ತರಗತಿಯ ಬಿಡುವಿನ ವೇಳೆಯಲ್ಲಿ (ಆಫ್ ಪಿರಿಯಡ್) ಏನು ಮಾಡುವಿರಿ ?

ಮಿತ್ರರೇ, ನಿಮ್ಮ ತರಗತಿಯಲ್ಲಿ ವಾರಕ್ಕೆ ಒಂದು ಗಂಟೆಯಾದರು ಆಫ್ ಪಿರಿಯಡ್ ಇರುತ್ತದಲ್ಲವೇ ? ನೀವು ಆ ಬಿಡುವಿನ ವೇಳೆಯಲ್ಲಿ ಏನು ಮಾಡುವಿರಿ? ತರಗತಿಯಲ್ಲಿ ಎಷ್ಟು ಗಲಾಟೆ ಮಾಡುವಿರಿ? ಎಷ್ಟು ಹೊತ್ತು ಉಪಹಾರ ಗೃಹದಲ್ಲಿ ಕುಳಿತು ಮಾತುಕತೆ ಮಾಡುವಿರಿ? ಇದರ ಬದಲಾಗಿ ಬೇರೆ ಏನೆಲ್ಲಾ ಮಾಡಬಹುದೆಂದು ತಿಳಿದುಕೊಳ್ಳೊಣ….ಗಂಟೆಗಳಲ್ಲಿ ಭಾರತೀಯ ಯೋಧರ, ಕ್ರಾಂತಿಕಾರರ ಚರಿತ್ರೆಯನ್ನು ಓದಬಹುದು. ವಿಶ್ವದ ಇತರ ಯಾವುದೇ ದೇಶದಲ್ಲಿ ಇಂತಹ ಕ್ರಾಂತಿಕಾರರು ಇರಲಾರರು, ಇಂತಹ ಸಾಹಸಪೂರ್ಣ ಕಾರ್ಯವನ್ನು ವೀರ ಕ್ರಾಂತಿಕಾರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಾಡಿ ತೋರಿಸಿದ್ದಾರೆ. ಇಂತಹ ವೀರರ ಕೆಲವೊಂದು ಉದಾಹರಣೆಗಳನ್ನು ನೋಡೋಣ –

೧.ಸ್ವಾ. ಸಾವರಕರರುವಿಶಾಲವಾದ ಸಾಗರ ಮತ್ತು ಆಕಾಶವನ್ನು ಸಾಕ್ಷಿ ಎಂದು ತಿಳಿದು ಹಡಗಿನಿಂದ, ಘೋಗರೆಯುತ್ತಿದ್ದ ಸಮುದ್ರದಲ್ಲಿ ಧುಮುಕಿದರು.

೨.ಸ್ಯಾಂಡರ್ಸ್ನ ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಾಗ, ಆಂಗ್ಲ ಸರಕಾರದ ಅನ್ಯಾಯವನ್ನು ವಿರೋಧಿಸಿ ೬೩ ದಿನಗಳತನಕ ಉಪವಾಸ ಮಾಡಿ ‘ಜತೀಂದ್ರನಾಥ ದಾಸ‘ರು ತಮ್ಮ ಪ್ರಾಣವನ್ನು ತ್ಯಜಿಸಿದರು.

೩.ತಂದೆ-ತಾಯಿ, ಪತ್ನಿ ಹಾಗೂ ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು, ಇಂಗ್ಲೆಂಡ್‌ಗೆ ಹೋದ ಮದನ್‌ಲಾಲ್ ಧಿಂಗ್ರ, ತಮ್ಮ ೨೫ನೇ ವಯಸ್ಸಿನಲ್ಲಿ ಇಂಗ್ಲೆಂಡ್‌ನಲ್ಲಿ ಕರ್ಜನ್ ವಾಯ್ಲಗೆ ಗುಂಡಿಕ್ಕಿ ಕೊಂದರು.

೪.ಆಂಗ್ಲ ಸರಕಾರವನ್ನು ವಿರೋಧಿಸುವ ಸಲುವಾಗಿ ಆಯೋಜಿಸಿದ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ೧೫ ವರ್ಷದ ಬಾಲಕ ಚಂದ್ರಶೇಖರ್ ಆಝಾದ್‌ರಿಗೆ, ದಂಡನೆಯ ಸ್ವರೂಪವಾಗಿ ೧೫ ಬಾರಿ ಬೂಟುಗಳಿಂದ ತುಳಿದು ಹೊಡೆಯಲಾಯಿತು ಆದರೂ ಆ ನೋವಿಗೆ ಒಂದುಬಾರಿಯೂ ಅಳದೇ ಶಾಂತ ರೀತಿಯಿಂದ ಅದನ್ನೆಲ್ಲ ಸಹಿಸಿದರು.

ಒಂದಲ್ಲ, ಎರಡಲ್ಲ, ಇಂತಹ ಸಾವಿರಾರು ಪ್ರಸಂಗಗಳು ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟಿವೆ. ಕೊನೆಯದಾಗಿ, ಇನ್ನು ಮುಂದೆ ಆಫ್ ಪಿರಿಯಡ್‌ನಲ್ಲಿ, ಗಲಾಟೆ, ಉಪಹಾರ ಗೃಹದಲ್ಲಿ ಕುಳಿತುಕೋಳ್ಳುವುದು, ತರಗತಿ ಆವರಣದಲ್ಲಿ ತಿರುಗಾಟ ಮಾಡುವುದನ್ನು ನಿಲ್ಲಿಸಿ, ದೇಶದ ಕ್ರಾಂತಿಕಾರರ ರೋಮಾಂಚನಗೊಳ್ಳುವಂತಹ ಸಂಗ್ರಾಮಗಳ ಬಗ್ಗೆ ಓದಿರಿ.

(ಸಂದರ್ಭ : ಸನಾತನ ಸಂಸ್ಥೆ ನಿರ್ಮಿತ 'ಅಧ್ಯಯನ ಹೇಗೆ ಮಾಡಬೇಕು ?' ಕಿರು ಗ್ರಂಥ)

Leave a Comment