ವಿದ್ಯಾರ್ಥಿಗಳೇ, ಶ್ರೀ ಸಂಕಟನಾಶನ ಗಣಪತೀಸ್ತೋತ್ರದ ಪಾರಾಯಣ ಮಾಡಿ !

ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿರುತ್ತದೆ. ‘ಅಧ್ಯಯನ ಮಾಡಿದ್ದು ನೆನಪಿರುತ್ತದಲ್ಲವೇ?’, ‘ಪರೀಕ್ಷೆಯನ್ನು ಎದುರಿಸುವಾಗ ನೆನಪಿಗೆ ಬರುತ್ತದಲ್ಲವೇ?’ ಇಂತಹ ಪ್ರಶ್ನೆಗಳಿಂದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಒತ್ತಡ ನಿರ್ಮಾಣವಾಗುತ್ತದೆ. ಇವುಗಳ ಮೇಲೆ ಮಾಡುವ ಆಧ್ಯಾತ್ಮಿಕ ಉಪಾಯವೆಂದರೆ ಗಣಪತೀಸ್ತೋತ್ರದ ಪಾರಾಯಣ.

ಶ್ರೀ ಗಣೇಶಸ್ತೋತ್ರದ ಪಾರಾಯಣದ ಪದ್ಧತಿ

೧. ಪೂರ್ವ ದಿಕ್ಕಿಗೆ ಮುಖ ಮಾಡಿ ಆಸನ ಸ್ವೀಕರಿಸಬೇಕು.

೨. ಸಾಧ್ಯವಾದರೆ ಪದ್ಮಾಸನ ಅಥವಾ ಸುಖಾಸನದಲ್ಲಿ ಕುಳಿತುಕೊಳ್ಳಬೇಕು.

೩. ಅರ್ಧ ಬಟ್ಟಲಿನಷ್ಟು ನೀರಿನಲ್ಲಿ ಸ್ವಲ್ಪ ವಿಭೂತಿಯನ್ನು ಬೆರೆಸಿಡಬೇಕು.

೪. ಮನಃಪೂರ್ವಕವಾಗಿ ಗಣಪತಿಯನ್ನು ಪ್ರಾರ್ಥಿಸಬೇಕು.

೫. ಶ್ರೀ ಗಣಪತೀಸ್ತೋತ್ರದ ೨ ರಿಂದ ೪ನೇ ಶ್ಲೋಕಗಳನ್ನು (‘ಪ್ರಥಮಂ ವಕ್ರತುಂಡಚ’ ದಿಂದ ‘ದ್ವಾದಶನ್ ತೂ ಗಜಾನನ’ ತನಕ) ೧೧೦ ಸಲ ಪಠಿಸಬೇಕು.

೬. ೧೧೧ ನೇ ಸಲ ಪೂರ್ಣ ಗಣಪತೀಸ್ತೋತ್ರವನ್ನು ಪಠಿಸಬೇಕು.

೭. ಕೊನೆಗೆ ಗಣಪತಿಗೆ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಬೇಕು.

೮. ಈ ಪಾರಾಯಣವು ಅರ್ಧ ತಾಸಿನಲ್ಲಿ ಮುಗಿಯುತ್ತದೆ. ತದನಂತರ ಶ್ರದ್ಧೆಯಿಂದ ತೀರ್ಥವನ್ನು (ವಿಭೂತಿ ಮಿಶ್ರಿತ ನೀರು) ಸ್ವೀಕರಿಸಬೇಕು.

ಮೇಲೆ ಸೂಚಿಸಿರುವ ರೀತಿಯಲ್ಲಿ ಗಣಪತೀಸ್ತೋತ್ರದ ಪಾರಾಯಣವನ್ನು ೧೧ ದಿನಗಳ ಕಾಲ ಮಾಡಬೇಕು.

ಗಣಪತೀಸ್ತೋತ್ರದ ಪಾರಾಯಣದಿಂದ ಆಗುವ ಲಾಭಗಳು

೧. ಮನಸ್ಸಿನ ಏಕಾಗ್ರತೆಯು ಹೆಚ್ಚಾಗುತ್ತದೆ.

೨. ಒಂದೆರಡು ಸಲ ಓದಿದರೂ ನೆನಪಿರುತ್ತದೆ. ಸ್ಮರಶಕ್ತಿಯು ಹೆಚ್ಚಾಗುತ್ತದೆ.

೩.ಗಣಪತಿಯು ಬುದ್ಧಿಯ ದೇವರಾಗಿರುವುದರಿಂದ ಬುದ್ಧಿ ಸಾತ್ವಿಕ ಮತ್ತು ಸೂಕ್ಷ್ಮವಾಗುತ್ತದೆ.

– ಪ. ಪೂ. ಪಾಂಡೆ ಮಹಾರಾಜ

Leave a Comment