ಭಾರತೀಯ ಪದ್ಧತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದರ ಮಹತ್ವ !

ಭಾರತೀಯ ಪದ್ಧತಿಯಲ್ಲಿ ಹುಟ್ಟು ಹಬ್ಬವನ್ನು ಆಚರಿಸುವುದರ ಮಹತ್ವ ಹಾಗೂ
ಕೇಕ್ ಮೇಲೆ ಹಚ್ಚಲಾದ ಮೇಣದಬತ್ತಿಯನ್ನು ಆರಿಸುವುದರಿಂದಾಗುವ ದುಷ್ಪರಿಣಾಮಗಳು !

ಪಾಶ್ಚಾತ್ಯ ಪದ್ಧತಿಯಲ್ಲಿ ಹುಟ್ಟು ಹಬ್ಬವನ್ನು ಕೇಕ್ ಮೇಲೆ ಮೇಣದ ಬತ್ತಿಯನ್ನು ಹಚ್ಚಿ ಅದನ್ನು ಆರಿಸಿ ಆಚರಿಸುತ್ತಾರೆ. ಪಾಶ್ಚಾತ್ಯರು ಈ ಪದ್ಧತಿಯಲ್ಲಿ ಮೇಣದ ಬತ್ತಿಯನ್ನು ಊದುವುದರಿಂದ ಕೇಕ್.ನ ಮೇಲೆ ಅನೇಕ ಜೀವಾಣುಗಳು ಬರುತ್ತವೆ ಆದುದರಿಂದ ಈ ಪದ್ಧತಿಯು ಯೋಗ್ಯವಲ್ಲ ಎಂದು ತಿಳಿದಿದ್ದಾರೆ. ಆದುದರಿಂದ ಅವರು ಈ ಪದ್ಧತಿಯ ಮೇಲೆ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ. ಇದು ಸ್ಥೂಲದ ವಿಷಯವಾಗಿದೆ. ಸ್ಥೂಲದಲ್ಲಿನ ಕಾರಣಗಳಿಗಿಂತಲೂ ಸೂಕ್ಷ್ಮದಲ್ಲಿನ ಕಾರಣಗಳ ಪರಿಣಾಮವು ಅನೇಕ ಪಟ್ಟು ಅಧಿಕವಾಗಿರುತ್ತದೆ. ಆದುದರಿಂದ ಹುಟ್ಟುಹಬ್ಬವನ್ನು ಆಚರಿಸುವ ಈ ಪದ್ಧತಿಯು ಅಯೋಗ್ಯವಾಗಿದೆ. ಭಾರತೀಯ ಪದ್ಧತಿಯಲ್ಲಿ (ಹಿಂದೂ ಸಂಸ್ಕೃತಿಯಲ್ಲಿ) ಹುಟ್ಟು ಹಬ್ಬವನ್ನು ವ್ಯಕ್ತಿಗೆ ಆಧ್ಯಾತ್ಮಿಕ ಸ್ಥರದಲ್ಲಿ ಲಾಭವಾಗುವಂತೆ ಆಚರಿಸಲು ಹೇಳಲಾಗಿದೆ. ಇದರಲ್ಲಿ ವ್ಯಕ್ತಿಯ ಹುಟ್ಟು ಹಬ್ಬವನ್ನು ಅವನ ಜನ್ಮ ತಿಥಿಯಂದು ಆಚರಿಸಲು, ಆರತಿ ಮಾಡಲು, ದೇವರಿಗೆ ಹಾಗೂ ಹಿರಿಯರಿಗೆ ನಮಸ್ಕರಿಸಲು ಹೇಳಲಾಗಿದೆ. ಹೀಗೆ ಮಾಡುವುದರಿಂದ ದೇವತೆಗಳ ಹಾಗೂ ಹಿರಿಯರ ಆಶೀರ್ವಾದವು ಲಭಿಸುತ್ತದೆ ಹಾಗೂ ಚೈತನ್ಯವು ಗ್ರಹಣವಾಗುತ್ತದೆ. ಈ ಪದ್ಧತಿಯಲ್ಲಿ ದೀಪವನ್ನು ಆರಿಸುವುದಿಲ್ಲ, ಕೇಕನ್ನು ಕತ್ತರಿಸುವುದಿಲ್ಲ ಹಾಗೂ ಯಾವುದೇ ಗಡಿಬಿಡಿ-ಗೊಂದಲವಿಲ್ಲ. ಹುಟ್ಟು ಹಬ್ಬವನ್ನು ಮಾನಸಿಕ ಸ್ಥರದಲ್ಲಿ ಅಲ್ಲದೇ ಆಧ್ಯಾತ್ಮಿಕ ಸ್ಥರದಲ್ಲಿ ಆಚರಿಸಲು ಹೇಳಲಾಗಿರುವುದರಿಂದ ಈ ಪದ್ಧತಿಯು ಲಾಭದಾಯಕವಾಗಿದೆ.

