ಓದುವಾಗ ನಮ್ಮ ಕಣ್ಣಿನ ಆರೈಕೆ ಹೇಗೆ ಮಾಡಬೇಕು?

ಮಕ್ಕಳೇ, ನೀವು ಯಾರನ್ನಾದರೂ 'ಪುಸ್ತಕದ ಹುಳ' ಎಂದು ಕರೆದದ್ದನ್ನು ಕೇಳಿದ್ದೀರಾ? ಯಾರಾದರೂ ತುಂಬಾ ಓದುತ್ತಾರೆ ಆದರೆ ಅವರನ್ನು ಹಾಗೆ ಕರೆಯುತ್ತಾರೆ. ಆದರೆ 'ಪುಸ್ತಕವೊಂದು ಓದಿದರೆ ಜಗತ್ತು ಸುತ್ತಿ ಬಂದ ಹಾಗೆ' ಎಂದು ಆಂಗ್ಲದಲ್ಲಿ ಒಂದುಗಾದೆ ಇದೆ. ನಾವು ದಿನವಿಡೀ ಅನೇಕ ಕಾರಣಗಳಿಗೆ ಓದುತ್ತೇವೆ – ಅಧ್ಯಯನಕ್ಕೆ, ವರ್ತಮಾನ ಪತ್ರಿಕೆಗಳಲ್ಲಿ ಏನಿದೆ ಎಂದು, ಕಥೆ ಕಾದಂಬರಿಗಳನ್ನು, ಪತ್ರಗಳನ್ನು, ಸಂಗಣಕದ ಕಾರ್ಯದಲ್ಲಿ ಮುಂತಾದ ಸಂದರ್ಭಗಳಲ್ಲಿ. ಹೀಗೆ ಓದುವಾಗ ಮುಂದೆ ನೀಡಿರುವ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡರೆ ಕಣ್ಣುಗಳ ಜೋಪಾಸನೆಯಲ್ಲಿ ಸಹಾಯವಾಗುವುದು.

ಓದುವಾಗ ವಹಿಸಬೇಕಾದ ಜಾಗರೂಕತೆ

ಅ. ಬೆನ್ನು ನೇರವಾಗಿಟ್ಟು ಕುಳಿತುಕೊಂಡು ಓದಬೇಕು.

ಆ. ಓದುವಾಗ ಮೇಜು (ಟೇಬಲ್) ಮತ್ತು ಕುರ್ಚಿ ಸ್ಥಿರವಾಗಿರಬೇಕು. ಪುಸ್ತಕ ಮತ್ತು ಕಣ್ಣುಗಳ ಅಂತರ ೩೦ ರಿಂದ ೩೫ ಸೆಂ.ಮೀ.ನಷ್ಟಿರಬೇಕು.

ಇ. ಓದಲು ಕುಳಿತುಕೊಳ್ಳುವ ಕೋಣೆಯಲ್ಲಿ ಸಾಕಷ್ಟು ಬೆಳಕಿರಬೇಕು. ಸಾಧ್ಯವಾದರೆ ಬೆಳಕು ಪುಸ್ತಕದ ಹಿಂದೆ ಮತ್ತು ಎಡಗಡೆಯಿಂದ ಇರಬೇಕು. ಏಕೆಂದರೆ ಪುಸ್ತಕವನ್ನು ಬಲಗೈಯಲ್ಲಿ ಹಿಡಿದರೆ ಬೆರಳಿನ ನೆರಳು ಪುಸ್ತಕದ ಮೇಲೆ ಬೀಳದಹಾಗೆ ಸಹಾಯವಾಗುತ್ತದೆ.

ಈ. ಓದುವುದು, ಬೆರಳಚ್ಚು (ಟೈಪಿಂಗ್), ಚಿತ್ರಕಲೆ, ಹೊಲಿಗೆ ಮುಂತಾದವುಗಳನ್ನು ತುಂಬಾ ಹೊತ್ತು ಮಾಡಬೇಕಾದರೆ, ೧೫-೨೦ ನಿಮಿಷಗಳಿಗೊಮ್ಮೆ ದೂರದ ವಸ್ತುವಿನ ಮೇಲೆ ದೃಷ್ಟಿಯನ್ನು ಸ್ಥಿರಗೊಳಿಸಬೇಕು, ಅಥವಾ ೧-೨ ನಿಮಿಷಕ್ಕೆ ಕಣ್ಣು ರೆಪ್ಪೆಗಳನ್ನು ಮುಚ್ಚಬೇಕು, ಅಥವಾ ಯಾವುದಾದರೊಂದು ವುಸ್ತುವಿನ ಮೇಲೆ ಏಕಾಗ್ರತೆಯನ್ನು ಸಾಧಿಸಬೇಕು.

ಉ. ಕಣ್ಣುಗಳಿಗೆ ಒತ್ತಡವಾಗಬಾರದೆಂದು, ಮಧ್ಯಮಧ್ಯದಲ್ಲಿ ತಂಪು ನೀರಿನಿಂದ ಕಣ್ಣುಗಳನ್ನು ತೊಳೆಯುವುದು, ಪ್ರತಿದಿನ ಕಣ್ಣುಗಳ ವ್ಯಾಯಾಮ ಮಾಡಬೇಕು.