ಸ್ವಭಾವದೋಷ-ನಿರ್ಮೂಲನೆಗಾಗಿ ಸ್ವಯಂಸೂಚನೆಯನ್ನು ಸಿದ್ಧಪಡಿಸುವ ಪದ್ಧತಿ

ಬಾಲಮಿತ್ರರೇ , ಸ್ವಭಾವದೋಷ-ನಿರ್ಮೂಲನೆಗಾಗಿ ಮನಸ್ಸಿಗೆ ಸ್ವಯಂಸೂಚನೆಯನ್ನು ನೀಡಬೇಕಾಗುತ್ತದೆ, ಅವನ್ನು ಸಿದ್ಧಪದಿಸುವ ಪದ್ಧತಿಯನ್ನು ನಾವು ತಿಳಿಯೋಣ.

‘ಸ್ವಯಂಸೂಚನೆ’ ಅಂದರೆ ಏನು ?

ನನ್ನಿಂದ ಆಗಿರುವ ಅಯೋಗ್ಯ ಕೃತಿ, ಮನಸ್ಸಿನಲ್ಲಿ ಬಂದ ಅಯೋಗ್ಯ ವಿಚಾರ, ವ್ಯಕ್ತವಾದ ಅಥವಾ ಮನಸ್ಸಿನಲ್ಲಿ ಮೂಡಿದಅಯೋಗ್ಯ ಪ್ರತಿಕ್ರಿಯೆ ಇವುಗಳಲ್ಲಿ ಬದಲಾವಣೆಯಾಗಿ ಅವುಗಳ ಜಾಗದಲ್ಲಿ ಯೋಗ್ಯ ಕೃತಿ ಆಗಲು ಅಥವಾ ಯೋಗ್ಯ ಪ್ರತಿಕ್ರಿಯೆ ನಿರ್ಮಾಣಗೊಳ್ಳಲು ನಾನು ಸ್ವತಃ ಅಂತರ್ಮನಸ್ಸಿಗೆ (ಚಿತ್ತಕ್ಕೆ) ನೀಡಬೇಕಾಗುವ ಯೋಗ್ಯ ಸೂಚನೆಯನ್ನೇ”ಸ್ವಯಂಸೂಚನೆ ” ಎಂದು ಕರೆಯುತ್ತಾರೆ.

