ದೇವಸ್ಥಾನ ಮತ್ತು ತೀರ್ಥಕ್ಷೇತ್ರದಲ್ಲಿರುವ ಪಾವಿತ್ರ್ಯವನ್ನು ಕಾಪಾಡಿ

ಮಕ್ಕಳೇ ನಾವು ತೀರ್ಥಕ್ಷೇತ್ರ ಮತ್ತು ದೇವಸ್ಥಾನಕ್ಕೆ ಭೇಟಿ ಮಾಡುವಾಗ ನಮ್ಮ ತಪ್ಪು ನಡುವಳಿಕೆಯಿಂದ ಆ ಕ್ಷೇತ್ರದ ಪಾವಿತ್ರ್ಯವನ್ನು ಹಾಳು ಮಾಡಬಾರದು.

ದೇವಸ್ಥಾನದ ಪಾವಿತ್ರತೆಯನ್ನು ಕಾಪಾಡುವಾಗ ಕೆಲವು ಆಂಶಗಳನ್ನು ಮನಸ್ಸಿನಲ್ಲಿಡಿ

೧. ದೇವಸ್ಥಾನದ ಪರಿಸರದಲ್ಲಿರುವಾಗ ಜೋರಾಗಿ ಮಾತನಾಡುವುದು, ಆಟವಾಡುವುದು, ದೂರವಾಣಿಯಲ್ಲಿ ಜೋರಾಗಿ ಮಾತನಾಡುವುದು ಮಾಡಬಾರದು.

2. ಪಾದರಕ್ಷೆಗಳನ್ನು ದೇವಸ್ಥಾನದ ಒಳಪರಿಸರದಲ್ಲಿ ಹಾಕಿ ಒಡಾಡಬಾರದು; ಅದು ವಿಹಾರ ತಾಣವಲ್ಲ.

3. ದೇವಸ್ಥಾನದ ಪರಿಸರದಲ್ಲಿ ಬಾಳೆಹಣ್ಣಿನ ಸಿಪ್ಪೆ, ತೆಂಗಿನಕಾಯಿ ಚಿಪ್ಪು ಮತ್ತು ಪ್ಲಾಸ್ಟಿಕ್ ತೊಟ್ಟೆಗಳನ್ನು ಬಿಸಾಡಬಾರದು. ಎಲ್ಲಾದರು ಈ ರೀತಿ ಬಿದ್ದದನ್ನು ನೋಡಿದಲ್ಲಿ ಅದನ್ನು ಕಸದತೊಟ್ಟಿಯಲ್ಲಿ ಹಾಕಬೇಕು.

4. ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳು ಹಿಂದು ಧರ್ಮದ ಜೀವಾಳವಾಗಿವೆ ಎಂದು ಸದಾ ನೆನಪಿನಲ್ಲಿರಲಿ ಮಕ್ಕಳೇ!