ಅಧ್ಯಯನದ ತಂತ್ರಗಳನ್ನು ಹೀಗೆ ವಿಕಸಿತಗೊಳಿಸಿ !

ಇಂದಿನ ಕಾಲದಲ್ಲಿ ಮಕ್ಕಳಿಗೆ ಹಾಗೂ ಪಾಲಕರಿಗೆ ಅಧ್ಯಯನದ ತಂತ್ರಗಳು ತಿಳಿದಿರುವುದು ಆವಶ್ಯಕವಾಗಿದೆ. ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಪ್ರಶ್ನೋತ್ತರಗಳನ್ನು ಬಾಯಿಪಾಠ ಮಾಡಲು ಹೇಳುತ್ತಾರೆ. ಮುಂದೆ ಈ ಬಾಯಿಪಾಠ ಮಾಡುವ ರೂಢಿಯು ಅಪಾಯಕಾರಿಯಾಗಬಹುದು. ಬಾಯಿಪಾಠ ಮಾಡಿರುವ ಎಲ್ಲ ಅಂಶಗಳು ಇರುವಂತೆಯೇ ನೆನಪಿರುವುದಿಲ್ಲ. ಅಲ್ಲಿ ವಿಷಯದ ನಿಯಂತ್ರಣವು ಮಹತ್ವದ್ದಾಗಿರುತ್ತದೆ. ಇದರಿಂದ ವಿಷಯವನ್ನು ತಿಳಿದುಕೊಳ್ಳುವುದು, ವಿಷಯದಲ್ಲಿರುವ ಮಹತ್ವದ ಅಂಶಗಳಿಗೆ ಸೀಸದಿಂದ ಅಡಿಗೆರೆ (underline) ಹಾಕುವುದು, ಮಹತ್ವದ ವಿಷಯಗಳ ಟಿಪ್ಪಣಿಯನ್ನು ತಯಾರಿಸುವುದು ಅಂತೆಯೇ ಅದನ್ನು ಉಪಯೋಗಿಸುವುದು ಇವೆಲ್ಲವು ಅಧ್ಯಯನ ತಂತ್ರದ ದೃಷ್ಟಿಯಿಂದ ಉಪಯುಕ್ತವಾಗಿವೆ. ಚಿಕ್ಕಂದಿನಿಂದಲೇ ಅಧ್ಯಯನದ ತಂತ್ರಗಳ ರೂಢಿಯಾದರೆ ಮಹಾವಿದ್ಯಾಲಯದ ವಿಷಯಗಳಲ್ಲಿ ತಾವೇ ನೋಟ್ಸ್‌ನ್ನು ತಯಾರಿಸಬಹುದು. ಗೈಡಗಳನ್ನು ಓದುವುದಕ್ಕಿಂತಲೂ ನಮ್ಮ ನೋಟ್ಸ್‌ಗಳು ಒಳ್ಳೆಯ ರೀತಿಯಲ್ಲಿ ನೆನಪಿನಲ್ಲಿರುತ್ತವೆ. ಗೈಡಗಳಲ್ಲಿ ಪ್ರಶ್ನೋತ್ತರಗಳ ಪುನರಾವರ್ತನೆಯಾಗಿರುತ್ತದೆ. ಪಠ್ಯಪುಸ್ತಕಗಳಿಗೆ ಹೋಲಿಸಿದರೆ ಗೈಡಗಳನ್ನು ಓದಲು ಹೆಚ್ಚಿನ ಸಮಯ ತಗುಲುತ್ತದೆ. ಪಠ್ಯಪುಸ್ತಕಗಳನ್ನು ಓದುವ ಅಭ್ಯಾಸವಾದ ನಂತರ ಅವುಗಳನ್ನು ಕಡಿಮೆ ಸಮಯದಲ್ಲಿ ಓದಲು ಸಾಧ್ಯವಾಗುತ್ತದೆ.

ಅಧ್ಯಯನದ ತಂತ್ರಗಳನ್ನು ಹೇಗೆ ವಿಕಸಿತಗೊಳಿಸುವುದು ?

