ವಿದ್ಯಾರ್ಥಿಗಳೇ, ಸಂಸ್ಕೃತಿಹೀನ ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡಬೇಡಿರಿ!

‘ವ್ಯಾಲೆಂಟೈನ್ ಡೇ’, ‘ರೋಜ್ ಡೇ’, ‘ಫ್ರೆಂಡಶಿಪ್ ಡೇ’, ‘ಜೀನ್ಸ್ ಡೇ’ ಇಂತಹ ‘ಡೇ’ ಗಳೆಂದರೆ ಸ್ವೇಚ್ಛಾಚಾರದ ಪ್ರದರ್ಶನವಾಗಿದೆ! ರಾಷ್ಟ್ರದ ಯುವಪೀಳಿಗೆಯನ್ನು ಕೆಡಿಸುವ ಇಂತಹ ‘ಕುಸಂಸ್ಕಾರ ಡೇ’ ಗಳಿಂದಾಗಿ ರಾಷ್ಟ್ರ ಮತ್ತು ಧರ್ಮದ ಕಾರ್ಯ ಮಾಡುವುದನ್ನು ಬಿಟ್ಟು ಯುವಕ-ಯುವತಿಯರ ಮುಂದಿನ ಹೆಜ್ಜೆಗಳು ‘ಪಾರ್ಟಿ’ ಮತ್ತು ‘ಪಬ್’ ಗಳ ಕಡೆಗೆ ಹೋಗುತ್ತವೆ !

ಆಗಸ್ಟ್ ತಿಂಗಳಿನ ಮೊದಲ ಭಾನುವಾರದಂದು ಫ್ರೆಂಡಶಿಪ್ ಡೇ ಆಚರಿಸುತ್ತಾರೆ. ಈ ದಿನ ಫ್ರೆಂಡಶಿಪ್ ಡೇ ಹೆಸರಿನಲ್ಲಿ, ಗೆಳೆಯರಿಗೆ ಔತಣಕೂಟಗಳನ್ನು ನೀಡುವುದು, ಸ್ನೇಹದ ಸಂಕೇತವಾಗಿ ಪರಸ್ಪರರ ಕೈಯಲ್ಲಿ ಫ್ರೆಂಡಶಿಪ್ ಬ್ಯಾಂಡ್ ಇತ್ಯಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಲಾಗುತ್ತದೆ. ಶಾಲಾ ಮತ್ತು ಕಾಲೇಜುಗಳಲ್ಲಿ ಇದರ ಪ್ರಮಾಣವು ಇತ್ತೀಚೆಗೆ ಹೆಚ್ಚಾಗಿದೆ. ಅಂತಹ ಬ್ಯಾಂಡ್ ನಿಜವಾಗಿಯೂ ಸ್ನೇಹವನ್ನು ಹೆಚ್ಚಿಸುತ್ತದೆಯೇ? ನಿಜವಾದ ಸ್ನೇಹ ಎಂದರೆ ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವುದು, ಸ್ನೇಹಿತರು ತಪ್ಪು ದಿಕ್ಕಿನಲ್ಲಿ ಹೋಗುವಾಗ ಅವರಿಗೆ ಸಹಾಯ ಮಾಡುವುದು. ಹಿಂದೂಗಳ ಪ್ರಾಚೀನ ಇತಿಹಾಸದಲ್ಲಿ ಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡಿದ ಅನೇಕ ಉದಾಹರಣೆಗಳಿವೆ. ಅವರಲ್ಲಿ ಶ್ರೀಕೃಷ್ಣ-ಸುದಾಮ ಕೂಡ ಒಂದು! ಆದಾಗ್ಯೂ, ಇಂದಿನ ಹಿಂದೂಗಳು, ಪಾಶ್ಚಿಮಾತ್ಯ ಪದ್ಧತಿಗಳನ್ನು ಅನುಸರಿಸುವ ಮೂಲಕ ಅಂತಹ ಸ್ನೇಹವನ್ನು ಪ್ರದರ್ಶಿಸುವುದನ್ನು ಒಂದು ದೊಡ್ಡ ಗೌರವವೆಂದು ಪರಿಗಣಿಸುತ್ತಾರೆ. ವಾಸ್ತವವಾಗಿ, ರಾಷ್ಟ್ರವು ಬಿಕ್ಕಟ್ಟಿನಲ್ಲಿದ್ದಾಗ ಇಂತಹ ‘ಡೇ’ಗಳನ್ನು ಆಚರಿಸುವ ಬದಲು, ರಾಷ್ಟ್ರ, ಧರ್ಮ ಮತ್ತು ಹಿಂದೂ ಸಂಸ್ಕೃತಿಯ ಮೇಲಿನ ದಾಳಿಯ ಬಗ್ಗೆ ಎಲ್ಲಾ ಸ್ನೇಹಿತರಿಗೆ ತಿಳುವಳಿಕೆ ನೀಡುವುದು ಮತ್ತು ರಾಷ್ಟ್ರದ ಕಾರ್ಯಕ್ಕಾಗಿ ಅವರನ್ನು ಸಕ್ರಿಯಗೊಳಿಸುವುದು ನಿಜವಾದ ಮಿತ್ರ- ಧರ್ಮ!

ಮಾತ್ರವಲ್ಲ ರಕ್ಷಾಬಂಧನ, ಸಹೋದರ ಬಿದಿಗೆ ಇವುಗಳಂತಹ ಹಬ್ಬಗಳ ಮೂಲಕ ಸ್ತ್ರೀ-ಪುರುಷರಲ್ಲಿನ ಸಂಬಂಧಗಳಿಗೆ ಉದಾತ್ತಭಾವನೆಯನ್ನು ಕೊಟ್ಟು ಸಮಾಜದೆದುರು ಒಂದು ಆದರ್ಶವನ್ನು ನಿರ್ಮಿಸಲಾಗುತ್ತದೆ. ಇಂತಹ ಹಬ್ಬಗಳಿಗೆ ಆಧ್ಯಾತ್ಮಿಕ ಅಧಿಷ್ಠಾನವೂ ಇರುತ್ತದೆ. ಇದರ ವಿರುದ್ಧವಾಗಿ ನಮ್ಮ ಸಂಸ್ಕೃತಿಗೆ ಯಾವುದೇ ಸಂಬಂಧವಿಲ್ಲದ ‘ಡೇ’ ಗಳನ್ನು ಆಚರಿಸುವುದರಿಂದ ಆಧ್ಯಾತ್ಮಿಕ ಲಾಭವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳೇ, ಹಿಂದೂ ಸಂಸ್ಕೃತಿಗನುಸಾರವಾಗಿಯೇ ಅಚರಣೆಗಳನ್ನು ಮಾಡಿರಿ!

Leave a Comment