ಹಿಂದೂಗಳ ಈ ವೈಭವಶಾಲಿ ಇತಿಹಾಸವು ನಿಮಗೆ ಗೊತ್ತಿದೆಯೇ?

  • ಇಂದು ಜಗತ್ತು ಸ್ವೀಕರಿಸಿದ ದಶಮಾಂಶ ಪದ್ಧತಿಯ ಮೂಲಸ್ಥಾನವು ಹಿಂದೂ ಗಣಿತವೇ ಆಗಿದೆ.
  • ಹಿಂದೂಸ್ಥಾನದ ಖಗೋಲ ಶಾಸ್ತ್ರಜ್ಞರು ಪ್ರಾಚೀನ ಕಾಲದಲ್ಲಿಯೇ ಸೂರ್ಯನು ಸ್ಥಿರವಾಗಿದ್ದು ಭೂಮಿಯು ಅವನ ಸುತ್ತಲೂ ತಿರುಗುತ್ತದೆಎಂದು ಹೇಳಿದ್ದಾರೆ.
  • ಅಜಂತಾ ಮತ್ತು ವೆರೂಳದಲ್ಲಿನ ಗುಹೆಗಳಲ್ಲಿ ಶತಮಾನಗಳಿಂದ ಅಳಿಯದಿರುವ ಬಣ್ಣಗಳು ಹಿಂದೂಸ್ಥಾನದ ರಸಾಯನಶಾಸ್ತ್ರದ ಪ್ರಗತಿಯ ಪ್ರಮಾಣವಾಗಿವೆ.
  • ಹಿಂದೂಗಳ ವಾಸ್ತುಶಾಸ್ತ್ರ ಮತ್ತು ಶಿಲ್ಪಕಲೆಯ ಪ್ರಗತಿಯನ್ನು ಅನೇಕ ಶಿಲ್ಪಕಲೆಗಳು ಮತ್ತು ಭವ್ಯ ದೇವಾಲಯಗಳು ದೃಢಪಡಿಸಿವೆ.
  • ವಿಷ್ಣುಸ್ತಂಭದ (ಕುತುಬ್ ಮಿನಾರ್) ಬಳಿಯಿರುವ ತುಕ್ಕು ಹಿಡಿಯದಿರುವ ವಿಜಯಸ್ತಂಭವು ಹಿಂದೂಗಳ ಲೋಹಶಾಸ್ತ್ರದ ಪ್ರಗತಿಯ ಪರಿಚಯವನ್ನು ಮಾಡಿಕೊಡುತ್ತಾ ಇಂದಿಗೂ ನಿಂತುಕೊಂಡಿದೆ.
  • ಪಾಶ್ಚಾತ್ಯ ಸಂಶೋಧಕರು ವಿಚಾರವನ್ನೂ ಮಾಡಲಾಗದಂತಹ ಇಂತಹ ಸಂಶೋಧನೆಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ಮಾಡಿರುವ ನಮ್ಮ ಪೂರ್ವಜರ ಬಗ್ಗೆ ಅಭಿಮಾನವನ್ನು ಇಟ್ಟುಕೊಳ್ಳಿರಿ.
  • ಹಿಂದೂಗಳ ನೌಕಾಯಾನ ಶಾಸ್ತ್ರವು ಅಭಿವೃದ್ಧಿ ಹೊಂದಿತ್ತು. ಹಡಗಿನಲ್ಲಿ ತಿಂಗಳು ಪ್ರವಾಸ ಮಾಡಿದ ಕೊಲಂಬಸನು ಬಹಳ ಇತ್ತೀಚಿನವನು. ಅದಕ್ಕೂ ೧೫೦೦ ವರ್ಷಗಳ ಮೊದಲು ಹಿಂದೂ ನಾವಿಕರು ತಿಂಗಳು ಸಾಗರದಲ್ಲಿ ಸಂಚರಿಸಿ ಎಲ್ಲೆಡೆಗಳಲ್ಲಿ ಹಿಂದೂ ಸಂಸ್ಕೃತಿಯನ್ನು ಮುಟ್ಟಿಸುತ್ತಿದ್ದರು.
