ಸಮಯದ ಸದುಪಯೋಗವನ್ನು ಮಾಡಿಕೊಳ್ಳಲು ಪ್ರತಿದಿನ ದಿನಚರಿಯನ್ನು ಬರೆಯಬೇಕು !

೧. ದಿನಚರಿಯ ಸ್ವರೂಪ

ದಿನಚರಿಯ ಕೋಷ್ಟಕಗಳು ಸಾಧಾರಣವಾಗಿ ಮುಂದಿನಂತಿರಬೇಕು.


ತಂದೆ ತಾಯಿಯರ ಬಳಿ ಕೇಳಿ ಕೋಷ್ಟಕಗಳಲ್ಲಿ ಸುಧಾರಣೆಯನ್ನು ಮಾಡಬಹುದು.

೨. ದಿನಚರಿಯನ್ನು ಹೇಗೆ ಬರೆಯಬೇಕು ?

ದಿನಚರಿಯನ್ನು ಬರೆಯುವಾಗ ಮೊದಲಿಗೆ ತಿಥಿ/ದಿನಾಂಕವನ್ನು ಬರೆಯಬೇಕು. ಅನಂತರ ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ? ಕೋಷ್ಟಕದಲ್ಲಿ ಕೃತಿಯ ಸಮಯ (ಉದಾ. ಬೆಳಿಗ್ಗೆ ೬ ರಿಂದ ೬.೩೦, ೬.೩೦ ರಿಂದ ೭.೧೦) ಒಂದರ ಕೆಳಗೆ ಒಂದು ಬರೆಯಬೇಕು. ‘ಕೃತಿ’ಯ ಕೋಷ್ಟಕದಲ್ಲಿ ಆ ಸಮಯದಲ್ಲಿ ಮಾಡಿದ ಕೃತಿಯನ್ನು (ಉದಾ. ಏಳುವುದು ಹಾಗೂ ಮುಖ ತೊಳೆಯುವುದು, ವ್ಯಾಯಾಮ) ವಿವರವಾಗಿ ಬರೆಯಬೇಕು. ‘ಕೃತಿ’ ನಂತರದ ಎಲ್ಲ ಕೋಷ್ಟಕಗಳಲ್ಲಿ ಕೃತಿಗಾಗಿ ತಗುಲಿದ ಕಾಲಾವಧಿ (ಗಂಟೆ/ನಿಮಿಷ)ಯನ್ನು ಬರೆಯಬೇಕು, ಉದಾ. ಮೇಲಿನ ಉದಾಹರಣೆಯಲ್ಲಿ ಬೆಳಿಗ್ಗೆ ಏಳುವುದು ಹಾಗೂ ಮುಖ ತೊಳೆಯುವುದು, ವ್ಯಾಯಾಮ ಈ ಕೃತಿಗಾಗಿ ತಗುಲಿದ ಸಮಯವನ್ನು ‘ವೈಯಕ್ತಿಕ’ ಈ ಕೋಷ್ಟಕದಲ್ಲಿ ಅನುಕ್ರಮವಾಗಿ ೦.೩೦ ನಿ, ೦.೪೦ ನಿ ಹೀಗೆ ಬರೆಯಬೇಕು.

ಈ ರೀತಿಯಲ್ಲಿ ದಿನದ ಪ್ರತಿಯೊಂದು ಕೃತಿ ಹಾಗೂ ಆ ಕೃತಿಯನ್ನು ಮಾಡಲು ತಗುಲಿದ ಕಾಲಾವಧಿಯನ್ನು ಬರೆಯಬೇಕು. ಕೋಷ್ಟಕದಲ್ಲಿ ನೀಡಿದ ಕೃತಿಗಳಿಗಿಂತಲೂ ಬೇರೆ ಕೃತಿಗಳನ್ನು ಮಾಡಿದ್ದರೆ ಆ ಕೃತಿಯನ್ನು ಮಾಡಲು ತಗುಲಿದ ಸಮಯವನ್ನು ಕೋಷ್ಟಕದಲ್ಲಿ ಬರೆಯಬೇಕು. ಈ ದಿನಚರಿಯನ್ನು ಪ್ರತಿಯೊಂದು ಕೃತಿಯು ಆದ ತಕ್ಷಣ ಬರೆಯಬೇಕು. ಇದರಿಂದ ದಿನಚರಿಯನ್ನು ತಪ್ಪದೇ ಬರೆಯಲು ಸಾಧ್ಯವಾಗುತ್ತದೆ ಹಾಗೂ ಮನಸ್ಸಿಗೆ ಸಮಯದ ಸದುಪಯೋಗದ ಅರಿವಾಗುತ್ತದೆ. ದಿನಚರಿಯನ್ನು ಕೇವಲ ರಾತ್ರಿ ಬರೆದರೆ ‘ಯಾವಾಗ ಏನು ಮಾಡಿದೆ’ ಎಂಬುದನ್ನು ನೆನಪಿಸಿಕೊಳ್ಳುವಲ್ಲಿ ಸಮಯ ವ್ಯರ್ಥವಾಗುತ್ತದೆ.

