ನರಸೋಬಾ ವಾಡಿ

ಮೀರಜ-ಕೊಲ್ಲಾಪುರ ಮಾರ್ಗದಲ್ಲಿ ಕೃಷ್ಣಾ-ಪಂಚಗಂಗಾ ಸಂಗಮದಲ್ಲಿ ಈ ಕ್ಷೇತ್ರವಿದೆ. ವಾಡಿಯು ಹೆಸರಿನಂತೆಯೇ ಇದೊಂದು ಹಳ್ಳಿಯಾಗಿದೆ. ಎಲ್ಲ ನಿವಾಸಗಳು ಕಷ್ಣಾ ದಂಡೆಯಲ್ಲಿ ಏಕತ್ರಿತವಾಗಿದೆ. ಕೃಷ್ಣಾ ಘಟ್ಟದಲ್ಲಿಯೇ 'ದತ್ತ ಪಾದುಕಾ' ಮಂದಿರವಿದೆ. ವಾಡಿಯ ಕೃಷ್ಣಾ ದಂಡೆಯು ವಿಶಾಲವಾಗಿದೆ.

ಶ್ರೀ ನೃಸಿಂಹ ಸರಸ್ವತೀಯವರು ಔದುಂಬರದ ಚಾತುರ್ಮಾಸವನ್ನು ಮುಗಿಸಿ ಇಲ್ಲಿಗೆ ಬಂದರು ಮತ್ತು ಹನ್ನೆರಡು ವರ್ಷಗಳ ಕಾಲ ಇಲ್ಲಿದ್ದು ಅನೇಕ ಮಂದಿ ಭಕ್ತರ, ದೀನ-ದಲಿತರ ಜೀವನದಲ್ಲಿ ಸುಖದ ತೋಟಗಳನ್ನು ಅರಳಿಸಿ, ಅನೇಕರ ಸಂಕಟಗಳನ್ನು ದೂರಗೊಳಿಸಿ ನಂತರ ಗಾಣಗಾಪುರದಲ್ಲಿ ಹೋದರು. ಶ್ರೀ ಗುರುಗಳ ಚರಣಸ್ಪರ್ಶದಿಂದ ಪವಿತ್ರವಾದ ದಂಡೆಯ ಭೂಮಿಯನ್ನು ಸ್ಪರ್ಶಿಸುವ ಇಚ್ಛೆಯಿಂದ ಪಾದುಕೆಗಳ ಎದುರಿಂದ ಕೃಷ್ಣಾ ಹರಿಯುತ್ತಾಳೆ ಮತ್ತು ಸಮೀಪದಿಂದಲೇ ಬಲಬದಿಯಿಂದ ಪಂಚಗಂಗಾ ಹರಿದು ಬರುತ್ತಾಳೆ. ದತ್ತ ದರ್ಶನದ ಆನಂದವನ್ನು ಪಂಚಗಂಗೆಯೊಂದಿಗೆ ಹಂಚಿಕೊಳ್ಳಲು ಕೃಷ್ಣಾ, ದತ್ತ ಮಂದಿರದಿಂದ ಅನತಿದೂರದಲ್ಲಿ ಪಂಚಗಂಗೆಯಲ್ಲಿ ವಿಲೀನವಾಗುತ್ತಾಳೆ.

ಕೃಷ್ಣಾ ನದಿಯ ಆಚೆಯದಂಡೆಯಲ್ಲಿ ಔರವಾಡ ಮತ್ತು ಗೌರವಾಡ ಈ ಹೆಸರಿನ ಎರಡು ಗ್ರಾಮಗಳಿವೆ. ಇದರ ಪೈಕಿ ಔರವಾಡವೆಂದರೆ ಗುರುಚರಿತ್ರೆಯಲ್ಲಿನ ಅಮರಾಪುರ. ಈ ಅಮರಾಪುರದಲ್ಲಿ ಅಮರೇಶ್ವರ ಹೆಸರಿನ ಶಿವಸ್ಥಾನವಿದೆ. ಈ ಅಮರಾಪುರದ ಮತ್ತು ಅದರ ಕಷ್ಣಪಂಚಗಂಗಾ-ಸಂಗಮದ ಮಹಿಮೆಯನ್ನು ಗುರುಚರಿತ್ರೆಯಲ್ಲಿ ಕೂಡ ವರ್ಣಿಸಲಾಗಿದೆ.

