ಶ್ರೇಷ್ಠ ಭಾರತೀಯ ಸಂಸ್ಕೃತಿ


ಮಕ್ಕಳೇ, ನಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನವಿಟ್ಟುಕೊಳ್ಳಿ

 ಮಕ್ಕಳೇ, ಜನವರಿ , ನಾವೆಲ್ಲರೂ ಹೊಸ ವರ್ಷವೆಂದು ಆಚರಿಸಬೇಕೇ? ಖಂಡಿತಾ ಇಲ್ಲ. ಏಕೆಂದರೆ ಇದು ನಮ್ಮ ದೇಶವನ್ನೇ ಗುಲಾಮಗಿರಿಯಲ್ಲಿಟ್ಟ ಆಂಗ್ಲರ ಹೊಸ ವರ್ಷವಾಗಿದೆ. ಇದನ್ನು ನಾವು ಆಚರಿಸುವುದೆಂದರೆ ನಮ್ಮನ್ನು ಸ್ವತಂತ್ರಗೊಳಿಸಲು ಪ್ರಾಣಾರ್ಪಣೆ ಮಾಡಿದ ವೀರ ಕ್ರಾಂತಿಕಾರರ ಅವಮಾನವಲ್ಲವೇ? ೧೯೪೭ರ ಆಗಸ್ಟ್ ೧೪ ರಂದು ಮಧ್ಯರಾತ್ರಿ ಆಂಗ್ಲರು ಭಾರತ ಬಿಟ್ಟು ಹೋದರು, ಆದರೆ ನಾವೇ ಆಂಗ್ಲಮಯರಾಗಿಬಿಟ್ಟೆವು. ಇದನ್ನೇ ಆಚರಿಸುತ್ತಾ ಬಂದ ಭಾರತೀಯರು ತಮ್ಮ ಭವ್ಯದಿವ್ಯವಾದ ಹಿಂದೂ ಸಂಸ್ಕೃತಿಯನ್ನೇ ಮರೆತು ಪಾಶ್ಚಾತ್ಯ ಅಂದರೆ ಯಾವುದೇ ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಕಾರಣವಿಲ್ಲದ ದಿನಗಳನ್ನು ಆಚರಿಸಿ ತಮ್ಮ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ನಮ್ಮ ದುಃಸ್ಥಿತಿಯನ್ನು ಕಂಡು ಭಾರತಮಾತೆಯೂ ದುಃಖಿಸುತ್ತಿರಬಹುದು.

ಗುರುಕುಲ ಪದ್ಧತಿಯಿಂದ ಸುಸಂಸ್ಕಾರಯುತ ಮಕ್ಕಳು 

 ಹಿಂದೆ ಭಾರತದಲ್ಲಿ ಗುರುಕುಲ ಪದ್ಧತಿಯಿತ್ತು. ಇಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಯೋಗ್ಯ ಸಂಸ್ಕಾರವನ್ನು ನೀಡಿ ಅವರಿಗೆ ಮೋಕ್ಷದ ದಾರಿಯನ್ನು ತೋರಿಸುತ್ತಿದ್ದರು. ಆದರೆ ಬ್ರಿಟಿಷರ ಕಾಲದಲ್ಲಿ ಬಂದ ಮೆಕಾಲೆಯು ನಮ್ಮ ಸಂಸ್ಕೃತಿಯನ್ನು ಮತ್ತು ದೇವಭಾಷೆಯಾದ ಸಂಸ್ಕೃತವನ್ನೇ ನಾಶ ಮಾಡಲು ಆಂಗ್ಲ ಶಾಲೆಗಳನ್ನು ತೆರೆದನು ಮತ್ತು ಮುಗ್ಧ ಭಾರತೀಯರು ಅವನ ಷಡ್ಯಂತ್ರವನ್ನು ಅರಿಯದೆ ಅದನ್ನೇ ಸರ್ವಶ್ರೇಷ್ಠವೆಂದು ನಂಬಿ ಅದಕ್ಕೆ ಬಲಿಯಾದರು. ಇದರ ಪರಿಣಾಮವಾಗಿ ಮುಂದಿನ ಪೀಳಿಗೆಯೇ ಕುಸಂಸ್ಕಾರದತ್ತ ಸಾಗಿತು.

