ಮಕ್ಕಳೇ, ನಿಮ್ಮಲ್ಲಿ ಈ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿರಿ !

ತಮ್ಮಲ್ಲಿ ಗುಣಗಳನ್ನು ಬೆಳೆಸಲು ಒಳ್ಳೆಯ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು. ಈ ರೀತಿಯ ಕೆಲವು ಒಳ್ಳೆಯ ಅಭ್ಯಾಸಗಳನ್ನು ನಾವು ತಿಳಿದುಕೊಳ್ಳಲಿದ್ದೇವೆ, ಅದನ್ನು ನಾವೆಲ್ಲರೂ ಆಚರಣೆಗೆ ತರುವ…

೧. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಹಾಗೂ ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ.

೨. ರಸ್ತೆಯಲ್ಲಿ ಹೋಗುವಾಗ ಉಗುಳಬೇಡಿ, ಕಸವನ್ನು ಅಲ್ಲಲ್ಲಿ ಎಸೆಯಬೇಡಿ.

೩. ನಿಮ್ಮಲ್ಲಿ ತಿನ್ನುವ ಪದಾರ್ಥಗಳಿದ್ದರೆ ಅದನ್ನು ಎಲ್ಲರೊಂದಿಗೂ ಹಂಚಿ ತಿನ್ನಬೇಕು. ಅಂದರೆ ಸ್ವಂತ ಸುಖದಲ್ಲಿ ಎಲ್ಲರನ್ನೂ ಸಹಭಾಗಿಗಳಾಗಿ ಮಾಡಿಕೊಳ್ಳಬೇಕು.

೪. ಕೊಟ್ಟ ಮಾತು ಮತ್ತು ಸಮಯವನ್ನು ತಪ್ಪಬಾರದು.

೫. ಮನೆಯಿಂದ ಹೊರಗಡೆ ತೆರಳುವಾಗ ಪ್ರತಿಯೊಂದು ಬಾರಿಯೂ ದೇವರಿಗೆ ನಮಸ್ಕರಿಸಿ ಹೊರಡಬೇಕು, ಮತ್ತು ಮನೆಯಲ್ಲಿರುವ ಹಿರಿಯರಿಗೆ ‘ಎಲ್ಲಿ ಹೋಗುತ್ತಿದ್ದೇನೆ’ ಎಂದು ತಿಳಿಸಿ ಹೋಗಬೇಕು.

೬. ಯಾರಾದರೂ ಸಿಕ್ಕಿದರೆ ನಗು ಮುಖದಿಂದ ಅವರನ್ನು ವಂದಿಸಬೇಕು. ಎಲ್ಲರೊಂದಿಗೂ ನಮ್ರತೆಯಿಂದ ವ್ಯವಹರಿಸಬೇಕು.

೭. ವಯಸ್ಸಿನಲ್ಲಿ, ಜ್ಞಾನದಲ್ಲಿ ನಮಗಿಂತ ಹಿರಿಯರನ್ನು ಮತ್ತು ಸಂತರನ್ನು ಗೌರವದಿಂದ ಕಣಬೇಕು.

೮. ಇಬ್ಬರು ಮಾತನಾಡುವಾಗ ಮಧ್ಯದಲ್ಲಿ ಮಾತನಾಡಬಾರದು.

೯. ದೊಡ್ಡವರ ಮುಂದೆ ಕುರ್ಚಿ ಅಥವಾ ಎತ್ತರದ ಸ್ಥಳದಲ್ಲಿ ಕುಳಿತುಕೊಳ್ಳಬಾರದು.

೧೦. ಯಾರನ್ನೂ ಹೀಯಾಳಿಸಿ ಅಥವಾ ನಿಂದಿಸಿ ಮಾತನಾಡಬಾರದು.

೧೧. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಬೇಕು. ಅವಶ್ಯಕತೆಗನುಸಾರ ಇತರರಿಗೆ ಸಹಾಯ ಮಾಡಬೇಕು.

೧೨. ಯಾರ ಬಗ್ಗೆಯೂ ಕೆಟ್ಟ ವಿಚಾರಗಳನ್ನು ಮಾಡಬಾರದು ಮತ್ತು ಯಾರಿಗೂ ದುಃಖವನ್ನು ನೀಡಬಾರದು.

