ವಿದ್ಯಾರ್ಥಿ ಮಿತ್ರರೇ, ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಿ !

ರಾಷ್ಟ್ರ ಹಾಗೂ ಧರ್ಮದಿಂದ ದೂರವಾಗುತ್ತಿರುವ ವಿದ್ಯಾರ್ಥಿ ಬಾಂಧವರು ಈಗ ಭಾರತ ಮಾತೆಯ ರಕ್ಷಣೆಗಾಗಿ ಸಿದ್ಧರಾಗಬೇಕು !

೧. ನಮ್ಮ ವರ್ತನೆಯು ಶಾಲೆಯಲ್ಲಿ ಕಲಿಸಲಾಗುವ ‘ಭಾರತೀಯರೆಲ್ಲರೂ ನನ್ನ ಬಾಂಧವರು…’ ಎಂಬ ಪ್ರತಿಜ್ಞೆಯ ಒಂದು ವಾಕ್ಯದಂತೆಯಾದರೂ ಇದೆಯೇ ?

ಇಂದು ದೇಶದಾದ್ಯಂತ ಸೈನಿಕರ ಹತ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಹಾಗೂ ಅದರ ಸಂತಪ್ತ ಪ್ರತಿಧ್ವನಿ ಎಲ್ಲ ಕಡೆಗಳಲ್ಲಿ ಕೇಳಿಬರುತ್ತಿದೆ. ವಿದ್ಯಾರ್ಥಿ ಮಿತ್ರರೇ, ಈ ಘಟನೆಗಳ ಬಗ್ಗೆ ನೀವು ಎಂದಾದರೂ ವಿಚಾರ ಮಾಡಿರುವಿರೇ? ನಾವು ಶಾಲೆಯಲ್ಲಿ ‘ಭಾರತ ನನ್ನ ದೇಶ. ಭಾರತೀಯರೆಲ್ಲರೂ ನನ್ನ ಬಾಂಧವರು…’ ಎಂದು ಪ್ರತಿಜ್ಞೆಯನ್ನು ಮಾಡುತ್ತೇವೆ; ಆದರೆ ಈ ಪ್ರತಿಜ್ಞೆಯಂತೆ ನಾವು ಎಂದಾದರೂ ವರ್ತಿಸುತ್ತೇವೆಯೇ ? ನಮಗೆ ಇದರ ಅರಿವಿದೆಯೇ ? ನಿಜವಾಗಿಯೂ ಎಲ್ಲರೂ ನಮ್ಮ ಬಾಂಧವರಾಗಿದ್ದರೆ, ಗಡಿಯಲ್ಲಿ ನಿಂತು ನಮ್ಮ ರಕ್ಷಣೆಗಾಗಿ ಪ್ರಾಣವನ್ನು ಪಣಕ್ಕಿಡುವ ಸೈನಿಕರ ವೇದನೆಯು ನಮ್ಮ ಹೃದಯವನ್ನು ತಲುಪಬೇಕಿತ್ತು ಅಲ್ಲವೇ? ಅವರ ಕುಟುಂಬದವರು ಸಹಿಸಬೇಕಾಗಿರುವ ವೇದನೆಯ ಒಂದು ಅಂಶವಾದರೂ ನಮಗೆ ತಿಳಿಯುತ್ತದೆಯೇ ? ಎಲ್ಲರೂ ನಮ್ಮ ಬಾಂಧವರಾಗಿದ್ದಾರೆ ಎಂದು ನಾವು ಹೇಳುತ್ತೇವೆ; ಆದರೆ ನಮ್ಮ ವಯಸ್ಸಿನ ವಿದ್ಯಾರ್ಥಿನಿಯರು ಬಲಾತ್ಕಾರದ ಘಟನೆಗಳಲ್ಲಿ ಹೇಗೆ ಬಲಿಯಾಗುತ್ತಿದ್ದಾರೆ ? ಇಂದು ನಾವು ಇದರ ಬಗ್ಗೆ ಅಂತರ್ಮುಖರಾಗಿ ವಿಚಾರ ಮಾಡುವುದು ಅವಶ್ಯಕವಾಗಿದೆ. ದೇಶವು ಸಂಕಟದಲ್ಲಿರುವಾಗ ನಾವು ಕೇವಲ ವ್ಯರ್ಥ ಮಾತುಗಳಲ್ಲಿ ಸಮಯ ಕಳೆಯುತ್ತಿದ್ದೇವೆ.

