ವಿಜಯನಗರದ ವೈಭವ !

೧. ಪೃಥ್ವಿಯ ಮೇಲಿನ ಅತ್ಯಂತ ರಮಣೀಯ ಹಾಗೂ ಪ್ರೇಕ್ಷಣೀಯ ನಗರ : ವಿಜಯನಗರ ಕಲಾಕೌಶಲ್ಯದ ನಗರ. ಇಲ್ಲಿ ನಗರ ರಚನೆಯ ಅಪೂರ್ವ ನಮೂನೆ ನೋಡಲು ಸಿಗುತ್ತದೆ. ಇಂದಿಗೂ ಅದಕ್ಕೆ ಸರಿಸಾಟಿಯಾದುದು ಯಾವುದೂ ಇಲ್ಲ. ಶೃಂಗೇರಿ ಮಠದ ಅಧಿಪತಿಗಳಾದ ವಿದ್ಯಾರಣ್ಯ ಸ್ವಾಮಿಗಳು ವಿಜಯನಗರದ ಹಿಂದೂ ಸಾಮ್ರಾಜ್ಯವನ್ನು ಕ್ಷತ್ರೀಯ ರಾಜವಂಶದವರ ಕೈಯಿಂದ ನಿಲ್ಲಿಸಿದರು. ಈ ರಾಜನಗರವು ತುಂಗಭದ್ರೆಯ ದಕ್ಷಿಣದಲ್ಲಿದೆ. ವಿಜಯನಗರದಂತಹ ಅತ್ಯಂತ ರಮಣೀಯ ಹಾಗೂ ಪ್ರೇಕ್ಷಣೀಯ ನಗರವು ಪೃಥ್ವಿಯ ಮೇಲೆ ಇನ್ನೊಂದಿರಲಿಲ್ಲ. ಈ ಹಿಂದೂ ಸಮ್ರಾಜ್ಯವು ೩೫೦ ವರ್ಷಗಳ ಕಾಲ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಅಖಂಡ ರಕ್ಷಣೆಯನ್ನು ಮಾಡಿತು. ಅಂದಿನ ವಿಜಯನಗರವು ಇಂದು ಹಂಪೆ ಎಂದು ಗುರುತಿಸಲ್ಪಡುತ್ತದೆ

೨. ಶತ್ರುಗಳಿಂದ ರಕ್ಷಣೆಗಾಗಿ ಅದ್ಭುತ ಕಾಮಗಾರಿ : ಈ ನಗರದ ರಚನೆಯು ಅದ್ಭುತವಾಗಿದೆ. ಸುತ್ತಲೂ ಒಂದರ ಹೊರಗೆ ಇನ್ನೊಂದು ಎಂಬಂತೆ ೭ ಕೋಟೆಗಳಿವೆ. ಇಲ್ಲಿ ಮನುಷ್ಯನ ಎತ್ತರದ ಕಲ್ಲುಗಳನ್ನು ಭೂಮಿಯಲ್ಲಿ ಎಷ್ಟೊಂದು ಗಟ್ಟಿಯಾಗಿ ಹುಗಿದಿದ್ದಾರೆ ಎಂದರೆ ಅವುಗಳನ್ನು ಸವಾರರು ಅಥವಾ ಸಿಪಾಯಿಗಳು ಸುಲಭವಾಗಿ ದಾಟಲು ಸಾಧ್ಯವಾಗುತ್ತಿರಲಿಲ್ಲ. ಏಳನೇಯ ಕೋಟೆಯ ಒಳಗೆ ದಾಲನೆ ಹಾಗೂ ಮಂತ್ರಾಲಯವಿದೆ. ಉತ್ತರದ ಹಾಗೂ ದಕ್ಷಿಣದ ದ್ವಾರಗಳ ನಡುವಿನ ಅಂತರವು ೮ ಮೈಲಿನಷ್ಟಿದೆ. ನಾಲ್ಕೂ ದಿಕ್ಕಿನಲ್ಲಿ ದುರ್ಗಮ ಬುರುಜು ಇದೆ. ಈ ಬುರುಜುಗಳು ಆಶ್ರಯ ಹಾಗೂ ಸಂರಕ್ಷಣೆಯ ಸ್ಥಳಗಳಾಗಿದ್ದವು ! ಕೋಟೆಯ ಹೊರಗೆ ಹರಿತವಾದ ತುದಿಗಳುಳ್ಳ ದೊಡ್ಡ ದೊಡ್ಡ ಕಲ್ಲುಗಳಿವೆ. ಕೋಟೆಯಿಂದ ಒಳಗಿನ ಭಾಗದಲ್ಲಿ ಅತ್ಯಾಧುನಿಕ ರೀತಿಯ ನೀರು ಒಯ್ಯುವ ವ್ಯವಸ್ಥೆಯಿದೆ. ಒಳಗಿನ ದಿಕ್ಕಿನಲ್ಲಿ ೨ ದೊಡ್ಡ ಕೆರೆಗಳಿವೆ. ಇವುಗಳಿಗೆ ಪುಷ್ಕರಣಿ ಎಂದು ಕರೆಯುತ್ತಾರೆ.

