ಸ್ವಭಾವದೋಷ-ನಿರ್ಮೂಲನೆಗಾಗಿ ತಖ್ತೆಯನ್ನು ಹೇಗೆ ಬರೆಯಬೇಕು ?

ಬಾಲಮಿತ್ರರೇ, ಈಗ ನಾವು ಸ್ವಭಾವದೋಷ-ನಿರ್ಮೂಲನೆಗಾಗಿ ತಖ್ತೆಯನ್ನು ಹೇಗೆ ಬರೆಯಬೇಕು ಎಂಬುದನ್ನು ತಿಳಿಯೋಣ.

೧. ಸ್ವಭಾವದೋಷ-ನಿರ್ಮೂಲನ ತಖ್ತೆಯ ಸ್ವರೂಪ

ದಿನದ ತಪ್ಪುಗಳನ್ನು ಬರೆಯಲು ಒಂದು ಪಟ್ಟಿಯಲ್ಲಿ ಮುಂದಿನಂತೆ ಸ್ವಭಾವದೋಷ-ನಿರ್ಮೂಲನೆಗಾಗಿ ಕೋಷ್ಟಕಗಳನ್ನು ಮಾಡಬೇಕು. ಪಟ್ಟಿಯ ಎರಡು ಪುಟಗಳಲ್ಲಿ ಮೊದಲನೇ ಪುಟದಲ್ಲಿ ಮೂರು ಕೋಷ್ಟಕಗಳನ್ನು ಮಾಡಬೇಕು ಹಾಗೂ ಎರಡನೆಯ ಪುಟದಲ್ಲಿ ೪ ರಿಂದ ೬ ಕೋಷ್ಟಕಗಳನ್ನು ಮಾಡಬೇಕು.

೨. ತಖ್ತೆಯನ್ನು ಬರೆಯುವ ಪದ್ಧತಿ

೨ಅ ಕೋಷ್ಟಕ ೧ : ತಪ್ಪು, ಅಯೋಗ್ಯ ಕೃತಿ, ಅಯೋಗ್ಯ ಪ್ರತಿಕ್ರಿಯೆ ಅಥವಾ ವಿಚಾರವನ್ನು ಮೊದಲನೇ ಕೋಷ್ಟಕದಲ್ಲಿ; ಆರಂಭದಲ್ಲಿ ತಿಥಿ ಮತ್ತು ಕಂಸದಲ್ಲಿ ದಿನಾಂಕ, ಈ ರೀತಿಯಾಗಿ ಬರೆಯಬೇಕು.

ಅ. ತಪ್ಪು, ಅಯೋಗ್ಯ ಕೃತಿ, ಅಯೋಗ್ಯ ವಿಚಾರ, ಹಾಗೆಯೇ ಅಯೋಗ್ಯ ಪ್ರತಿಕ್ರಿಯೆ : ನಮ್ಮ ಗಮನಕ್ಕೆ ಬಂದ ಹಾಗೂ ಇತರರು ಗಮನಕ್ಕೆ ತಂದು ಕೊಟ್ಟ ಅಂದಿನ ತಪ್ಪು, ಅಯೋಗ್ಯ ಕೃತಿ, ಅಯೋಗ್ಯ ವಿಚಾರ, ಹಾಗೆಯೇ ಅಯೋಗ್ಯ ಪ್ರತಿಕ್ರಿಯೆಗಳನ್ನು ಈ ಕೋಷ್ಟಕದಲ್ಲಿ ಬರೆಯಬೇಕು. ಒಂದು ವೇಳೆ ತಪ್ಪನ್ನು ಇತರರು ಅರಿವಿಗೆ ತಂದುಕೊಟ್ಟಲ್ಲಿ ಅದನ್ನೂ ಬರೆದಿಡಬೇಕು.

ಆ. ಆಗಿರುವ ತಪ್ಪಿನಿಂದ ಗಮನಕ್ಕೆ ಬಂದ ಪರಿಣಾಮವನ್ನೂ ಬರೆಯಬೇಕು.