೧. ಕೇಕ್ ಮೇಲೆ ಊದುವುದರಿಂದ ಕೇಕಿನಲ್ಲಿ ಲಕ್ಷಾಂತರ ಜೀವಾಣುಗಳು ಬಂದು ಮಕ್ಕಳಿಗೆ ಜೀವಾಣುಗಳಿಂದ ತೊಂದರೆ ಆಗುವ ಸಾಧ್ಯತೆ ಇರುವುದು : ಕೆಲವರು ಹುಟ್ಟು ಹಬ್ಬದ ನಿಮಿತ್ತ ಕೇಕ್ ಮೇಲೆ ಮೇಣದ ಬತ್ತಿಯನ್ನು ಹಚ್ಚುತ್ತಾರೆ. ನಂತರ ಊದಿ ಆರಿಸುತ್ತಾರೆ. ಹೀಗೆ ಊದುವುದರಿಂದ ಗಾಳಿಯೊಂದಿಗೆ ಕೇಕಿನಲ್ಲಿ ಲಕ್ಷಾಂತರ ಜೀವಾಣುಗಳು ಬರುತ್ತವೆ. ಇಂತಹ ಜೀವಾಣುಗಳಿಂದ ಕೂಡಿದ ಕೇಕ ನಿಮಗಾಗಿ ಹಿತಕಾರಿಯಲ್ಲದಿರುವುದರಿಂದ ಪಾಶ್ಚಾತ್ಯ ಪದ್ಧತಿಯಲ್ಲದೇ ಭಾರತೀಯ ಪದ್ಧತಿಯಿಂದ ಹುಟ್ಟುಹಬ್ಬವನ್ನು ಆಚರಿಸಬೇಕು.

೨. ಆಸ್ಟ್ರೇಲಿಯಾದಲ್ಲಿ ಇದರ ಮೇಲೆ ಸಂಶೋಧನೆಯಾಗಿ ಕೇಕ್ ಮೇಲೆ ಉರಿಯುತ್ತಿರುವ ಮೇಣದ ಬತ್ತಿಯನ್ನು ಆರಿಸಲು ನಿರ್ಬಂಧವನ್ನು ಹೇರಲಾಗಿರುವುದು : ಆಸ್ಟ್ರೇಲಿಯಾದ ರಾಷ್ಟ್ರೀಯ ಆರೋಗ್ಯ ಹಾಗೂ ಚಿಕಿತ್ಸಾ ಸಂಶೋಧನ ಪರಿಷತ್ತು ಪ್ರಯೋಗದ ಮೂಲಕ ಹುಟ್ಟು ಹಬ್ಬದ ಕೇಕ್ ಮೇಲೆ ಉರಿಸಲಾದ ಮೇಣದ ಬತ್ತಿಯನ್ನು ಒಂದೇ ಬಾರಿ ಊದುವುದರಿಂದ ಊದುವವರ ಬಾಯಿಯಿಂದ ಹೊರ ಬಂದ ಗಾಳಿಯೊಂದಿಗೆ ಕೇಕಿನ ಮೇಲೆ ಜೀವಾಣುಗಳೂ ಪಸರಿಸುತ್ತವೆ. ಇದರಿಂದ ಮಕ್ಕಳಿಗೆ ಅನೇಕ ಪ್ರಕಾರದ ಜೀವಾಣುಗಳಿಂದ ತೊಂದರೆಗಳಾಗುವ ಸಾಧ್ಯತೆಗಳಿವೆ.

ಇದಕ್ಕಾಗಿ ಆಸ್ಟ್ರೇಲಿಯಾದಲ್ಲಿ ಹುಟ್ಟು ಹಬ್ಬದಂದು ಕೇಕ್ ಮೇಲೆ ಉರಿಯುತ್ತಿರುವ ಮೇಣದ ಬತ್ತಿಯನ್ನು ಆರಿಸುವುದಕ್ಕೆ ನಿರ್ಬಂಧವನ್ನು ಹೇರಲಾಗಿದೆ.

ಆಧಾರ : ದೈನಿಕ ಹಿಂದುಸ್ಥಾನ, ಜನವರಿ ೮೨೦೧೩, ಮಾಸಿಕ ಋಷಿಪ್ರಸಾದ, ಮಾರ್ಚ ೨೦೧೩

Leave a Comment