ಸರ್ವಶ್ರೇಷ್ಠ ಸಂಸ್ಕೃತಿಯನ್ನು ಮರೆತಿರುವುದರ ಪರಿಣಾಮ

 ಇಂದಿನ ಮಕ್ಕಳು, ಆಂಗ್ಲ ಶಾಲೆಯ ಮೆಟ್ಟಿಲನ್ನು ಹತ್ತುವಾಗಲೇ ನಾನು ವಿದ್ಯೆ ಕಲಿತು ಅಮೇರಿಕದಲ್ಲಿ, ಇಂಗ್ಲೆಂಡ್ನಲ್ಲಿ ನೌಕರಿ ಮಾಡುವೆನು ಎಂಬ ಗುರಿ ಇಟ್ಟಿರುತ್ತಾರೆ. ಇದೇ ರೀತಿ ಭಾರತಕ್ಕೆ ಸ್ವಾತಂತ್ರ್ಯವನ್ನು ತರುವಲ್ಲಿ ಸ್ಫೂರ್ತಿದಾಯಕವಾದವಂದೇ ಮಾತರಂಗೀತೆಯನ್ನು ಈಗ ಶಾಲೆಗಳಲ್ಲಿಯೂ ಅಪರೂಪಕ್ಕೊಮ್ಮೆ ಹಾಡಲಾಗುತ್ತಿದೆ. ಆದರೆ ಈಗ ಅದರ ಮೇಲೂ ಕಡಿವಾಣ ಹಾಕಲು ಅಧರ್ಮಿಗಳ ಪ್ರಯತ್ನವಾಗುತ್ತಿದೆ.

ಸಂಸ್ಕೃತಿಯ ಮೇಲಾಗುವ ಹಾನಿಯನ್ನು ತಡೆಗಟ್ಟಲು ಮುಂದಿನಂತೆ ಕೃತಿ ಮಾಡಿ

  • ಜನವರಿ ರಂದು ಯಾರಿಗೂ ಹೊಸವರ್ಷದ ಶುಭಾಶಯಗಳನ್ನು ನೀಡಬೇಡಿ !
  • ಯುಗಾದಿಯಂದು ಆದಷ್ಟು ಹೆಚ್ಚು ಜನರಿಗೆ ಶುಭಾಶಯಪತ್ರ, ದೂರವಾಣಿ, ಕಿರುಸಂದೇಶ (ಎಸ್.ಎಮ್.ಎಸ್.) ಮುಂತಾದವುಗಳ ಮೂಲಕ ಹೊಸವರ್ಷದ ಶುಭಾಶಯಗಳನ್ನು ನೀಡಿ!
  • ಉಗಾದಿಯಂದು ಶುಭಸಂಕಲ್ಪ ಮಾಡಿದರೆ ಅದು ಹೆಚ್ಚು ಫಲಪ್ರದವಾಗಿರುತ್ತದೆ. ಹಾಗಾಗಿ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಪ್ರತಿದಿನ ಗಂಟೆ ಸಮಯ ನೀಡುವ ಸಂಕಲ್ಪ ಮಾಡಿ !
  • ಯಾರಾದರೂ ನಿಮಗೆ ಶುಭಾಶಯ ನೀಡಿದಲ್ಲಿ ಅವರಿಗೆ ಹಿಂದೂ ಧರ್ಮದ ಮಹತ್ವವನ್ನು ಮನವರಿಕೆ ಮಾಡಿಕೊಡಿ !
  • ಮಕ್ಕಳೇ, ಧರ್ಮಾಭಿಮಾನ ಮತ್ತು ದೇಶಾಭಿಮಾನ ಹೆಚ್ಚಿಸಲು ಜನವರಿ ರಂದು ಹೊಸವರ್ಷವನ್ನು ಆಚರಿಸದೇ ಅನೇಕ ಆಧ್ಯಾತ್ಮಿಕ ಹಾಗೂ ನೈಸರ್ಗಿಕ ಕಾರಣಗಳಿರುವ ಯುಗಾದಿಯನ್ನೇ ಹೊಸ ವರ್ಷವೆಂದು ಆಚರಿಸಿ ಮತ್ತು ಇದನ್ನು ಬಂಧು ಬಳಗ ಹಾಗೂ ಮಿತ್ರರಿಗೂ ತಿಳಿಸಿ.

ಮಕ್ಕಳೇ, ರೀತಿಯ ಸಣ್ಣ ಸಣ್ಣ ಕಾರ್ಯದಿಂದ ನಮ್ಮಲ್ಲಿ ಧರ್ಮಾಭಿಮಾನ, ದೇಶಾಭಿಮಾನ ಮೂಡುವುದರಲ್ಲಿ ಸಂಶಯವಿಲ್ಲ. ಭಾರತ ಮಾತೆ ಹೆಮ್ಮೆ ಪಡುವಂತ ಮಕ್ಕಳಾಗಲು ನಾವೆಲ್ಲಾ ಪ್ರಯತ್ನಿಸೋಣ.

Leave a Comment