ಊಟದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು

ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ – ಗೌರವ ಹೇಗೆ ನಿರ್ಮಿಸುವುದು ಎಂಬ ಪ್ರಶ್ನೆ ಅನೇಕ ಪಾಲಕರನ್ನು ಕಾಡುತ್ತದೆ. ಮುಂದಿನ ಕೆಲವು ಸುಲಭ ಸೂತ್ರಗಳನ್ನು ಪಾಲಿಸಿದ್ದಲ್ಲಿ ಮಕ್ಕಳಲ್ಲಿ ಅನ್ನದ ಬಗ್ಗೆ ಆದರಭಾವ ನಿರ್ಮಿಸಲು ಸುಲಭವಾಗುತ್ತದೆ.

೧. ಭೋಜನಕ್ಕೆ ಉಪಯೋಗಿಸುವ ತಟ್ಟೆ – ಬಟ್ಟಲು ಸ್ವಚವಾಗಿರಲಿ

೨. ಭೋಜನಕ್ಕೆ ಕುಳಿತುಕೊಳ್ಳುವ ಮೊದಲು ಕೈ, ಕಾಲು ಮತ್ತು ಮುಖ ತೊಳೆದುಕೊಂಡು ಕುಳಿತುಕೊಳ್ಳಬೇಕು

೩. ಬರಿ ನೆಲದ ಮೇಲೆ ಕುಳಿತುಕೊಳ್ಳದೆ, ಮಣೆ ಅಥವಾ ಚಾಪೆ ಮುಂತಾದ ಯಾವುದಾದರೂ ಒಂದು ಆಸನವನ್ನು ಉಪಯೋಗಿಸಿ

೪. ಭೋಜನಕ್ಕೆ ಕುಳಿತುಕೊಂಡ ಮೇಲೆ ಮುಂದಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಬೇಕು

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ

ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ.

೫. ಮೊದಲ ತುತ್ತು ಗ್ರಹಿಸುವ ಮುಂಚೆ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು – ಹೇ ಪರಮೇಶ್ವರಾ, ಈ ಅನ್ನವು ನಿನ್ನ ಚರಣಗಳಲ್ಲಿ ಅರ್ಪಿಸಿ, ನಿನ್ನ ಚರಣಗಳ ಪ್ರಸಾದವೆಂದು ಗ್ರಹಿಸುತ್ತಿದ್ದೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯ ಲಭಿಸಲಿ.

೬. ಅನ್ನ ಗ್ರಹಿಸುವಾಗ (ಊಟ ಮಾಡುವಾಗ) ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತ ಅನ್ನ ಗ್ರಹಿಸಿ.

೭. ಅನ್ನ ಪದಾರ್ಥಗಳು ಕಾಲ್ಕೆಳಗೆ ಬರದಂತೆ, ಭೋಜನ ಮುಗಿದ ತಕ್ಷಣ ತಟ್ಟೆಯಿಂದ ಹೊರಗೆ ಬಿದ್ದಿರುವ ಅನ್ನವನ್ನು ಹೆಕ್ಕಿಕೊಳ್ಳಬೇಕು.

೮. ಊಟವಾದ ಬಳಿಕ ನಮ್ಮ ತಲೆಯನ್ನು ಬಗ್ಗಿಸಿ ದೇವಿ ಅನ್ನಪೂರ್ಣಾ ಮಾತೆಯ ಚರಣಗಳಲ್ಲಿ ಹೇ ಅನ್ನಪೂರ್ಣಾ ಮಾತೆ, ನಿನ್ನ ಕೃಪೆಯಿಂದಲೇ ನಮಗೆ ಈ ಮಹಾಪ್ರಸಾದ ದೊರಕಿತು. ನಾವು ನಿನ್ನ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

Leave a Comment