ತಾಯಿ-ತಂದೆಯ ಮಹತ್ವ

ತಾಯಿತಂದೆಯ ಮಹತ್ವ

ಮಾತೃದೇವೋ ಭವ| ಪಿತೃದೇವೋ ಭವ|’, ಎಂದರೆತಾಯಿತಂದೆಯರು ದೇವರಿಗೆ ಸಮಾನವಾಗಿದ್ದಾರೆ.’ ಇದು ನಮ್ಮ ಮಹಾನ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ. ‘ತಂದೆತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ತಂದೆತಾಯಿಯರ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಿದೆ. ನಮಗೆ ಅಜ್ಜಅಜ್ಜಿ, ಚಿಕ್ಕಪ್ಪಚಿಕ್ಕಮ್ಮ, ಮಾವಅತ್ತೆ ಇಂತಹ ಅಸಂಖ್ಯಾತ ಸಂಬಂಧಿಕರು ಇರುತ್ತಾರೆ. ಆದರೆ ನಮಗೆ ತಾಯಿತಂದೆಯರ ಸಂಬಂಧದಷ್ಟು ಇತರರ ಸಂಬಂಧವು ಹಿಡಿಸುವುದಿಲ್ಲ. ಸರ್ವ ಶ್ರೇಷ್ಠವಾದ ಹಿಂದೂ ಸಂಸ್ಕೃತಿಯಲ್ಲಿ ತಾಯಿತಂದೆಯರಿಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗುತ್ತದೆ. ತಂದೆತಾಯಿಯ ಸೇವೆ ಹೇಗೆ ಮಾಡಬೇಕು? ಅವರ ಆಜ್ಞಾಪಾಲನೆಯನ್ನು ಏಕೆ ಮಾಡಬೇಕು? ಇವುಗಳನ್ನು ಬಿಂಬಿಸುವ ಅನೇಕ ಉದಾಹರಣೆಗಳನ್ನು ನಾವು ಇತಿಹಾಸಪುರಾಣಗಳಲ್ಲಿ ಓದಿದ್ದೇವೆ. ಪ್ರಭು ಶ್ರೀರಾಮ, ಶ್ರವಣ ಕುಮಾರ, ಛತ್ರಪತಿ ಶಿವಾಜಿ ಮಹಾರಾಜ, ಭಕ್ತ ಪುಂಡಲೀಕ ಮುಂತಾದವರ ಉದಾಹರಣೆಗಳಿವೆ.

ತಾಯಿತಂದೆಯರು ನಮಗಾಗಿ ಮಾಡುವ ಕೃತಿಗಳ ಋಣವನ್ನು ಹೇಗೆ ತೀರಿಸುವುದು?

ತಾಯಿಯು ನಮ್ಮ ಬೇಕುಬೇಡಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾಳೆ. ಇದೆಲ್ಲವನ್ನು ಮಾಡುತ್ತಿರುವಾಗ ಅವಳು ಎಂದೂ ತನ್ನ ಬಗ್ಗೆ ವಿಚಾರ ಮಾಡುವುದಿಲ್ಲ. ಅವಳ ಮನಸ್ಸಿನಲ್ಲಿ ಸತತ ಮಕ್ಕಳದ್ದೇ ವಿಚಾರವಿರುತ್ತದೆ. ಹಾಗೆಯೇ, ತಂದೆಯೂ ನಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ನಮಗೆ ಅವಶ್ಯವಿರುವುದನ್ನು ತಂದು ಕೊಡುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ. ಆದರೆ ತುಲನೆಯಲ್ಲಿ ನಾವು ತಾಯಿತಂದೆಯವರು ಹೇಳಿದ್ದನ್ನು ಕೇಳುತ್ತೇವೆಯೇ? ಎಂಬ ವಿಚಾರವನ್ನು ಮಾಡಬೇಕು ಮತ್ತು ದೃಷ್ಟಿಯಿಂದ ಅವರ ಆಜ್ಞಾಪಾಲನೆಯನ್ನು ಮಾಡಬೇಕು. ನಾವು ಅವರ ಸೇವೆಯನ್ನು ಎಷ್ಟೇ ಮಾಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ವರ್ತನೆಯಿಂದಲಾದರೂ ಅವರಿಗೆ ದುಃಖವಾಗದಂತೆ ನೋಡಿಕೊಳ್ಳಬೇಕು. ಅವರು ದೇವರಿಗೆ ಸಮಾನರಾಗಿರುವುದರಿಂದ ಒಂದು ವೇಳೆ ನಮ್ಮಿಂದಾಗಿ ಅವರಿಗೆ ದುಃಖವಾದರೆ ದೇವರಿಗೇ ದುಃಖಿಸಿದ ಪಾಪ ತಗಲುವುದಿಲ್ಲವೇ? ಇದಕ್ಕಾಗಿ ನಾವು ಅವರು ಹೇಳಿದ ಪ್ರತಿಯೊಂದು ಅಂಶವನ್ನು ಕೇಳಬೇಕು. ಮಾತನಾಡುವಾಗ ಗೌರವದಿಂದ ಮಾತನಾಡಬೇಕು.

