ಶಾಲಾ ವಸ್ತುಗಳ ನಿರ್ವಹಣೆ !

ಅ. ಶಾಲೆಯ ಸಾಮಗ್ರಿಗಳು ಹೇಗಿರಬೇಕು ?

೧. ಮಕ್ಕಳೇ, ಶಾಲೆಯ ಸಾಮಗ್ರಿಗಳು ಅಂದರೆ  ಅಧ್ಯಯನದಲ್ಲಿ ಸಹಾಯಕವಾಗುವ ವಸ್ತುಗಳು. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕೃತಕ ಸುಗಂಧವಿರುವ ಶಾಲೆಯಲ್ಲಿ ಬಳಸುವ ವಸ್ತುಗಳು ದೊರೆಯುತ್ತವೆ. ಇಂತಹ ವಸ್ತುಗಳನ್ನು ಬಳಸಬೇಡಿ. ಉದಾ. ಸುಗಂಧಿತ ಪೆನ್, ಸುಗಂಧಿತ ಕಾಗದ, ರಬ್ಬರ, ಇತ್ಯಾದಿಗಳನ್ನು ಬಳಸಬೇಡಿ.

ಬಾಲಮಿತ್ರರೇ, ಚರಾಚರದಲ್ಲಿ ಸಾಕ್ಷಾತ್ ಈಶ್ವರನ ವಾಸವಿರುತ್ತದೆ. ಈಶ್ವರೀಯ ಚೈತನ್ಯದಿಂದಾಗಿ ಅನೇಕ ಬಾರಿ ನಮಗೆ ಸುಗಂಧವು ಬರುತ್ತದೆ, ಆದರೆ ಕೃತಕ ಸುಗಂಧದಿಂದಾಗಿ ಮಕ್ಕಳಿಗೆ ಈಶ್ವರೀಯ ಚೈತನ್ಯದಿಂದ ಬರುವ ಸುಗಂಧದ ಅನುಭೂತಿ ಬರುವುದಿಲ್ಲ. ಹೀಗೆ ಆಗದಿರಲು ಮಕ್ಕಳು ಕೃತಕ ಸುಗಂಧಯುಕ್ತ ವಸ್ತುಗಳನ್ನು ಉಪಯೋಗಿಸದಂತೆ ಪ್ರಯತ್ನಿಸಬೇಕು.

೨. ದೇವತೆಗಳ ಚಿತ್ರಗಳಿರುವ ಶಾಲೆಯ ಚೀಲವನ್ನು ಖರೀದಿಸಬೇಡಿ. ಮಕ್ಕಳೇ, ನೀವು ಶಾಲೆಗಾಗಿ ಎಂದು ಚೀಲವನ್ನು ಉಪಯೋಗಿಸುತ್ತೀರಿ. ಎಂದಿಗೂ ದೇವತೆಗಳ ಚಿತ್ರವಿರುವ ಶಾಲಾ ಚೀಲವನ್ನು ಖರೀದಿಸಬೇಡಿ. ನಾವು ಚೀಲವನ್ನು ದಿನಪೂರ್ತಿ ಹೇಗೆ ಬೇಕಾದರೂ ಎಲ್ಲಿಯಾದರೂ ಇಡುತ್ತೇವೆ. ಅವುಗಳನ್ನು ತೊಳೆಯುವಾಗ ಅವುಗಳನ್ನು ತಿಕ್ಕುತ್ತೇವೆ, ಬಡಿಯುತ್ತೇವೆ. ಹೀಗೆ ಮಾಡುವುದರಿಂದ ದೇವತೆಗಳ ಚೀಲದ ಮೇಲಿರುವ ದೇವತೆಯ ಅಪಮಾನವಾಗುತ್ತದೆ ಹಾಗೂ ಅದನ್ನು ಬಳಸುವವರಿಗೆ ಪಾಪ ತಗುಲುತ್ತದೆ. ಆದುದರಿಂದ ಇಂತಹ ಶಾಲಾ ಚೀಲಗಳನ್ನು ಖರೀದಿಸಬೇಡಿ.