೨. ಚಲನಚಿತ್ರ ಹಾಗೂ ಕ್ರಿಕೆಟ್ ನಂತಹ ಬೇಡದ ವಿಷಯಗಳ ಬಗ್ಗೆ ಮಾತನಾಡಿ ಸಮಯ ಕಳೆಯುವ ವಿದ್ಯಾರ್ಥಿಗಳಲ್ಲಿ ದೇಶ ಹಾಗೂ ಧರ್ಮದ ಬಗೆಗಿನ ಕರ್ತವ್ಯದ ಅರಿವು ಕಿಂಚಿತ್ತೂ ಇಲ್ಲದಿರುವುದು

ನಾವು ಕೇವಲ ಉತ್ತೀರ್ಣರಾಗಲು ಹಾಗೂ ಹಣಗಳಿಸಲು ಶಾಲೆಯಲ್ಲಿ ಶಿಕ್ಷಣ ಪಡೆಯುತ್ತೇವೆ. ಶಾಲೆಯಲ್ಲಿ ನಮ್ಮ ಗೆಳೆಯ-ಗೆಳತಿಯರೊಂದಿಗೆ ಯಾವ ವಿಷಯದ ಬಗ್ಗೆ ಮಾತನಾಡುತ್ತೇವೆ? ದೂರದರ್ಶನ, ಚಲನಚಿತ್ರ ಹಾಗೂ ಕ್ರಿಕೆಟ್, ಇಲ್ಲದಿದ್ದಲ್ಲಿ ಶಿಕ್ಷಕರ ಟೀಕೆ ಅಲ್ಲವೇ? ಎಲ್ಲಿಯಾದರೂ ದೇಶ ಹಾಗೂ ಧರ್ಮದ ಬಗ್ಗೆ ಮಾತನಾಡುವ ಒಂದೇ ಒಂದು ವಿದ್ಯಾರ್ಥಿಯನ್ನು ಕಂಡಿದ್ದೀರಾ? ಇದು ನಮ್ಮ ದುರ್ದೆಶೆ! ನಮ್ಮಲ್ಲಿ ಬಹಳಷ್ಟು ಜನರು ಒಳ್ಳೆಯ ಸ್ಥಿತಿಯಲ್ಲಿದ್ದೇವೆ ಆದರೆ ನಮ್ಮಲ್ಲಿ ಬಹುತೇಕ ಎಲ್ಲರಿಗೂ ತಮ್ಮ ಕರ್ತವ್ಯ ಮರೆತು ಹೋಗಿದೆ.

೩. ಪಠ್ಯಪುಸ್ತಕಗಳ ಮಾಧ್ಯಮದಿಂದ ನೀಡಲಾಗುವ ವಿಷಯಗಳಲ್ಲಿನ ಸುಳ್ಳು ಮಾಹಿತಿಯ ಬಗ್ಗೆ ನಾವು ಬಾಯಿ ಮುಚ್ಚಿ ಏಕೆ ಕುಳಿತುಕೊಳ್ಳುತ್ತೇವೆ?

