ಮಿತ್ರರೇ, ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಿ !

ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಿ
ಸಂಪೂರ್ಣ ಜಗತ್ತಿಗೆ ಹಿಂದೂ ಸಂಸ್ಕೃತಿಯನ್ನು ಪರಿಚಯಿಸೋಣ !

ವಿದ್ಯಾರ್ಥಿ ಮಿತ್ರರೇ, ನಮ್ಮ ಹಿಂದೂ ಸಂಸ್ಕೃತಿಯಲ್ಲಿನ ಪ್ರತಿಯೊಂದು ಕೃತಿಯ ಹಿಂದೆ ಶಾಸ್ತ್ರವಿದೆ; ಆದರೆ ಯಾರೂ ಕೃತಿಯ ಹಿಂದಿನ ಶಾಸ್ತ್ರದ ಬಗ್ಗೆ ಪ್ರಬೋಧನೆ ಮಾಡದಿರುವುದರಿಂದ ನಾವು ಹಿಂದೂ ಸಂಸ್ಕೃತಿಯಂತೆ ಆಚರಿಸುವುದನ್ನು ಬಿಟ್ಟುಬಿಟ್ಟಿದ್ದೇವೆ. ಎಷ್ಟೋ ವಿಷಯಗಳನ್ನು 'ಕಾಲ ಬದಲಾಗಿದೆ' ಎಂದು ಕುರುಡಾಗಿ ಸ್ವೀಕರಿಸುತ್ತಿದ್ದೇವೆ. ಮಿತ್ರರೇ, ಉಡುಪಿನ ವಿಷಯದಲ್ಲಿ ನೋಡಿ. ನಾವು 'ಫ್ಯಾಶನ' ಹಾಗೂ 'ಪ್ರಗತಿಯ' ಹೆಸರಿನಲ್ಲಿ ನಮ್ಮ ಸಂಸ್ಕೃತಿಯ ಸಾತ್ವಿಕ ದಿರಿಸುಗಳನ್ನು ಮರೆತಿದ್ದೇವೆ. ಇದು ಎಷ್ಟರ ಮಟ್ಟಿಗೆ ಪರಿಣಾಮವನ್ನು ಬೀರುತ್ತಿದೆ ಎಂಬುದನ್ನು ನೋಡೋಣ.

ಯಾವುದೇ ಪರಿಸ್ಥಿತಿ ಬಂದರೆ ನಮ್ಮ ಸಂಸ್ಕೃತಿಯ ಉಡುಪನ್ನು ಬದಲಾಯಿಸುವ ಅವಶ್ಯಕತೆಯಿಲ್ಲ !

ಬಹಳಷ್ಟು ಜನರು 'ಇಂದಿನ ಜೀವನವು ಬಿಡುವಿಲ್ಲದ್ದಾಗಿದೆ, ಜೀವನ ಶೈಲಿಯು ಬದಲಾಗಿದೆ. ಆದುದರಿಂದ ನಮಗೆ ನಮ್ಮ ಉಡುಪನ್ನು ಬದಲಾಯಿಸಬೇಕಾಗುತ್ತದೆ' ಎಂದು ಹೇಳುತ್ತಾರೆ. ಆದರೆ ಇವರೆಲ್ಲರಿಗೂ 'ಝಾನ್ಸಿಯ ರಾಣಿ ಅಥವಾ ಶಿವಾಜಿ ಮಹಾರಾಜರು ಎಷ್ಟೊಂದು ಪರಾಕ್ರಮವನ್ನು ಮೆರೆದರೂ ಅವರಿಗೆ ಅವರ ಉಡುಪು ಎಂದಿಗೂ ಅಡ್ಡಿಯಾಗಲಿಲ್ಲ' ಎಂದು ಹೇಳಬೇಕೆಂದು ಅನಿಸುತ್ತದೆ. ಅಂದರೆ ಯಾವುದೇ ಪರಿಸ್ಥಿತಿ ಬಂದರೂ ನಮ್ಮ ಉಡುಪನ್ನು ಬದಲಾಯಿಸುವ ಅವಶ್ಯಕತೆ ಇರುವುದಿಲ್ಲ. ನಮಗೆ ನಮ್ಮ ಸಂಸ್ಕೃತಿಯ ಮೇಲೆ ಅಭಿಮಾನವಿರಬೇಕು ಹಾಗೂ ನಾವೇ ನಮ್ಮ ಸಂಸ್ಕೃತಿಯನ್ನು ಪ್ರಾಣವನ್ನು ಪಣಕ್ಕಿಟ್ಟಾದರೂ ರಕ್ಷಿಸಬೇಕು. ನಾವು ನಮ್ಮ ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡಿದರೆ ಮಾತ್ರ ನಮ್ಮ ರಕ್ಷಣೆಯಾಗುವುದು ಎಂಬ ಶೃದ್ಧೆಯನ್ನಿಡಬೇಕು.

