ಮಕ್ಕಳೇ, ದೇವರ ಪೂಜೆ, ಅರ್ಚನೆ ಇತ್ಯಾದಿ ಉಪಾಸನೆಯನ್ನು ಮಾಡಿ!

೧. ದೇವರ ಪೂಜೆಯನ್ನು ಮಾಡಬೇಕು

ಮನೆಯ ದೇವರ ಕೋಣೆಯಲ್ಲಿ ಆ ದಿನನದ ಪೂಜೆ ಆಗಿದ್ದರೆ, ನೀವು ಸ್ನಾನ ಮಾಡಿ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಿ. ಊದುಬತ್ತಿಯನ್ನು ಹಚ್ಚಿ ದೇವರಿಗೆ ಅರ್ಪಿಸಿ. ಒಂದು ವೇಳೆ ಪೂಜೆ ಆಗಿರದಿದ್ದರೆ ಮನೆಯಲ್ಲಿ ತಂದೆ ತಾಯಿ ಅಥವಾ ಹಿರಿಯರನ್ನು ಕೇಳಿ ನೀವೇ ಪೂಜೆ ಮಾಡಬಹುದು.

೨. ಶ್ರೀ ಗಣೇಶನನ್ನು ವಂದಿಸಿ, ಇತರ ಶ್ಲೋಕಗಳನ್ನು ಪಠಿಸಬೇಕು

ದೇವರ ಪೂಜೆಯನ್ನು ಮಾಡಿದ ನಂತರ ಶ್ರೀ ಗಣೇಶನನ್ನು ವಂದಿಸುತ್ತಾ, ಎರಡೂ ಕೈಗಳನ್ನು ಜೋಡಿಸಿ, ಭಕ್ತಿಯಿಂದ ಮುಂದಿನ ಶ್ಲೋಕವನ್ನು ಹೇಳಬೇಕು:

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ |

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ಅರ್ಥ: (ಕೆಟ್ಟವರನ್ನು ನಶಿಸುವ) ಅಂಕುಡೊಂಕು ಸೊಂಡಿಲು, ಮಹಾಕಾಯ (ಶಕ್ತಿವಂತ) ಮತ್ತು ಕೋಟಿ ಸೂರ್ಯಗಳ ತೇಜಸ್ಸನ್ನು ಹೊಂದಿರುವ ಶ್ರೀ ಗಣೇಶ, ನನ್ನ ಎಲ್ಲ ಕಾರ್ಯಗಳನ್ನೂ ಯಾವುದೇ ವಿಘ್ನಗಳಿಲ್ಲದೆ ಸಫಲವಾಗಲಿ.

೩. ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು

ಅ. ದೇವರೇ, ದಿನವಿಡೀ ನನ್ನಿಂದ ಸತ್ಕಾರ್ಯಗಳಾಗಲು ನನಗೆ ಸಹಾಯ ಮಾಡಿ, ಮತ್ತು ನನ್ನಿಂದ ಯಾವುದೇ ತಪ್ಪುಗಳಾಗದಂತೆ ನೋಡಿಕೊಳ್ಳಿ.

ಆ. ಹೇ ಕುಲದೆವತೆಯೇ, ನಿನ್ನ ನಾಮಜಪದ ಸ್ಮರಣೆಯು ನನಗೆ ಸತತವಾಗುತ್ತಿರಲಿ.

ಇ. ಹೇ ಶ್ರೀಕೃಷ್ಣ, ನನ್ನಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಅಭಿಮಾನ ಜಾಗೃತವಾಗಲಿ.

೪. ದೇವರಿಗೆ ನಮಸ್ಕಾರವನ್ನು ಮಾಡಬೇಕು.

ಕುಲದೆವರಿಗೆ ಅಥವಾ ಇಷ್ಟ ದೇವರಿಗೆ, ಮತ್ತು ಇತರ ದೇವತೆಗಳಿಗೆ ಮನಃಪೂರ್ವಕವಾಗಿ ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು. ಸಾಷ್ಟಾಂಗ ನಮಸ್ಕಾರ ಮಾಡಲು ಆಗದಿದ್ದರೆ ಕೈ ಜೋಡಿಸಿಯಾದರೂ ನಮಸ್ಕಾರವನ್ನು ಮಾಡಬೇಕು.

೫. ದೇವರ ನಾಮ ಜಪಿಸಬೇಕು

ಕೆಳಗಡೆ ಕುಳಿತುಕೊಂಡು ೧೦ ನಿಮಿಷಗಳ ಕಾಲವಾದರೂ ದೇವರ ನಾಮ ಜಪಿಸಬೇಕು. ನಾನು ಯಾವ ದೇವರ ಹೆಸರನ್ನು ಜಪಿಸಬೇಕು ಎಂದು ಪ್ರಶ್ನೆ ನಿಮಗಿರಬಹುದು.

