ಪರೀಕ್ಷೆಯಲ್ಲಿ ನಕಲು ಮಾಡಬಾರದು

ವಾರ್ಷಿಕ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿಯ ವಿದ್ಯಾರ್ಥಿಗಳಷ್ಟೇ ಅಲ್ಲ, ಜಾಣ ವಿದ್ಯಾರ್ಥಿಗಳೂ ಕಾಪಿಯ ಕೆಟ್ಟ ಪದ್ಧತಿಗೆ ಬಲಿಯಾಗುತ್ತಾರೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. ಪರೀಕ್ಷೆಯಲ್ಲಿ ಅಧಿಕ ಅಂಕಗಳು ಸಿಗಬೇಕೆಂದು ಈ ರೀತಿ ಪ್ರಯತ್ನಿಸುತ್ತಾರೆ. ಪರೀಕ್ಷೆಯ ವೇಳೆಯಲ್ಲಿ ಕಾಪಿ ಮಾಡುವಾಗ ವಿದ್ಯಾರ್ಥಿ ಸಿಕ್ಕಿ ಬಿದ್ದರೆ ಅವನ ಶೈಕ್ಷಣಿಕ ಭವಿಷ್ಯ ಮತ್ತು ಜೀವನವೇ ಹಾಳಾಗುತ್ತದೆ. ವ್ಯಾವಹಾರಿಕ ದೃಷ್ಟಿಯಿಂದ ಈ ಕೆಟ್ಟ ಪದ್ಧತಿಯು ಭ್ರಷ್ಟಾಚಾರಕ್ಕೆ ಸಮಾನ ! ಈ ಭ್ರಷ್ಟಾಚಾರದ ಬಗ್ಗೆ ಒಂದು ದೃಷ್ಟಿಕೋನ ನೀಡಲು ಈ ಲೇಖನ ನೀಡುತ್ತಿದ್ದೇವೆ.

೧. ಶಿಕ್ಷಣ ಕ್ಷೇತ್ರದಲ್ಲಿ ‘ಕಾಪಿ’ ಇದು ಕೇವಲ ಹತ್ತನೆಯ, ಹನ್ನೆರಡನೆಯ ತರಗತಿಯ ಪರೀಕ್ಷೆಗೆ ಸೀಮಿತವಾಗಿರದೇ, ಕಾನೂನಿನ ಪರೀಕ್ಷೆಯಲ್ಲಿ ಸಹ ಆಗುತ್ತಿರುತ್ತದೆ : ಕಾಪಿ, ಇದು ಶಿಕ್ಷಣ ಕ್ಷೇತ್ರಕ್ಕೆ ದೀರ್ಘ ಕಾಲದಿಂದ ಅಂಟಿರುವ "ಅರ್ಬುದರೋಗ" ಎಂದು ಹೇಳಲಾಗುತ್ತದೆ. ನಿಜವಾಗಿ ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಅನೇಕ ರೋಗಗಳು ಅಂಟಿಕೊಂಡಿವೆ, ಆ ರೋಗಗಳ ಮುಂದೆ ಕಾಪಿ ಅಂತಹ ರೋಗ ನೆಗಡಿ-ಕೆಮ್ಮಿಗೆ ಸಮಾನ, ಆದರೂ ಆ ಕಡೆಗೆ ದುರ್ಲಕ್ಷ ಮಾಡುವಂತಿಲ್ಲ. ಹತ್ತನೆಯ ಮತ್ತು ಹನ್ನೆರಡನೆಯ ತರಗತಿಯ ಪರೀಕ್ಷೆಯಲ್ಲಿ ಮಾತ್ರ ಕಾಪಿ ಆಗುತ್ತದೆ ಎಂದು ಹೇಳುವಂತಿಲ್ಲ, ಇತ್ತೀಚೆಗೆ ಅದು ಕಾನೂನಿನ ಪರೀಕ್ಷೆಯಲ್ಲಿ ಸಹ ಆಗುತ್ತಿರುವುದು ಗಮನಕ್ಕೆ ಬಂದಿದೆ, ಅಂದರೆ "ನಾಳೆ ಯಾವ ಕಾನೂನು ನಮ್ಮನ್ನು ರಕ್ಷಿಸಬೇಕೋ, ಅದನ್ನು ಇಂದೇ ನಾಶ ಮಾಡಿದಂತೆ" !