ವ್ಯಕ್ತಿಯ ಉಡುಪಿನಿಂದ ಒಂದು ಸಂಸ್ಕೃತಿಯ ಪರಿಚಯವಾಗುತ್ತದೆ!

ಮಿತ್ರರೇ, ವೇಷಾಂತರವೆಂದರೆ ಧರ್ಮಾಂತರವಾಗಿದೆ. ಹಿಂದೂಗಳ ಪ್ರತಿಯೊಂದು ಕೃತಿಯು ದೇವತೆಗಳ ಚೈತನ್ಯ ಹಾಗೂ ಶಕ್ತಿಯನ್ನು ದೊರಕಿಸಿಕೊಡುವ ಮಾಧ್ಯಮವಾಗಿದೆ. ಇಂದು ಬದಲಾವಣೆಯ ಹೆಸರಿನಲ್ಲಿ ದೇವತೆಗಳ ಚೈತನ್ಯವನ್ನು ದೊರಕಿಸಿ ಕೊಡುವ ಮಾಧ್ಯಮವನ್ನೇ ನಾಶಗೊಳಿಸಿದರೆ ನಮ್ಮ ಸರ್ವನಾಶ ನಿಶ್ಚಿತ. ಇಂದು ಓರ್ವ ವ್ಯಕ್ತಿಯ ಉಡುಪಿನಿಂದ ಅವನ ಸಂಸ್ಕೃತಿಯ ಪರಿಚಯವಾಗುತ್ತದೆ; ಆದುದರಿಂದ ನಾವು ಪ್ರತಿದಿನ ನಮ್ಮ ಹಿಂದೂ ಸಂಸ್ಕೃತಿಯಂತೆ ಸಾತ್ತ್ವಿಕ ಉಡುಪನ್ನು ಧರಿಸಲು ನಿಶ್ಚಯಿಸೋಣ. 'ನಾನು ಪ್ರತಿಯೊಂದು ಹಬ್ಬಕ್ಕೆ ನನ್ನ ಸಂಸ್ಕೃತಿಯಂತೆ ಸಾತ್ವಿಕ ಉಡುಪನ್ನು ಧರಿಸುತ್ತೇನೆ ಹಾಗೂ ಇತರ ಮಕ್ಕಳಿಗೂ ಹೇಳುತ್ತೇನೆ' ಎಂದು ನಿರ್ಧರಿಸೋಣ.

ಯಾವುದು ಸಾತ್ತ್ವಿಕ ಉಡುಪು ?

ಅ. ಪುರುಷರು ಧರಿಸಬೇಕಾದ ಸಾತ್ತ್ವಿಕ ಉಡುಪು : ಪುರುಷರಿಗೆ ಮೇಲಂಗಿ – ಪಾಯಜಾಮ ಅಥವಾ ಮೇಲಂಗಿ – ಧೋತರ

