ಮೊಬೈಲಿನ ದುರಪಯೋಗ ಮಾಡಬೇಡಿ !

ಇತ್ತೀಚೆಗೆ ಎಲ್ಲ ಮಕ್ಕಳಿಗೆ ಮೊಬೈಲ ಫೋನಿನ ಹವ್ಯಾಸ ಉಂಟಾಗಿದೆ. ಅನೇಕ ಮಕ್ಕಳು ಯಾವಾಗಲೂ ಮೊಬೈಲ ಫೋನನ್ನು ನೋಡುತ್ತಿರುವುದು ಕಂಡುಬರುತ್ತಿದೆ. ಇತ್ತೀಚೆಗೆ ಮಕ್ಕಳು ‘ಅಪ್ಪ ನನ್ನ ಸ್ನೇಹಿತನು ಹೊಸ ಸ್ಮಾರ್ಟಫೋನ ಖರೀದಿಸಿದ್ದಾನೆ, ನನಗೂ ಇಂತಹದೇ ಮೊಬೈಲ ಬೇಕು, ನನಗೆ ಯಾವಾಗ ಖರೀದಿಸಿ ಕೊಡುತ್ತೀರಿ ?’ ಎಂದು ಕೇಳುತ್ತಾರೆ. ಮಕ್ಕಳೇ, ತಾವೂ ಇದೇ ರೀತಿಯಲ್ಲಿ ತಮ್ಮ ತಂದೆಗೂ ಕೇಳಿರಬಹುದಲ್ಲವೇ ? ನಿಮ್ಮ ಬಳಿಯೂ ಮೊಬೈಲ ಇರಬೇಕಲ್ಲವೇ ?

ಮಕ್ಕಳಿಂದ ಮೊಬೈಲಿನ ದುರುಪಯೋಗವು ಹೇಗೆ ಆಗುತ್ತದೆ?

೧. ಅನೇಕ ಮಕ್ಕಳಿಗೆ ಮೊಬೈಲಿನಲ್ಲಿ ವಿವಿಧ ಅಪ್ಲಿಕೇಶನಗಳನ್ನು (ಆ್ಯಪ್ಸ) ಹುಡುಕಲು ಆಸಕ್ತಿ ಇರುತ್ತದೆ. ಇದರಿಂದಾಗಿ ಅವರು ಮೊಬೈಲಿನಲ್ಲಿ ಗಂಟೆಗಟ್ಟಲೆ ಸಮಯ ‘ಗೇಮ್ಸ್’ ಆಡುತ್ತ ಕಳೆಯುತ್ತಿರುತ್ತಾರೆ.

೨. ಮಕ್ಕಳು ತಮ್ಮ ಮಿತ್ರರು ಹಾಗೂ ಸ್ನೇಹಿತೆಯರಿಗೆ ಅನಾವಶ್ಯಕ ಅಥವಾ ಅಯೋಗ್ಯ ಸಂದೇಶಗಳನ್ನು ಕಳಿಸುತ್ತಿರುತ್ತಾರೆ.

೩. ತಮ್ಮ ಸ್ನೇಹಿತ-ಸ್ನೇಹಿತೆಯರಿಗೆ ಅನಾವಶ್ಯಕವಾಗಿ ಮಿಸ್ಡ-ಕಾಲ್ ಕೊಡುತ್ತಿರುತ್ತಾರೆ.

೪. ಇಂಟರನೆಟ್‌ನಲ್ಲಿ ಚಲನಚಿತ್ರ ಗೀತೆ ಅಥವಾ ವೀಡಿಯೋಗಳನ್ನು ನೋಡುತ್ತಿರುತ್ತಾರೆ ಹಾಗೂ ಅವುಗಳನ್ನು ಡೌನಲೋಡ್ ಮಾಡುತ್ತಾರೆ.

