ಮಕ್ಕಳೇ, ಕೇವಲ ‘ಪರೀಕ್ಷಾರ್ಥಿ’ ಆಗದೆ ನಿಜವಾದ ಅರ್ಥದಲ್ಲಿ ವಿದ್ಯಾರ್ಥಿ ಆಗಿ !

ಇತ್ತೀಚಿಗೆ, ಅಧ್ಯಯನ ಅಂದರೆ ಕೇವಲ ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಹೋಗಲು ಮಾಡುವ ಪ್ರಯತ್ನಕ್ಕೆ ಸೀಮಿತವಾಗಿದೆ. ಇಂತಹ ಅಧ್ಯಯನ ಕೇವಲ ಪರೀಕ್ಷೆಯ ಪೂರ್ವ ತಯಾರಿ ಆಗಿದ್ದ ಕಾರಣ, ಪರೀಕ್ಷೆ ಮುಗಿದ ನಂತರ ಕಾಲಾಂತರದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಕ್ಕಳಲ್ಲಿ ವಿಚಾರಿಸಿದಾಗ ಉತ್ತರಗಳನ್ನು ನೀಡುವಲ್ಲಿ ಅವರು ಅಶಕ್ತರಾಗಿರುತ್ತಾರೆ. ಆದುದರಿಂದ 'ವಿದ್ಯಾರ್ಥಿ' ಆಗದೆ ಮಕ್ಕಳು ತಿಳಿಯದೆ 'ಪರೀಕ್ಷಾರ್ಥಿ' ಆಗುತ್ತಾರೆ.

ಅ. ಮಕ್ಕಳೇ, ನಿಮ್ಮ ಧ್ಯೇಯ, ಕೇವಲ ಪರೀಕ್ಷೆಯಲ್ಲಿ ಉತ್ತಿರ್ಣರಾಗುವುದಕ್ಕೆ ಸೀಮಿತವಾಗಿರಬಾರದು. ಅಂದರೆ ದೊಡ್ಡವರಾದ ನಂತರ ಗಳಿಸಿದ ವಿದ್ಯೆಯಿಂದ ವಿದ್ಯಾದಾನ ಮಾಡುವಂತಿರಬೇಕು, ಗಳಿಸಿದ ವಿದ್ಯೆ ರಾಷ್ಟ್ರಕ್ಕಾಗಿ ಉಪಯುಕ್ತವಾಗಿರಬೇಕು, ಎಂಬುದೇ ನಿಮ್ಮ ಉದ್ದೇಶವಾಗಿರಬೇಕು. ರಾಷ್ಟ್ರಕ್ಕಾಗಿ ಸರ್ವಸ್ವವನ್ನೇ ಅರ್ಪಣೆ ಮಾಡಿದ ಲೋಕಮಾನ್ಯ ಟಿಳಕ, ಸ್ವಾತಂತ್ರ್ಯವೀರ ಸಾವರಕರ, ಧರ್ಮಕ್ಕಾಗಿ ಜೀವನ ಸವೆಸಿದ ಸ್ವಾಮಿ ವಿವೇಕಾನಂದ ಮತ್ತಿತರರ ಚರಿತ್ರೆಗಳನ್ನು ಅಭ್ಯಾಸ ಮಾಡಿದಾಗ ಇದು ಲಕ್ಷ್ಯಕ್ಕೆ ಬರುತ್ತದೆ.

ಆ. ಒಂದು ವಿಷಯದ ಅಧ್ಯಯನ ಮಾಡುವುದೆಂದರೆ ಕೇವಲ ಪರೀಕ್ಷೆಯಲ್ಲಿ ಉತ್ತಿರ್ಣರಾಗಲು ಆ ವಿಷಯವನ್ನು ಓದುವುದಲ್ಲದೆ, ಆ ವಿಷಯವನ್ನು ತಿಳಿದುಕೊಂಡು ಕೃತಿಯಲ್ಲಿ ತರುವುದು ಎಂದಾಗುತ್ತದೆ. ಮುಂದಿನ ಎರಡು ಉದಾಹರಣೆಗಳಿಂದ ಅದು ಸ್ಪಷ್ಟವಾಗಬಹುದು. ಪೌರನೀತಿಯಲ್ಲಿ (civics) ಹೇಳಿರುವಂತೆ, 'ವಾಹನವನ್ನು ಎಡಬದಿಯಲ್ಲಿ ಚಲಾಯಿಸಿ' ಎಂದು. ಪ್ರತ್ಯಕ್ಷ ಜೀವನದಲ್ಲಿಯೂ ನಾವು ಸೈಕಲನ್ನು ಯಾವಾಗಲೂ ಎಡಬದಿಯಲ್ಲಿ ನಡೆಸಬೇಕು. ವಿಜ್ಞಾನ ಹೇಳುತ್ತದೆ, 'ಮುಚ್ಚಿಡದ ಖಾದ್ಯಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವೆಂದು'. ಈ ವಿಷಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕು ಮತ್ತು ಪ್ರವಾಸಕ್ಕೆ ಹೋದಾಗ ಮುಚ್ಚಿಡದ ಖಾದ್ಯಪದಾರ್ಥಗಳನ್ನು ತಿನ್ನಬಾರದು.

ಮನಸ್ಸಿನಲ್ಲಿರುವ ಪರೀಕ್ಷೆಯ ಅಂಜಿಕೆ ಅಥವಾ ಚಿಂತೆಯನ್ನು ಹೇಗೆ ದೂರ ಮಾಡುವಿರಿ?

ಮಕ್ಕಳೇ, ಪರೀಕ್ಷೆ ಸಮೀಪಿಸಿದಂತೆ, ನಿಮ್ಮಲ್ಲಿ ಅನೇಕರಿಗೆ ಹೊಟ್ಟೆ ನೋವು ಬರುವುದು, ಕೆಲವರಿಗೆ ಹುಷಾರಿಲ್ಲದಾಗುವುದು ಇತ್ಯಾದಿ ಕಂಡುಬರುತ್ತದೆ. ಪರೀಕ್ಷೆಯ ಹೆದರಿಕೆ ಅಥವಾ ಚಿಂತೆ ಹೋಗಲಾಡಿಸಲು ಮುಂದಿನ ವಿಚಾರಗಳನ್ನು ನೆನಪಿನಲ್ಲಿ ಇಡಬೇಕು.
೧. ನಕಾರಾತ್ಮಕ ವಿಚಾರ ಮಾಡಬಾರದು : ಉದಾ. 'ಉತ್ತರ ಪತ್ರಿಕೆಯಲ್ಲಿ ಬರೆಯುವಾಗ ನನಗೆ ಏನು ನೆನಪಿಗೆ ಬರಲಿಕ್ಕಿಲ್ಲ' ಇತ್ಯಾದಿ. ಹೀಗೆ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಬಂದರೆ ಅವುಗಳನ್ನು ಬರೆದು, ಆ ವಿಷಯವನ್ನು ತಾಯಿ-ತಂದೆಗೆ, ಅಣ್ಣನಿಗೆ ಅಥವಾ ಶಿಕ್ಷಕರಿಗೆ ತಿಳಿಸಿ ಅವರ ಸಲಹೆ ಪಡೆಯಬೇಕು..

೨.ಸ್ವಂತ ಕ್ಷಮತೆಯನ್ನು ತಿಳಿದುಕೊಂಡಿರಬೇಕು : ಅವನಿಗೆ ಇಷ್ಟು ಅಂಕಗಳು ಸಿಕ್ಕಿವೆ ನನಗೂ ಅಷ್ಟೇ ಸಿಗಬೇಕು ಹೀಗೆ ಇತರರೊಂದಿಗೆ ತುಲನೆಯನ್ನು ಮಾಡಬಾರದು.

೩. ಪರೀಕ್ಷೆಯಲ್ಲಿ ಸಿಗುವ ಅಂಕಗಳೇ ಸರ್ವಸ್ವ ಎಂದು ತಿಳಿಯಬಾರದು.

೪. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸಬೇಕು. ಅದರಿಂದ ಆತ್ಮವಿಶ್ವಾಸ ಬೇಳೆಯುತ್ತದೆ.

೫. ಕೆಲವು ದಿನಗಳ ಮುಂಚೆಯೆ ಪರೀಕ್ಷೆಯ ಪ್ರಸಂಗದ ಪ್ರಾತ್ಯಕ್ಷಿಕೆಯನ್ನು ಮಾಡಬೇಕು : ಇದು ಪರೀಕ್ಷೆಯ ಒತ್ತಡ, ಅಂಜಿಕೆ ಮುಂತಾದ ಸ್ವಭಾವ ದೋಷಗಳನ್ನು ದೂರ ಮಾಡಲು ಉಪಯುಕ್ತ ಮಾನಸೋಪಚಾರ ಪದ್ಧತಿಯಾಗಿದೆ. ಹೀಗೆ ಮಾಡುವಾಗ 'ನಮಗೆ ಎಲ್ಲ ಸಾಧ್ಯವಾಗುತ್ತದೆ', ಎಂದು ಕಲ್ಪನೆ ಮಾಡಿ ಆ ಸೂಚನೆಯನ್ನು ಮನಸ್ಸಿಗೆ ನೀಡಬೇಕು.

೬. ಪರೀಕ್ಷೆಗೆ ಹೋಗುವ ಮುನ್ನ ಬಡಿದಾಟ, ಹತ್ಯೆ ಇತ್ಯಾದಿ ಪ್ರಸಂಗಗಳಿರುವಂತಹ ಚಲನಚಿತ್ರಗಳನ್ನು ನೋಡಬಾರದು. ನಾವು ಆ ಪ್ರಸಂಗದ ಬಗ್ಗೆಯೇ ವಿಚಾರ ಮಾಡುತ್ತಿರುತ್ತೇವೆ. ಅದರಿಂದ ನಮ್ಮ ಮನಸ್ಸು ದೂಷಿತವಾಗುತ್ತದೆ. ಇದರಿಂದ ಮನಸ್ಸಿನ ಏಕಾಗ್ರತೆಯ ಮೇಲೆ ಪರಿಣಾಮ ಆಗುತ್ತದೆ. ಆದುದರಿಂದ ಪರೀಕ್ಷೆಯ ಮುಂಚೆ ಸಾಧ್ಯವಾದಷ್ಟು ಆನಂದದ ಕ್ಷಣಗಳನ್ನು ನೆನಪಿಸಿಕೊಳ್ಳಬೇಕು.

ಮಕ್ಕಳೇ, ಮೇಲೆ ತಿಳಿಸಿರುವ ಪ್ರತಿಯೊಂದು ಕೃತಿ ನಿಮ್ಮ ನಿಯಂತ್ರಣದಲ್ಲಿ ಇದೆಯೆ? ಅದಕ್ಕೆ ಪರೀಕ್ಷೆಯ ಒತ್ತಡ ಏಕೆ ತೆಗೆದುಕೊಳ್ಳುವಿರಿ? ಅದೆಲ್ಲವನ್ನು ಈಗ ಮರೆತು ಬಿಡಿ ಮತ್ತು ಪರೀಕ್ಷೆಯನ್ನು ಆನಂದದಿಂದ ಎದುರಿಸಿ!

– ಶ್ರೀ ರಾಜೇಂದ್ರ ಪಾವಸ್ಕರ (ಗುರುಜಿ), ಪನವೇಲ

ಈ ಲೇಖನದಲ್ಲಿ ಶಾಲೆಯ ಪರೀಕ್ಷೆಗೆ ಸಂಬಂಧಿಸಿದ ಉದಾಹರಣೆಗಳನ್ನು ನೀಡಲಾಗಿದೆ. ಇದು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸುತ್ತದೆ.

Leave a Comment