೨ಆ. ಕೋಷ್ಟಕ ೨- ಕಾಲಾವಧಿ : ತಪ್ಪು, ಅಯೋಗ್ಯ ಕೃತಿ, ಅಯೋಗ್ಯ ವಿಚಾರ, ಹಾಗೆಯೇ ಅಯೋಗ್ಯ ಪ್ರತಿಕ್ರಿಯೆಗಳ ಕಾಲಾವಧಿ – ಇದರಲ್ಲಿ ತಪ್ಪು, ಅಯೋಗ್ಯ ಕೃತಿ, ಅಯೋಗ್ಯ ಪ್ರತಿಕ್ರಿಯೆ, ಹಾಗೆಯೇ ಅಯೋಗ್ಯ ಪ್ರತಿಕ್ರಿಯೆ ಆದ ನಂತರ ಅದು ಎಷ್ಟು ಸಮಯದ ನಂತರ ತನ್ನ ಅರಿವಿಗೆ ಬಂತು ಎಂಬುದನ್ನು ಬರೆಯಬೇಕು. ಮುಂದಿನ ಎರಡು ಉದಾಹರಣೆಗಳಿಂದ ಇದು ಗಮನಕ್ಕೆ ಬರುತ್ತದೆ.

ಅ. ಒಬ್ಬ ಹುಡುಗನಿಗೆ ’ಅಧ್ಯಯನದ ನಂತರ ಮೇಜಿನ ಮೇಲಿರುವ ವಸ್ತುಗಳನ್ನು ಸರಿಯಾಗಿ ಇಡಲಿಲ್ಲ’, ಎಂಬುದು ೩ ಗಂಟೆಗಳ ನಂತರ ಗಮನಕ್ಕೆ ಬಂದರೆ ತಖ್ತೆಯಲ್ಲಿ ಈ ತಪ್ಪನ್ನು ಬರೆಯುವಾಗ ’ಕಾಲಾವಧಿ’ಯ ಕೋಷ್ಟಕದಲ್ಲಿ ’೩ ಗಂಟೆ’ ಎಂದು ಬರೆಯಬೇಕು.

ಆ. ಒಬ್ಬ ಮಗಳ ಮನಸ್ಸಿನಲ್ಲಿ ತಾಯಿಯ ಬಗ್ಗೆ ೧ ಗಂಟೆಯ ವರೆಗೆ ಸಿಟ್ಟು ಇದ್ದರೆ ’ಕಾಲಾವಧಿ’ಯ ಕೋಷ್ಟಕದಲ್ಲಿ ಅವಳು ’೧ ಗಂಟೆ’ ಎಂದು ಬರೆಯಬೇಕು.

೨ಇ ಕೋಷ್ಟಕ ೩ : ಸ್ವಭಾವದೋಷ – ಆಗಿರುವ ತಪ್ಪಿನ ಅಧ್ಯಯನಮಾಡಿ ’ಈ ತಪ್ಪು ಯಾವ ಸ್ವಭಾವದೋಷದಿಂದ ಆಯಿತು’, ಎಂಬುದನ್ನು ಗುರುತಿಸಬೇಕು ಹಾಗೂ ಈ ಕೋಷ್ಟಕದಲ್ಲಿ ಆ ದೋಷವನ್ನು ಬರೆಯಬೇಕು. ಕೆಲವು ತಪ್ಪುಗಳು ಒಂದಕ್ಕಿಂತ ಹೆಚ್ಚಿನ ಸ್ವಭಾವದೋಷಗಳಿಂದ ಆಗುತ್ತವೆ. ಆಗ ಆ ಎಲ್ಲ ಸ್ವಭಾವದೋಷಗಳನ್ನು ಈ ಕೋಷ್ಟಕದಲ್ಲಿ ಬರೆಯಬೇಕು.

