ಪ್ರಶ್ನೆಪತ್ರಿಕೆಯನ್ನು ಉತ್ತರಿಸುವ ಬಗೆ

ಮಿತ್ರರೇ, ಪರೀಕ್ಷಾ ಕೇಂದ್ರದಲ್ಲಿನಮ್ಮ ಮನಸ್ಥಿತಿ ಹೇಗಿರುತ್ತದೆ ಅಂದರೆ, ಕೈಯಲ್ಲಿ ಪ್ರಶ್ನೆಪತ್ರಿಕೆ ಹಿಡಿದ ಕೂಡಲೇ ಅದನ್ನು ಉತ್ತರಿಸಲು ಪ್ರಾರಂಭಿಸಬೇಕೆಂದು. ಇದರಿಂದಾಗಿ ಕೆಲವು ಮುಖ್ಯವಾದ ಸೂಚನೆಗಳನ್ನು ಓದಿ ಪಾಲಿಸದಿರುವುದರಿಂದ ನಮ್ಮಿಂದ ತಪ್ಪುಗಳು ಆಗುವ ಸಾಧ್ಯತೆಗಳಿವೆ. ಇಂತಹ ತಪ್ಪುಗಳನ್ನು ತಡೆಗಟ್ಟಲು ಮುಂದೆ ಸೂಚಿಸಿರುವ ಅಂಶಗಳನ್ನು ಗಮನವಿಟ್ಟು ಓದಿ.

ಪ್ರಶ್ನೆಗಳ ಬಗ್ಗೆ ವಿಚಾರ ಮಾಡಬೇಕು!

೧.ಪ್ರಶ್ನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಏನು ಕೇಳಿದ್ದಾರೆ, ಎಷ್ಟು ಅಂಶಗಳನ್ನು ಬರೆಯಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಬರೆಯಲು ಪ್ರಾರಂಭಿಸಬೇಕು. ‘ಸಿದ್ಧಾಂತಗಳನ್ನು ಬರೆಯಬಾರದು ಅಥವಾ ಚಿತ್ರವನ್ನು ಬಿಡಿಸಬಾರದು’, ಎಂದು ಬರೆದಿದ್ದರೆ ಹಾಗೆ ಮಾಡಬಾರದು.

೨. ಪ್ರತಿಯೊಂದು ಪ್ರಶ್ನೆಗೆ ಎಷ್ಟು ಅಂಕಗಳಿವೆ, ಎಂಬುದನ್ನು ತಿಳಿದುಕೊಳ್ಳಬೇಕು ಮತ್ತು ಉತ್ತರ ಬರೆಯುವಾಗ ಅದಕ್ಕೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು. ಅದರಂತೆ ನಮ್ಮ ಉತ್ತರ ಬರೆದು ಆಗುತ್ತಿದೆಯೋ ಅಥವಾ ಇಲ್ಲವೋ, ಎಂಬುದರ ಕಡೆ ಗಮನವಿಡಬೇಕು.

೩. ಆದಷ್ಟು ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸಬೇಕು. ಕಠಿಣ ಪ್ರಶ್ನೆಗಳಿಗೆ ಹೆಚ್ಚು ಸಮಯವನ್ನು ಕೊಟ್ಟು ಕೈಯಲ್ಲಿರುವ ಸುಲಭ ಪ್ರಶ್ನೆಗಳ ಅಂಕಗಳನ್ನು ಕಳೆದುಕೊಳ್ಳಬಾರದು.

೪. ಆವಶ್ಯಕವಿರುವ ಎಲ್ಲ ಪ್ರಶ್ನೆಗಳನ್ನು ಮೊದಲು ಬಿಡಿಸಿ ಸಮಯ ಉಳಿದರೆ ಮಾತ್ರ ಹೆಚ್ಚಿನ ಪ್ರಶ್ನೆಗಳನ್ನು ಬಿಡಿಸಬೇಕು.

ಪ್ರಶ್ನೆಪತ್ರಿಕೆಯನ್ನು ಬಿಡಿಸುವಾಗ ವಹಿಸಿಕೊಳ್ಳಬೇಕಾದ ಕಾಳಜಿ

೧. ಹೊಸ ಪ್ರಶ್ನೆಗಳ ಉತ್ತರವನ್ನು ಹೊಸ ಪುಟದಲ್ಲಿ ಬರೆಯಲು ಪ್ರಾರಂಭಿಸಬೇಕು. ಪ್ರತಿಯೊಂದು ಪುಟದಲ್ಲಿ ಬದಿಯನ್ನು (ಮಾರ್ಜಿನ್) ಬಿಡಬೇಕು.