ಎನ್. ಸಿ. ಇ. ಆರ್. ಟಿ ಯಂತಹ ದೇಶದ್ರೋಹಿ ಪಠ್ಯಪುಸ್ತಕಗಳು ಭಗತಸಿಂಗ, ಸುಖದೇವ ಹಾಗೂ ರಾಜಗುರು ಇವರನ್ನು ಭಯೋತ್ಪಾದಕರು ಎಂದು ನಿರ್ಧರಿಸುತ್ತವೆ. ಈ ಪಠ್ಯಪುಸ್ತಕದಲ್ಲಿ ಶಿವಾಜಿ ಮಹಾರಾಜ ಹಾಗೂ ಕ್ರಾಂತಿಕಾರರ ಇತಿಹಾಸ ನಾಲ್ಕು ಸಾಲಿನಷ್ಟೂ ಇರುವುದಿಲ್ಲ. ನಮ್ಮ ದೇಶದ ಕೆಲವೇ ಕೆಲವು ಸಂಘಟನೆಗಳು ಇದರ ವಿರುದ್ಧ ಆಂದೋಲನಗಳನ್ನು ಮಾಡಿ ಆ ಪಠ್ಯಕ್ರಮವನ್ನು ಬದಲಾಯಿಸಲು ಆಗ್ರಹಿಸುತ್ತಾರೆ; ಆದರೆ ಇದೆಲ್ಲವನ್ನೂ ಓದುವಾಗ ನಮಗೆ ಇದರ ವಿರುದ್ಧ ಏನಾದರೂ ಕೃತಿ ಮಾಡಬೇಕು ಎಂದು ಏಕೆ ಅನಿಸುವುದಿಲ್ಲ? ಸಂಬಂಧಿತರಿಗೆ ಇದರ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ? ನಮ್ಮಲ್ಲಿ ಇಷ್ಟೂ ದೇಶಭಕ್ತಿ ಇಲ್ಲವೇ? ಇಂದು ಈ ಎಲ್ಲ ವಿಷಯಗಳ ಬಗ್ಗೆ ವಿಚಾರ ಮಾಡುವ ಸಮಯ ಬಂದಿದೆ. ಇದಕ್ಕಾಗಿಯೇ ನಮ್ಮಲ್ಲಿ ರಾಷ್ಟ್ರಾಭಿಮಾನವನ್ನು ವೃದ್ಧಿಸಬೇಕು.

೪. ಪಾಪಿಗಳಿಗೆ ಪಾಠ ಕಲಿಸುವ ಹಾಗೂ ಪುನಃ ಸ್ವಾತಂತ್ರ್ಯ ಹೋರಾಟ ಮಾಡುವ ಸಮಯ ಬಂದಿರುವುದು

ಸ್ವಾತಂತ್ರ್ಯ ಹೋರಾಟದಲ್ಲಿ ಶಿರೀಷಕುಮಾರನ ಬಗ್ಗೆ ನಾವು ಕಲಿತಿದ್ದೇವೆ. ಆ ವೀರ ಬಾಲಕನ ಹಾಗೆ ಮತ್ತೊಮ್ಮೆ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಮಯ ಬಂದಿದೆ. ವಿದ್ಯಾರ್ಥಿಗಳೇ, ನಾವು ನಮ್ಮ ರಕ್ಷಣೆ ಮಾಡಿ ಈ ಭಾರತ ಮಾತೆಯ ಮೇಲಿನ ಆಕ್ರಮಣಗಳನ್ನು ತಡೆಯುವ ಸಮಯ ಬಂದಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಹಿಂದೊಮ್ಮೆ ಒಂದು ಕಾರ್ಯಕ್ರಮದಲ್ಲಿ ಶಾಲೆಗೆ ಹೋಗುವ ವಯಸ್ಸಿನ ಇಬ್ಬರು ಹುಡುಗರು ಗುಂಡು ಹೊಡೆದು ಹುಡುಗಿಯೊಬ್ಬಳ ಹತ್ಯೆ ಮಾಡಿದರು. ೧೫-೧೬ ವರ್ಷದ ಮಕ್ಕಳೂ ಬಲಾತ್ಕಾರದಂತಹ ಘಟನೆಗಳಲ್ಲಿ ಭಾಗಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಿಂದ ಬಹಳಷ್ಟು ಹಳ್ಳಿಯ ಪಾಲಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿದರು. ಇದಕ್ಕೆ ಶಾಲೆಗೆ ಹೋಗುವುದನ್ನು ನಿಲ್ಲಿಸುವುದು ಪರ್ಯಾಯವಾಗಿರದೇ ಪಾಪಿಗಳಿಗೆ ಪಾಠ ಕಲಿಸುವ ಸಮಯವಾಗಿದೆ. ಎಲ್ಲಿಯ ವರೆಗೆ ನಾವು ಅವರಿಗೆ ಪಾಠ ಕಲಿಸುವುದಿಲ್ಲವೋ ಅಲ್ಲಿಯ ವರೆಗೆ ಇದೆಲ್ಲವೂ ನಡೆಯುತ್ತಲೆ ಇರುವುದು. ಇದಕ್ಕಾಗಿ ನಮ್ಮ ಹಾಗೂ ನಮ್ಮ ಬಂಧುಗಳ ರಕ್ಷಣೆ ಮಾಡಲು ಸ್ವ ಸಂರಕ್ಷಣ ಪ್ರಶಿಕ್ಷಣ ವರ್ಗಗಳಲ್ಲಿ ಸಹಭಾಗಿಯಾಗದೇ ಪರ್ಯಾಯವಿಲ್ಲ.

