ಪ್ರಾಣ ಅರ್ಪಿಸಿ ಗ್ರಂಥಗಳನ್ನು ರಕ್ಷಿಸಿರಾಷ್ಟ್ರೀಯ ಅಸ್ಮಿತೆಯನ್ನು ಕಾಪಾಡುವ ಭಾರತೀಯರು!

೬ನೇ ಶತಕದಲ್ಲಿ ಚೀನಿ ಪ್ರವಾಸಿ ಹ್ಯೂನ್ ತ್ಸಾಂಗ್ಧರ್ಮ ಭೂಮಿಯಾಗಿರುವ ಭಾರತದ ದರ್ಶನವನ್ನು ಮಾಡುವ ಸಲುವಾಗಿಗೋಬಿ ಮರುಭೂಮಿಯನ್ನು ದಾಟಿ ಭಾರತಕ್ಕೆ ಬಂದರು. ಬೌದ್ಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ,ಬಿಹಾರದ ನಲಂದಾ ವಿಶ್ವವಿದ್ಯಾಲಯಕ್ಕೆಬಂದು,ಭಾರತೀಯ ಪರಂಪರೆ, ಸಮಾಜ ಮತ್ತು ಕಲೆ ಇತ್ಯಾದಿಗಳ ಅಧ್ಯಯನವನ್ನು ಕೆಲವು ವರ್ಷಗಳ ವರೆಗೆ ಮಾಡಿದರು.

ನಾಲಂದಾ ವಿಶ್ವವಿದ್ಯಾಲಯದಿಂದ ಬೀಳ್ಕೊಟ್ಟು ಬರುವಾಗ ಅವರಿಗೆನೆನಪಿನ ಕಾಣಿಕೆಯಾಗಿ ೪೦೦ ಅತಿ ದುರ್ಲಭವಾದ ಗ್ರಂಥಗಳು ಮತ್ತು ೧೫೦ ಅತಿ ಸುಂದರವಾದ ಬುದ್ಧನ ಪ್ರತಿಮೆಗಳು ದೊರೆತವು.

ಕೆಲವು ಭಾರತೀಯ ವಿದ್ಯಾರ್ಥಿಗಳೊಂದಿಗೆ ಅವರು ಸ್ವದೇಶಕ್ಕೆ ಹೊರಟರು. ಸಿಂಧೂ ನದಿಯನ್ನು ದಾಟುವಾಗ ಅವರು ಭಾರತಮಾತೆಗೆ ವಂದನೆಗಳನ್ನು ಅರ್ಪಿಸಿದರು.ಅವರು ಮತ್ತುವಿದ್ಯಾರ್ಥಿಗಳು ಕುಳಿತಿದ್ದ ಹಡಗುಮಹಾಸಾಗರದಲ್ಲಿಬಂದಾಗಭಯಂಕರವಾದ ಬಿರುಗಾಳಿ ಬೀಸಲಾರಂಬಿಸಿತು. ಯಾವಾಗ ಹಡಗು ಮುಳುಗುವುದೋ ಎಂದು ಹೇಳುವುದು ಕಠಿಣವಾಗಿತ್ತು. ಪರ್ವತದಷ್ಟು ಎತ್ತರವಾದ ಸಮುದ್ರದ ಅಲೆಗಳು ಅಬ್ಬರಿಸತೊಡಗಿತು.ನಾವಿಕರು ಜೋರಾಗಿ“ಹಡಗನ್ನುಹಗುರ ಮಾಡಬೇಕಾಗುವುದು. ಗ್ರಂಥ ಮತ್ತು ಮೂರ್ತಿಗಳನ್ನು ನೀರಿನಲ್ಲಿ ಬಿಸಾಕಿ” ಎಂದು ಕೂಗತೊಡಗಿದನು.ಈಗ ಈ ಅಮೂಲ್ಯವಾದ ಗ್ರಂಥ ಮತ್ತು ಮೂರ್ತಿಗಳನ್ನು ಸಮುದ್ರದಲ್ಲಿ ಬಿಸಾಕುವನು ಎಂದು ತಿಳಿದ ಕೂಡಲೇ ಭಾರತೀಯ ಸಂಸ್ಕೃತಿಯ ಉಪಾಸಕರಾಗಿದ್ದ ಎಲ್ಲ ವಿದ್ಯಾರ್ಥಿಗಳು ತಕ್ಷಣವೇ “ಭಾರತ ಭೂಮಿಯ ಈ ದುರ್ಲಭವಾದ ಜ್ಞಾನ ಸಂಪತ್ತನ್ನು ಸಮುದ್ರದಲ್ಲಿ ಬಿಸಾಕುವುದನ್ನು ನಾವೆಂದಿಗೂಸಹಿಸುವುದಿಲ್ಲ” ಎಂದು ಹೇಳಿದರು.

ಹಾಗೂ ಹ್ಯೂನ್ ತ್ಸಾಂಗ್ ಅವರು ಉತ್ತರವನ್ನು ಕೊಡುವ ಮೊದಲೇ ಒಬ್ಬರ ಹಿಂದೆ ಒಬ್ಬರಂತೆ ಎಲ್ಲ ವಿದ್ಯಾರ್ಥಿಗಳು ಆ ಅಗಾಧವಾದ ಸಮುದ್ರದಲ್ಲಿ ಹಾರಿ ಜಲಸಮಾಧಿಯಾದರು..ಅವರ ಈ ಆತ್ಮಸಮರ್ಪಣೆಯ ದಿವ್ಯದೃಶ್ಯವನ್ನುಅವರು ಆಶ್ಚರ್ಯಚಕಿತರಾಗಿಕಣ್ಣು ಬಿಟ್ಟು ನೋಡುತ್ತಿದ್ದರು.ಅವರ ಕಣ್ಣುಗಳಿಂದ ನಿರಂತರವಾಗಿ ಹರಿಯುವ ಅಶ್ರುಗಳು ಜಲಸಮಾಧಿ ಹೊಂದಿದ ಆ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದವು.ಹೀಗಿತ್ತು ನಮ್ಮ ವಿದ್ಯಾರ್ಥಿಗಳ ಸಂಸ್ಕೃತಿಯ ರಕ್ಷಣೆಗಾಗಿ ಸರ್ವಸ್ವದ ತ್ಯಾಗ!ಸಮಯ ಬಂದರೆಪ್ರಾಣತ್ಯಾಗವನ್ನುಮಾಡಲುಹಿಂಜರಿಯುತ್ತಿರಲಿಲ್ಲ.ಹೀಗಿತ್ತುಅವರ ಭಾವನೆಗಳು! ಹೀಗೆ ಅನೇಕ ಅಜ್ಞಾತ ಹುತಾತ್ಮರ ಸಮರ್ಪಣೆಯಿಂದಲೇ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗಳ ರಾಷ್ಟ್ರೀಯಪ್ರವಾಹವು ಅಖಂಡವಾಗಿ ನಡೆದಿದೆ.

– (ದುಧಾರಿ ವಚನಾಮೃತದಿಂದ)