ನೌಕಾಯಾನ ಶಾಸ್ತ್ರ

ಭಾರತದಲ್ಲಿ ವಿಕಸಿತಗೊಂಡ ನೌಕಾಯಾನ ಶಾಸ್ತ್ರವನ್ನು ಆಂಗ್ಲರು ನಿರ್ನಾಮ ಮಾಡಿದರು !

೧೭ ನೆಯ ಶತಮಾನದವರೆಗೆ ಹಿಂದೂಸ್ಥಾನದಲ್ಲಿ ಗೋಧಾ ಎಂಬ ಹೆಸರಿನ ೧೫೦೦ ಟನ್ ತೂಕದ ಹಡಗುಗಳನ್ನು ನಿರ್ಮಿಸಲಾಗುತ್ತಿತ್ತು. ಈಸ್ಟ ಇಂಡಿಯಾ ಕಂಪನಿಯಲ್ಲಿ ಒಂದು ಭಾರತೀಯ ನಿರ್ಮಿತಿಯ 'ದರ್ಯಾದೌಲತ' ಹೆಸರಿನ ಹಡಗು ಇತ್ತು. ಅದರ೮೭ ವರ್ಷಗಳ ದೀರ್ಘ ಬಳಕೆಯಲ್ಲಿ ಎಂದೂ ಸರಿಪಡಿಸಬೇಕಾಗಲೇ ಇಲ್ಲ. ಭಾರತದ ಈ ಜ್ಞಾನವನ್ನು ಕಂಡು ಆಂಗ್ಲರು ಹಿಂದೂಸ್ಥಾನದಲ್ಲಿನ ನೌಕಾನಿರ್ಮಿತಿಯ ಮೇಲೆ ಬಂಧನಗಳನ್ನು ಹಾಕಿದರು ಹಾಗೂ ಆ ವಿದ್ಯೆಯನ್ನು ನಿರ್ನಾಮ ಮಾಡಿದರು.

ನೌಕಾಯಾನ ಶಾಸ್ತ್ರದಲ್ಲಿ ಬಳಕೆಯಾಗುವಎಲ್ಲ ನಾಮಪದ ಹಾಗೂ ಕ್ರಿಯಾಪದಗಳು ಭಾರತೀಯ ಭಾಷೆಯಲ್ಲಿ ಇದ್ದವು; ಇದೊಂದೇ ಶಾಸ್ತ್ರವಲ್ಲದೇ ಎಲ್ಲಾ ಶಾಸ್ತ್ರಗಳು ಭಾರತದಲ್ಲಿ ಪ್ರಗತಿ ಹೊಂದಿದ್ದವು ಹಾಗೂ ಅದರ ಶಬ್ದಗಳೇ ಉಪಯೋಗಿಸಲಾಗುತ್ತಿದ್ದವು. ಇಂದು ಮಾತ್ರ ವಿಜ್ಞಾನದ ಯಾವುದೇ ಶಾಖೆಯಲ್ಲಿ ಭಾರತೀಯ ಶಬ್ದಗಳು ಉಳಿದಿಲ್ಲ. ಮರದ ಕೆಲಸದಲ್ಲಿ ಉಪಯೋಗಿಸುವಪ್ರತಿಯೊಂದು ವಸ್ತುವಿಗೆ ಹಾಗೂ ಕ್ರಿಯೆಗೆ ಮೂಲತಃ ಭಾರತೀಯ ಶಬ್ದಗಳೇ ಇದ್ದವು; ನೌಕಾಯಾನ ಈ ಕ್ಷೇತ್ರದ ವಿಚಾರ ಮಾಡುವಾಗ ಈ ಭರತಭೂಮಿಯ ವ್ಯಾಪಾರವು ಜಾವಾ-ಸುಮಾತ್ರಾ ಅಂದರೆ ಸಧ್ಯದ ಇಂಡೋನೇಶಿಯಾದಂತಹ ದೇಶಗಳವರೆಗೆ ಸಮುದ್ರಮಾರ್ಗವಾಗಿಯೇ ನಡೆಯುತ್ತಿತ್ತು. ಇಷ್ಟು ದೂರದಲ್ಲಿ ಸಮುದ್ರಮಾರ್ಗವಾಗಿ ಪ್ರಯಾಣ ಮಾಡಬೇಕಾದರೆದಿಕ್ಕು, ಸಮಯ, ನೌಕಾಯಾನ ಇವುಗಳ ಬಗ್ಗೆ ಎಷ್ಟು ಪ್ರಗತಿ ಮಾಡಿರಬಹುದು ಎಂಬುದನ್ನು ನಾವು ಗಮನಿಸಬೇಕಾಗಿದೆ.

ಮಕ್ಕಳೇ, ನಮ್ಮ ಪ್ರಾಚೀನ ಹಿಂದೂ ಸಂಸ್ಕೃತಿಯ ಅಭಿಮಾನ ವಿರಲಿ !

ಡಾ. ದುರ್ಗೇಶ ಸಾಮಂತ
ತ್ರ್ಯಂಬಕೇಶ್ವರ (ನಾಸಿಕ್ ಜಿಲ್ಲೆ) ಇಲ್ಲಿ ೨೬.೪.೨೦೦೭ ರಂದು ಸ್ವಾತಂತ್ರ್ಯವೀರ ಸಾವರಕರ ಸ್ಮೃತಿ ಮಂಚಸ್ಥಾಪಿಸಲಾಯಿತು. ಆಗ ಮಾಡಿದಭಾಷಣದ ಅಂಶಗಳು

Leave a Comment