ಮಕ್ಕಳೇ, ಶಿಕ್ಷಕರೊಂದಿಗೆ ನೀವು ಹೇಗೆ ವರ್ತಿಸುವಿರಿ?

೧. ಶಾಲೆಯಲ್ಲಿ ಶಿಕ್ಷಕರನ್ನು 'ಸರ್' ಅಥವಾ 'ಮೇಡಂ' ಬದಲು 'ಗುರುಗಳೇ' ಎಂದು ಸಂಬೋಧಿಸಿ.

೨. ಶಿಕ್ಷಕರ ಭೇಟಿಯಾದಾಗ, ಕೈ ಜೋಡಿಸಿ 'ನಮಸ್ಕಾರ ಗುರುಗಳೇ' ಎಂದು ವಂದಿಸಿ.

೩. ಉತ್ಸವಗಳ ಸಂದರ್ಭದಲ್ಲಿ ಶಿಕ್ಷಕರನ್ನು ನಮಸ್ಕರಿಸುವಾಗ, ಬಗ್ಗಿ ನಮಸ್ಕರಿಸಿ.

೪. ಶಿಕ್ಷರತ್ತ ಆದರದಿಂದ ವ್ಯವಹರಿಸಿ; ಅವರನ್ನು ಮಾತನಾಡಿಸುವಾಗ ನಿಮ್ಮಲ್ಲಿ ನಮ್ರತೆ ಮತ್ತು ಪ್ರೇಮವಿರಲಿ.

೫. ನಿಮ್ಮ ತರಗತಿಯಲ್ಲಿರುವ ಇತರ ಮಕ್ಕಳಿಗೂ ಶಿಕ್ಷಕರನ್ನು ಗೌರವಿಸುವಂತೆ ಪ್ರೇರೇಪಿಸಿ.

೬. ಶಿಕ್ಷಕರು ನಮಗೆ ಅನೇಕ ವಿಷಯಗಳಲ್ಲಿ ಜ್ಞಾನದ ಭಂಡಾರವನ್ನೇ ನೀಡುತ್ತಾರೆ, ಆದುದರಿಂದ ನಾವು ಅವರಲ್ಲಿ ಕೃತಜ್ಞರಾಗಿರಬೇಕು.

ಹಿರಿಯರಿಗೆ ಸೂಚನೆ: ಮೇಲೆ ಕೊಟ್ಟಿರುವ ವಿಷಯಗಳನ್ನು ನೀವು ಸಂಸ್ಕಾರವರ್ಗ ಅಥವಾ ಶಾಲೆಗಳಲ್ಲಿ ಮಕ್ಕಳಿಗೆ ತಿಳಿಸಲು ಉಪಯೋಗಿಸಬಹುದು. ಇದರಿಂದ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಗೌರವ ಮತ್ತು ಆದರ ಹೆಚ್ಚಾಗುತ್ತದೆ. ನಾವು ಇಂತಹ ವಿಷಯಗಳನ್ನು ಮಕ್ಕಳಿಗೆ ತಿಳಿಸುವುದರಿಂದ ಶಿಕ್ಷಕರಿಗೂ ಇದರ ಬಗ್ಗೆ ಒಳ್ಳೆಯದೆನಿಸಿ ಅವರೂ ಸಹ ಸುಸಂಸ್ಕಾರಿತ ಪೀಳಿಗೆಯನ್ನು ನಿರ್ಮಿಸುವ ಈ ಈಶ್ವರೀ ಕಾರ್ಯದಲ್ಲಿ ಸಹಭಾಗಿಯಾಗುವರು.

– ಕು. ಗಾಯತ್ರೀ ಬುಟ್ಟೆ