೩. ದಿನಚರಿಯಲ್ಲಿ ಪ್ರತಿಯೊಂದು ಕೃತಿಯ ಎದುರು ವ್ಯರ್ಥವಾದ ಸಮಯವನ್ನೂ ಬರೆಯಬೇಕು

ದಿನಚರಿಯನ್ನು ಬರೆಯುವಾಗ ನಿಮಗೆ ಪ್ರತಿಯೊಂದು ಕೃತಿಯನ್ನು ಮಾಡಲು ಎಷ್ಟು ಸಮಯ ತಗುಲುತ್ತದೆ ಎಂಬುದರ ಅಭ್ಯಾಸ ಮಾಡಬೇಕು. ಯಾವುದಾದರೂ ಕೆಲಸಕ್ಕೆ ಅವಶ್ಯಕತೆಗಿಂತಲೂ ಹೆಚ್ಚಿನ ಸಮಯ ತಗುಲುತ್ತಿದ್ದರೆ ಆ ಹೆಚ್ಚಿನ ಸಮಯವನ್ನು “ವ್ಯರ್ಥವಾದ ಸಮಯ’ ಈ ಕೋಷ್ಟಕದಲ್ಲಿ ಬರೆಯಬೇಕು. ೭.೩೦ ರಿಂದ ೯ರ ವರೆಗೆ ನಿಮ್ಮ ಸ್ನಾನ ಹಾಗೂ ವೈಯಕ್ತಿಕ ಕೆಲಸಗಳಾಗುತ್ತವೆ ಮತ್ತು ಈ ಎಲ್ಲ ಕೆಲಸಗಳು ೧ ಗಂಟೆಯಲ್ಲಿ ಆಗುವುದು ಅಪೇಕ್ಷಿತವಿರುತ್ತದೆ, ಆದರೆ ಇಲ್ಲಿ ನಿಮ್ಮ ೩೦ ನಿಮಿಷವು ವ್ಯರ್ಥವಾಯಿತು. ಈ ಕಾಲಾವಧಿಯನ್ನು (೩೦ನಿ) ‘ವ್ಯರ್ಥವಾದ ಸಮಯ’ ಈ ಕೋಷ್ಟಕದಲ್ಲಿ ಬರೆಯಬೇಕು. ಹೀಗೆ ಪ್ರತಿಯೊಂದು ಕೃತಿಯ ಎದುರು ವ್ಯರ್ಥವಾದ ಸಮಯವನ್ನು ಬರೆಯಬೇಕು. ರಾತ್ರಿ ಮಲಗುವ ಮೊದಲು ‘ಅಧ್ಯಯನ’ ಈ ಕೋಷ್ಟಕದಲ್ಲಿ ಕಾಲಾವಧಿಯಲ್ಲಿ ಕೂಡಿಸಿ ಬರೆಯಬೇಕು. ಇದರಿಂದ ದಿನದುದ್ದಕ್ಕೂ ಎಷ್ಟು ಅಧ್ಯಯನ, ಸಾಧನೆ (ಉದಾ. ನಾಮಜಪ) ಇತ್ಯಾದಿ ಆಯಿತು ಎಂಬುದರ ಅರಿವಾಗುತ್ತದೆ. ಅಂತೆಯೇ ನಿಯಮಿತವಾಗಿ ದಿನಚರಿಯನ್ನು ತಂದೆ ತಾಯಿಯರಿಗೆ ತೋರಿಸಬೇಕು.