ದತ್ತೋಪಾಸನೆಯ ಪ್ರಾಚೀನ ಸ್ಥಾನ – ಗಿರನಾರ

ಸೌರಾಷ್ಟ್ರದ ಜುನಾಗಢ ಸಮೀಪದ ಈ ಸ್ಥಾನವು ದತ್ತೋಪಾಸನೆಯ ಒಂದು ಪ್ರಾಚೀನ ಕೇಂದ್ರವಾಗಿದೆ. ನಾಥ ಸಂಪ್ರದಾಯದ ಮಾಧ್ಯಮದಿಂದ ದತ್ತೋಪಾಸನೆಯು ಎಲ್ಲೆಡೆ ಪಸರಿಸಿದ ಬಗ್ಗೆ ಒಂದು ಸಾಕ್ಷ್ಯವಾಗಿ ಗಿರನಾರ ನಿಂತಿದೆ. ಈ ದತ್ತದೇವಸ್ಥಾನವು ಜುನಾಗಢ ಸಮೀಪದಲ್ಲಿ ಗಿರನಾರ ಪರ್ವತದ ಒಂದು ಶಿಖರದಲ್ಲಿದೆ. ಹಿಂದೂಗಳು, ಜೈನರು ಸೇರಿದಂತೆ ಬೇರೆಬೇರೆ ಸಂಸ್ಕೃತಿಗಳ ಸಂಗಮವೆಂದರೆ ಗಿರನಾರ. ಇಂತಹ ಸ್ಥಳದಲ್ಲಿ ಸಮನ್ವಯಕಾರಿ ದತ್ತಾತ್ರೇಯ ನಿಂತಿದ್ದಾನೆ ಇದಕ್ಕೆ ವಿಶೇಷ ಅರ್ಥವಿದೆ.

ಗಿರನಾರ ಮೇಲೆ ಜೈನ ದೇವಸ್ಥಾನ, ಗೋರಖನಾಥ (ಗೋರಕ್ಷನಾಥ) ಮಂದಿರ, ಶಿವಮಂದಿರ, ಎರಡು ದೇವಿ ದೇವಸ್ಥಾನಗಳು ಮತ್ತು ದತ್ತಮಂದಿರಗಳಿವೆ. ಈ ಪರ್ವತವು ಬಹಳ ಎತ್ತರವಾಗಿದ್ದು ಅದರ ಸರ್ವೋಚ್ಚ ಶಿಖರದಲ್ಲಿ ಗುರು ಗೊರಖನಾಥನ ದೇವಸ್ಥಾನವಿದೆ. ದತ್ತ ದೇವಸ್ಥಾನದವರೆಗೆ ಕ್ರಮಿಸಲು ಸುಮಾರು ಹತ್ತು ಸಾವಿರ ಮೆಟ್ಟಲುಗಳನ್ನು ಹತ್ತಿ ಇಳಿಯಬೇಕಾಗುತ್ತದೆ! ದತ್ತೋಪಾಸನೆಯ ಇತಿಹಾಸದಲ್ಲಿ ಗಿರನಾರಿನ ಮಹಿಮೆಯು ವಿಶೇಷವಾಗಿದೆ. ಆ ತಪೋಭೂಮಿಯಲ್ಲಿ ದತ್ತ ದರ್ಶನದ ಇಚ್ಛೆಯನ್ನು ಇಟ್ಟುಕೊಂಡು ತಪಸ್ಸು ಮಾಡುವವರು ಅನೇಕ ಜ್ಞಾತಾಜ್ಞಾತ ಮಹಾತ್ಮರು ಆಗಿ ಹೋದರು. ನಿರಂಜನ ರಝೂನಾಥ, ಕಿನಾರಾಮ ಅಘೋರಿಲ್, ನಾರಾಯಣ ಮಹಾರಾಜ ಜಾಲವಣಕರ ಇತ್ಯಾದಿ ದತ್ತೋಪಾಸಕರಿಗೆ ಗಿರನಾರ ಸಮೀಪವೇ ದತ್ತನ ಸಾಕ್ಷಾತ್ಕಾರವಾಗಿದೆ.