ತಾಯಿತಂದೆಯರು ಸಂತುಷ್ಟರಾದರೆ ಪ್ರತ್ಯಕ್ಷ ಪರಮೇಶ್ವರನೇ ಪ್ರಸನ್ನನಾಗುತ್ತಾನೆ. ಇದಕ್ಕಾಗಿ ಮಕ್ಕಳೇ, ತಾಯಿತಂದೆಯ ಮಾತನ್ನು ಕೇಳಿ. ಅವರಿಗೆ ಕೆಲಸಗಳಲ್ಲಿ ಸಹಾಯ ಮಾಡಿ. ಅವರನ್ನು ದೇವರಿಗೆ ಸಮಾನರೆಂದು ತಿಳಿದು ಕೊಂಡು ಅವರ ಸೇವೆ ಮಾಡಿ ಎಂದು ಸಂಸ್ಕೃತದ ಶ್ಲೋಕದಲ್ಲಿ ಹೇಳಲಾಗಿದೆ.

ಅನ್ಯ ಸಂಸ್ಕೃತಿಗೆ ಮರುಳಾಗಬೇಡಿ !

ಆಂಗ್ಲರ ಗುಲಾಮಗಿರಿಯಿಂದ ನಮ್ಮ ಭಾರತಭೂಮಿಯನ್ನು ಬಂಧಮುಕ್ತಗೊಳಿಸಲು ಅನೇಕ ಭಾರತೀಯರು ತಮ್ಮ ಪ್ರಾಣವನ್ನು ಅರ್ಪಿಸಿದರು. ಆದುದರಿಂದ ಆಂಗ್ಲರು ಬಿಟ್ಟುಹೋದರು, ಆದರೆ ನಾವು ಮಾತ್ರ ಅವರ ಭಾಷೆ ಮತ್ತು ಸಂಸ್ಕೃತಿಯನ್ನು ಹಿಡಿದು ಕುಳಿತುಕೊಂಡಿದ್ದೇವೆ. ಆಂಗ್ಲರನ್ನು ಭಾರತದಿಂದ ಓಡಿಸಲು ಕ್ರಾಂತಿಕಾರರು ಮಾಡಿದ ಪ್ರಯತ್ನದಂತೆ ನಾವೂ ನಮ್ಮ ಸಂಸ್ಕೃತಿಯ ಮೇಲಿನ ಆಕ್ರಮಣಕ್ಕೆ ಪ್ರತೀಕಾರ ಮಾಡಬೇಕು. ಸ್ವಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಉಳಿಸಬೇಕು. ಇದಕ್ಕಾಗಿ ಮೇಲಿನ ಅಂಶಗಳನ್ನು ನಾವು ಧರ್ಮಪಾಲನೆಯೆಂದು ಮಾಡಬೇಕು.

ಮಿತ್ರರೇ, ಇಂದಿನಿಂದಲೇ, ಈ ಕ್ಷಣದಿಂದಲೇ ನಿಮ್ಮ ತಾಯಿ ತಂದೆಯ ಹತ್ತಿರ ಗೌರವ ಆದರದಿಂದ ವ್ಯವಹರಿಸುವ ನಿಶ್ಚಯ ಮಾಡುವಿರಲ್ಲವೇ?

Leave a Comment