೨.ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕ್ರಮಕ್ಕನುಸಾರ ಉತ್ತರಗಳನ್ನು ಬರೆಯದಿದ್ದರೆ ಅಥವಾ ಯಾವುದಾದರೊಂದು ಮುಖ್ಯ ಪ್ರಶ್ನೆಯ ಉಪಪ್ರಶ್ನೆಯ ಉತ್ತರವನ್ನು ಪ್ರತ್ಯೇಕ ಪುಟಗಳಲ್ಲಿ ಬರೆದರೂ ನಡೆಯುತ್ತದೆ; ಆದರೆ ಪ್ರಶ್ನೆ ಮತ್ತು ಉಪಪ್ರಶ್ನೆಯ ಕ್ರಮಾಂಕಗಳನ್ನು ಕಾಳಜಿಪೂರ್ವಕವಾಗಿ ಸರಿಯಾಗಿಯೇ ಬರೆಯಬೇಕು.

೩.ಪ್ರಶ್ನೆಉತ್ತರವನ್ನು ಬರೆಯುವಾಗಲೇ ಉತ್ತರವನ್ನು ಪರಿಶೀಲಿಸಬಹುದಾದರೆ ಒಳ್ಳೆಯದು, ಇಲ್ಲದಿದ್ದರೆ ಕೊನೆಯ ೧೦ ನಿಮಿಷಗಳನ್ನು ಸಂಪೂರ್ಣ ಉತ್ತರಪತ್ರಿಕೆಯನ್ನು ಪರಿಶೀಲಿಸಲು ಇಡಬೇಕು.

೪.ಉತ್ತರಪತ್ರಿಕೆಯಲ್ಲಿ (ಭೇದದ) ವ್ಯತ್ಯಾಸದ ಅಂಶಗಳನ್ನು ಬರೆಯುವಾಗ ತುಲನಾತ್ಮಕವಾಗಿ ಬರೆಯಬೇಕು.

೫.ಪರೀಕ್ಷಾ ಕೊಠಡಿಯಲ್ಲಿ ಇತರ ವಿದ್ಯಾರ್ಥಿಗಳು ಏನಾದರೂ ಕೇಳಿದರೆ, ಅವರೆಡೆಗೆ ಗಮನ ಕೊಡದೇ ನಮ್ಮ ಉತ್ತರಪತ್ರಿಕೆಯ ಮೇಲೆ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕು ಮತ್ತು ಸಂಪೂರ್ಣ ಪ್ರಶ್ನೆಪತ್ರಿಕೆಯನ್ನುಉತ್ತರಿಸಬೇಕು.

ಗಣಿತ ಮತ್ತು ವಿಜ್ಞಾನ, ಈ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವಾಗ ವಹಿಸಬೇಕಾದ ಕಾಳಜಿ

೧. ಗಣಿತದ ಪ್ರಶ್ನೆಗಳನ್ನು ಉತ್ತರಿಸುವಾಗ ಅಂಕಿ-ಅಂಶಗಳ ತಪ್ಪುಗಳ ಕಡೆಗೆ ಗಮನವಿರಲಿ.

೨. ಗಣಿತದ ಪ್ರಶ್ನೆಗಳನ್ನು ಉತ್ತರಿಸುವಾಗ ಕರಡು ಮತ್ತು ಚೊಕ್ಕ (ರಫ್/ಫೇರ್) ಲೆಕ್ಕ ಎಂದು ಬಿಡಿಸಿ ಸಮಯ ವ್ಯರ್ಥ ಮಾಡಬಾರದು. ಉತ್ತರ ಪತ್ರಿಕೆಯಲ್ಲಿ ಬಲಬದಿಗೆ ಅವಶ್ಯಕತೆಗನುಸಾರ ಚಿಕ್ಕ ಚಿಕ್ಕ ಲೆಕ್ಕಗಳನ್ನು ಮಾಡಬಹುದು.

೩. ಗಣಿತ ಮತ್ತು ವಿಜ್ಞಾನದ ಉತ್ತರಪತ್ರಿಕೆಗಳಲ್ಲಿ ಆಯಾ ಘಟಕಗಳನ್ನು (ಯುನಿಟ್ಸ್) ಬರೆಯಲು ಮರೆಯದಿರಿ. ಬರೆಯದಿದ್ದರೆ ದಂಡರೂಪದಲ್ಲಿ ಅಂಕಗಳನ್ನು ಕಡಿಮೆ ಮಾಡಲಾಗುತ್ತದೆ.
(ಸಂದರ್ಭ : ದೈನಿ ಗೋಮಾಂತಕ, ೧೧.೦೩.೨೦೧೧)