೩. ಇಂದು ಅನೇಕ ಮಕ್ಕಳು ಚಲನಚಿತ್ರ ನಟರ, ಕ್ರೀಡಾಪಟುಗಳು, ಕಾರ್ಟೂನ್ಸ್, ಗಾಡಿಗಳು ಇತ್ಯಾದಿಗಳ ಮುಖಪುಟವಿರುವ ಪುಸ್ತಕಗಳನ್ನು ಖರೀದಿಸುತ್ತಾರೆ. ಈ ಮಕ್ಕಳು ಚಲನಚಿತ್ರ ನಟರು, ಕ್ರೀಡಾಪಟುಗಳನ್ನು ಆದರ್ಶವೆಂದು ತಿಳಿದು ಅವರ ವೇಷಭೂಷಣ, ಹಾವಭಾವ, ಮಾತುಕತೆ, ವ್ಯವಹಾರವನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುವುದಿಲ್ಲ.

ಪಾಲಕರಿಗೆ ಸೂಚನೆ : ಮಕ್ಕಳ ಮೇಲೆ ನಿರಂತರವಾಗಿ ಉತ್ತಮ ಸಂಸ್ಕಾರವಾಗಲು ಸನಾತನವು ‘ಸಂಸ್ಕಾರ ವಹಿ’ಗಳನ್ನು ತಯಾರಿಸುತ್ತಿದೆ. ಈ ವಹಿಯಲ್ಲಿ ಸಂತರ ಹಾಗೂ ರಾಷ್ಟ್ರಪುರುಷರ ಪ್ರೇರಣಾದಾಯಕ ಚಿತ್ರಗಳು ಹಾಗೂ ಅವರ ವಿಚಾರಗಳನ್ನು, ರಾಷ್ಟ್ರಪ್ರೇಮ ಹಾಗೂ ಧರ್ಮಾಭಿಮಾನದ ಮಾಹಿತಿಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಪುಸ್ತಕಗಳನ್ನು ತಯಾರಿಸಲು ಬಳಸಲಾಗುವ ಕಾಗದವನ್ನು ಮರಗಳನ್ನು ಕಡಿದು ತಯಾರಿಸಲಾಗುತ್ತದೆ. ಇದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆ ಹಾಗೂ ಪರಿಸರಕ್ಕೆ ಅಪಾರವಾದ ಹಾನಿಯಾಗುತ್ತದೆ. ಆದರೆ ಸನಾತನದ ‘ಸಂಸ್ಕಾರ ವಹಿ’ಗಳನ್ನು ಮರಗಳನ್ನು ಕಡಿಯದೇ ತಯಾರಿಸಲಾಗುತ್ತದೆ, ಇದರು ಅದರ ವಿಶೇಷತೆಯಾಗಿದೆ. ಈ ಪುಸ್ತಕಗಳು ಮಧ್ಯಮ ಆಕಾರದಲ್ಲಿ, ಹಾಗೂ ಚಿತ್ರಕಲೆಯ ಪುಸ್ತಕದ ರೂಪದಲ್ಲಿಯೂ ದೊರೆಯುತ್ತವೆ.

ಆ. ವಿದ್ಯಾಲಯದ ಸಾಮಗ್ರಿಗಳನ್ನು ಹೇಗೆ ನೋಡಿಕೊಳ್ಳಬಹುದು ?

೧. ಶಾಲಾಚೀಲದ ಕ್ಷಮತೆಗಿಂತಲೂ ಹೆಚ್ಚಿನ ಪುಸ್ತಕಗಳನ್ನು ಅದರಲ್ಲಿ ತುಂಬಿಸಬೇಡಿ. ಚೀಲವನ್ನು ಇಡುವಾಗ ಅದನ್ನು ಎಸೆಯದೇ ನಿಧಾನವಾಗಿ ಇಡಬೇಕು, ಇಲ್ಲದಿದ್ದರೆ ಅದರಲ್ಲಿರುವ ವಸ್ತುಗಳು (ಉದಾ. ಪೆನ್ಸಿಲ್ ಬಾಕ್ಸ) ಒಡೆದುಹೋಗುತ್ತವೆ.

೨. ಮಕ್ಕಳೇ, ಪಠ್ಯಪುಸ್ತಕಗಳನ್ನು ವ್ಯವಸ್ಥಿತವಾಗಿಡಿ. ಇದರಿಂದ ಅವುಗಳು ಅನೇಕ ವರ್ಷಗಳ ವರೆಗೆ ಬರುತ್ತವೆ. ಇಂತಹ ಪುಸ್ತಕಗಳನ್ನು ನಿಮ್ಮ ತಮ್ಮ-ತಂಗಿಗೆ ಅಥವಾ ಮಿತ್ರರಿಗೂ ನೀಡಬಹುದು.