ಆ. ಹೆಣ್ಣುಮಕ್ಕಳು ಧರಿಸಬೇಕಾದ ಸಾತ್ತ್ವಿಕ ಉಡುಪು : ಲಂಗ – ದಾವಣಿ, ಪಂಜಾಬಿ ಪೋಷಾಕು

ಇ. ಸ್ತ್ರೀಯರು ಧರಿಸಬೇಕಾದ ಸಾತ್ತ್ವಿಕ ಉಡುಪು : ೯ ಮೊಳದ ಸೀರೆ, ೬ ಮೊಳದ ಸೀರೆ

ಸಾತ್ತ್ವಿಕ ಉಡುಪಿನ ಮಹತ್ತ್ವದ ಅಜ್ಞಾನ,ಪಾಶ್ಚಾತ್ಯ ಪದ್ಧತಿಯ ಕಡೆಗೆ ಆಕರ್ಷಣೆ

ಆಧುನಿಕತೆಯ ಪೊಳ್ಳು ವಿಚಾರದಿಂದ ಪ್ರಭಾವಿತರಾಗಿ ಸಾತ್ತ್ವಿಕ ಉಡುಪಿನ ಬಗ್ಗೆ ದುರ್ಲಕ್ಷಿಸಿ ಪಾಶ್ಚಾತ್ಯರ ಅರ್ಥಹೀನ ಹಾಗೂ ಅಸಾತ್ತ್ವಿಕ ಉಡುಪುಗಳನ್ನು ಬಳಸತೊಡಗಿದ್ದೇವೆ. ಮಿತ್ರರೇ, ನಮ್ಮ ಹಿಂದೂ ಸಂಸ್ಕೃತಿಯಂತೆ ಸ್ತ್ರೀಯರು ಹಾಗೂ ಪುರುಷರು ಸಾತ್ತ್ವಿಕ ಉಡುಪುಗಳನ್ನು ಧರಿಸಿದಾಅವರಿಗೆ ದೇವತೆಗಳ ಶಕ್ತಿ ಹಾಗೂ ಚೈತನ್ಯ ದೊರೆಯುತ್ತದೆ ಎಂಬ ವ್ಯಾಪಕ ವಿಚಾರ ಮಾಡಲಾಗಿದೆ ಆದರೆ ದುರ್ದೈವದಿಂದ ಇದರ ಮಹತ್ವವನ್ನು ಯಾರೂ ಹೇಳಲಿಲ್ಲ. ಆದುದರಿಂದ ನಾವು ಸಾತ್ತ್ವಿಕ ಉಡುಪುಗಳನ್ನು ಬಿಟ್ಟು ಪಾಶ್ಚಾತ್ಯರ ಉಡುಪುಗಳತ್ತಆಕರ್ಷಿತರಾಗಿದ್ದೇವೆ.

ನಮ್ಮ ಮಹಾನ ಹಿಂದೂ ಸಂಸ್ಕೃತಿಯಿಂದದೂರ ಹೋಗುವ ಕಾರಣಗಳು

ಅ. ಆಂಗ್ಲ ಮಾಧ್ಯಮ ಶಾಲೆಗಳು : ಈ ಶಾಲೆಗಳಲ್ಲಿ ಹುಡುಗರಿಗೆ ಮೇಲಂಗಿ – ಪಾಯಜಾಮ ಧರಿಸಬಾರದು, ಹುಡುಗಿಯರು ಲಂಗ – ದಾವಣಿ ಧರಿಸಬಾರದು, ಕುಂಕುಮ ಹಚ್ಚಬಾರದು, ಬಳೆಗಳನ್ನು ಧರಿಸಬಾರದು ಎಂದು ಹೇಳಲಾಗುತ್ತದೆ. ಮಕ್ಕಳಲ್ಲಿ ಈ ಸಾತ್ತ್ವಿಕ ಉಡುಪಿನ ಬಗ್ಗೆ ತಪ್ಪು ತಿಳುವಳಿಕೆ ಹಾಗೂ ಅನಾದರವನ್ನು ನಿರ್ಮಿಸಲಾಗುತ್ತದೆ. ನಮ್ಮ ಹಿಂದೂ ಹುಡುಗರು ಶರ್ಟ, ಪ್ಯಾಂಟ ಮತ್ತು ಟೈ ನಂತಹ ಉಡುಪುಗಳನ್ನು ಧರಿಸಲಾರಂಭಿಸಿದ್ದಾರೆ. ಮಿತ್ರರೇ, ನಮ್ಮ ಉಡುಪುಗಳನ್ನು ಧರಿಸದಿರುವುದು ಎಂದರೆ ನಮ್ಮ ಸಂಸ್ಕೃತಿಯಿಂದ ದೂರ ಹೋಗುವುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಆ. ಚಲನಚಿತ್ರ ಹಾಗೂ ಧಾರಾವಾಹಿ : ಚಲನಚಿತ್ರ ಹಾಗೂ ಧಾರಾವಾಹಿಯ ಮಾಧ್ಯಮದಿಂದ ವಿದೇಶಿ ಉಡುಪು ಧರಿಸಿರುವವರನ್ನು ಸತತವಾಗಿತೋರಿಸಲಾಗುತ್ತದೆ. ಇದರಿಂದ ನಮ್ಮ ಸಂಸ್ಕೃತಿಯ ಉಡುಪಿನ ಬಗ್ಗೆ ಅನಾದರ ನಿರ್ಮಾಣವಾಗುತ್ತದೆ. ಮಿತ್ರರೇ, ಇಂತಹ ಧಾರಾವಾಹಿಗಳಿಗೆ ಬಲಿಯಾಗಿ ನಮ್ಮ ಮಹಾನ ಸಂಸ್ಕೃತಿಯನ್ನು ಮರೆಯಬೇಡಿ.