೨. ಗ್ರಾಮಿಣ ಪ್ರದೇಶಗಳಲ್ಲಿ ಶಾಲೆಗಳ ಅನುದಾನ ಉಳಿಸಿಕೊಳ್ಳಲು ಶಿಕ್ಷಣ ಸಂಸ್ಥೆಯ ಸಂಚಾಲಕರು ಮತ್ತು ಶಿಕ್ಷಕರು ಪರೀಕ್ಷಾರ್ಥಿಗಳಿಗೆ ಕಾಪಿ ಮಾಡಲು ಬೆಂಬಲ ಕೊಡುವುದು ಮತ್ತು ಅವರಿಗೆ ಪೋಷಕ ವಾತಾವರಣ ಸಿದ್ಧ ಮಾಡಿಕೊಡುವುದು : ಅನೇಕ ಕಷ್ಟಗಳಿರುವ ಪಾಲಕರಿಗೆ ಇದೇ ಇಷ್ಟವಾಗುತ್ತದೆ; ಕಾರಣ ಅವರಿಗೆ ಅವರ ಮಗ ಅಥವಾ ಮಗಳು ಪರೀಕ್ಷೆಯ ಸುಳಿಯಿಂದ ಯಾವುದೇ ತೊಂದರೆ ಇಲ್ಲದೆ ಹೊರಗೆ ಬೀಳುವುದು ಅವಶ್ಯಕ ಅನಿಸುತ್ತದೆ. ಹೀಗಿರುವಾಗ, ಇದಕ್ಕೆ ಸಂಬಂಧಿಸಿದ ಎಲ್ಲರೂ ತುಟಿ ಪಿಟಕೆನ್ನದೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಷ್ಟ ಪಡುತ್ತಾರೆ. ಮುಖ್ಯೋಪಾಧ್ಯಾಯರಿಗೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವತ್ತ ಗಮನ ಇರುತ್ತದೆ ಮತ್ತು ಸಂಸ್ಥೆಯ ಸಂಚಾಲಕರಿಗೆ ಶಾಲೆ ನಡೆಸುವತ್ತ. ಬಹಳಷ್ಟು ಶಿಕ್ಷಕರು ತಮ್ಮ ಮೇಲಧಿಕಾರಿಗಳ ಮಾತನ್ನು ತಪ್ಪದೆ ಪಾಲಿಸುವುದರಿಂದ ಕಾಪಿಯ ಹಾವಳಿಯಾಗಲು ವಿಳಂಬ ಆಗುವದಿಲ್ಲ. ಕೆಲವು ಕೇಂದ್ರಗಳಲ್ಲಿ ಇಂತಹ ಅಘೋಷಿತ ಕಾಪಿ ಪ್ರಕರಣಗಳಲ್ಲಿ ಬಹಳಷ್ಟು ಏರಿಕೆಯಾಗಿರುವುದು ಕಂಡು ಬರುತ್ತದೆ, ಕಾಪಿ ಮಾಡದೆ ನ್ಯಾಯಯುತ ಮಾರ್ಗದಿಂದ ಉತ್ತಿರ್ಣರಾಗುವ ಅಸಂಖ್ಯಾತ ಪರೀಕ್ಷಾರ್ಥಿಗಳಿಗೆ ಇದರ ಉಪದ್ರವವನ್ನು ಸಹಿಸಬೇಕಾಗುತ್ತದೆ. ಅದರಿಂದ ಅವರಿಗೆ ಮನಸ್ತಾಪವು ಆಗುತ್ತದೆ. ಇಂತಹ ಎಲ್ಲ ವಿಷಯಗಳನ್ನು ತಿಳಿದುಕೊಂಡೇ ಅವರು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

೩. ಕಾಪಿ ಮಾಡುವ ಪರೀಕ್ಷಾರ್ಥಿ ಒಬ್ಬನೇ ಈ ರೋಗದ ಮೂಲ ಕಾರಣವಲ್ಲ, ಅಸಂಖ್ಯ ಅಪ್ರತ್ಯಕ್ಷ ಘಟಕಗಳು ಅದರಲ್ಲಿ ಅಡಗಿಕೊಂಡಿವೆ : ಇಂತಹ ವೇಳೆಯಲ್ಲಿ ನಾವು ಸಂಬಂಧಿತ ಜನರಿಗೆ ಕಾನೂನಿನ ಭಯವನ್ನು ತೋರಿಸಿ ಎಷ್ಟರ ಮಟ್ಟಿಗೆ ಹೆದರಿಸಬಹುದು ಮತ್ತು ಕಾಪಿಯನ್ನು ಬೇರು ಸಹಿತ ಹೇಗೆ ನಾಶ ಮಾಡಬಹುದು, ಇದು ತುಂಬಾ ಕ್ಲಿಷ್ಟಕರ ಪ್ರಶ್ನೆಯಾಗಿದೆ. ಅಂದರೆ ಕಾಪಿ ಮಾಡುವವನು ಮೊದಲು ಮನಸ್ಸಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಾನೆ ಮತ್ತು ಅದರ ನಂತರ ಪ್ರತ್ಯಕ್ಷ ಕಾಪಿ ಮಾಡಲು ಮುಂದಾಗುತ್ತಾನೆ. ಇದರಿಂದಲೇ ಕಾಪಿ ಮಾಡುವವರ ಸಂಖ್ಯೆ ಬೆಳೆಯುತ್ತದೆ ಮತ್ತು ಪರಿವೀಕ್ಷಕರಿಗೆ ಬೆದರಿಕೆ ಹಾಕುವುದು, ಬೈಯುವುದು, ಇಂತಹ ಪ್ರಕರಣಗಳು ಪ್ರಾರಂಭ ಆಗುತ್ತವೆ. ಆಗ ಸರಳ ಮಾರ್ಗದಿಂದ ಇರುವ ಶಿಕ್ಷಕರು ಪರೀಕ್ಷಾ ಪರಿವೀಕ್ಷಣೆಯ ಕೆಲಸದಿಂದ ಬಿಡುಗಡೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಇದರಿಂದ ಕಾಪಿ ಮಾಡುವವರಿಗೆ ಸಲೀಸಾದ ಮಾರ್ಗ ಸಿಗುತ್ತದೆ. ಅದಕ್ಕೆ ಕಾಪಿ ಮಾಡುವ ಪರೀಕ್ಷಾರ್ಥಿ ಒಬ್ಬನೇ ಈ ರೋಗದ ಮೂಲ ಕಾರಣ ಆಗಿರದೆ ಅಸಂಖ್ಯ ಪ್ರತ್ಯಕ್ಷ ಮತ್ತು ಪರೋಕ್ಷ ಘಟಕಗಳು ಅಡಗಿಕೊಂಡಿರುತ್ತವೆ.