೩. ಪುಸ್ತಕಗಳನ್ನು ಓದುವಾಗ ತಮಗೆ ಮಧ್ಯದಲ್ಲಿ ಏಳಬೇಕಾದರೆ ಸಂಕೇತವೆಂದು ಹಾಳೆಯನ್ನು ಅಥವಾ ಅದರ ಮೂಲೆಯನ್ನು ಮಡಚಬೇಡಿ.
* ಹೀಗೆ ಮೂಲೆಯಲ್ಲಿ ಮಡಚಿದ ಜಾಗದಲ್ಲಿ ಹಾಳೆಯು ಹರಿಯಬಹುದು.
* ಪುಸ್ತಕದ ಹಾಳೆಯ ಬಗ್ಗೆ ಯಾವುದಾದರು ಕಾರಣದಿಂದ ನೆನಪಿನಲ್ಲಿಟ್ಟುಕೊಳ್ಳಬೇಕಾದರೆ ಪುಸ್ತಕದಲ್ಲಿ ಕೊಡಲಾದ ಕೆಂಪು ದಾರವನ್ನು ಬಳಸಿ ಅಥವಾ ಇತರ ಕಾಗದದ ತುಂಡನ್ನು ಬಳಸಿ.

೪. ಕಪಾಟಿನಲ್ಲಿ ಪುಸ್ತಕಗಳನ್ನು ಅಡ್ಡವಾಗಿ ಇಡಿ. ನೇರವಾಗಿಡುವುದರಿಂದ ಪುಸ್ತಕದ ಬೈಂಡಿಂಗ ತೆರೆಯಬಹುದು, ಇದರಿಂದ ಹಾಳೆಗಳು ಹೊರಬರಬಹುದು. ಅಥವಾ ಪುಸ್ತಕವನ್ನು ಓರೆಯಾಗಿಡುವುದರಿಂದ ಅವುಗಳು ಅಡ್ಡವಾಗಿ ಒಂದು ಮೂಲೆಯಲ್ಲಿ ಮಡಚಿ ಹೋಗುತ್ತವೆ.

೫. ಪುಸ್ತಕದ ಮೇಲೆ ತಮ್ಮ ಹೆಸರು ಹಾಗೂ ವಿಳಾಸದ ಹೊರತು ಬೇರೆ ಏನನ್ನೂ ಬರೆಯಬೇಡಿ. ಪುಸ್ತಕದ ಹಾಗೂ ವಹಿಗಳ ಹಾಳೆಗಳನ್ನು ಸ್ವಚ್ಛ ಹಾಗೂ ಸುಂದರವಾಗಿಡಿ.

೬. ಪುಸ್ತಕದಲ್ಲಿನ ಚಿತ್ರಗಳನ್ನು ಶಾಯಿಯಿಂದ ಅಥವಾ ಬಣ್ಣಗಳಿಂದ ಹಾಳು ಮಾಡಬೇಡಿ. ಅಥವಾ ಹಾಳೆಗಳನ್ನೂ ಹರಿಯಬೇಡಿ.
* ಪುಸ್ತಕವನ್ನು ಓದಿದ ನಂತರ ಮೇಲಿನಿಂದ ಕೆಳಗೆ ಬೀಳಿಸ ಬೇಡಿ, ಅವುಗಳನ್ನು ನಿಧಾನವಾಗಿ ಇಡಿ.
* ಪುಸ್ತಕಗಳ ಮೇಲೆ ಕಾಲು ಇಡಬೇಡಿ. ತಪ್ಪಿ ಕಾಲು ತಾಗಿದರೆ ಅದಕ್ಕೆ ನಮಸ್ಕಾರ ಮಾಡಿ ಶ್ರೀ ಸರಸ್ವತೀದೇವಿಯ ಬಳಿ ಕ್ಷಮೆ ಕೇಳಿ.

ಮಕ್ಕಳೇ, ಕೇವಲ ತಮ್ಮ ಮಾತ್ರವಲ್ಲ ಇತರ ವಿದ್ಯಾರ್ಥಿಗಳ ಅಥವಾ ಸಾರ್ವಜನಿಕ ಗ್ರಂಥಾಲಯದ ಪುಸ್ತಕಗಳ ಬಗ್ಗೆಯೂ ಹೀಗೆಯೇ ಕಾಳಜಿ ವಹಿಸಿ.

Leave a Comment