ಘಟ್ಟದ ಮೊದಲನೆಯ ಹಂತದಲ್ಲಿಯೇ ಚಿಕ್ಕದಾದ ದತ್ತ ಪಾದುಕಾಮಂದಿರವಿದೆ. ಈ ಪಾದುಕೆಗಳಿಗೆ ‘ಮನೋಹರ ಪಾದುಕಾ’ ಎಂಬ ಹೆಸರಿದೆ. ದೇವಸ್ಥಾನದ ಹಿಂದೆ ಔದುಂಬರದ ಕಟ್ಟೆಯಿದೆ. ಮಧ್ಯಾಹ್ನ ಹನ್ನೆರಡು ಗಂಟೆಗೆ ಈ ಮನೋಹರ ಪಾದುಕೆಗಳ ಮಹಾಪೂಜೆಯಾಗುತ್ತದೆ. ಮಹಾಪೂಜೆಯ ಸಮಯದಲ್ಲಿ ಅರ್ಚಕರು ಪಾದುಕೆಗಳಿಗೆ ಸಣ್ಣ ಪಾತ್ರೆಯಷ್ಟು ಹಾಲಿನಿಂದ ಅಭಿಷೇಕ ಮಾಡುತ್ತಾರೆ; ದರ್ಶನಾರ್ಥಿಗಳ ಇಚ್ಛೆಯೂ ಈಡೇರಿಸುತ್ತಾರೆ.

ಘಟ್ಟದ ಕೊನೆಯ ಹಂತದಲ್ಲಿ ಶ್ರೀವಾಸುದೇವಾನಂದ ಸರಸ್ವತೀಯರ ಸ್ಮೃತಿ ಮಂದಿರವಿದೆ. ವಾಡಿಯ ದತ್ತಸ್ಥಾನವೇ ವಾಸುದೇವಾನಂದರ ಪ್ರೇರಣಾಸ್ಥಾನವಿದೆ. ಅವರ ಸ್ಮೃತಿ ಮಂದಿರದ ಹಿಂದೆ ಶ್ರೀ ಗುರುಗಳ ಸಮಕಾಲೀನ ಶ್ರೀ ರಾಮಚಂದ್ರಯೋಗಿಯವರ ಸ್ಮೃತಿಸ್ಥಾನವಿದೆ ಮತ್ತು ಬಲಬದಿಯಲ್ಲಿ ಸಾಲಾಗಿ ನಾರಾಯಣಸ್ವಾಮೀ, ಕಾಶಿಕರಸ್ವಾಮೀ, ಗೋಪಾಳಸ್ವಾಮೀ, ಮೌನೀಸ್ವಾಮೀ ಈ ತಪೋನಿಧಿಗಳ ಸ್ಮಾರಕಗಳಿವೆ. ಅವರ ತಪಸ್ಸಿನಿಂದ ಮತ್ತು ಚಿರವಿಶ್ರಾಂತಿಯಿಂದ ಕೃಷ್ಣಾದಂಡೆಯು ಪವಿತ್ರವಾಗಿದೆ. ಮುಕ್ತೇಶ್ವರರು ಭಾವಾರ್ಥ ರಾಮಾಯಣದ ಉತ್ತರಕಾಂಡವನ್ನು ಇದೇ ಪವಿತ್ರ ಕ್ಷೇತ್ರದಲ್ಲಿ ರಚಿಸಿದರು.

Leave a Comment