ವ್ಯಸನಗಳ ದುಷ್ಪರಿಣಾಮಗಳು ಏನು? ವ್ಯಸನಮುಕ್ತರಾಗುವುದು ಹೇಗೆ?

ಇತ್ತೀಚೆಗೆ ಮನುಷ್ಯನು ವಿವಿಧ ವ್ಯಾವಹಾರಿಕ ಹಾಗೂ ಐಹಿಕ ಕಾರಣಗಳಿಗಾಗಿ, ವಿಶೇಷವಾಗಿ ಚಿಂತೆಯಿಂದ ಮುಕ್ತನಾಗಲು ಅಥವಾ ಮೋಜಿಗಾಗಿ ವಿವಿಧ ವ್ಯಸನಗಳ ಮೊರೆ ಹೋಗುತ್ತಾನೆ. ಮನುಷ್ಯನ ವ್ಯಸನಗಳು ಹೇಗೆ ಪ್ರಾರಂಭವಾಗುತ್ತವೆ? ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಇದರ ಹಿಂದೆ ಆಧ್ಯಾತ್ಮಿಕ ಕಾರಣಗಳಿಂದ ಅವನ ಜೀವನದಲ್ಲಿ ಅಡಚಣೆಗಳು/ಸಮಸ್ಯೆಗಳು ಉತ್ಪನ್ನವಾಗುತ್ತವೆ. ಇಂತಹ ಕೆಲವು ಸಮಸ್ಯೆಗಳ ಉದಾಹರಣೆಯನ್ನು ಕೆಳಗೆ ನೀಡಲಾಗಿದೆ.

ವ್ಯಸನಗಳ ದೈನಂದಿನ ದುಷ್ಪರಿಣಾಮಗಳು

ದೈನಂದಿನ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳ ಕೆಲವು ಉದಾಹರಣೆಗಳು : ಪರೀಕ್ಷೆಯ ಸಮಯದಲ್ಲಿ ಆರೋಗ್ಯ ಕೆಡುವುದು, ಪ್ರಾಮಾಣಿಕವಾಗಿ ಅಧ್ಯಯನ ಮಾಡಿಯೂ ಅಪೇಕ್ಷಿತ ಯಶಸ್ಸು ದೊರೆಯದಿರುವುದು, ಉದ್ಯೋಗ ಸಿಗದಿರುವುದು, ಮನೆಯಲ್ಲಿ ಜಗಳ-ತಂಟೆ ತಕರಾರು, ಮದುವೆಯಾಗದಿರುವುದು, ಮದುವೆಯಾದರೂ ಪತಿ ಪತ್ನಿಯ ನಡುವೆ ಹೊಂದಾಣಿಕೆಯಿಲ್ಲದಿರುವುದು, ಹೊಂದಾಣಿಕೆಯಿದ್ದರೂ (ಯಾವುದೇ ಶಾರೀರಿಕ ತೊಂದರೆಗಳಿಲ್ಲದಿರುವಾಗಲೂ) ಮಕ್ಕಳಾಗದಿರುವುದು, ಮಕ್ಕಳಾದರೂ ಬುದ್ಧಿಮಾಂದ್ಯ ಅಥವಾ ಅಂಗವಿಕಲರಾಗುವುದು, ಅಪಮೃತ್ಯು, ವ್ಯಾಪಾರದಲ್ಲಿ ನಷ್ಟವಾಗುವುದು, ದಾರಿದ್ರ್ಯ, ಶಾರೀರಿಕ ರೋಗಗಳು ಇಂತಹ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ.

ವ್ಯಸನಗಳ ಶಾರೀರಿಕ ದುಷ್ಪರಿಣಾಮಗಳು

ಸಿಗರೇಟು ಸೇದುವುದು, ಮದ್ಯ ಸೇವನೆ, ಮಾದಕ ಪದಾರ್ಥಗಳನ್ನು ಸೇವಿಸುವುದು, ಮಾವಾ(ಸುಗಂಧಿ ತಂಬಾಕು) ತಿನ್ನುವುದು ಇತ್ಯಾದಿಗಳಿಂದ ಹಲ್ಲು, ಗಂಟಲು, ಪುಪ್ಪುಸಗಳು, ಹೃದಯ, ಜಠರ, ಮೂತ್ರಪಿಂಡ, ಅಂತೆಯೇ ಶ್ವಾಸಾಂಗವ್ಯೂಹ ಹಾಗೂ ಜೀರ್ಣಾಂಗವ್ಯೂಹಗಳ ವಿಕಾರವಾಗಿ ಕರ್ಕರೋಗ ಹಾಗೂ ಇತರ ಭಯಂಕರ ರೋಗಗಳಾಗುತ್ತವೆ.