ಇ. ಚಿತ್ರ ವಿಚಿತ್ರ ಬಣ್ಣದ ಹಾಗೂ ಚಿತ್ರಗಳಿರುವ ಬಟ್ಟೆಗಳನ್ನು ಧರಿಸುವುದು :ನೀಲಿ, ಗುಲಾಬಿ, ಹಳದಿ ಹಾಗೂ ಬಿಳಿ ಬಣ್ಣದಿಂದ ವಾತಾವರಣದಲ್ಲಿನ ಚೈತನ್ಯವು ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತದೆ ಹಾಗೂ ಚಿತ್ರ-ವಿಚಿತ್ರ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸಿನ ಚಾಂಚಲ್ಯ ಹೆಚ್ಚುತ್ತದೆ.

ಈ. ದೇವತೆಗಳ ಚಿತ್ರವಿರುವ ಬಟ್ಟೆಗಳನ್ನು ಉಪಯೋಗಿಸಬೇಡಿ ! : ಮಿತ್ರರೇ, ದೇವತೆಗಳ ಸ್ಥಾನವು ದೇವರಕೋಣೆಯಾಗಿದೆ. ನೀವು ದೇವರ ಚಿತ್ರವಿರುವ ಬಟ್ಟೆಗಳನ್ನು ಉಪಯೋಗಿಸಿದಾಗ ನಮ್ಮ ದೇವತೆಗಳ ಅಪಮಾನವಾಗುತ್ತದೆ. ಇದಕ್ಕಾಗಿ ಬಾಲ ಗಣೇಶ, ಛೋಟಾ ಭೀಮನ ಚಿತ್ರವಿರುವ ಬಟ್ಟೆಗಳನ್ನು ಖರೀದಿಸಬೇಡಿ.

ಉ. ಸ್ತ್ರೀ – ಪುರುಷರು ಸಮಾನರೆಂದು ಹುಡುಗಿಯರು ಪುರುಷರ ಉಡುಪನ್ನು ಧರಿಸುವುದು : ಸ್ತ್ರೀ ಮತ್ತು ಪುರುಷ ಎಂಬ ಬೇರೆ ಬೇರೆ ಪ್ರಕೃತಿಯನ್ನು ದೇವರೇ ನಿರ್ಮಿಸಿದ್ದಾರೆ. ಆದುದರಿಂದ ಹುಡುಗಿಯರು ಪುರುಷರ ಉಡುಪುಗಳನ್ನು ಧರಿಸಿ ಸಮಾನತೆಯನ್ನು ತರುವುದು ಸಂಸ್ಕೃತಿಯಲ್ಲದೇ ವಿಕೃತಿಯಾಗಿದೆ. ಇದಕ್ಕಾಗಿ ಸಹೋದರಿಯರೇ, ಸಮಾನತೆಯ ಹೆಸರಿನಲ್ಲಿ ಪುರುಷರ ಉಡುಪುಗಳನ್ನು ಧರಿಸಬೇಡಿ.