ಇವುಗಳಿಂದ ಮಕ್ಕಳ ಸಮಯವು ವ್ಯರ್ಥವಾಗುತ್ತದೆ. ಓದಿಗೆ ಕಡಿಮೆ ಸಮಯ ಸಿಗುತ್ತದೆ. ನಿರಂತರವಾಗಿ ಮೊಬೈಲನ್ನು ಬಳಸುವುದರಿಂದ ಕಣ್ಣುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ಕಡಿಮೆ ವಯಸ್ಸಿನಲ್ಲಿಯೇ ಕನ್ನಡಕ ಬರುತ್ತದೆ. ಹಾಗೆಯೇ ಜೀವನಕ್ಕೆ ಉಪಯುಕ್ತವಾದ ವಾಚನ-ಚಿಂತನೆಯನ್ನು ಮಾಡಲು ಸಮಯ ಸಿಗುವುದಿಲ್ಲ.

೫. ಅನೇಕ ಬಾರಿ ಮಕ್ಕಳು ಮೊಬೈಲನ್ನು ಶಾಲೆಗೆ ಕೊಂಡೊಯ್ಯುತ್ತಾರೆ. ಹೀಗೆ ಮಾಡುವುದರಿಂದ ಅನೇಕ ಬಾರಿ ಅಧ್ಯಯನದ ಕಡೆಗೆ ಅವರ ಗಮನ ಇರುವುದಿಲ್ಲ. ಆದುದರಿಂದ ಅನೇಕ ಶಾಲೆಗಳಲ್ಲಿ ಮೊಬೈಲನ್ನು ನಿಷೇಧಿಸಲಾಗಿದೆ.

ಮಕ್ಕಳೇ, ಮೊಬೈಲಿನ ಸದುಪಯೋಗವನ್ನು ಹೇಗೆ ಪಡೆಯುವುದು ?

ಮೊಬೈಲಿನಿಂದ ರಾಷ್ಟ್ರ ಹಾಗೂ ಧರ್ಮಕ್ಕೆ ಸಂಬಂಧಿಸಿದ ಸಂದೇಶಗಳನ್ನು ಕಳಿಸಿ ! : ವರ್ತಮಾನ ಕಾಲದಲ್ಲಿ ವಾಟ್ಸಾಪ್‌ ಮೂಲಕ ಪರಸ್ಪರ ವಿನೋದದ ವೀಡಿಯೋ, ಒಗಟುಗಳು, ಕಾವ್ಯ, ಶಾಯರಿಗಳು ಇತ್ಯಾದಿ ಮನೋರಂಜನೆಯ ಸಂದೇಶಗಳನ್ನು ಕಳಿಸಲಾಗುತ್ತದೆ. ಮಕ್ಕಳೇ, ಇದೇ ರೀತಿಯಲ್ಲಿ ಸಮಯವನ್ನು ವ್ಯರ್ಥ ಮಾಡುವ ಬದಲು ತಮ್ಮ ಸಂಪರ್ಕಕ್ಕೆ ಬರುವ ಹೆಚ್ಚಿನ ಜನರಿಗೆ ರಾಷ್ಟ್ರಹಿತ ಹಾಗೂ ಧರ್ಮಶಿಕ್ಷಣವನ್ನು ನೀಡುವ ಸಂದೇಶಗಳನ್ನು ಕಳಿಸಿ. ಈ ಸಂದೇಶಗಳ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.

ಅ. ತಮ್ಮ ಆದರ್ಶ ಯಾರು ? ಆದರ್ಶ ವ್ಯಕ್ತಿತ್ವದ ಮುಖವಾಡವನ್ನು ಧರಿಸಿರುವ ಆದರೆ ಜೀವನದಲ್ಲಿ ಅನೇಕ ಬಾರಿ ಅಯೋಗ್ಯ ಆಚರಣೆಗಳನ್ನು ಮಾಡುವ ಚಲನಚಿತ್ರ-ನಟರಲ್ಲ, ಬದಲಾಗಿ ರಾಷ್ಟ್ರ ಹಾಗೂ ಧರ್ಮಕ್ಕಾಗಿ ತನು-ಮನ-ಧನದ ತ್ಯಾಗ ಮಾಡುವ ರಾಷ್ಟ್ರಪುರುಷರಿದ್ದಾರೆ.
ಆ. ರಾಷ್ಟ್ರಾಭಿಮಾನವನ್ನು ಹೆಚ್ಚಿಸಲು ದೇಶಭಕ್ತಿಯ ಕುರಿತಾದ ಹಾಡುಗಳನ್ನು ಕೇಳಿ.
ಇ. ಹುಡುಗಿಯರು/ಸ್ತ್ರೀಯರು ಪ್ರತಿದಿನ ಗೋಲಾಕಾರದಲ್ಲಿ ಕುಂಕುಮವನ್ನು ಹಚ್ಚಿ ಹಾಗೆಯೇ ಹುಡುಗರು/ಪುರುಷರು ಉದ್ದನೆಯ ತಿಲಕವನ್ನು ಹಚ್ಚಿ !
ಈ. ಮಕ್ಕಳೇ ಕೈ ಜೋಡಿಸಿ ತಲೆಯನ್ನು ಸ್ವಲ್ಪ ಬಾಗಿಸಿ ನಮಸ್ಕಾರ ಮಾಡಿ !
ಉ. ವಿವಾಹ ಸಮಾರಂಭ, ಶಿಲಾನ್ಯಾಸ, ದೀಪಪ್ರಜ್ವಲನೆ ಇತ್ಯಾದಿ ಪ್ರಸಂಗಗಳಲ್ಲಿ ವ್ಯಾಸಪೀಠದ ಮೇಲೆ ಚಪ್ಪಲಿಯನ್ನು ಹಾಕಬೇಡಿ.