೩. ಕಲಾಕೌಶಲ್ಯದಿಂದ ಸಮೃದ್ಧವಾಗಿರುವ ಪ್ರಚಂಡ ವಾಸ್ತು : ಕುದುರೆ ಹಾಗೂ ಆನೆಗಳಿಗಾಗಿ ದೊಡ್ಡ ಕೊಟ್ಟಿಗೆ ಇದೆ. ’ಕಮಲಮಹಲ’ ಇದು ರಾಜನ ಆನೆಯ ಕೊಟ್ಟಿಗೆ! (The stable of the royal elephants) ಅತ್ಯಂತ ಸುಂದರ ಕಲಾಕೌಶಲ್ಯದಿಂದ ಸಮೃದ್ಧವಾಗಿರುವ ಗ್ರಾನೈಟ ಕಲ್ಲಿನಿಂದ ಕಟ್ಟಲಾದ ೧೦ ಅಂತಸ್ತಿನ ಪ್ರಚಂಡ ವಾಸ್ತುವಿರುವ ಕಟ್ಟಡವೆಂದರೆ ರಾಮಮಂದಿರ ! ಈ ರಾಮ ಮಂದಿರದಲ್ಲಿ ಹಿಂದೂ ಪುರಾಣದಲ್ಲಿನ ಅತೀ ಸುಂದರ ಪ್ರಸಂಗಗಳನ್ನು ಕೊರೆಯಲಾಗಿದೆ. ಹತ್ತು ಮೀಟರಿನ ಕೆತ್ತನೆ ಮಾಡಲಾದ ಬಂಡೆಗಲ್ಲು ! ಆ ಸಿಂಹಾಸನ, ಆ ಮಂದಿರಗಳು, ೭ ಅಂತಸ್ತಿನ ಮೇಲೆ ಇರುವ ಆ ನಗರದ ಬಳಿಯ ಕೋಟೆ, ೨೦ ಚದರ ಮೈಲುಗಳ ಆ ಕ್ಷೇತ್ರಫಲ ! (Its temples, palaces aqueducts and seven rows of fortified walls spread out in an area of twenty six square miles.)

