ಮನಸ್ಸಿನ ಏಕಾಗ್ರತೆಗಾಗಿ ಹೀಗೆ ಮಾಡಿ!

೧. ಧ್ಯಾನ

ಯಾವುದೇ ಹೊರಗಿನ ವಸ್ತು ಅಥವಾ ಶರೀರದ ಅಂಗ ಅಥವಾ ಕ್ರಿಯೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಎಂದರೆ ಧ್ಯಾನ. ಇದರಲ್ಲಿ, ಶರೀರದಲ್ಲಿ ನಡೆಯುವ ಬೇರೆ ಬೇರೆ ಸಂವೇದನೆಗಳನ್ನು ಮತ್ತು ಮನಸ್ಸಿನಲ್ಲಿ ಉಕ್ಕುವ ಅನೇಕಾನೇಕ ವಿಚಾರಗಳನ್ನು ಸಾಕ್ಷೀಭಾವದಿಂದ (ಅಂದರೆ ತಟಸ್ಥ ಭಾವದಿಂದ) ಪರಿಶೀಲಿಸಬೇಕು. ಧ್ಯಾನ ಧರಿಸುವಲ್ಲಿ ಪ್ರಗತಿ ಹೊಂದಿರುವವರು ತನ್ನನ್ನು ಕೂಡ ಮರೆತು ವಿಚಾರಶೂನ್ಯ ಅವಸ್ಥೆಗೆ ಹೋಗಿ ಆತ್ಮಾನಂದವನ್ನು ಅನುಭವಿಸುತ್ತಾರೆ. ಬುದ್ಧಿ ಮತ್ತು ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಗಾಯತ್ರೀ ಮಂತ್ರ, ತ್ರಿಬಂಧ ಪ್ರಾಣಾಯಾಮ ಮತ್ತು ಧ್ಯಾನ ಧಾರಣೆ ಇವುಗಳು ಉಪಯುಕ್ತ ಮಾರ್ಗಗಳು.

೨. ನಾಮಜಪ ಮತ್ತು ಪ್ರಾರ್ಥನೆ

ಎಲ್ಲರಿಗೂ ಎಲ್ಲ ಸಮಯ ಧ್ಯಾನಧಾರಣೆ ಸಾಧ್ಯವಾಗುತ್ತದೆ ಅಥವಾ ಅದಕ್ಕೆ ಸಮಯವಿರುತ್ತದೆ ಎಂದಿರುವುದಿಲ್ಲ. ಆದುದರಿಂದ ಏಕಾಗ್ರತೆಯನ್ನು ಸಾಧಿಸಲು ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡುವುದು ಒಳ್ಳೆಯ ಉಪಾಯವಾಗುತ್ತದೆ.

೨ ಅ. ಯಾವ ದೇವರ ನಾಮವನ್ನು ಜಪಿಸಬೇಕು?

ನಿಮ್ಮ ಕುಲದೇವರ ನಾಮವನ್ನು ಜಪಿಸಬೇಕು. ಪ್ರತಿದಿನ ಕನಿಷ್ಠಪಕ್ಷ ೩೦ ನಿಮಿಷವಾದರೂ ಕುಲದೇವರ ನಾಮವನ್ನು ಜಪಿಸಬೇಕು. ಅಂತಯೇ ನಮ್ಮ ಪಿತೃಗಳಿಗೆ (ಗತಿಸಿದ ಪೂರ್ವಜರ) ಮುಂದಿನ ಗತಿ ಸಿಗಬೇಕೆಂದು ‘ಶ್ರೀ ಗುರುದೇವ ದತ್ತ |’ ನಾಮಜಪವನ್ನು ಕನಿಷ್ಠಪಕ್ಷ ೧ ಗಂಟೆಯಾದರೂ ಜಪಿಸಬೇಕು.

೨ ಆ. ಪ್ರಾರ್ಥನೆಯನ್ನು ಹೇಗೆ ಮಾಡಬೇಕು?

೧. ಹೇ ಕುಲದೆವತೆಯೇ, ನಿನ್ನ ಕೃಪಾದೃಷ್ಟಿಯು ಸದಾ ನನ್ನ ಮೇಲಿರಲಿ.

೨. ಹೇ ಬುದ್ಧಿದಾತಾ ಶ್ರೀ ಗಣಪತಿಯೇ, ನನ್ನಿಂದ ಒಳ್ಳೆಯ ರೀತಿಯಲ್ಲಿ ಅಧ್ಯಯನವಾಗಲು ನನಗೆ ಶಕ್ತಿ ಮತ್ತು ಸದ್ಬುದ್ಧಿಯನ್ನು ನೀಡು.