೧೩. ನಾವು ಏನಾದರೂ ವಿಷಯವನ್ನು ಕಲಿತರೆ, ಆ ಜ್ಞಾನವನ್ನು ಇತರರಿಗೂ ಕಲಿಸಿಕೊಡಿ. ಜ್ಞಾನವನ್ನು ಹಂಚಿಕೊಂಡರೆ ಬೆಳೆಯುತ್ತದೆ ಎಂದು ನೆನಪಿರಲಿ.

೧೪. ಎಲ್ಲರೊಂದಿಗೆ ಮಾತನಾಡುವಾಗ ನಾವು ನಮ್ಮ ಮಾತೃಭಾಷೆಯಲ್ಲಿ ಅಥವಾ ಸ್ವದೇಶೀ ಭಾಷೆಯನ್ನು ಬಳಸಬೇಕು. ಆಂಗ್ಲ ಭಾಷೆಗಿಂತ ಕನ್ನಡ ಅಥವಾ ಮಾತೃಭಾಷೆಯು ಹೆಚ್ಚು ಸಾತ್ತ್ವಿಕವಾಗಿರುತ್ತದೆ. ಆದ್ದರಿಂದ ಆಂಗ್ಲ ಶಬ್ಧಗಳನ್ನು ಬಳಸಬೇಡಿ ಬದಲಾಗಿ ಕನ್ನಡ ಶಬ್ಧಗಳನ್ನು ಬಳಸಬೇಕು. ಉದಾ.:

ಅ. ಮಕ್ಕಳೇ ನೀವೆಲ್ಲರೂ ತಮ್ಮ ತಂದೆ-ತಾಯಿಯನ್ನು ಮಮ್ಮೀ-ಡ್ಯಾಡಿ ಅಲ್ಲ ಬದಲಾಗಿ ಅಮ್ಮ- ಅಪ್ಪ ಎಂದು ಕರೆಯಿರಿ. ಆಧುನಿಕ ವಿದೇಶೀ ಶಬ್ದ ಅಂದರೆ ಸಹೋದರಿಯನ್ನು ‘ಸಿಸ್’ ಅಥವಾ ಸಹೋದರನನ್ನು ‘ಬ್ರೋ’ ಎಂದು ಕರೆಯಬೇಡಿ. ಅಣ್ಣ, ಅಕ್ಕ ಈ ರೀತಿ ಸಾತ್ವಿಕ ಶಬ್ಧಗಳನ್ನು ಬಳಸಿರಿ.
ಆ. ಫೋನ್ ಮಾಡುವಾಗ ಅಥವಾ ಯಾರನ್ನಾದರೂ ಭೇಟಿಯಾದಾಗ ‘ಹಾಯ್’ ‘ಹೆಲೋ’ ಬೇಡ, ‘ನಮಸ್ಕಾರ’ ಎಂದು ಹೇಳಿರಿ.
ಇ. ತಪ್ಪಾದಾಗ ‘ಸಾರೀ’ ಬೇಡ ‘ಕ್ಷಮಿಸಿ’ ಎಂದು ಹೇಳಿರಿ.
ಈ. ‘ಥಾಂಕ್ಯೂ’ ಅಲ್ಲ ‘ಧನ್ಯವಾದ’ ಎಂದು ಹೇಳಿರಿ.
ಉ. ‘ಗುಡ್ ಮಾರ್ನಿಂಗ್’ ಬೇಡ ‘ಸುಪ್ರಭಾತ’ ಎನ್ನಿರಿ.
ಊ. ತಮ್ಮ ಸಹಿಯನ್ನು ಆಂಗ್ಲದಲ್ಲಿ ಬೇಡ ಬದಲಾಗಿ ತಮ್ಮ ಮಾತೃಭಾಷೆಯಲ್ಲಿ ಮಾಡಬೇಕು.