ಮೊಬೈಲಿನ ಸಂದರ್ಭದಲ್ಲಿ ಯಾವ ಕಾಳಜಿಯನ್ನು ತೆಗೆದುಕೊಳ್ಳಬೇಕು ?

೧. ಮೊಬೈಲನ್ನು ಯಾವಾಗಲೂ ಶರೀರದ ಬಳಿ ಇಟ್ಟುಕೊಳ್ಳಬೇಡಿ : ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಮೊಬೈಲಿನಿಂದ ಹೊರಸೂಸುವ ತರಂಗಗಳಿಂದ ಶರೀರದ ಮೇಲೆ ನಿಧಾನವಾಗಿ ವಿಪರೀತ ಪರಿಣಾಮಗಳಾಗುತ್ತವೆ ಆದುದರಿಂದ ಅವುಗಳನ್ನು ದೂರದಲ್ಲಿಡಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಂದೆ ಕೆಲವು ಉಪಯುಕ್ತ ಸೂಚನೆಗಳನ್ನು ನೀಡುತ್ತಿದ್ದೇವೆ.

ಅ. ಮೊಬೈಲನ್ನು ‘ಪ್ಯಾಂಟ್’ ಅಥವಾ ‘ಶರ್ಟ್’ ಜೇಬಿನಲ್ಲಿ ಇಡಬೇಡಿ. ಮೊಬೈಲನ್ನು ತಮ್ಮ ಶರೀರದಿಂದ ದೂರವಿಡಲು ಯಾವುದಾದರೂ ಸ್ಥಳವನ್ನು ನಿಶ್ಚಯಿಸಿ ಹಾಗೂ ಕೆಲಸವಿರುವಾಗ ಮಾತ್ರ ಅದನ್ನು ಎತ್ತಿ.
ಆ. ಮಾತನಾಡುವುದು ಆವಶ್ಯಕವಿಲ್ಲದಿದ್ದರೆ ಸಂಬಂಧಿತರಿಗೆ ‘ಎಸ್. ಎಮ್. ಎಸ್’ ಅಥವಾ ವಾಟ್ಸಾಪ್ ಮೂಲಕ ಸಂದೇಶವನ್ನು ಕಳಿಸಿ
ಇ. ಮೊಬೈಲ ಮೂಲಕ ಅನಾವಶ್ಯಕವಾಗಿ ಮಾತನಾಡುವುದು/ ಹರಟೆ ಹೊಡೆಯುವುದು ಮಾಡಬೇಡಿ.
ಈ. ಮೊಬೈಲನ್ನು ಹತ್ತಿರವಿಟ್ಟು ಮಲಗಬೇಡಿ. (ಮಲಗುವ ಮೊದಲು ಮೊಬೈಲನ್ನು ಬಂದ್ ಮಾಡಿದರೆ ಉತ್ತಮ.)
ಉ. ಮೊಬೈಲ ಚಾರ್ಜ ಆಗುವಾಗ ಮೊಬೈಲಿನಲ್ಲಿ ಮಾತನಾಡಬೇಡಿ. ಹೀಗೆ ಮಾಡುವುದರಿಂದ
* ಮೊಬೈಲಿನಲ್ಲಿ ಏನಾದರೂ ಸಮಸ್ಯೆ ಇದ್ದರೆ ಅಥವಾ ವಿದ್ಯುತ್‌ಗೆ ಹಾಕಿರುವುದರಿಂದ ಮಾತನಾಡುವವರಿಗೆ ವಿದ್ಯುತ್ ಆಘಾತವಾಗಬಹುದು.
