ನಮ್ಮಲ್ಲಿ ನೇತೃತ್ವ ಗುಣವನ್ನು ಹೇಗೆ ಹೆಚ್ಚಿಸುವಿರಿ?

ನಿಮ್ಮಲ್ಲಿ ಅನೇಕ ಮಕ್ಕಳಿಗೆ ಶಾಲೆಯಲ್ಲಿ ತಮ್ಮ ಕಕ್ಷೆಯ ಮಾನಿಟರ್ ಅಥವ ಕ್ಯಾಪ್ಟನ್ ಆಗಲು ಇಷ್ಟವಾಗುತ್ತದಲ್ಲವೇ? ಆದರೆ ನನ್ನಿಂದ ಅದು ಸಾಧ್ಯವಾಗುವುದೇನು, ಎಂದು ನಿಮ್ಮ ಪೈಕಿ ಅನೇಕ ಮಕ್ಕಳಿಗೆ ಅನಿಸುತ್ತಿರಬಹುದು. ಮಕ್ಕಳೇ ಈ ಪದವಿಗಾಗಿ ತಮ್ಮಲ್ಲಿ ನೇತೃತ್ವ ಗುಣವಿರುವುದು ಅಗತ್ಯವೆಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ.

ಯಾವುದೇ ಕೆಲಸವನ್ನು ಸಂಘಟಿತವಾಗಿ ಹಾಗೂ ಚೆನ್ನಾಗಿ ಮಾಡಬೇಕೆಂದರೆ ಅದಕ್ಕೆ ಒಳ್ಳೆಯ ಮುಖಂಡರಿರಬೇಕು. ಮಕ್ಕಳೇ ಛತ್ರಪತಿ ಶಿವಾಜಿ ಮಹಾರಾಜರು ಬೆರಳೆಣಿಕೆಯಷ್ಟು ಸೈನಿಕರ ಸಹಾಯದಿಂದ ಶತ್ರುಗಳೊಂದಿಗೆ ಹೋರಾಡಿ ‘ಹಿಂದೂ ಸ್ವರಾಜ್ಯ’ವನ್ನು ಸ್ಥಾಪಿಸಲು ಸಾಧ್ಯವಾಯಿತು; ಏಕೆಂದರೆ ಅವರು ಓರ್ವ ಉತ್ತಮ ‘ಮುಖಂಡ’ರಾಗಿದ್ದರು !

ಅ. ಒಳ್ಳೆಯ ಮುಖಂಡನಾಗಲು ಅಗತ್ಯವಾಗಿರುವ ಕೆಲವು ಒಳ್ಳೆಯ ಗುಣಗಳನ್ನು ಅರಿತುಕೊಳ್ಳೋಣ

1. ತಾನಾಗಿ ಮುಂದಾಳತ್ವ ವಹಿಸುವುದು

ಯಾವುದೇ ಕಾರ್ಯವನ್ನು ಮಾಡಬೇಕೆಂದರೆ ಮುಂದಾಳತ್ವ ವಹಿಸುವ ಸ್ವಭಾವವನ್ನು ಮಾಡಿಕೊಳ್ಳಿರಿ. ಸಂಕಟಕಾಲದಲ್ಲಿ ಮುಖಂಡನು ಎಲ್ಲರಿಗಿಂತ ಎದುರು ಹೋಗಿ ನಿಲ್ಲಬೇಕಾಗಿರುತ್ತದೆ. ಪೂನಾದ ಲಾಲ್ ಮಹಲ್‌ನಲ್ಲಿ ಡೇರೆ ಹಾಕಿ ಕುಳಿತುಕೊಂಡಿದ್ದ ಶಾಹಿಸ್ತಾಖಾನನಿಗೆ ಪಾಠ ಕಲಿಸಲು ಛತ್ರಪತಿ ಶಿವಾಜಿ ಮಹಾರಾಜರು ಕೇವಲ 400 ಸೈನಿಕರ ಜೊತೆಗೆ ಸೇರಿ ಲಾಲ್ ಮಹಲ್‌ನ ಮೇಲೆ ಆಕ್ರಮಣ ನಡೆಸಿದ್ದರು. ಇಂತಹ ಅತ್ಯಂತ ಸಾಹಸೀ ಆಕ್ರಮಣದ ನೇತೃತ್ವವನ್ನು ಸ್ವತಃ ಶಿವಾಜಿ ಮಹಾರಾಜರೇ ವಹಿಸಿದ್ದರು !

