ವಿದ್ಯಾರ್ಥಿ ಮಿತ್ರರೇ, ಪರೀಕ್ಷೆಯ ಸಮಯದಲ್ಲಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ !

ಆಧ್ಯಾತ್ಮಿಕ ಉಪಾಯವೆಂದರೇನು? : ಮಕ್ಕಳೇ, ಅಧ್ಯಯನ ಮಾಡುವಾಗ ತೊಂದರೆಗಳಾದರೆ, ಅಧ್ಯಯನವಾಗಲು ಹೇಗೆ ಸಾಧ್ಯ? ಈ ತೊಂದರೆಗಳನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳಿಗೆ ‘ಆಧ್ಯಾತ್ಮಿಕ ಉಪಾಯ’, ಎಂದು ಹೇಳುತ್ತಾರೆ.

೧. ಪರೀಕ್ಷೆಯನ್ನು ಎದುರಿಸುವ ಮುಂಚೆ ಹತ್ತು ನಿಮಿಷ ಕುಲದೇವರ ಅಥವಾ ಇಷ್ಟ ದೇವರ ನಾಮಜಪ ಮಾಡಿ !

೨. ಪರೀಕ್ಷೆಗೆ ಹೋಗುವ ಮುಂಚೆ ದೇವರಿಗೆ ಪ್ರಾರ್ಥನೆ ಮಾಡಿ !

೩. ಪರೀಕ್ಷೆಯ ಮುಂಚೆ ‘ನನ್ನ ಉತ್ತರಪತ್ರಿಕೆಯನ್ನು ದೇವರೇ ಬಂದು ಬರೆಯಲಿಕ್ಕಿದ್ದಾರೆ’ ಎಂಬ ಭಾವವಿರಲಿ !

೪. ಅಥವಾ, ‘ದೇವರೇ ನನ್ನಿಂದ ಉತ್ತರಪತ್ರಿಕೆಯನ್ನು ಬರೆಸಿಕೊಳ್ಳುತ್ತಿದ್ದಾರೆ’ ಎಂಬ ಭಾವವಿರಲಿ !

೫. ಸೂಕ್ಷ್ಮದಲ್ಲಿ ಉತ್ತರಪತ್ರಿಕೆಯ ಸುತ್ತಲೂ ನಾಮಜಪದ ಮಂಡಲವನ್ನು ಹಾಕಬಹುದು !

೬. ಪರೀಕ್ಷಾ ಕೇಂದ್ರದನೀವು ಕುಳಿತುಕೊಳ್ಳುವ ಸ್ಥಳದಲ್ಲಿ ನಾಮಜಪದ ಮಂಡಲ ಹಾಕಿ, ಸಂರಕ್ಷಣಾ ಕವಚವು ನಿರ್ಮಾಣವಾಗಿದೆ ಎಂಬ ಭಾವವಿಡಬಹುದು !

೭. ಉತ್ತರಪತ್ರಿಕೆಯಲ್ಲಿ ಬರೆಯುವಾಗ, ಉತ್ತರಗಳು ನೆನಪಾಗದಿದ್ದಲ್ಲಿ ಪ್ರಾರ್ಥನೆ ಮಾಡಿ !

(ಸಂದರ್ಭ : ಸನಾತನ ನಿರ್ಮಿತ ‘ಅಧ್ಯಯನ ಹೇಗೆ ಮಾಡಬೇಕು ?’ ಗ್ರಂಥ)