  • ರೋಮನ್ ಸ್ತ್ರೀಯರು ಹಿಂದೂಸ್ಥಾನದ ಉಡುಪುಗಳ ಮೇಲೆ ಮೋಹಗೊಳ್ಳುತ್ತಿದ್ದರು. ಕೇವಲ ಉಡುಪುಗಳಷ್ಟೇ ಅಲ್ಲ, ಹಿಂದೂಸ್ಥಾನದಲ್ಲಿ ತಯಾರಿಸಿದ ವಸ್ತುಗಳನ್ನು ಉಪಯೋಗಿಸುವುದು ಅಲ್ಲಿ ಪ್ರತಿಷ್ಠೆಯ ವಿಷಯವಾಗಿತ್ತು.
  • ಹಿಂದೂ ಸಂಸ್ಕೃತಿಯು ಸಂಪೂರ್ಣ ವಿಶ್ವದಲ್ಲಿ ಹೇಗೆ ಹರಡಿತು? ಖಡ್ಗದ ಬಲದಿಂದ ಹರಡಲಿಲ್ಲ. ಹಿಂದೂಗಳು ವಿದೇಶಕ್ಕೆ ಹೋಗುವಾಗ ತಮ್ಮೊಂದಿಗೆ ವಸ್ತುಗಳನ್ನಷ್ಟೇ ಅಲ್ಲ, ಗಣಿತ, ಜ್ಯೋತಿಷ್ಯಶಾಸ್ತ್ರ, ಆಯುರ್ವೇದ, ನೀತಿಶಾಸ್ತ್ರ, ಕಲೆ, ಸಂಗೀತ ಮುಂತಾದವುಗಳನ್ನು ಒಯ್ದರು, ಹಾಗೆಯೇ ರಾಮಾಯಣ ಮತ್ತು ಮಹಾಭಾರತಗಳನ್ನೂ ಒಯ್ದರು. ಸ್ಥಾಪತ್ಯಶಾಸ್ತ್ರದಲ್ಲಿನ (ಆರ್ಕಿಟೆಕ್ಚರ್) ತಜ್ಞರು ಅಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದರು. ಹಿಂದೂ ಪಂಡಿತರು ಮತ್ತು ಪುರೋಹಿತರು ಅಲ್ಲಿನ ಜನರಿಗೆ ಅಧ್ಯಾತ್ಮದ ಬಗ್ಗೆ ತಿಳಿಸಿ ಹೇಳಿದರು ಮತ್ತು ಎಲ್ಲ ಪ್ರಾಣಿಮಾತ್ರರ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯನ್ನು ಮಾಡಿಕೊಡುವಧರ್ಮವನ್ನು ಕಲಿಸಿದರು.

ವಿದ್ಯಾರ್ಥಿ ಮಿತ್ರರೇ, ಜಗತ್ತಿನ ಭೂಪಟದಲ್ಲಿ ರೋಮ, ಗ್ರೀಕ್, ಈಜಿಪ್ಟ್, ಸುಮೇರಿಯಾ ಹೀಗೆ ಅನೇಕ ಸಂಸ್ಕೃತಿಗಳು ಉದಯಿಸಿದವು ಮತ್ತು ಅಸ್ತವಾದವು, ಆದರೆ ವೈದಿಕ ಸನಾತನ ಹಿಂದೂ ಸಂಸ್ಕೃತಿಯು ಇಂದಿಗೂ ಸ್ವಯಂಭೂ ತೇಜಸ್ಸಿನಿಂದ ಹೊಳೆಯುತ್ತಿದೆ, ಅದರ ಅಭಿಮಾನವನ್ನಿಟ್ಟುಕೊಳ್ಳಿರಿ!

Leave a Comment