ಆತ್ಮಬಲ ಹೆಚ್ಚಿಸಿ!

ಧರ್ಮ ಮನುಷ್ಯನಿಗೆ ಬದುಕುವುದನ್ನು ಕಲಿಸುತ್ತದೆ, ಮನುಷ್ಯನ ಸರ್ವಾಂಗೀಣ ಉನ್ನತಿಯನ್ನು ಮಾಡುತ್ತದೆ. ಯಾರಿಗೆ ಧರ್ಮದ ಅಧಿಷ್ಠಾನವಿದೆಯೋ, ಆ ಮನುಷ್ಯನ ಮನಸನ್ನು ನಿರಾಶೆಯು ಸ್ಪರ್ಷ ಕೂಡ ಮಾಡುವುದಿಲ್ಲ. ಧರ್ಮಾನುಸಾರ ಆಚರಣೆ ಮಾಡುವುದರಿಂದ ನಮ್ಮ ಆತ್ಮಬಲ ಹೆಚ್ಚುತ್ತದೆ ಮತ್ತು ಜೀವನದಲ್ಲಿನ ಪ್ರತಿಯೊಂದು ಪ್ರಸಂಗದಲ್ಲಿ ಹೋರಾಡಲು ಜೀವವು ಸಕ್ಷಮವಾಗುತ್ತದೆ. ಈಗಿನ ಕಾಲದಲ್ಲಿ ಜನರು ಪಾಶ್ಚಾತ್ಯ ವಿಕೃತಿಯೊಡನೆ ಜೋಡಿಸುವುದರಿಂದ ಹತ್ಯೆ ಮಾಡುವಂತಹ ಕೆಟ್ಟ ವಿಚಾರಗಳು ಮನುಷ್ಯನ ಮನಸ್ಸಿನಲ್ಲಿ ಬರುತ್ತದೆ ಮತ್ತು ಅವನು ಅದರಂತೆ ಮಾಡುತ್ತಾನೆ. ಆತ್ಮಹತ್ಯೆ ಎಂದರೆ ಆತ್ಮದ ಹತ್ಯೆ ಅಲ್ಲ; ತನ್ನ ಮನಸ್ಸಿನಂತೆ ತನ್ನ ದೇಹವನ್ನು ನಾಶ ಮಾಡುವುದು. ಆತ್ಮಹತ್ಯೆಯ ಮಾರ್ಗ ಅನುಸರಿಸುವುದರಿಂದ ನಿರಾಶೆ ನಷ್ಟವಾಗುವುದಿಲ್ಲ ಮತ್ತು ಸಮಸ್ಯೆ ನಿವಾರಣೆಯಾಗುವುದಿಲ್ಲ. ಅಧರ್ಮ ಕೊನೆಗೊಳ್ಳುವುದಿಲ್ಲ ಮತ್ತು ಅಧರ್ಮಿಯರು ಸುಧಾರಿಸುವುದಿಲ್ಲ. ಮನುಷ್ಯ ಜನ್ಮವನ್ನು ಈ ರೀತಿ ಕೊನೆಗೊಳಿಸಬೇಡಿ. ಇಂತಹ ದಯನೀಯ ಅವಸ್ಥೆಯಿಂದ ಹೊರಗೆ ಬಂದು ತನ್ನ ಉನ್ನತಿಯಾಗಲು ಧರ್ಮವನ್ನ್ನು ಅರಿತುಕೊಳ್ಳಿರಿ ಮತ್ತು ಧರ್ಮಾಚರಣೆ ಮಾಡಿರಿ.

ಆತ್ಮಹತ್ಯೆಯಲ್ಲ, ಆತ್ಮಬಲ ಹೆಚ್ಚಿಸಿರಿ!

ಮುಂದೆ ಬರುವ ಪೀಳಿಗೆ ರಾಷ್ಟ್ರದ ಆಧಾರಸ್ತಂಭವಾಗಿದೆ. ಇವರನ್ನು ಜೋಪಾನ ಮಾಡುವುದು ಎಂದರೆ ನಮ್ಮ ರಾಷ್ಟ್ರವನ್ನು ಜೋಪಾನ ಮಾಡುವುದು. ಇದಕ್ಕಾಗಿ ತಮ್ಮ ಮಕ್ಕಳಿಗೆ ಧರ್ಮಶಿಕ್ಷಣ ಕೊಟ್ಟು ಆತ್ಮಬಲಸಂಪನ್ನ ರಾಷ್ಟ್ರದ ಪುನಃ ನಿರ್ಮಾಣ ಮಾಡುವುದು ಅಗತ್ಯವಾಗಿದೆ. ಭಾರತದ ಗೌರವಶಾಲಿ ಇತಿಹಾಸವನ್ನು ಪುನರುಜ್ಜೀವಿತ ಮಾಡಬೇಕಾಗಿದೆ.

ನಿರಾಶೆಯನ್ನು ದೂರ ಮಾಡಲು ಸ್ವಯಂಸೂಚನೆಯು ತುಂಬಾ ಫಲದಾಯಕವಾಗಿದೆ. ನಿರಾಶೆ ಮತ್ತೆ ಮತ್ತೆ ಬರುತ್ತಿದ್ದರೆ, ಕೆಳಗೆ ನೀಡಿರುವ ಸೂಚನೆಯನ್ನು ಒಂದೂವರೆ ಗಂಟೆಗೊಮ್ಮೆ ಇಷ್ಟದೇವರನ್ನು ಸ್ಮರಿಸಿ ೫ ಸಲ ನೀಡಬೇಕು.

’…… (ಇಲ್ಲಿ ಪ್ರಸಂಗವನ್ನು ಹೇಳಬೇಕು) ಇಂತಹ ಪ್ರಸಂಗದಲ್ಲಿ ನಾನು ನಕಾರಾತ್ಮಕ ವಿಚಾರ ಮಾಡುತ್ತೇನೆಯೋ ಮತ್ತು ನಿರಾಶೆ ಹೊಂದುತ್ತೇನೆಯೋ, ಆಗ ನನಗೆ ಅರಿವಾಗುವುದೇನೆಂದರೆ ದೇವರು ಪ್ರತಿಯೊಂದು ಪ್ರಸಂಗವನ್ನು ನಮ್ಮ ಒಳಿತಿಗಾಗಿ ನಿರ್ಮಿಸಿರುತ್ತಾರೆ, ಅದಕ್ಕಾಗಿ ನಾನು ಅಂತರ್ಮುಖವಾಗಿ ನನ್ನನ್ನು ಬದಲಾಯಿಸಲು ಪ್ರಯತ್ನಿಸುವೆನು.’