೫. ಸದ್ಯದ ಸ್ಥಿತಿಯನ್ನು ಬದಲಾಯಿಸಲು ಏನು ಮಾಡಬೇಕು ?

೫ ಅ. ಅಯೋಗ್ಯ ಕೃತಿ ಕಂಡುಬಂದಲ್ಲಿ ಆ ಬಗ್ಗೆ ಶಿಕ್ಷಕರನ್ನು ಪ್ರಶ್ನಿಸುವುದು : ಒಂದು ಪಠ್ಯಪುಸ್ತಕದಲ್ಲಿ ಝಾನ್ಸಿ ರಾಣಿ ಹುಕ್ಕಾ ಸೇವಿಸುವ ಚಿತ್ರವನ್ನು ತೋರಿಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಪ್ರಶ್ನಿಸಿದಾಗ ಶಿಕ್ಷಕರು ನಿರುತ್ತರರಾದರು ಹಾಗೂ ಅವರಿಗೆ ಈ ಬಗ್ಗೆ ಮುಂದೆ ತಿಳಿಸಬೇಕಾಯಿತು. ಆ ಪುಸ್ತಕವನ್ನು ರದ್ದುಗೊಳಿಸಲು ಬಹಳಷ್ಟು ಆಂದೋಲನಗಳಾದವು. ಬಾಂಧವರೇ, ನಮ್ಮ ಸತರ್ಕತೆ, ಒಂದು ಪ್ರಶ್ನೆಯೂ ಇಂತಹ ಅಯೋಗ್ಯ ಕೃತಿಗಳನ್ನು ತಡೆಯಬಲ್ಲದು. ಅಕ್ಬರ, ಬಾಬರರ ಪೀಳಿಗೆಯ ಇತಿಹಾಸವನ್ನು ಬಿಟ್ಟು ನಾವು ನಮ್ಮಲ್ಲಿ ಶಿವಾಜಿ ಮಹಾರಾಜ, ಹರಿಹರ-ಬುಕ್ಕರಾಯ, ಕೃಷ್ಣದೇವರಾಯರ ಸ್ವಾಭಿಮಾನವನ್ನು ಬೆಳೆಸೋಣ.

೫ ಆ. ನಿಜವಾದ ಇತಿಹಾಸ ತಿಳಿದುಕೊಳ್ಳುವ ಹಠ : ಹಿಂದೆ ನಮ್ಮ ದೇಶದಲ್ಲಿ ವಿದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಕಲಿಯಲು ಬರುತ್ತಿದ್ದರು. ಇದೇ ಭಾರತದಲ್ಲಿ ಹಿಂದೆ ನಲಂದಾ, ತಕ್ಷಶಿಲಾದಂತಹ ಮಹಾವಿಶ್ವವಿದ್ಯಾಲಯಗಳಿದ್ದವು; ಆದರೆ ಭ್ರಷ್ಟ ರಾಜಕಾರಣಿಗಳಿಗೆ ಅದರ ಬೆಲೆ ತಿಳಿಯಲೇ ಇಲ್ಲ. ನಮಗೆ ದೇಶದ ಬಗ್ಗೆ ಅಭಿಮಾನವೆನಿಸಬಾರದು ಎಂದು ಕಟ್ಟು ಕಥೆಯಂತಹ ಇತಿಹಾಸವನ್ನು ಕಲಿಸಲಾಗುತ್ತದೆ. ಅದಕ್ಕೆ ಈಗ ನಾವು ನಿಜವಾದ ಇತಿಹಾಸದ ಬೆನ್ನತ್ತಬೇಕು.