೨ಇ. ಕೋಷ್ಟಕ ೪ : ಸ್ವಯಂಸೂಚನೆ / ಉಪಾಯ

ಯೋಗ್ಯ ಕೃತಿ ಅಥವಾ ಯೋಗ್ಯಪ್ರತಿಕ್ರಿಯೆಗಳ ವಿಷಯದಲ್ಲಿ ಸ್ವಯಂಸೂಚನೆ /ಉಪಾಯ

ಅ. ಯೋಗ್ಯಕೃತಿ, ಯೋಗ್ಯ ವಿಚಾರ ಅಥವಾ ಯೋಗ್ಯ ಪ್ರತಿಕ್ರಿಯೆ ಇರುವ ಸ್ವಯಂಸೂಚನೆಯನ್ನು ತಯಾರಿಸಿ ಈ ಕೋಷ್ಟಕದಲ್ಲಿ ಬರೆಯಬೇಕು.

ಆ. ಈ ಕೋಷ್ಟಕದಲ್ಲಿ ತಪ್ಪು ಆಗದಿರುವಂತೆ ತಡೆಯಲು ಉಪಾಯ ಗಮನಕ್ಕೆ ಬಂದಲ್ಲಿ ಅದನ್ನೂ ಬರೆಯಬೇಕು. ಒಬ್ಬ ಹುಡುಗನ ಕೈಯಿಂದ ಕೊಬ್ಬರಿ ಎಣ್ಣೆಯ ಬಾಟಲಿ ಬಿದ್ದು ಒಡೆದು ಹೋಗಿದೆ ಎಂದು ತಿಳಿಯಿರಿ. ಈ ಪ್ರಸಂಗದಲ್ಲಿ ’ಗಡಿಬಿಡಿ ಮಾಡುವುದು’ ಈ ದೋಷವಿದ್ದಲ್ಲಿ ಅವನು ಅದಕ್ಕೆ ಸಂಬಂಧಿತ ಸ್ವಯಂಸೂಚನೆಯನ್ನು ಬರೆಯಬೇಕು. ಹಾಗೆಯೇ ’ಗಾಜಿನ ಬಾಟಲಿಯ ಬದಲು ಪ್ಲಾಸ್ಟಿಕ್ ಬಾಟಲಿಯನ್ನು ಉಪಯೋಗಿಸುವೆನು’ ಎಂಬ ಉಪಾಯವನ್ನು ಬರೆಯಬೇಕು ಹಾಗೂ ಕೃತಿಯಲ್ಲಿಯೂ ತರಬೇಕು.

೨ಉ ಕೋಷ್ಟಕ ೫ : ಒಂದು ದಿನದಲ್ಲಿ ನೀಡಬೇಕಾದ ಸೂಚನಾಸತ್ರಗಳ ಸಂಖ್ಯೆ – ದಿನಪೂರ್ತಿ ಮಾಡಿದ ಸ್ವಯಂಸೂಚನೆಯ ಸತ್ರಗಳ ಸಂಖ್ಯೆಯನ್ನು ಬರೆಯುವಾಗ ಸಮಯವನ್ನೂ (ಉದಾ: ಮುಂಜಾನೆ ೭ಗಂಟೆಗೆ ಮೊದಲನೆಯ ಸತ್ರ, ಬೆಳೆಗ್ಗೆ ೧೦.೩೦ಕ್ಕೆ ಎರಡನೆಯ ಸತ್ರ , ಮಧ್ಯಾಹ್ನ ೨ ಗಂಟೆಗೆ ಮೂರನೆಯ ಸತ್ರ, ಸಂಜೆ ೫ ಗಂಟೆಗೆ ನಾಲ್ಕನೆಯ ಸತ್ರ ಇತ್ಯಾದಿ) ನಮೂದಿಸಬೇಕು.