ಊ. ಸ್ವಾತಂತ್ರ್ಯದ ಹೆಸರಿನಲ್ಲಿ ತುಂಡು ಉಡುಗೆಗಳನ್ನು ಧರಿಸುವುದು : ಮಿತ್ರರೇ, ಉಡುಪು ಅಲಂಕಾರವಾಗಿದೆ. ಅದು ಹೇಗಿರಬೇಕು, ಹೇಗೆ ಉಪಯೋಗಿಸಬೇಕು ಎಂಬುದನ್ನು ನಮ್ಮ ಸಂಸ್ಕೃತಿಯನುಸಾರ ನಿರ್ಧರಿಸಲಾಗಿದೆ. ಇಂದು ಸ್ವಾತಂತ್ರ್ಯದ ಹೆಸರಿನಲ್ಲಿ ಹುಡುಗರು -ಹುಡುಗಿಯರು ತುಂಡು ಉಡುಗೆಗಳನ್ನು ಧರಿಸುತ್ತಾರೆ. ಇದರಿಂದ ಇತರರ ಮನಸ್ಸಿನಲ್ಲಿ ವಿಕೃತ ವಿಚಾರಗಳು ಬರುತ್ತವೆ. ಪ್ರತಿಯೊಬ್ಬ ಸ್ತ್ರೀ-ಪುರುಷರು ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಿದರೆ ಅವರಿಗೆ ಸ್ವತಃ ಆನಂದ ದೊರೆಯುತ್ತದೆ ಹಾಗೂ ಇತರರಿಗೂ ಆನಂದ ದೊರೆಯುತ್ತದೆ.

ಚಲನಚಿತ್ರ ಹಾಗೂ ಧಾರಾವಾಹಿಗಳ ಆದರ್ಶಕ್ಕಿಂತ ಇತಿಹಾಸದ ಆದರ್ಶವನ್ನಿಟ್ಟುಕೊಳ್ಳೋಣ !

ಮಿತ್ರರೇ, ಇಂದು ಧಾರಾವಾಹಿಗಳಲ್ಲಿ ತೋರಿಸಲಾಗುವ ಪಾತ್ರಗಳಿಗೆ ವಸ್ತುತಃ ಜೀವನದೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಬದಲಾಗಿ ಝಾನ್ಸಿ ರಾಣಿ, ಜೀಜಾಬಾಯಿ, ಅಹಿಲ್ಯಾಬಾಯಿ ಹೋಳಕರ ಇತ್ಯಾದಿ ಸ್ತ್ರೀಯರ ಆದರ್ಶವನ್ನಿಟ್ಟಕೊಳ್ಳೋಣ.

ವಿದ್ಯಾರ್ಥಿ ಮಿತ್ರರೇ, ಹಿಂದೂ ಸಂಸ್ಕೃತಿಯಂತೆ ಆಚರಣೆ ಮಾಡುವುದು ನಮ್ಮ ಹಿಂದೂ ಸಂಸ್ಕೃತಿಯ ಪರಿಚಯ ಹಾಗೂ ಪ್ರಾಣವಾಗಿದೆ. ಅದನ್ನು ಪಾಲಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ಮಕ್ಕಳೇ, ಈಗ ನಾವು ಉಡುಪುಗಳ ಮಾಧ್ಯಮದಿಂದ ಬಂದಂತಹ ಆಂಗ್ಲರ ಮಾನಸಿಕ ಗುಲಾಮಗಿರಿಯನ್ನು ನಷ್ಟಗೊಳಿಸೋಣ ಹಾಗೂ ಇಂದಿನಿಂದ ನಾವು ಹಿಂದೂ ಸಂಸ್ಕೃತಿಯಂತೆ ಉಡುಪುಗಳನ್ನು ಧರಿಸಲು ನಿರ್ಧರಿಸೋಣ.

– ಶ್ರೀ. ರಾಜೇಂದ್ರ ಪಾವಸಕರ (ಗುರೂಜೀ), ಪನವೇಲ

Leave a Comment