ಸಹಜವಾಗಿ ಸುಲಭವಾದ ಶಬ್ದದಲ್ಲಿ ಹೇಳುವುದಾದರೆ ನಮ್ಮಿಂದ ಆಗಿರುವ ಅಯೋಗ್ಯ ವಿಷಯಗಳ ಬಗ್ಗೆ ಅಂತರ್ಮನಸ್ಸಿಗೆ ಯೋಗ್ಯವಾದ ಉಪಾಯವನ್ನು ತಿಳಿಸಿ ಹೇಳುವುದು, ಅದನ್ನೇ “ಸ್ವಯಂಸೂಚನೆ” ಎನ್ನುತ್ತಾರೆ. ಮನಸ್ಸಿಗೆ ಯೋಗ್ಯವೆನಿಸಿದ ದೃಷ್ಟಿಕೋನವನ್ನು ಪ್ರೀತಿಯಿಂದ ತಿಳಿಸಿ ಹೇಳುವುದೆಂದರೆ “ಸ್ವಯಂಸೂಚನೆ”. ಇದರಲ್ಲಿ ಬಾಹ್ಯಮನಸ್ಸಿನಿಂದ ಅಂತರ್ಮನಸ್ಸಿಗೆ ಆವಶ್ಯಕವಾದ ಸೂಚನೆಗಳನ್ನು ನೀಡುತ್ತಾರೆ. ಮಕ್ಕಳೇ, ಉದಾಹರಣೆಗೆ, ಆಲಸ್ಯ ಎಂಬ ದೋಷದಿಂದ ನೀವು ಬೆಳಿಗ್ಗೆ ತಡವಾಗಿ ಏಳುವುದರಿಂದ ತಯಾರಾಗಲಿಕ್ಕೆ ತಡವಾಗುತ್ತದೆ. ಆದುದರಿಂದ ಶಾಲೆ ಅಥವಾ ತರಗತಿಗೆ ಹೋಗಲು ಮನಸ್ಸಿನ ಮೇಲೆ ಒತ್ತಡ ಉಂಟಾಗಿ ಕಿರಿಕಿರಿಯಾಗುತ್ತದೆ.. ಇದನ್ನು ತಡೆಯಲು “ಆಲಸ್ಯ” ಎಂಬ ದೋಷವನ್ನು ದೂರಗೊಳಿಸಲು ಪ್ರಯತ್ನ ಮಾಡಬೇಕು. ಅದಕ್ಕಾಗಿ “ನಾನು ಬೆಳಗ್ಗೆ ಅಲಾರಂ ಆದ ತಕ್ಷಣ ಏಳುತ್ತೇನೆ ಅಥವಾ ತಾಯಿಯು ಕರೆದ ಕೂಡಲೇ/ತಕ್ಷಣ ಏಳುತ್ತೇನೆ”, ಎಂಬುದಾಗಿ ಮನಸ್ಸಿಗೆ ಸತತವಾಗಿ ಹೇಳಬೇಕಾಗುತ್ತದೆ. ಮನಸ್ಸಿಗೆ ಸತತವಾಗಿ ಹೇಳುವುದೇ “ಸ್ವಯಂಸೂಚನೆ”. ಮಕ್ಕಳೇ, ಸ್ವಯಂಸೂಚನೆ ಸಿದ್ಧಪಡಿಸುವ ಕೆಲವು ಪದ್ಧತಿಗಳಿವೆ. ಅವುಗಳಲ್ಲಿನ “ಸ್ವಯಂಸೂಚನೆಯ ಪದ್ಧತಿ ೧” ಬಗ್ಗೆ ತಿಳಿಯೋಣ.

ಸ್ವಯಂಸೂಚನೆಯ ಪದ್ಧತಿ ೧ : ಅಯೋಗ್ಯ ಕೃತಿಯ ಅರಿವು ಹಾಗೂ ಅದರ ಮೇಲಿನ ನಿಯಂತ್ರಣೆ

೨ ಅ. ಸ್ವಯಂಸೂಚನೆ ಪದ್ಧತಿಯ ಉಪಯುಕ್ತತೆ : ಈ ಪದ್ಧತಿಯ ಪ್ರಕಾರ ನೀಡಿದ ಸ್ವಯಂಸೂಚನೆಯಿಂದ ಅಯೋಗ್ಯ ವಿಚಾರ, ಭಾವನೆ ಹಾಗೂ ಅಯೋಗ್ಯ ಕೃತಿ ಇದರ ಅರಿವು ನಮಗಾಗುತ್ತದೆ, ಅದರ ಮೇಲೆ ನಿಯಂತ್ರಣವಿಡಲು ಸಾಧ್ಯವಾಗುತ್ತದೆ.

೨ ಆ. ಸ್ವಯಂಸೂಚನೆಯ ವಾಕ್ಯರಚನೆ : ______ ಈ ಸ್ವಭಾವದೋಷದಿಂದ ಯಾವಾಗ ನನ್ನಿಂದ ______ ಕೃತಿ ಆಗುತ್ತದೆಯೋ / ನನ್ನ ಮನಸ್ಸಿನಲ್ಲಿ ____ ವಿಚಾರ ಅಥವಾ ಭಾವನೆಗಳು ಬರುವುದೋ, ಆಗ ನನಗೆ ಅದರ ಅರಿವಾಗುತ್ತದೆ ಹಾಗೂ ______ (ಒಳ್ಳೆಯ / ಸರಿಯಾದ) ಕೃತಿಯನ್ನು ಮಾಡುವ / _____ ವಿಚಾರ ಮಾಡುವ ಮಹತ್ವವು ನನ್ನ ಗಮನಕ್ಕೆ ಬಂದು ನಾನು _____ ಕೃತಿಯನ್ನು ಮಾಡುತ್ತೇನೆ / _____ ವಿಚಾರವನ್ನು ಮಾಡುತ್ತೇನೆ.

೨ ಇ. ಸ್ವಯಂಸೂಚನೆ ಪದ್ಧತಿಯಿಂದ ದೂರಗೊಳಿಸಬಹುದಾದ ಸ್ವಭಾವದೋಷಗಳು : ಈ ಪದ್ಧತಿಯ ಉಪಯೋಗ ಮಾಡಿ ಮುಂದೆ ನೀಡಿರುವ ಸ್ವಭಾವದೋಷಗಳು ಹಾಗೂ ಅಯೋಗ್ಯ ಕೃತಿಗಳನ್ನು ದೂರಗೊಳಿಸಲು ಸಾಧ್ಯವಾಗುತ್ತದೆ.

ಏಕಾಗ್ರತೆ ಇಲ್ಲದಿರುವುದು, ಅವಸರ ಮಾಡುವುದು, ದುರ್ಲಕ್ಷ ಮಾಡುವುದು, ಅವ್ಯವಸ್ಥಿತತನ, ಸಮಯಪಾಲನೆ ಮಾಡದಿರುವುದು, ಆಲಸ್ಯ, ಅತಿಯಾದ ಕಾಳಜಿ ಮಾಡುವುದು, ಇತರರ ಗಮನ ಸೆಳೆಯುವುದು, ಸ್ವಾರ್ಥ, ನಿರ್ಣಯಕ್ಷಮತೆಯ ಅಭಾವ, ನೀತಿಯಿಂದ ನಡೆಯದಿರುವುದು, ಸಂಶಯ ಪಡುವುದು, ಅಹಂಕಾರ, ಉದ್ಧಟತನ, ಮನೋರಾಜ್ಯದಲ್ಲಿ ವಿಹರಿಸುವುದು ಮುಂತಾದ ಸ್ವಭಾವದೋಷಗಳು; ಹಾಗೆಯೇ ಉಗುರು ಕಚ್ಚುವುದು, ತೊದುಲುತ್ತ ಮಾತನಾಡುವುದು, ಎಂಟು ವರ್ಷದವರಾದರೂ ಹಾಸಿಗೆಯಲ್ಲಿ ಮೂತ್ರವಿಸರ್ಜಿಸುವುದು.

ಅಯೋಗ್ಯ ಕೃತಿಗಳಿಗೆ ಸ್ವಯಂಸೂಚನೆಯನ್ನು ಸಿದ್ಧಪಡಿಸುವುದನ್ನು ಕಲಿಯುಲು ನಾವು ಕೆಲವು ಪ್ರಸಂಗಗಳ ಅಧ್ಯಯನ ಮಾಡೋಣ.

ಪ್ರಸಂಗ ೧

ಕು. ಗುರುದಾಸನು ಗಣಿತದ ಅಧ್ಯಯನ ಮಾಡುವಾಗ ಎರಡೆರೆಡು ನಿಮಿಷಕೊಮ್ಮೆ ಆಚೀಚೆ ನೋಡುತ್ತಿದ್ದನು.

ಸ್ವಭಾವದೋಷ – ಮೇಲ್ನೋಟಕ್ಕೆ ‘ಏಕಾಗ್ರತೆಯ ಅಭಾವ’ ಕಾಣಿಸುವ ಸ್ವಭಾವದೋಷವಿದ್ದರೂ, ‘ಅಧ್ಯಯನದಲ್ಲಿ ಗಾಂಭೀರ್ಯ ಇಲ್ಲದಿರುವುದು’ ಇದು ಮೂಲ ಸ್ವಭಾವದೋಷವಾಗಿದೆ. ಆದುದರಿಂದ ಮೊದಲಿಗೆ ಒಂದೆರಡು ವಾರ ‘ಏಕಾಗ್ರತೆಯ ಅಭಾವ’ ಈ ದೋಷದ ಮೇಲೆ ಸ್ವಯಂಸೂಚನೆ ನೀಡಿದ ನಂತರ ‘ಅಧ್ಯಯನದಲ್ಲಿ ಗಾಂಭೀರ್ಯ ಇಲ್ಲದಿರುವುದು’ ಈ ದೋಷದ ಮೇಲೆ ಸ್ವಯಂಸೂಚನೆ ನೀಡುವ ಅವಶ್ಯಕತೆ ಇರುತ್ತದೆ.

ಸ್ವಯಂಸೂಚನೆ –
೧.’ಏಕಾಗ್ರತೆಯ ಅಭಾವ’ ಈ ದೋಷಕ್ಕೆ ನೀಡಬೇಕಾದ ಸ್ವಯಂಸೂಚನೆ – ಗಣಿತದ ಅಧ್ಯಯನ ಮಾಡುವಾಗ ನಾನು ಎರಡೆರೆಡು ನಿಮಿಷಕೊಮ್ಮೆ ಆಚೀಚೆ ನೋಡುವಾಗ, ‘ನಾನು ಅಧ್ಯಯನವನ್ನು ಏಕಾಗ್ರತೆಯಿಂದ ಮಾಡಿದರೆ ಮಾತ್ರ ಅದು ನನಗೆ ಚೆನ್ನಾಗಿ ನೆನಪಿನಲ್ಲಿರುತ್ತದೆ’, ಎಂಬುದು ನನಗೆ ಅರಿವಾಗುತ್ತದೆ ಹಾಗೂ ನಾನು ಅಧ್ಯಯನದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವೆನು.

೨. ‘ಅಧ್ಯಯನದಲ್ಲಿ ಗಾಂಭೀರ್ಯ ಇಲ್ಲದಿರುವುದು’ ಈ ಸ್ವಭಾವದೋಷಕ್ಕೆ ನೀಡಬೇಕಾದ ಸ್ವಯಂಸೂಚನೆ – ಗಣಿತದ ಅಧ್ಯಯನ ಮಾಡುವಾಗ ನಾನು ಎರಡೆರೆಡು ನಿಮಿಷಕೊಮ್ಮೆ ಆಚೀಚೆ ನೋಡುವಾಗ, ‘ನನಗೆ ಗಣಿತದ ವಿಷಯದಲ್ಲಿ ‘ನೂರಕ್ಕೆ ನೂರು ಗುಣ ಪಡೆಯುವುದಿದೆ’, ಎಂಬ ಅರಿವು ನನಗಾಗುತ್ತದೆ ಹಾಗೂ ನಾನು ಗಣಿತದ ಅಧ್ಯಯನದ ಕಡೆಗೆ ಗಮನ ಕೊಡುತ್ತೇನೆ.

ಪ್ರಸಂಗ ೨

ಕು. ಅರ್ಚನಾಳು ಶಾಲೆಯಿಂದ ಮನಗೆ ಬಂದ ನಂತರ ಪುಸ್ತಕದ ಚೀಲವನ್ನು ಮಂಚದ ಮೇಲೆ ಎಸೆದಳು.

ಸ್ವಭಾವದೋಷ – ಅವ್ಯವಸ್ಥಿತತನ

ಸ್ವಯಂಸೂಚನೆ – ಶಾಲೆಯಿಂದ ಮನೆಗೆ ಬಂದ ನಂತರ ಪುಸ್ತಕದ ಚೀಲವನ್ನು ಮಂಚದ ಮೇಲೆ ಎಸೆಯುವಾಗ, ನನಗೆ ಅದರ ಅರಿವಾಗುವುದು, ‘ಪುಸ್ತಕದ ಚೀಲದಲ್ಲಿವಿದ್ಯಾದೇವತೆಯ ವಾಸವಿರುತ್ತದೆ’, ಎಂದು ತಿಳಿದು ನಾನು ಅದನ್ನು ನನ್ನ ಅಧ್ಯಯನದ ಮೇಜಿನ ಮೇಲೆ ವ್ಯವಸ್ಥಿತವಾಗಿ (ಸರಿಯಾಗಿ) ಇಡುತ್ತೇನೆ.

ಪ್ರಸಂಗ ೩

ಕು. ದೇವಿದಾಸನು ಮನೆಯಲ್ಲಿಸುಮ್ಮನೆ ಕುಳಿತಿದ್ದನು. ಆಗ ದೇವಿದಾಸನ ತಾಯಿಯು ಅವನಿಗೆ ಅಂಗಡಿಯಿಂದ ಅಡಿಗೆಗಾಗಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ತರಲು ಹೇಳಿದಳು. ಆಗ ಅವನು ಅಧ್ಯಯನದ ನೆಪ ಹೇಳಿ ತಾಯಿಗೆ ಇಲ್ಲ ಎಂದು ಹೇಳಿದನು.

ಸ್ವಭಾವದೋಷ – ಆಲಸ್ಯ

ಸ್ವಯಂಸೂಚನೆ – ತಾಯಿಯು ನನಗೆ ಅಂಗಡಿಯಿಂದ ಅಡಿಗೆಗಾಗಿ ಮಣಸಿನಕಾಯಿ,ಕೊತ್ತಂಬರಿ ಸೊಪ್ಪು ತರಲು ಹೇಳಿದಾಗ ನಾನು ಆ ವಸ್ತುಗಳನ್ನು ತಂದುಕೊಡಲು ಆಲಸ್ಯ ಮಾಡುವಾಗ, ‘ತಾಯಿಗೆ ಅಡಿಗೆ ಮಾಡಲು ತೊಂದರೆ ಆಗಬಹುದು’ ಎಂಬುದರ ಅರಿವಾಗಿ ನಾನು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ತರಲು ತಕ್ಷಣ ಹೋಗುವೆನು.

ಪ್ರಸಂಗ-೪

ಶಾಲೆಯ ತರಗತಿಯ ಸಮಯದಲ್ಲಿ ಕು. ಆರತಿಯು ತನ್ನ ತಾಯಿಯು ‘ಮನೆಯಲ್ಲಿ ತಿನ್ನಲು ಯಾವ ತಿಂಡಿ ಮಾಡುತ್ತಿರಬಹುದು’ ಎಂಬ ವಿಚಾರ ಮಾಡುತ್ತ ಕುಳಿತಿದ್ದಳು.

ಸ್ವಭಾವದೋಷ – ನಿರರ್ಥಕ ವಿಚಾರ ಮಾಡುವುದು

ಸ್ವಯಂಸೂಚನೆ – ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವಾಗ ತಾಯಿಯು ‘ಮನೆಯಲ್ಲಿ ತಿನ್ನಲು ಯಾವ ತಿಂಡಿಮಾಡುತ್ತಿರಬಹುದು’ ಎಂಬ ವಿಚಾರ ಮಾಡುತ್ತಿರುವಾಗ ‘ನಾನು ತರಗತಿಯಲ್ಲಿ ಕಲಿಸುತ್ತಿರುವ ವಿಷಯದ ಕಡೆ ಸರಿಯಾಗಿ ಗಮನ ನೀಡಿದರೆ ನನ್ನ ಅಧ್ಯಯನವು ಚೆನ್ನಾಗಿ ಆಗುತ್ತದೆ’, ಎಂಬುದರ ಅರಿವು ನನಗಾಗಿ ನಾನು ತಕ್ಷಣ ತರಗತಿಯಲ್ಲಿ ಕಲಿಸುತ್ತಿರುವ ಪಠ್ಯದ ಕಡೆ ಗಮನ ನೀಡುವೆನು.