೧೫. ಯಾರೊಡನೆಯಾದರೂ ಮಾತನಾಡುವಾಗ ಎದುರಿನ ವ್ಯಕ್ತಿಯ ಮಾತನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳಿ, ಮಧ್ಯದಲ್ಲಿ ಮಾತನಾಡಬೇಡಿ. ಅನಂತರ ವಿನಮ್ರರಾಗಿ ಉತ್ತರ ನೀಡಬೇಕು.

೧೬. ಮೊಬೈಲ್‌ನಲ್ಲಿ ಆಟ ಆಡುವುದು ಹಾಗೂ ಟಿ.ವಿ ನೋಡುವುದರಲ್ಲಿ ಸಮಯವನ್ನು ಪೋಲು ಮಾಡಬಾರದು. ದೇವತೆಗಳು, ಸಂತರು ಹಾಗೂ ರಾಷ್ಟ್ರಪುರುಷರ ಜೀವನ ಚರಿತ್ರೆಗಳನ್ನು ನೋಡಬೇಕು. ಗಿಡ ನೆಡುವುದು, ಚಿತ್ರ ಬಿಡಿಸುವುದರಲ್ಲಿ ಸಮಯ ನೀಡಬೇಕು.

೧೭. ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ತತ್ಪರರಾಗಿರಿ. ಯಾರಾದರೂ ಸಹಾಯ ಕೇಳಿದಾಗ ತಕ್ಷಣ ಮುಂದೆ ಬನ್ನಿರಿ.

೧೮. ತಮ್ಮ ಸ್ನೇಹಿತರಿಗೆ, ಗೆಳತಿಯರೊಂದಿಗೆ ಜಗಳವಾಡಬಾರದು. ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕು.

೧೯. ಯಾರೊಂದಿಗೂ ಉದ್ಧಟತನದಿಂದ ಮಾತನಾಡಬಾರದು.

೨೦. ಧರ್ಮಹಾನಿಯನ್ನು ನಿಲ್ಲಿಸಲು ಎಂದಿಗೂ ತತ್ಪರರಾಗಿರಿಬೇಕು.

೨೧. ದೇವತೆಗಳು, ಸಂತರು, ರಾಷ್ಟ್ರಪುರುಷರು ಇತ್ಯಾದಿ ಚಿತ್ರಗಳಿರುವ ವಸ್ತುಗಳನ್ನು ಬಳಸಬಾರದು.

೨೨. ಚಲನಚಿತ್ರಗಳು ಬೇಡ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಕಥೆಗಳನ್ನು, ಪುಸ್ತಕಗಳನ್ನು ಓದಬೇಕು. ಚಲನಚಿತ್ರಗಳ ಗೀತೆಗಳು ಬೇಡ, ಬದಲಾಗಿ ದೇಶಭಕ್ತಿಯ ಮೇಲಾಧಾರಿತ ಗೀತೆಗಳನ್ನು ಕೇಳಿ ಹಾಗೂ ಹಾಡಬೇಕು.

೨೩. ರಾಷ್ಟ್ರಗೀತೆ ನಡೆಯುತ್ತಿರುವಾಗ ತಕ್ಷಣ ಸಾವಧಾನದ ಮುದ್ರೆಯಲ್ಲಿ ನಿಂತುಕೊಳ್ಳಬೇಕು.

೨೪. ತಮ್ಮ ದೇಶದ ಬಗ್ಗೆ ಅಭಿಮಾನ ಬೆಳೆಸಬೇಕು.

೨೫. ತಮ್ಮ ಸಂಸ್ಕೃತಿಯ ಅಭ್ಯಾಸ ಮಾಡಬೇಕು ಹಾಗೂ ಅದರ ಮಹತ್ವವನ್ನು ಬೇರೆಯವರಿಗೂ ತಿಳಿಸಬೇಕು.

೨೬. ಭಗವಂತನನ್ನು ಪ್ರಾರ್ಥಿಸಿರಿ ಹಾಗೂ ಆಯಾ ಸಮಯದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೨೭. ಎಲ್ಲರ ಬಗ್ಗೆ ಮನಸ್ಸಿನಲ್ಲಿ ಪ್ರೀತಿಯ ಭಾವನೆಯಿಟ್ಟುಕೊಳ್ಳಬೇಕು.

Leave a Comment