ಮಕ್ಕಳೇ, ಸ್ವಾವಲಂಬಿಗಳಾಗಿರಿ!

  • ಮಲಗಿ ಎದ್ದ ನಂತರ ತಮ್ಮ ಹಾಸಿಗೆ ಹಾಗೂ ಹೊದಿಕೆಗಳನ್ನು ಅಚ್ಚುಕಟ್ಟಾಗಿ ಮಡಚಿಡಬೇಕು.

  • ಅಧ್ಯಯನ ಮುಗಿದ ನಂತರ ಪುಸ್ತಕ, ಲೇಖನಿ ಮತ್ತು ಕಡತಗಳನ್ನು ಯೋಗ್ಯ ಸ್ಥಳದಲ್ಲಿ ಇಡಬೇಕು.

  • ಶಾಲೆಯಿಂದ ಬಂದ ಕೂಡಲೇ ಮೊದಲು ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದು ಬಟ್ಟೆ ಬದಲಾಯಿಸಬೇಕು.

  • ಅನಂತರ ತೆಗೆದ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಬೇಕು.

  • ಉಪಾಹಾರ ಮತ್ತು ಊಟವಾದ ನಂತರ ತಟ್ಟೆ-ಲೋಟಗಳನ್ನು ಸ್ವತಃ ತೊಳೆಯಬೇಕು.

  • ಬಟ್ಟೆಯ ಗುಂಡಿ ಹೋದರೆ ಸ್ವತಃ ಹಾಕಬೇಕು ಮತ್ತು ಬಟ್ಟೆ ಸ್ವಲ್ಪ ಹರಿದರೆ ಅದನ್ನು ಸ್ವತಃ ಹೊಲಿಯಬೇಕು.