* ಮೊಬೈಲಿನ ಬ್ಯಾಟರಿಯು ಸರಿ ಇಲ್ಲದಿದ್ದರೆ ಅದು ಸ್ಫೋಟವಾಗಿ ದುರ್ಘಟನೆಯಾಗುವ ಸಾಧ್ಯತೆ ಇರುತ್ತದೆ.
* ಧಾತುಗಳಿಂದ ತಯಾರಾದ ಫ್ರೇಮ್ ಇರುವ ಕನ್ನಡಕವನ್ನು ಧರಿಸಿ ಅಥವಾ ಕೂದಲು ಒದ್ದೆ ಇರುವಾಗ ಮೊಬೈಲನ್ನು ಕಿವಿಗೆ ಹಾಕಬೇಡಿ.
* ಸಿಗ್ನಲ್ ಕಡಿಮೆ ಇರುವಲ್ಲಿ ಮೊಬೈಲನ ಮೂಲಕ ಸಂಪರ್ಕ ಮಾಡಬೇಡಿ. ರೇಡಿಯೋ-ಫ್ರೀಕ್ವೆನ್ಸಿಯನ್ನು (ರೇಂಜ್) ಪಡೆಯಲು ಮೊಬೈಲ್ ತನ್ನ ಟ್ರಾನ್ಸಮಿಶನ್ ಪವರನ್ನು ಹೆಚ್ಚಿಸುತ್ತದೆ. ಇದರಿಂದ ಕಿರಣಗಳು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತವೆ.
ಊ. ನಡೆದಾಡುವಾಗ ಮೊಬೈಲನ್ನು ಎದೆಯ ಹತ್ತಿರ ಒಯ್ಯಬೇಡಿ, ಏಕೆಂದರೆ ಮೊಬೈಲಿನ ಪ್ರತಿ ಒಂದು-ಎರಡು ನಿಮಿಷದಲ್ಲಿ ನೆಟ್‌ವರ್ಕ ಹುಡುಕಲು ಶಕ್ತಿಶಾಲಿ ಕಿರಣಗಳನ್ನು ಹೊರಗೆ ಪ್ರಕ್ಷೇಪಿಸುತ್ತಿರುತ್ತದೆ.
ಎ. ವಾಹನವನ್ನು ಚಲಾಯಿಸುವಾಗ ಮೊಬೈಲಿನಲ್ಲಿ ಮಾತನಾಡಬಾರದು ಎಂದು ನೆನಪಿಡಿ. ಮಾತನಾಡುವುದರಿಂದ ಗಮನವು ವಿಚಲಿತವಾಗಿ ದುರ್ಘಟನೆಗಳಾಗಬಹುದು.
ಏ. ಮೊಬೈಲಿನ ರಿಂಗಟೋನ ಎಂದು ಸ್ಪೂರ್ತಿಗೀತೆ, ಕ್ಷಾತ್ರಗೀತೆ, ಶ್ಲೋಕ, ಸ್ತೋತ್ರ, ಆರತಿ ಅಥವಾ ಭಜನೆಗಳ ಕೆಲವು ಪಂಕ್ತಿಗಳು ಅಥವಾ ನಾಮಜಪ ಇಡಿ. ಇದರಿಂದ ವಾತಾವರಣದಲ್ಲಿ ಆನಂದದಾಯಕ (ಸತ್ತ್ವಗುಣಿ) ತರಂಗಗಳು ಹರಡುತ್ತವೆ.

ಹಾಗಿದ್ದರೆ ಇಂದಿನಿಂದ ಉತ್ತಮ ಕಾರ್ಯಗಳಿಗಾಗಿ ಮೊಬೈಲಿನ ಉಪಯೋಗವನ್ನು ಮಾಡೋಣವಲ್ಲವೇ ?