ದೇಶದ ನಿಜವಾದ ಇತಿಹಾಸವನ್ನು ಕಲಿಸದ ಕಾರಣ ಪರರಾಷ್ಟ್ರಗಳ ವಿಷಯದಲ್ಲಿ ಆಕರ್ಷಣೆ ಹೆಚ್ಚಾಗುವುದು

ಕಳೆದ ಅನೇಕ ವರ್ಷಗಳಿಂದ ಅಭ್ಯಾಸಕ್ರಮದಲ್ಲಿ ಇತಿಹಾಸದ ಪುಸ್ತಕದಿಂದ ಹಿಂದುಸ್ಥಾನದ ಸತ್ಯ ಇತಿಹಾಸವನ್ನು ಹೇಳುವುದಿಲ್ಲ. ಇದರ ಪರಿಣಾಮವೆಂದರೆ ವಿದ್ಯಾರ್ಥಿಗೆ ‘ನಮ್ಮ ಸಂಸ್ಕೃತಿಯಲ್ಲಿ’ ನಮ್ಮ ಇತಿಹಾಸದಲ್ಲಿ ಯಾರೂ ಪರಾಕ್ರಮಿಗಳಿರಲಿಲ್ಲ, ಯಾರೂ ಜ್ಞಾನಿಯಿರಲಿಲ್ಲ’, ಎಂದೆನಿಸುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರ ಜ್ಞಾನವಿದೆ. ನಮ್ಮ ದೇಶದಲ್ಲಿ ಜ್ಞಾನದ ಕೊರತೆಯಿದೆಯೆಂಬ ಸಂಸ್ಕಾರವನ್ನು ಬಾಲ್ಯಾವಸ್ಥೆಯಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಬಿಂಬಿಸಲಾಗುತ್ತದೆ. ನಮ್ಮ ಉಜ್ವಲ ಪರಂಪರೆಯ ಪರಿಚಯ ಅವನಿಗೆ ಅಗುವುದಿಲ್ಲ. ಸ್ವಾಭಾವಿಕವಾಗಿಯೇ ಅವನ ಮನಸ್ಸಿನಲ್ಲಿ ಸ್ವರಾಷ್ಟ್ರಕ್ಕಿಂತ ಇತರ ರಾಷ್ಟ್ರಗಳ ಆಕರ್ಷಣೆಯು ವೃದ್ಧಿಯಾಗುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ವಿದ್ಯಾರ್ಥಿ ಧರ್ಮದಲ್ಲಿನ ಸಂಸ್ಕಾರಗಳನ್ನು ಕಳೆದುಕೊಳ್ಳುವುದು