2. ಅಧ್ಯಯನ ಮಾಡಿ ತೀರ್ಮಾನ ತೆಗೆದುಕೊಳ್ಳುವುದು

ಮಕ್ಕಳೇ, ನೇತೃತ್ವ ವಹಿಸಲು ಮಹತ್ವವಾದುದೇನೆಂದರೆ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಾಗ ಸಮಯ ಪರಿಣಾಮದ ವಿಚಾರವನ್ನು ಮಾಡಿರಿ. ಮುಖಂಡರು ತೆಗೆದುಕೊಂಡ ತೀರ್ಮಾನದಲ್ಲಿ ತಪ್ಪಾದರೆ ಅನೇಕ ಜನರಿಗೆ ದೊಡ್ಡ ಹಾನಿ ಆಗಬಹುದು. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ತರಗತಿಯ ಮಕ್ಕಳೊಂದಿಗೆ, ಸಹದ್ಯೋಗಿಗಳೊಂದಿಗೆ, ಶಿಕ್ಷಕರು ಹಾಗೂ ಹಿರಿಯರ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಅಂದರೆ ವಿಚಾರ-ವಿಮರ್ಶೆ ಮಾಡುವುದು ಅಗತ್ಯವಾಗಿದೆ. ಅವರ ಸೂಚನೆಯನ್ನು ಒಪ್ಪಿಕೊಳ್ಳುವುದು ಅಗತ್ಯವಾಗಿರುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ವಿವಿಧ ಪ್ರಸಂಗಗಳಲ್ಲಿ ಜೀಜಾಮಾತೆ, ಪಂತಾಜೀ ಗೋಪೀನಾಥ ಬೋಕಿಲ್‌ರವರಂತಹ ಹಿರಿಯರೊಂದಿಗೆ ವಿಚಾರ-ವಿಮರ್ಶೆ ನಡೆಸುತ್ತಿದ್ದರು !

3. ಎಲ್ಲರನ್ನೂ ಕರೆದುಕೊಂಡು ಮುನ್ನಡೆಯುವುದು

ಮಕ್ಕಳೇ, ಮುಖಂಡನ ಗುಣವೇನೆಂದರೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಮುನ್ನಡೆಯುವುದು. ಪ್ರತಿಯೊಂದು ಕಾರ್ಯದಲ್ಲಿ ಎಲ್ಲರ ಸಹಭಾಗ ಸಮಾನವಾಗಿರುವಂತೆ ಗಮನ ನೀಡುವುದು. ಆದ್ದರಿಂದ ಎಂದಿಗೂ ತಮ್ಮ ಅಭಿಪ್ರಾಯವನ್ನು ಬೇರೆಯವರ ಮೇಲೆ ಹೇರಬಾರದು ಹಾಗೂ ಅವರ ಸಹಭಾಗ ಕೂಡ ಇದರಲ್ಲಿ ಇರಬೇಕು. ಛತ್ರಪತಿ ಶಿವಾಜಿ ಮಹಾರಾಜರ ಶತ್ರುವಿನ ಮೇಲೆ ಆಕ್ರಮಣದ ಯೋಜನೆ ರೂಪಿಸುವ ಮುನ್ನ ಉಪಾಯಗಳ ಬಗ್ಗೆ ಚರ್ಚಿಸಿ ಸೈನಿಕರ ಅಭಿಪ್ರಾಯವನ್ನು ಸಹ ಕೇಳುತ್ತಿದ್ದರು !