ಅ. ಛತ್ರಪತಿ ಶಿವಾಜಿ ಮಹಾರಾಜರು ಅವರ ಕುಲದೇವಿಯಾದ ಶ್ರೀ ಭವಾನಿ ಮಾತೆಯ ಉಪಾಸನೆಯನ್ನು ಮಾಡುತ್ತಿದ್ದರು. ಶ್ರೀ ಭವಾನಿ ಮಾತೆಯ ಆಶಿರ್ವಾದದಿಂದ ಅವರು 'ಹಿಂದವೀ ಸ್ವರಾಜ್ಯವನ್ನು' ಸ್ಥಾಪಿಸಿದರು. ಮಕ್ಕಳೇ, ಇತರ ದೇವತೆಗಳ ತುಲನೆಯಲ್ಲಿ ನಮ್ಮ ಕುಲದೇವರು ನಮ್ಮ ಕರೆಗೆ ಬೇಗನೆ 'ಓ'ಗೊದುತ್ತಾರೆ, ಆದುದರಿಂದ ಅವರ ಉಪಾಸನೆಯನ್ನು ಮಾಡಿ. ಹಾಗಾಗಿ ನಿಮ್ಮ ಕುಲದೇವರ ನಾಮಸ್ಮರಣೆಯನ್ನು ಮಾಡಿ.

ಆ. ನಾಮಜಪವನ್ನು ಮಾಡುವಾಗ ದೇವತೆಯ ಹೆಸರಿನ ಆದಿಯಲ್ಲಿ 'ಶ್ರೀ', ಹೆಸರನ್ನು ಚತುರ್ಥ ಪ್ರತ್ಯಯದಲ್ಲಿ ಮತ್ತು ಹೆಸರಿನ ನಂತರ 'ನಮಃ' ಎಂದು ಹೇಳಬೇಕು. ಕುಲದೇವತೆ 'ಮಹಾಲಕ್ಷ್ಮಿ' ಇದ್ದಲ್ಲಿ, 'ಶ್ರೀ ಮಹಾಲಕ್ಷ್ಮಿ ದೇವ್ಯೈ ನಮಃ |' ಎಂದು ಜಪಿಸಬೇಕು. ಕುಲದೇವರು ಇಲ್ಲದಿದ್ದರೆ ಇಷ್ಟ ದೇವರ ನಾಮಜಪವನ್ನು ಮಾಡಬೇಕು. ನಿಮ್ಮ ಇಷ್ಟದೇವರು 'ಗಣಪತಿ' ಆಗಿದ್ದಲ್ಲಿ, 'ಶ್ರೀ ಗಣೇಶಾಯ ನಮಃ' ಎಂದು ಜಪಿಸಬೇಕು.

ಇ. ದಿನವಿಡೀ ನಾಮಜಪಿಸಲು ಪ್ರಯತ್ನಿಸಬೇಕು.

೫. ಮುಸ್ಸಂಜೆಯ ಸಮಯಸಲ್ಲಿ ಇವನ್ನು ಮಾಡಿ!

೧. ಶುಭಂ ಕರೋತಿ ಹೇಳಿ : ಸೂರ್ಯಾಸ್ತದ ನಂತರ ಸಂಧಿಕಾಲವು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ನಮಗೆ ರಕ್ಷಣೆ ಸಿಗುವನ್ತಾಗಳು ಅಚ್ಚರಪಾಳನೆಯನ್ನು ಮಾಡಬೇಕು. ಇದರ ಪ್ರಕಾರ, ಕೈ ಕಾಲು ಮತ್ತು ಮುಖವನ್ನು ಸ್ವಚ್ಛ ಮಾಡಿ, ದೇವರ ಮುಂದೆ ದೀಪವನ್ನು ಹಚ್ಚಿ, ಮುಂದಿನ ಶ್ಲೋಕವನ್ನು ಹೇಳಿ –

ಶುಭಂ ಕರೋತಿ ಕಲ್ಯಾಣಮ್ ಆರೋಗ್ಯಂ ಧನಸಂಪದಾಮ್ |

ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋsಸ್ತು ತೇ ||

ಅರ್ಥ: ದೀಪದ ಜ್ಯೋತಿಯು ಕಲ್ಯಾಣ ಮತ್ತು ಶುಭಾದಾಯಕವಾಗಿದೆ, ಅದೇ ರೀತಿ ಆರೋಗ್ಯ ಭಾಗ್ಯ ಮತ್ತು ಧನ (ಸಂಪತ್ತನ್ನು) ಕರುಣಿಸುತ್ತದೆ, ಶತ್ರುಬುದ್ಧಿಯ ಅಂದರೆ ದ್ವೇಷವನ್ನು ನಶಿಸುತ್ತದೆ, ಆದುದರಿಂದ ಹೇ ದೀಪಜ್ಯೋತಿಯೇ, ನಿನಗೆ ನಮಸ್ಕರಿಸುತ್ತೇನೆ.

೨. ಸ್ತೋತ್ರಗಳನ್ನು ಪಠಿಸಿ: 'ಶ್ರೀ ರಾಮರಕ್ಷಾ ಸ್ತೋತ್ರ' ಮಾರುತಿಸ್ತೋತ್ರ' ಇಂತಹ ಸ್ತೋತ್ರಗಳನ್ನು ಪಠಿಸಿ.

ಸ್ತೋತ್ರ ಮತ್ತು ಆರತಿಗಳ ಅಧಿಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ !