ಶಿಕ್ಷಣದಿಂದ ಮುಂದಿನ ವಿಷಯಗಳು ಈಡೇರಿದರೆ ಆಗ ಅದನ್ನು ಶಿಕ್ಷಣವೆನ್ನಬಹುದು

ಶಿಕ್ಷಣದ ಧ್ಯೇಯ ಮತ್ತು ಉದ್ದೇಶ !

ಶಿಕ್ಷಣದ ಮೂಲ ಉದ್ದೇಶ ವಿದ್ಯಾರ್ಜನೆ ಆಗಿದೆ. ‘ಸಾ ವಿದ್ಯಾ ಯಾ ವಿಮುಕ್ತಯೇ |‘ ಯಾವುದು ನಮ್ಮ ದುಃಖಗಳನ್ನು ದೂರಮಾಡಿ ನಮ್ಮನ್ನು ಸದಾಕಾಲ ಆನಂದದಲ್ಲಿರುವಹಾಗೆ ಮಾಡುತ್ತದೆಯೋ, ಅದೇ ‘ವಿದ್ಯೆ’ ಎಂದೆನಿಸಿಕೊಳ್ಳುತ್ತದೆ.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಾಲಕರ ಹಾಗೂ ಮಕ್ಕಳ ಗಮನವು, ಮಕ್ಕಳು ಅತಿ ಹೆಚ್ಚು ಅಂಕಗಳನ್ನು ಪಡೆದು ವೈದ್ಯಕೀಯ, ಅಭಿಯಂತರರು ಅಥವಾ ಇನ್ಯಾವುದಾದರೂ ಒಳ್ಳೆಯ ವ್ಯವಸಾಯಿಕ ಕ್ಷೇತ್ರದಲ್ಲಿ ಪ್ರವೇಶ ಪಡೆಯುವುದರಲ್ಲೇ ಕೇಂದ್ರೀಕೃತವಾಗಿರುತ್ತದೆ. ಬುದ್ಧಿವಂತ ವಿದ್ಯಾರ್ಥಿಯು ಚೆನ್ನಾಗಿ ಅಧ್ಯಯನ ಮಾಡಿ ವೈದ್ಯ, ಅಭಿಯಂತರ ಅಥವಾ ಉನ್ನತ ಅಧಿಕಾರಿ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದಲ್ಲಿ, ಅವನು ಸುಖವಾಗಿ ಇರುತ್ತಾನೆ ಎಂದು ಧೃಡವಾಗಿ ಹೇಳಲು ಆಗುವುದಿಲ್ಲ.

ಶಿಕ್ಷಣದಿಂದ ಮುಂದಿನ ಧ್ಯೇಯಗಳು ಈಡೇರಿದರೆ ಆಗ ಅದನ್ನು ಶಿಕ್ಷಣವೆನ್ನಬಹುದು

೧. ಜ್ಞಾನ ಸಂವರ್ಧನೆ ಮತ್ತು ಬೌದ್ಧಿಕ ವಿಕಾಸ

೨. ತನ್ನ ಕ್ಷೇತ್ರದಲ್ಲಿ ನೈಪುಣ್ಯ ಸಾಧಿಸುವುದು. ಯಾವ ಕ್ಷೇತ್ರದಲ್ಲಿ ಸಾಕಷ್ಟು ಸಂಪಾದಿಸಲು ಆಗುವುದೋ, ಆ ಕ್ಷೇತ್ರದಿಂದ ತನ್ನ ಹಾಗೂ ಇತರರ ಜೀವನವು ಸುಖ ಮತ್ತು ಸಂಪನ್ನವಾಗುವುದು.

೩. ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಪೋಷಿಸಿ ಬೆಳೆಸುವುದು.

೪. ಚಾರಿತ್ರ್ಯಸಂಪನ್ನ ವ್ಯಕ್ತಿತ್ವವನ್ನು ಸುಧೃಡಗೊಳಿಸುವುದು

೫. ಮುಂದಿನ ಪೀಳಿಗೆಗೋಸ್ಕರ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು

೬. ನಮ್ಮ ಜೀವನದ ಧ್ಯೇಯ ಏನಿರಬೇಕು, ಮತ್ತು ಅದನ್ನು ಸಾಧಿಸಲು ಏನು ಮಾಡಬೇಕು ಅಎನ್ನುವುದರ ಬಗ್ಗೆ ಮಾರ್ಗದರ್ಶಕವಾಗಿರುವುದು

೭. ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ಮಾರ್ಪಾಡು ಮಾಡುವುದು

ದುರ್ದೈವದಿಂದ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮೇಲಿನ ಅಂಶಗಳ ಕೊರತೆಯು ಎದ್ದು ಕಾಣುತ್ತದೆ.ಆದುದರಿಂದ ಮಕ್ಕಳು (ವಿದ್ಯಾರ್ಥಿಗಳು) ಮಾತ್ರವಲ್ಲದೆ, ಪಾಲಕರು ಮತ್ತು ಶಿಕ್ಷಕರು ಕೂಡ ಈ ಕೊರತೆಗಳನ್ನು ನೀಗಿಸಲು ಮಕ್ಕಳಿಗೆ ನಿಜವಾದ ಶಿಕ್ಷಣವನ್ನು ಒದಗಿಸಿಕೊಡಬೇಕು!