ಶೇಗಾವ (ಸಂತ ಗಜಾನನ ಮಹಾರಾಜರ ಸಮಾಧಿ)

ಮಹಾರಾಷ್ಟ್ರದ ಬುಲಢಾಣಾ ಜಿಲ್ಲೆಯ ಖಾಮಗಾವ ಸಮೀಪದ ಈ ಸ್ಥಳವು ಸಂತ ಗಜಾನನ ಮಹಾರಾಜರಿಂದಲೇ ಪ್ರಸಿದ್ಧವಾಗಿದೆ.

ಶೇಗಾವದಲ್ಲಿ ಕ್ರಿ.ಶ. ೧೮೭೮ರಲ್ಲಿ ಮೊದಲು ಬಾರಿ ಬಂಕಟಲಾಲ ಮತ್ತು ದಾಮೋದರ ಇವರು ಗಜಾನನ ಮಹಾರಾಜರನ್ನು ನೋಡಿದರು. ಅವರು ಸಮರ್ಥ ರಾಮದಾಸ ಅವತಾರವೆನ್ನಲಾಗುತ್ತದೆ. ಯೋಗಶಾಸ್ತ್ರ, ವೇದಶಾಸ್ತ್ರದಲ್ಲಿ ಪಾರಂಗತರು. ಪ್ರಾಣಿ, ಪಕ್ಷಿಗಳ ಭಾಷೆ ಅವರಿಗೆ ತಿಳಿಯುತ್ತಿತ್ತು ಎಂಬುದನ್ನು ಜನರು ನಂಬಿದ್ದಾರೆ. ಜನರ ವೈಯಕ್ತಿಕ, ಪ್ರಾಪಂಚಿಕ ಪ್ರಶ್ನೆಗಳನ್ನು ಪರಿಹರಿಸುತ್ತಾ ಅದರೊಂದಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮಾಡಿದರು. ‘ಗಣಗಣ ಗಣಾತ ಬೊತೆ’ ಈ ಮಂತ್ರವನ್ನು ಅವರು ನೀಡಿದ್ದರು.

ಶ್ರೀ ಗಜಾನನ ಮಹಾರಾಜರು

ಲೋಕಮಾನ್ಯ ತಿಲಕ, ಅಣ್ಣಾಸಾಹೆಬ ಪಟವರ್ಧನ್, ದಾದಾಸಾಹೇಬ ಖಾಪರ್ಡೆ ಇಂತಹ ಹೆಸರಾಂತ ವ್ಯಕ್ತಿಗಳಿ ಇವರ ಭಕ್ತರಾಗಿದ್ದರು. ಮೈಯಮೇಲೆ ಬಟ್ಟೆಯಿಲ್ಲ, ಎಲ್ಲಿಯೂ ಸಿಕ್ಕಿದ್ದಲ್ಲಿ ಅನ್ನ ಗ್ರಹಣ ಮಾಡುವುದು, ಎಲ್ಲಿ ಬೇಕಿದ್ದರೂ ಒರಗಿ ಮಲಗುವುದು, ಯಾವುದೇ ವಸ್ತುವನ್ನು ಸಂಗ್ರಹದಲ್ಲಿ ಇಡದಿರುವುದು ಇಂತಹ ಕೃತಿಗಳನ್ನು ಮಾಡುವ ಅವರು ಸತ್ಪುರುಷರಾಗಿದ್ದರು. ವಿದರ್ಭದ ಅನೇಕ ಪಂಡಿತರು, ಗುರುಗಳು, ಆಚಾರ್ಯರು ಅವರ ಭೇಟಿಯನ್ನು ಪಡೆಯುತ್ತಿದ್ದರು. ಅವರು ವಿಷ್ಣುವಿನ ಅವತಾರವೆಂದೂ ಪರಿಗಣಿಸುತ್ತಿದ್ದರು. ಆದ್ದರಿಂದಲೇ ‘ವಿದರ್ಭದ ಪಂಢರಪುರ ಶೆಗಾವ’ ಎಂದು ಇದರ ವರ್ಣನೆಯನ್ನು ಮಾಡುತ್ತಾರೆ.

ಪಂಢರಾಪುರದ ಪಾಂಡುರಂಗನೆದುರು ೧೯೧೦ರಲ್ಲಿ ಅವರು ಈ ಜಗತ್ತನ್ನು ಬಿಟ್ಟು ಹೋಗುವ ನಿರ್ಣಯವನ್ನು ಭಕ್ತರಿಗೆ ಹೇಳಿದರು. ೧೯೧೦ರಲ್ಲಿ ಅವರು ಸಮಾಧಿ ತೆಗೆದುಕೊಳ್ಳುವ ದಿನಾಂಕ-ವಾರ-ದಿನವನ್ನು ಭಕ್ತರಿಗೆ ಹೇಳಿದರು, ಸಮಾಧಿಯ ಸ್ಥಳವನ್ನು ಕೂಡ ನಿಶ್ಚಿತಗೊಳಿಸಿ ಹೇಳಿದರು. ದಿನಾಂಕ ೮ ಸಪ್ಟೆಂಬರ ೧೯೧೦ರಲ್ಲಿ ಭಾದ್ರಪದ ಶುಕ್ಲ ಪಂಚಮಿಗೆ, ಗುರುವಾರದಂದು ಅವರು ದೇಹತ್ಯಾಗ ಮಾಡಿದರು.

ಭಕ್ತರಿಗೆ ಮಾರ್ಗದರ್ಶನ ಮಾಡುವುದು, ಯೋಗ್ಯ ಮಾರ್ಗ ತೋರಿಸುವುದು, ಆಶೀರ್ವಾದ ನೀಡುವುದು ಮತ್ತು ಸ್ವತ: ಸಾತತ್ಯದಿಂದ ಕೇವಲ ಸಾಧನೆ ಮಾಡುವುದು ಹೀಗೆ ಅವರ ದೈನಂದಿನ ಆಚಾರವಾಗಿತ್ತು. ಗುರುವಾರದಂದು ಅಸಂಖ್ಯ ಭಕ್ತರ ಶೆವಾಗಿವಿನ ಗಜಾನನ ಮಹಾರಾಜರ ದರ್ಶನ ಪಡೆಯಳು ನೆರವೆರುತ್ತಾರೆ. ಶೆಗಾವನ ಶ್ರೀ ರಾಮಮಂದಿರ ಕೂಡಾ ಚೈತ್ರಮಾಸದ ರಾಮನವಮಿ ದಿನದಂದು, ಋಷಿ ಪಂಚಮಿಯ ದಿನದಂದು ಭಕ್ತರಿಂದ ತುಂಬಿರುತ್ತದೆ. ಶೇಗಾವಿನ ಸಂತ ಗಜಾನನ ಮಹಾರಾಜ ಸ್ಮಾರಕ ಸಂಸ್ಥಾನದ ಪ್ರಯತ್ನಗಳಿಂದ ಅಲ್ಲಿ ಬಹಳಷ್ಟು ಶೈಕ್ಷಣಿಕ ಸಂಸ್ಥೆಗಳು ಆರಂಭವಾಗಿವೆ. ದರ್ಶನಕ್ಕೆ ಬರುವ ಭಕ್ತರಿಗಾಗಿ ಕೂಡಾ ಇಲ್ಲಿ ಅನೇಕ ಸೌಕರ್ಯಗಳು ಉಪಲಬ್ಧವಾಗಿವೆ.

Leave a Comment