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡುವಾಗ ನಾವು ಸ್ವಧರ್ಮ ಮತ್ತು ಸಂಸ್ಕೃತಿಗೆ ದ್ರೋಹ ಮಾಡುತ್ತಿದ್ದೇವೆಯೆಂಬ ಅರಿವು ಅವನಿಗಿರುವುದಿಲ್ಲ. ಅದರ ಪರಿಣಾಮವಾಗಿ ಇಂದಿನ ಪೀಳಿಗೆಯು ಸಂಸ್ಕಾರಗಳನ್ನು ಕಳೆದುಕೊಂಡಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಗೊಳಿಸುವ ಸಾಮರ್ಥ್ಯವು ಹಿಂದೂ ಧರ್ಮಗ್ರಂಥಗಳಲ್ಲಿದೆ! ಮೊದಲು ದೀಪ ಹಚ್ಚುವ ಸಂದರ್ಭದಲ್ಲಿ ‘ಶುಭಂಕರೋತಿ’ ಹೇಳಲಾಗುತ್ತಿತ್ತು. ಈಗ ಮಕ್ಕಳು ದೂರದರ್ಶನದ ಮುಂದೆ ಕುಳಿತು ‘ಕಾರ್ಟೂನು’ ಅಥವಾ ಇತರ ಮಾಲಿಕೆಗಳನ್ನು ನೋಡುತ್ತಾರೆ. ದೇಶಭಕ್ತ ಕ್ರಾಂತಿಕಾರರ ಕಾರ್ಯದ ಪರಿಚಯ ಸಹ ಮಕ್ಕಳಿಗೆ ಮಾಡಿಕೊಡಲಾಗುವುದಿಲ್ಲ. ಸುತ್ತಮುತ್ತ ನಡೆಯುವ ಅನೇಕ ವ್ಯವಹಾರಗಳು (ಆಗುಹೋಗುಗಳು), ವಿಷಯಗಳು ವಿದ್ಯಾರ್ಥಿಗಳಿಗೆ ವೈಚಾರಿಕ, ಬೌದ್ಧಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ವಿಚಲಿತಗೊಳಿಸುತ್ತಿವೆ. ಇಂದಿನ ಜೀವ ಹಿಂಡುವ ಸ್ಪರ್ಧಾತ್ಮಕ ವಾತಾವರಣದಲ್ಲಿ ಮಕ್ಕಳಲ್ಲಿ ಭಾವನಿಕವಾಗಿ ಉಸಿರುಗಟ್ಟುತ್ತಿದೆ. ಬೌದ್ಧಿಕದೃಷ್ಟಿಯಿಂದ ಸಾಮಾನ್ಯವಾಗಿರುವ ವಿದ್ಯಾರ್ಥಿಯು ನಿರಾಶೆಯೆಂಬ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ. ಅದರಿಂದ ಹೊರಗೆ ಬರಲು ಅವನಿಗೆ ಮಾರ್ಗ ದೊರೆಯುವುದಿಲ್ಲ. ಹಾಗಾಗಿ ಅವನು ಆತ್ಮಹತ್ಯೆಯ ಮಾರ್ಗವನ್ನು ಸ್ವೀಕರಿಸುತ್ತಾನೆ. ನಮ್ಮ ಸಂಸ್ಕೃತಿಯು ಧ್ಯೇಯನಿಷ್ಟೆ, ಮತ್ತು ಜೀವನನಿಷ್ಟೆಯನ್ನು ಕಲಿಸುತ್ತದೆ. ಆದುದರಿಂದ ನಿರಾಶೆಯು ಮನುಷ್ಯನ ಹತ್ತಿರ ಸುಳಿಯುವುದಿಲ್ಲ.ಗೀತೆಯಲ್ಲಿನ ಜ್ಞಾನವು ‘ಜೀವನ ಹೇಗೆ ಜೀವಿಸಬೇಕು’, ಎಂಬುದನ್ನು ಕಲಿಸುತ್ತದೆ. ರಾಮಾಯಣ ಮತ್ತು ಮಹಾಭಾರತ ಇವುಗಳಲ್ಲಿನ ಕಥೆಗಳು ಹೇಗೆ ವರ್ತಿಸಬೇಕು ಹಾಗೂ ಹೇಗೆ ವರ್ತಿಸಬಾರದು ಎಂಬ ಎರಡೂ ವಿಷಯಗಳನ್ನು ಹೇಳುತ್ತದೆ.

ವಿದ್ಯಾರ್ಥಿಗಳಿಗೆ ಓದಲು ಇಂತಹ ಸಾಹಿತ್ಯಗಳು ಪಾಠ್ಯಪುಸ್ತಕಗಳಲ್ಲಿ ಉಪಲಬ್ಧವಿಲ್ಲ. ಶಿಕ್ಷಣಪದ್ಧತಿಯಲ್ಲಿ ಬದಲಾವಣೆಯ ಅವಶ್ಯಕತೆಯಿದೆ