೪. ‘ನೀನು ಅನುತ್ತೀರ್ಣನಾದರೂ ಸರಿ; ಆದರೆ ಕಾಪಿ ಮಾಡಿ ಉತ್ತೀರ್ಣನಾಗುವುದು ಬೇಡ’ ಎಂದು ಹೇಳುವ ಪಾಲಕರು, ಮತ್ತು "ಕಾಪಿ ಮಾಡುವುದಿಲ್ಲ", ಹೀಗೆ ವಿಚಾರ ಮಾಡಲು ವಿದ್ಯಾರ್ಥಿಗಳಲ್ಲಿ ಸಂಸ್ಕಾರಗಳ ಅವಶ್ಯಕತೆ ಇದೆ : ನಿಜವಾಗಿ ‘ನೀನು ಅನುತ್ತೀರ್ಣನಾದರೂ ನಡೆಯುತ್ತದೆ; ಆದರೆ ಕಾಪಿ ಮಾಡಿ ಉತ್ತೀರ್ಣನಾಗುವುದು ಬೇಡ’ , ಹೀಗೆ ಧೃಡವಾಗಿ ಹೇಳುವ ಪಾಲಕರು ಇಂದು ಕಾಣಲು ಸಿಗುವುದಿಲ್ಲ. ಶಿಕ್ಷಕರಂತೂ ಇಲ್ಲವೇ ಇಲ್ಲ ! ಯಾರಾದರೂ ಇದ್ದರೆ ಅವರು ಇದಕ್ಕೆ ಅಪವಾದವೆನ್ನಬಹುದು. ಶಿಕ್ಷಕರ ವಿಷಯದಲ್ಲಿ ಕೇಳಿದರೆ, ಅದು ಅವರ ನೈತಿಕ ಹೊಣೆಗಾರಿಕೆ ಆಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಪರೀಕ್ಷೆಗೋಸ್ಕರ ಉತ್ತಮ ಸಿದ್ಧತೆ ಮಾಡಿಸಿಕೊಂಡು, ಉತ್ತೀರ್ಣ ಆಗುವ ಆತ್ಮವಿಶ್ವಾಸ ತುಂಬಿಸಿದರೆ, ಆಗ ಕಾಪಿ ಮಾಡುವ ವಿಚಾರದೆಡೆಗೆ ಮಕ್ಕಳು ತಿರುಗಿಯೂ ನೋಡುವುದಿಲ್ಲ. ಈ ನಿಟ್ಟಿನಲ್ಲಿ ವಿಚಾರ ಮಾಡಿದಾಗ, ಸದ್ಯದ ಸ್ಥಿತಿಯಲ್ಲಿ ಶಿಕ್ಷಕರ ಕಲಿಸುವಿಕೆಯು ಸಮಾಧಾನಕರವಾಗಿರುವುದಿಲ್ಲ. ಇದಕ್ಕೆ ಪರಿಹಾರವೆಂದರೆ "ನಾನು ಕಾಪಿ ಮಾಡುವುದಿಲ್ಲ" ಎಂದು ತಮ್ಮ ಮಕ್ಕಳ ಮತ್ತು ಇತರ ವಿದ್ಯಾರ್ಥಿಗಳ ಮನೋನಿಗ್ರಹ ಮಾಡಿಸಿಕೊಳ್ಳುವುದು ಮತ್ತು ಅದಕ್ಕಾಗಿ ಸೂಕ್ತ ಸಂಸ್ಕಾರಗಳನ್ನು ಬೆಳೆಸುವುದು.

– ಶ್ರೀ ವೈಜನಾಥ ಮಹಾರಾಜ (ಆಧಾರ : ದೈನಿಕ ತರುಣ ಭಾರತ, ೧೬.೦೨.೨೦೧೨)