ಮಕ್ಕಳೇ, ದಿನಪೂರ್ತಿ ಮನಸ್ಸಿನಲ್ಲಿ ಬರುವ ವಿಚಾರಗಳಲ್ಲಿ ಶೇ.೩೦ ವಿಚಾರಗಳೇ ಉಪಯುಕ್ತವಾಗಿರುತ್ತವೆ, ಉಳಿದ ಶೇ.೭೦ ವಿಚಾರಗಳು ಅನಾವಶ್ಯಕ ಅಂದರೆ ನಿರರ್ಥಕವಾಗಿರುತ್ತವೆ. ಕೆಲವು ವಿಚಾರಗಳು ವ್ಯಕ್ತಿಗಳಿಗೆ ಸಂಬಂಧಿಸಿದರೆ, ಕೆಲವು ಪ್ರಸಂಗಗಳ ಬಗ್ಗೆ ಇರುತ್ತವೆ. ಆದುದರಿಂದ ಮನಸ್ಸಿನ ಶಕ್ತಿ ಎಲ್ಲ ವಿನಾಕಾರಣ ವ್ಯಯವಾಗುತ್ತದೆ. ಹೀಗೆ ನಿರರ್ಥಕ ವಿಚಾರ ಬರುತ್ತಿದ್ದರೆ ಆಗ ಓದಲು ಪ್ರಯತ್ನಿಸಬೇಕು. ಓದಲು ಆಗದಿದ್ದರೆ ನಾಮಸ್ಮರಣೆ ಮಾಡಬೇಕು.

ಪ್ರಸಂಗ ೫

ಶಾಲೆಯಲ್ಲಿ ಕನ್ನಡದ ಅಧ್ಯಯನ ನಡೆಯುವಾಗ, ಕು. ಪ್ರಾರ್ಥನಾ ಇವಳು ‘ಶಾಲೆಯ ಸ್ನೇಹ ಸಮ್ಮೇಳನದಲ್ಲಿ ನಾನು ಒಳ್ಳೆಯ ಬಟ್ಟೆಗಳನ್ನು ಧರಿಸಿದ್ದೇನೆ, ವಿಭನ್ನ ಕೇಶರಚನೆ ಮಾಡಿಕೊಂಡಿದ್ದೇನ, ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ’ ಎಂಬಂತಹ ವಿಚಾರದಲ್ಲಿ ಮಗ್ನಳಾಗಿದ್ದಾಳು.

ಸ್ವಭಾವದೋಷ – ಮನೋರಾಜ್ಯದಲ್ಲಿ ವಿಹರಿಸುವುದು

ಸ್ವಯಂಸೂಚನೆ – ಕನ್ನಡ ಅಧ್ಯಯನ ನಡೆಯುವಾಗ ನಾನು ಸ್ನೇಹ ಸಮ್ಮೇಳನದ ವಿಚಾರದಲ್ಲಿ ಮಗ್ನಳಾದಾಗ, ‘ಪರೀಕ್ಷೆಯ ದೃಷ್ಟಿಯಿಂದ ಕಲಿಸುತ್ತಿರುವ ಪಾಠವು ಮಹತ್ತ್ವದ್ದಾಗಿದ್ದು ಅದರ ಕಡೆಗೆ ಗಮನ ನೀಡುವುದು ಆವಶ್ಯಕವಿದೆ’, ಎಂಬುದಾಗಿ ನನಗೆ ಅರಿವಾಗುವುದು ಹಾಗೂ ನಾನು ತಕ್ಷಣ ಕಲಿಸುತ್ತಿರುವ ಪಾಠದ ಕಡೆಗೆ ಗಮನ ಕೊಡುವೆನು.

ಮಿತ್ರರೇ, ಸ್ವಯಂಸೂಚನೆಯನ್ನು ಸಿದ್ಧಪಡಿಸುವುದು ಹೇಗೆ ಸುಲಭವಾಗಿದೆಯೋ ಸ್ವಭಾವದೋಷ ನಿರ್ಮೂಲನೆಯೂ ಅಷ್ಟೇ ಸುಲಭವಾಗಿದೆ. ಅದಕ್ಕಾಗಿ ನಾವು ಇಂದಿನಿಂದಲೇ ಪ್ರಯತ್ನಿಸೋಣ…..!

Leave a Comment