೨ಊ. ಕೋಷ್ಟಕ ೬ : ಪ್ರಗತಿ – ಇಲ್ಲಿ ಸಂಬಂಧಿತ ದೋಷವು ಕಡಿಮೆಯಾದ ಸಂದರ್ಭದಲ್ಲಿ ಪ್ರಗತಿಯಾಗಿರುವುದು ಗಮನಕ್ಕೆ ಬಂದರೆ ಹಾಗೆ ಬರೆಯಬೇಕು. ಉದಾ. ಹಿಂದೆ ಸಂಬಂಧಪಟ್ಟ ತಪ್ಪನ್ನು ಇತರರು ಅರಿವಿಗೆ ತಂದುಕೊಡಬೇಕಾಗುತ್ತಿತ್ತು; ಆದರೆ ಈಗ ಆ ತಪ್ಪು ನನಗೆ ಅರಿವಾಗುತ್ತಿದೆ. ಯಾವ ದಿನದಂದು ಪ್ರಗತಿಯು ಗಮನಕ್ಕೆ ಬರುವುದೋ, ಅದೇ ದಿನ ’ಪ್ರಗತಿ’ ಈ ಕೋಷ್ಟಕದಲ್ಲಿ ಬರೆಯಬೇಕು. ಈ ಸಮಯಕ್ಕೆ ’ಪ್ರಗತಿ’ಯ ಮೊದಲಿನ ತಖ್ತೆಯಲ್ಲಿನ ಎಲ್ಲ ಕೋಷ್ಟಕಗಳು ಖಾಲಿ ಇರುವವು.

ಮಕ್ಕಳೇ, ಮನಸ್ಸಿಗೆ ಸ್ವಯಂಸೂಚನೆಯ ಮೂಲಕ ದೋಷಗಳ ಅರಿವು ಮಾಡಿ ಕೊಟ್ಟಾಗ ಕೆಲವೊಮ್ಮೆ ನಿರುತ್ಸಾಹವೆನಿಸುತ್ತದೆ. ಪ್ರಗತಿಯ ಕೋಷ್ಟಕದಲ್ಲಿ ಪ್ರಗತಿಯನ್ನು ನಮೂದಿಸಿದಾಗ ಸ್ವಭಾವದೋಷವನ್ನು ದೂರಗೊಳಿಸಲು ನಿಮ್ಮ ಮನಸ್ಸಿಗೆ ಪ್ರೋತ್ಸಾಹ ದೊರೆಯುತ್ತದೆ ಹಾಗೂ ನಿರುತ್ಸಾಹ ಅನಿಸುವುದಿಲ್ಲ. ಯಾವ ದಿನ ಪ್ರಗತಿಯ ಕೋಷ್ಟಕದಲ್ಲಿ ಬರೆಯಲು ಏನೂ ಇರುವುದಿಲ್ಲವೋ , ಆಗ ಆ ಕೋಷ್ಟಕವನ್ನು ಖಾಲಿ ಬಿಡಬೇಕು. ಆ ಕೋಷ್ಟಕದಲ್ಲಿ ’ಇಲ್ಲ / ಏನೂ ಇಲ್ಲ’ ಎಂದು ಬರೆಯುವುದು ಬೇಡ. ’ಇಲ್ಲ / ಏನೂ ಇಲ್ಲ’, ಹೀಗೆ ಬರೆಯುವುದರಿಂದ ತಖ್ತೆಯನ್ನು ಬರೆಯುವವರಿಗೆ ನಿರಾಶೆಯುಂಟಾಗಬಹುದು.

ಮಕ್ಕಳೇ , ನಾವು ಕೂಡ ಇಂದಿನಿಂದಲೇ ಸ್ವಭಾವದೋಷ-ನಿರ್ಮೂಲನೆಗಾಗಿ ತಖ್ತೆಯನ್ನು ಬರೆಯೋಣ ಹಾಗೂ ಗುರುಕೃಪೆಯನ್ನು ಸಂಪಾದಿಸೋಣ !

(ಆಧಾರ : ಸನಾತನ – ನಿರ್ಮಿತ ಗ್ರಂಥ ‘ದೋಷ ನಿವಾರಿಸಿ ಗುಣ ವೃದ್ಧಿಸಿ’)