ಅಕ್ಕಲಕೋಟ ಸ್ವಾಮೀ ಸಮರ್ಥ

ಅಕ್ಕಲಕೋಟವು ಸೋಲಾಪುರ ಜಿಲ್ಲೆಯಲ್ಲಿನ ಚಿಕ್ಕದಾದ ಊರಿದೆ. ಸ್ವಾಮೀ ಸಮರ್ಥ ಮಹಾರಾಜರ ಈ ಸಮಾಧಿ ದೇವಸ್ಥಾನವು ಸೋಲಾಪುರದಿಂದ ಕೇವಲ ೪೫ ಕಿ.ಮೀ. ಅಂತರದಲ್ಲಿದೆ.ಅಕ್ಕಲಕೋಟ ಬಹಳಷ್ಟು ಶ್ರದ್ಧಾವಂತರ ಪವಿತ್ರ ಸ್ಥಳವಾಗಿದೆ. ಅಕ್ಕಲಕೋಟ ಸ್ವಾಮೀ ಸಮರ್ಥರು ನಾಥ ಪಂಥದವರ ಘೋರ ತಪಸ್ಸನ್ನು ಆಚರಿಸಿ ಆತ್ಮಸಾಕ್ಷಾತ್ಕಾರ ಪಡೆದರು. ಅವರು ಬೇರೆಬೇರೆ ಸ್ಥಳಗಳಲ್ಲಿ ಜನ್ಮ ತಾಳಿದರು ಮತ್ತು ಸಮಾಧಿ ತೆಗೆದುಕೊಂಡು ಬೇರೆ ರೂಪದಲ್ಲಿದ್ದಾರೆ ಎಂದು ಭಕ್ತರು ನಂಬಿದ್ದಾರೆ. ಸಮಾಧಿ ಸ್ಥಳ, ಶಿವಪುರಿ ಆಶ್ರಮ ಇವುಗಳು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾಗಿವೆ. ಶಿವಪುರಿ ಆಶ್ರಮದಲ್ಲಿ ಸಾತತ್ಯದಿಂದ ಅಗ್ನಿಯನ್ನು ಬೆಳಗಿ ಇಡುವ ಶಾಸ್ತ್ರ (ಆಗ್ನಿಹೋತ್ರ) ಪಾಲಿಸುತ್ತಾರೆ.

Leave a Comment