4. ಜೊತೆಗಾರರಿಗೆ ಆಧಾರವೆನಿಸುವಂತಹ ವ್ಯವಹಾರ ಮಾಡಿ

ಮಕ್ಕಳೇ, ಶಿಸ್ತು ಮುಖಂಡನ ಗುಣವಾಗಿರುತ್ತದೆ. ಆದ್ದರಿಂದ ಸಹಚರರಲ್ಲಿ ಶಿಸ್ತು ಬರಲು ಸಮಯ ಬಂದಾಗ ಕಠೋರವಾಗಿ ವ್ಯವಹರಿಸಬೇಕು; ಆದರೆ ಆಯಾ ಸಮಯದಲ್ಲಿ ಅವರಿಗೆ ಪ್ರೀತಿ ನೀಡಿ ಆಧಾರ ಸಹ ನೀಡಬೇಕು. ಅಫಝಲ್‌ಖಾನನು ಪ್ರತಾಪಗಡದ ಮೇಲೆ ಆಕ್ರಮಣ ನಡೆಸಲು ಬರುತ್ತಿರುವಾಗ ಖಂಡೋಜೀ ಖೋಪಡೆಯು ಅವನ ಪಕ್ಷ ಸೇರಿ ಛತ್ರಪತಿ ಶಿವಾಜಿ ಮಹಾರಾಜರಿಗೆ ವಿಶ್ವಾಸಘಾತ ಮಾಡಿದನು. ಆಗ ಛತ್ರಪತಿ ಶಿವಾಜಿ ಮಹಾರಾಜರು ಅವನಿಗೆ ಕಠೋರ ಶಿಕ್ಷೆ ನೀಡಿದರು. ಅದೇ ಶಿವಾಜಿ ಮಹಾರಾಜರು ಅಫಝಲ್‌ಖಾನನ ಮೇಲೆ ಆಕ್ರಮಣ ನಡೆಸುವ ಮುನ್ನ ಖಾನನ ಸೇನೆಯಲ್ಲಿದ್ದ ಮರಾಠೀ ಸರದಾರರ ಪರಿವಾರದವರ ಬಗ್ಗೆ ಚಿಂತನೆ ಮಾಡಿದ್ದರು ಆ ಪರಿವಾರಗಳಿಗೆ ಕಷ್ಟವಾಗಬಾರದು ಎಂದು ಆ ಪರಿವಾರದವರನ್ನು ಸುರಕ್ಷಿತ ಸ್ಥಳಕ್ಕೆ ಹೋಗಲು ಆಜ್ಞೆ ಸಹ ನೀಡಲಾಯಿತು.

5. ಜೊತೆಗಾರರಿಗೆ ನಿರಂತರ ಪ್ರೋತ್ಸಾಹ ನೀಡುವುದು

ಮಕ್ಕಳೇ ಮುಖಂಡರು ತಮ್ಮ ಜೊತೆಗಾರರಿಗೆ ವಿಶೇಷವಾಗಿ ಚೆನ್ನಾಗಿ ಕಾರ್ಯ ಮಾಡುವವರಿಗೆ ಪ್ರೋತ್ಸಾಹ ನೀಡುತ್ತಾರೆ. ಇದರಿಂದ ಅವರಲ್ಲಿ ಕಾರ್ಯ ಮಾಡುವ ಉತ್ಸಾಹವು ಹೆಚ್ಚಾಗುತ್ತದೆ ಹಾಗೂ ಅವರು ಇನ್ನೂ ಚೆನ್ನಾಗಿ ಕಾರ್ಯ ಮಾಡುವರು. ಛತ್ರಪತಿ ಶಿವಾಜಿ ಮಹಾರಾಜರು ಪ್ರತಿಯೊಂದು ಯುದ್ಧದಲ್ಲಿಯೂ ಒಳ್ಳೆಯ ಕೆಲಸ ಮಾಡಿದ ಸೈನಿಕರಿಗೆ ಪುರಸ್ಕಾರ ನೀಡಿ ಅವರ ಉತ್ಸಾಹವನ್ನು ಹೆಚ್ಚಿಸುತ್ತಿದ್ದರು.

6. ಸಂಘಭಾವದಿಂದ ಅಂದರೆ ಒಟ್ಟಾಗಿರಲು ಪ್ರೇರಣೆ ನೀಡುವುದು

ಮಕ್ಕಳೇ ನೇತಾರರು ಯಾವತ್ತೂ ತಮ್ಮ ಸ್ವಾರ್ಥದ ವಿಚಾರ ಮಾಡುವುದಿಲ್ಲ. ಅವರು ಸ್ಥಿತಿಯನ್ನು ಸರಿಯಾಗಿ ಅರಿತುಕೊಳ್ಳುತ್ತಾರೆ. ಪ್ರತಿಯೊಂದು ಸ್ಥಿತಿಯಲ್ಲಿಯೂ ತಮ್ಮ ಜೊತೆಗಾರರನ್ನು ಸಂಘಭಾವದಿಂದ ಅಂದರೆ ಒಟ್ಟಾಗಿ ಇರಲು ಪ್ರೇರಣೆ ನೀಡುತ್ತಾರೆ. ಅವರು ತಮ್ಮ ಜೊತೆಗಾರರಿಗೆ ಏನು ಹೇಳುತ್ತಾರೆಂದರೆ, ನಾವು ಸ್ವಂತ ಬಗ್ಗೆ ವಿಚಾರವನ್ನು ಮಾಡಬಾರದು, ಎಲ್ಲರ ಬಗ್ಗೆ ವಿಚಾರ ಮಾಡಿ ತ್ಯಾಗ ಮಾಡಬೇಕು. ಆದ್ದರಿಂದ ಮುಖಂಡನು ಮೊದಲು ತ್ಯಾಗ ಮಾಡಬೇಕಾಗುತ್ತದೆ.

7. ಸಂಕಟಕಾಲದಲ್ಲಿ ಸ್ವತಃ ಧೈರ್ಯದಿಂದಿದ್ದು ಸಂಗಡಿಗರಿಗೆ ಧೈರ್ಯ ನೀಡುವುದು

ಮಕ್ಕಳೇ, ಎಂತಹ ಸಂಕಟ ಕಾಲ ಬಂದರೂ ನೇತಾರರು ಯಾವತ್ತೂ ತಮ್ಮ ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಅವರು ಸ್ವತಃ ಧೈರ್ಯದಿಂದಿದ್ದು ತಮ್ಮ ಜೊತೆಗಾರರಲ್ಲಿಯೂ ಸಹ ಧೈರ್ಯ ತುಂಬುತ್ತಾರೆ. ಅವರ ಮನಸ್ಸಿನಲ್ಲಿ ಎಂದಿಗೂ ಕೂಡ ‘ಈಗೇನು ಆಗುವುದು?’ ಎಂಬ ಚಿಂತೆಯ ವಿಚಾರ ಬರುವುದಿಲ್ಲ. ಅವರು ತುಂಬಾ ಸಾಹಸಿಗಳಾಗಿರುತ್ತಾರೆ. ಅವರಿಗೆ ಕೇವಲ ಸಂಕಟಕಾಲದಲ್ಲಿ ಧೈರ್ಯವನ್ನು ಕಳೆದುಕೊಳ್ಳಬಾರದು ಎಂಬುದಷ್ಟೇ ತಿಳಿದಿರುತ್ತದೆ. ಅವರಿಗೆ ಆತ್ಮವಿಶ್ವಾಸವಿರುತ್ತದೆ ಹಾಗೂ ಅವರು ತಮ್ಮ ಜೊತೆಗಾರರಲ್ಲಿಯೂ ಆತ್ಮವಿಶ್ವಾಸ ಬೆಳೆಸಲು ಪ್ರಯತ್ನಿಸುತ್ತಾರೆ.

ಮಕ್ಕಳೇ, ಛತ್ರಪತಿ ಶಿವಾಜಿ ಮಹಾರಾಜರು ಚಿಕ್ಕಂದಿನಿಂದಲೇ ತಮ್ಮಲ್ಲಿ ನೇತೃತ್ವಗುಣವನ್ನು ಅಳವಡಿಸಿಕೊಂಡಿದ್ದರು; ಆದ್ದರಿಂದಲೇ ಅವರಿಗೆ ಮುಂದೆ ಮಹಾನ್ ಕಾರ್ಯ ಮಾಡಲು ಸಾಧ್ಯವಾಯಿತು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ! ಹಾಗಾದರೆ ಮಕ್ಕಳೇ ಈ ಎಲ್ಲ ಗುಣಗಳನ್ನು ತಮ್ಮಲ್ಲಿ ಅಳವಡಿಸಿಕೊಂಡು ತಾವು ಕೂಡ ನೇತೃತ್ವ ವಹಿಸುವಿರಲ್ಲವೇ?

Leave a Comment