ನೈತಿಕತೆ, ಜೀವನ ಮೌಲ್ಯ ಹಾಗೂ ‘ನಾನು ಯಾರ ದೃಷ್ಟಿಯಲ್ಲಿಯೂ ಕೀಳ್ಮಟ್ಟಕ್ಕಿಳಿಯ ಬಾರದು’, ಎಂಬ ವಸ್ತವಸ್ಥಿತಿಯ ಪಾಠ ಕಲಿಸುವ ಆದರ್ಶವು ವಿದ್ಯಾರ್ಥಿಗಳ ಮುಂದಿಲ್ಲ. ಶಿಕ್ಷಣತಜ್ಞರು ಇಂತಹ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟು ವಿದ್ಯಾರ್ಥಿಗಳಿಗೆ ಬೌದ್ಧಿಕ, ವೈಚಾರಿಕ, ಭಾವನಿಕ ಹಾಗೂ ಮಾನಸಿಕ ದೃಷ್ಟಿಯಲ್ಲಿ ಸುದೃಢಗೊಳಿಸುವ ದೃಷ್ಟಿಯಿಂದ ಅಭ್ಯಾಸಕ್ರಮಗಳನ್ನು ಆಯೋಜಿಸಬೇಕು. ಮನಸ್ಸಿಗೆ ಒತ್ತಡ ಹಾಕದೆ ಜ್ಞಾನ ಸಂಪಾದಿಸಬಹುದು ಎಂಬ ವಿಷಯ ಇಂದು ಎಲ್ಲರು ಮರೆತ್ತಿದ್ದಾರೆ. ಶಾಸನ ಸಹ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿ ತಮ್ಮ ಮಕ್ಕಳಿಗೆ ನಿಜ ಇತಿಹಾಸವನ್ನು ಹೇಳುವ ಧೈರ್ಯ ತೋರಿಸಬೇಕು . ವಿದ್ಯಾರ್ಥಿಗಳಿಗೆ ಕಲಿಸುವ ಅಧ್ಯಾಪಕವರ್ಗವು ಜ್ಞಾನಪಿಪಾಸು ಆಗಿರಬೇಕು. ಕೌಶಲ್ಯಪೂರ್ಣವಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಅಧಿಕಾರ ಅವನಲ್ಲಿರಬೇಕು.

ಜ್ಞಾನ ಸಂಪಾದನೆಗೆ ಪ್ರಾಧಾನ್ಯ ನೀಡಬೇಕು

‘ಜ್ಞಾನ ಸಂಪಾದನೆ ಮಾಡಿದಾಗ’ ತಂತಾನೇ ಗುಣ ಸಿಗುತ್ತದೆಯೆಂಬ’, ವಿಶ್ವಾಸವನ್ನು ವಿದ್ಯಾರ್ಥಿಯ ಮನಸ್ಸಿನಲ್ಲಿ ನಿರ್ಮಾಣ ಮಾಡಬೇಕು. ನಮ್ಮ ವಿದ್ಯಾರ್ಥಿ ದೀಪ ಸ್ತಂಭದಂತಿರಬೇಕು, ಬಿರುಗಾಳಿ ಸಂಕಟದಲ್ಲಿ ನಿಶ್ಚಲವಾಗಿ, ಧೃಡವಾಗಿ ಮತ್ತು ಅಪರಾಜಿತ ಯೋದ್ಧನ ಹಾಗೆ ಕಾಲೂರಿ ನಿಲ್ಲುವವನು ಹಾಗೂ ನಮ್ಮ ಇತರ ಬಾಂಧವರಿಗೆ ಮಾರ್ಗದರ್ಶನ ಮಾಡುವವನಾಗಿರಬೇಕು. ಇಂತಹ ಶಿಕ್ಷಣಪದ್ಧತಿ ಕೇವಲ ರಾಷ್ಟ್ರದಲ್ಲಿ ಮಾತ್ರವಲ್ಲ, ಸಂಪೂರ್ಣ ಮಾನವ ಜಾತಿಯ ಉದ್ಧಾರ ಮಾಡುವುದೆಂಬುದರಲ್ಲಿ ಸಂಶಯವಿಲ್ಲ.

Leave a Comment