೫ ಇ. ಭಾಷಣದ ಮಾಧ್ಯಮದಿಂದ ವಿದ್ಯಾರ್ಥಿಗಳನ್ನು ಜಾಗೃತಗೊಳಿಸುವುದು : ಭ್ರಷ್ಟಾಚಾರ, ಭಯೋತ್ಪಾದನೆಯಂತಹ ದೊಡ್ಡ ಸಮಸ್ಯೆಗಳಲ್ಲದೆ, ಶಿಕ್ಷಣಕ್ಷೇತ್ರಕ್ಕೆ ಹಿಡಿದ ಕರ್ಕರೋಗ ‘ಪರೀಕ್ಷೆಯಲ್ಲಿ ನಕಲು’ ಮುಂತಾದ ವಿಷಯಗಳ ಬಗ್ಗೆ ಉತ್ತಮ ವಕ್ತಾರರಿಂದ ಭಾಷಣಗಳನ್ನು ಆಯೋಜಿಸಲು ವಿನಂತಿಸಬೇಕು. ಶಾಲೆಯಲ್ಲಿ ಭಾಷಣಗಳ ಸ್ಪರ್ಧೆಯಲ್ಲಿ ಇತರ ವಿಷಯಗಳೊಂದಿಗೆ ದೇಶದ ಸದ್ಯದ ಸ್ಥಿತಿ ಹಾಗೂ ರಾಜಕಾರಣಿಗಳ ನಿಷ್ಕ್ರಿಯತೆಯಂತಹ ವಿಷಯಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸೋಣ.

೫ ಈ. ಸಂಸ್ಕೃತಿಯನ್ನು ಪರಿಚಯಿಸುವ ಬಾಲಸಂಸ್ಕಾರ ಡಾಟ್ ಕಾಮ್ ನೋಡುವುದು : ಬಿಡುವಿನ ಸಮಯದಲ್ಲಿ ತರಗತಿಯ ವಿದ್ಯಾರ್ಥಿಗಳಿಗೆ ದೇಶದ ವಿದ್ಯಮಾನಗಳ ಬಗ್ಗೆ ಹೇಳೋಣ ಹಾಗೂ ನಮ್ಮ ಗೆಳೆಯರನ್ನು ಜಾಗೃತಗೊಳಿಸಿ ನಮ್ಮ ಕರ್ತವ್ಯವನ್ನು ಪಾಲಿಸೋಣ. ಇಂಟರನೆಟನಲ್ಲಿ ವೀಡಿಯೋ, ಫೇಸಬುಕ ನೋಡುವುದರ ಬದಲು ಮಕ್ಕಳಲ್ಲಿ ರಾಷ್ಟ್ರಾಭಿಮಾನವನ್ನು ಜಾಗೃತಗೊಳಿಸುವ ಹಾಗೂ ನಮ್ಮ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಬಾಲಸಂಸ್ಕಾರ ಡಾಟ ಕಾಮ ಈ ಸಂಕೇತಸ್ಥಳದ ಲಾಭವನ್ನು ಪಡೆಯೋಣ !

ಕೊನೆಯಲ್ಲಿ ಈ ದೇಶವು ಜಗತ್ತಿನ ಅತ್ಯಂತ ಸುಂದರ ದೇಶವಾಗಿದೆ ಎಂಬ ಒಂದೇ ಮಾತನ್ನು ಹೇಳಬೇಕೆಂದು ಅನಿಸುತ್ತದೆ. ಇದು ಸಂತ ಮಹಾತ್ಮರು, ಧರ್ಮವೀರ ಹಾಗೂ ರಾಷ್ಟ್ರವೀರರ ಭೂಮಿಯಾಗಿದೆ. ಎಲ್ಲ ದೇವತೆಗಳು ಇದೇ ಭೂಮಿಯಲ್ಲಿ ಜನ್ಮ ಪಡೆದಿದ್ದಾರೆ. ಇನತಹ ಪುಣ್ಯಭೂಮಿಯನ್ನು ಮಾರಲು ಹೊರಟಿರುವ ಭ್ರಷ್ಟ ರಾಜಕಾರಣಿಗಳ ವಿರುದ್ಧ ನಾವು ಹೋರಾಡಬೇಕು ಎಂಬುದನ್ನು ಗಮನದಲ್ಲಿಡೋಣ.

​ನಾವಾಗೋಣ ಭಾರತ ಮಾತೆಯ ನಿಜವಾದ ಮಕ್ಕಳು ಈಗ |

ನಮ್ಮ ಆಯುಷ್ಯ ಕೊನೆಗೊಂಡರೂ ಚಿಂತೆ ಇಲ್ಲ ||

ಕು. ವೈಷ್ಣವಿ ಜಾಧವ (ವಯಸ್ಸು ೧೫ ವರ್ಷ), ಗೋವಾ. 

Leave a Comment