೧. ಶಾಲೆಯಲ್ಲಿ ಹೊಸ ಪಾಠವನ್ನು ಕಲಿಸುವ ಮೊದಲು, ಮಕ್ಕಳಿಗೆ ಅದರ ಅಭ್ಯಾಸ ಮಾಡಲು ಹೇಳಿರಿ.
೨. ಪಾಠವನ್ನು ಕಲಿಸಿದ ನಂತರ ಶಿಕ್ಷಕರಿಗೆ ಪ್ರಶ್ನೆಗಳನ್ನು ಕೇಳಿ ಸಂದೇಹಗಳನ್ನು ನಿವಾರಿಸಿಕೊಳ್ಳುವುದು ಅವಶ್ಯಕವಾಗಿರುವುದರ ಬಗ್ಗೆ ಮಕ್ಕಳೊಂದಿಗೆ ಮಾತನಾಡಿರಿ.
೩. ಪಾಠವನ್ನು ಪುನಃ ಪುನಃ ಓದಲು ಹೇಳಿರಿ.
೪. ಅನಂತರ ಮಹತ್ವದ ಅಂಶಗಳ ನೋಟ್ಸ್ ತಯಾರಿಸಲು ಹೇಳಿರಿ.
೫. ಪರೀಕ್ಷೆಯ ಸಮಯದಲ್ಲಿ ಮಕ್ಕಳಿಗೆ ತಮ್ಮ ನೋಟ್ಸ್ ಓದಲು ಪ್ರೇರೇಪಿಸಿರಿ.
೬. ಪ್ರಶ್ನೋತ್ತರಗಳ ಅಭ್ಯಾಸ ಮಾಡುವಾಗ ಬರೆದು ಅಭ್ಯಾಸ ಮಾಡಲು ಹೇಳಿರಿ.
೭. ಬರೆದಿರುವುದು ಹೆಚ್ಚಿನ ಸಮಯ ನೆನಪಿನಲ್ಲಿರುತ್ತದೆ.

ಚಲನಚಿತ್ರಗಳನ್ನು ಎಷ್ಟು ಇಷ್ಟಪಟ್ಟು ನೋಡುತ್ತೇವೆಯೋ ಅಷ್ಟೇ ಇಷ್ಟಪಟ್ಟು ಅಭ್ಯಾಸ ಮಾಡುವುದೂ ಆವಶ್ಯಕವಾಗಿದೆ.

ಇದು ನನ್ನ ಅನುಭವದ ಮಾತಾಗಿದೆ. ನನ್ನ ಮಕ್ಕಳು ಅಧ್ಯಯನಕ್ಕಾಗಿ ಈ ಪದ್ಧತಿಯನ್ನು ಅವಲಂಬಿಸಿದ್ದರು. ಆದುದರಿಂದ ಶಾಲೆಯ ಪಠ್ಯಪುಸ್ತಕದಲ್ಲಿನ ವಿಷಯಗಳು ಇಂದಿಗೂ (ಕೆಲಸಕ್ಕೆ ಸೇರಿದ ಮೇಲೆಯೂ) ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಅಧ್ಯಯನ ಮಾಡುವಾಗ ಪಾಲಕರು ಟಿ.ವಿ ಯನ್ನು ಬದಿಗಿಟ್ಟು ಮಕ್ಕಳೊಂದಿಗೆ ಕುಳಿತರೆ ಅವರ ಏಕಾಗ್ರತೆಯಲ್ಲಿ ವೃದ್ಧಿಯಾಗುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ತಂದೆ ತಾಯಿಯರು ನಮ್ಮಿಂದ ಅಧ್ಯಯನ ಮಾಡಿಸಿಕೊಳ್ಳುತ್ತಾರೆ ಎಂಬ ಭಾವನಾತ್ಮಕ ಸುರಕ್ಷಿತತೆಯು ಮಕ್ಕಳಿಗೆ ಯಶದಾಯಕವಾಗಿರುತ್ತದೆ.

ಪ್ರಾ. ಕುಂದಾ ಕುಲಕರ್ಣಿ, ನಾಸಿಕ

Leave a Comment