ವ್ಯಸನಗಳ ಮಾನಸಿಕ ದುಷ್ಪರಿಣಾಮಗಳು

ವ್ಯಸನದಿಂದ ಮನಸ್ಸು ಹಾಗೂ ಬುದ್ಧಿಯು ಅಕಾರ್ಯಕ್ಷಮವಾಗಿ ಮಾನಸಿಕ ತೊಂದರೆಗಳಾಗುತ್ತವೆ. ಅಂತೆಯೇ ವ್ಯಸನಗಳ ಪೂರ್ತಿಗಾಗಿ ಬಹಳಷ್ಟು ಹಣ ವ್ಯಯವಾಗುತ್ತದೆ; ಆದುದರಿಂದ ವ್ಯಸನವೆಂದರೆ ’ದುಡ್ಡು ಕೊಟ್ಟು ತಂದ ದುಃಖ’ವಾಗಿದೆ.

ವ್ಯಸನಗಳ ಆಧ್ಯಾತ್ಮಿಕ ದುಷ್ಪರಿಣಾಮಗಳು

ವ್ಯಸನದಿಂದ ಮನುಷ್ಯನಲ್ಲಿರುವ ತಮೋಗುಣವು ಹೆಚ್ಚುತ್ತದೆ. ಇದರಿಂದ ಮನುಷ್ಯನ ಬಳಿ ಕಪ್ಪು(ತೊಂದರೆದಾಯಕ) ಶಕ್ತಿಯು ಆದಷ್ಟು ಬೇಗ ಆಕರ್ಷಿತವಾಗಿ ಅವನ ಶರೀರದಲ್ಲಿ ಸಂಗ್ರಹವಾಗುತ್ತದೆ. ಇದರಿಂದಾಗಿ ಆ ಮನುಷ್ಯನು ವಿವೇಕವನ್ನು ಕಳೆದುಕೊಳ್ಳುತ್ತಾನೆ, ತನ್ನ ಮತ್ತು ತನ್ನ ಕೃತಿಗಳ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಈ ತೊಂದರೆದಾಯಕ ಶಕ್ತಿಯು ಅವನಿಂದ ದುಷ್ಕೃತ್ಯಗಳನ್ನು ಮಾಡಿಸಿಕೊಳ್ಳುತ್ತವೆ.

ವ್ಯಸನಮುಕ್ತರಾಗಲು ಮುಂದಿನಂತೆ ಮಾಡಿ

‘ವ್ಯಸನದಿಂದ ಮುಕ್ತರಾಗುವುದು ಕಠಿಣವಾಗಿದೆ’ ಎಂಬ ಸೋತ ಮಾನಸಿಕತೆಯನ್ನು ತೆಗೆದುಹಾಕಿ ಹಾಗೂ ‘ವ್ಯಸನದ ವಿಚಾರದೊಂದಿಗೆ ಹೋರಾಡಿ ವ್ಯಸನರೂಪಿ ಶತ್ರುವನ್ನು ಕೊಲ್ಲಬೇಕು!’ ಎಂಬ ವಿಜಯೀವೃತ್ತಿಯನ್ನು ಮೈಗೂಡಿಸಿಕೊಳ್ಳಿ! ವ್ಯಸನದೊಂದಿಗೆ ಹೋರಾಡಲು ‘ಸಾಧನೆ’ಯನ್ನು ಮಾಡಿ!

ಹಾಗಾದರೆ ಸಾಧನೆಯೆಂದರೆ ಏನು? ವಿದ್ಯಾರ್ಥಿಗಳು ಈ ಸಮಸ್ಯೆಗಳ ಮೇಲೆ ವಿಜಯ ಸಾಧಿಸಲು ಪ್ರತೀದಿನ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಕಡಿಮೆಯೆಂದರೆ ೧ ಗಂಟೆಯಾದರೂ ಜಪಿಸಬೇಕು. ಅಂತೆಯೇ ಪ್ರತೀ ಗುರುವಾರ ದತ್ತ ಮಂದಿರಕ್ಕೆ ಹೋಗಿ ಭಾವಪೂರ್ಣವಾಗಿ ನಮಸ್ಕಾರ ಮಾಡಿ ದತ್ತನಿಗೆ ೭ ಪ್ರದಕ್ಷಿಣೆಗಳನ್ನು ಹಾಕಬೇಕು.

ನಾಮಜಪವನ್ನು ಕೇಳಿ

Leave a Comment