನಸ್ಸಿಗೆ ನೋವಾಗುವುದರಿಂದ ಇನ್ನೊಬ್ಬನಿಗೆ ತೊಂದರೆಯಾಗಬಹುದು, ಹಾಗೆಯೇ ಅವರಿಬ್ಬರ ನಡುವೆ ಅಂತರವೂ ನಿರ್ಮಾಣವಾಗಬಹುದು, ಆದುದರಿಂದ ಆ ಹುಡುಗನು ‘ಉದ್ಧಟತನದಿಂದ ಮಾತನಾಡುವುದು’ ಈ ದೋಷವನ್ನು ದೂರಗೊಳಿಸಲು ಮೊದಲನೆಯ ಪ್ರಾಧಾನ್ಯತೆಯನ್ನುಕೊಡುವುದು ಅವಶ್ಯಕವಾಗಿದೆ.

ಆ ೨. ಎರಡನೆಯ ಪ್ರಾಧಾನ್ಯತೆ : ತೀವ್ರ ಸ್ವಭಾವದೋಷಗಳಲ್ಲಿ ಯಾವ ದೋಷಗಳಿಂದಾಗಿ ನಿಮ್ಮ ಮನಸ್ಸಿನ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ವ್ಯಯವಾಗುತ್ತದೆಯೋ, ಅಂತಹ ದೋಷಗಳನ್ನು ದೂರಗೊಳಿಸಲು ಎರಡನೇ ಪ್ರಾಧಾನ್ಯತೆಯನ್ನು ಕೊಡಬೇಕು. ಒಬ್ಬ ಹುಡುಗನಲ್ಲಿ ‘ಅವ್ಯವಸ್ಥಿತತನ’ ಮತ್ತು ‘ನಿರರ್ಥಕ ವಿಚಾರಗಳನ್ನು ಮಾಡುವುದು’ ಇವೆರಡೂ ದೋಷಗಳು ತೀವ್ರವಾಗಿವೆ ಎಂದೆನಿಸೋಣ. ‘ಅವ್ಯವಸ್ಥಿತತನ’ ಈ ದೋಷದಿಂದಾಗಿ ಯಾವುದಾದರೊಂದು ವಸ್ತುವು ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ಆ ಸಮಯದಲ್ಲಿ ಮಾತ್ರ ದುಃಖವಾಗುತ್ತದೆ ಮತ್ತು ಮನಸ್ಸಿನ ಶಕ್ತಿಯು ವ್ಯಯವಾಗುತ್ತದೆ. ಆದರೆ ‘ನಿರರ್ಥಕ ವಿಚಾರಗಳನ್ನು ಮಾಡುವುದು’ ಈ ದೋಷದಿಂದಾಗಿ ಮನಸ್ಸಿನ ಶಕ್ತಿಯು ಸತತವಾಗಿ ಮತ್ತು ಅಕಾರಣ ವ್ಯಯವಾಗುತ್ತಿರುತ್ತದೆ. ಇದಕ್ಕಾಗಿ ಆ ಹುಡುಗನು ‘ನಿರರ್ಥಕ ವಿಚಾರಗಳನ್ನು ಮಾಡುವುದು’ ಈ ದೋಷವನ್ನು ದೂರಗೊಳಿಸಲು ಪ್ರಾಧಾನ್ಯತೆಯನ್ನು ಕೊಡುವುದು ಅವಶ್ಯಕವಾಗಿದೆ.

Leave a Comment