೪. ಭವ್ಯತೆ ಹಾಗೂ ಸುಂದರತೆಯಿಂದ ಕೂಡಿದ ಅರಮನೆ ಹಾಗೂ ಮಂದಿರಗಳು ! : ’ಫಿಗ್ಯುಟೆಡಿ’ ಎಂಬ ಪ್ರವಾಸಿಗನು ಈ ಅರಮನೆಯನ್ನು ನೋಡಿದ್ದನು. ಆತನು ವಿಜಯನಗರವನ್ನು ’ಭೂಮಿಯಿಂದ ಛಾವಣಿಯವರೆಗೆ ಬಂಗಾರದ ಪತ್ರಗಳನ್ನು ಹಾಕಲಾದ ಟೊಳ್ಳು ಬೆತ್ತದ ಜಾಳಿಗೆ, ಚೌಕಿಗಳು, ವಜ್ರ, ಮುತ್ತು, ರತ್ನಗಳಿಂದ ಶೋಭಿಸಲಾದ ಮಂಟಪ. ಈ ಸುಂದರ ವಿರೂಪಾಕ್ಷ ಮಂದಿರ! ವೈಭವಸಂಪನ್ನ ನಗರ. ಅತ್ಯಂತ ಭವ್ಯ ಹಾಗೂ ರಮಣೀಯವಾದ ರಾಮಮಂದಿರ ! ಇವುಗಳನ್ನು ನೋಡಿರುವಿರೇ, ಮಧ್ಯದಲ್ಲಿರುವ ಕಲ್ಲಿನ ಭವ್ಯ ರಥ ಹಾಗೂ ಈ ರಥವನ್ನು ಯಾತ್ರೆಯ ಸಮಯದಲ್ಲಿ ಎಳೆದು ಕೊಂಡೊಯ್ಯುತ್ತಾರೆ. ಈ ರಥವೆಂದರೆ ಭವ್ಯ ಗರುಢ, ಎಂದರೆ ವಿಷ್ಣುವಿನ ವಾಹನ’ ಎಂದು ಹೇಳಿದ್ದಾನೆ.

೫. ವಿಶಾಲ ಹಾಗೂ ಸುಂದರ ನಗರ : ಪೊರ್ಚುಗೀಸ ಪ್ರವಾಸಿಯಾದ ದೊಮಿಂಗ ಪೇಸ (Domingo Paes)ನು ೧೬ನೇಯ ಶತಮಾನದಲ್ಲಿ ವಿಜಯನಗರಕ್ಕೆ ಬಂದಿದ್ದನು. ಆಗ ಅವನು ವಿಜಯನಗರವನ್ನು ’೧೬ನೇಯ ಶತಮಾನದ ವಿಜಯನಗರವು ರೋಮಗಿಂತಲೂ ಅತ್ಯಂತ ವಿಶಾಲ ಹಾಗೂ ಅದಕ್ಕಿಂತಲೂ ಎಷ್ಟೋಪಟ್ಟು ಸುಂದರವಾಗಿದೆ !’ ಎಂದು ವರ್ಣಿಸಿದ್ದಾನೆ. (Vijaynagar at its peak in the mid 16 th century is larger than Rome and much more beautiful. The best provided city in the world.)

೬. ಸುಲ್ತಾನರ ಆಕ್ರಮಣದ ನಂತರದ ವಿಜಯನಗರದ ಸ್ಥಿತಿ ! : ಸುಲ್ತಾನರ ಆಕ್ರಮಣದಿಂದ ಈ ನಗರದ ವಿಧ್ವಂಸವಾಯಿತು; ಆದರೆ ಇಂದಿಗೂ ಅದರ ಅವಶೇಷಗಳು ಪೂರ್ಣ(intact)ವಾಗಿವೆ. ಇಂದಿಗೂ ವಿಜಯನಗರದ ಆ ವಿರೂಪಾಕ್ಷ ಮಂದಿರ, ರಾಮಮಂದಿರ ಹಾಗೂ ಇತರ ಮಂದಿರಗಳಲ್ಲಿ ಹಿಂದೂಗಳು ಪೂಜೆ ಅರ್ಚನೆ ಮಾಡುತ್ತಾರೆ. ಕೋಹಿನೂರಿಗಿಂತಲೂ ಅನಂತಪಟ್ಟು ಉತ್ತಮವಾದ ವಜ್ರಗಳು, ರತ್ನ, ಬಂಗಾರ ಹಾಗೂ ಮುತ್ತಿನಿಂದ ಜಗತ್ತಿನಾದ್ಯಂತ ಪ್ರಸಿದ್ಧವಾಗಿದ್ದ ಈ ನಗರದಲ್ಲಿ ಈಗ ಪ್ಲಾಸ್ಟಿಕಿನ ಬಳೆ ಹಾಗೂ ಗೊಂಬೆಗಳನ್ನು ಮಾರಲಾಗುತ್ತದೆ!’

– ಗುರುದೇವ ಡಾ. ಕಾಟೇಸ್ವಾಮೀಜಿ (ಸಾಪ್ತಾಹಿಕ ಸನಾತನ ಚಿಂತನ, ೧೭.೨.೨೦೧೧)