ಮಕ್ಕಳೇ, ಪಠ್ಯಪುಸ್ತಕದಲ್ಲಿರುವ ಪ್ರತಿಜ್ಞೆಯನ್ನು ಆಚರಣೆಗೆ ತರೋಣ !

ಪ್ರತಿಜ್ಞೆಯನ್ನು ಆಚರಣೆಗೆ ತಂದರೆ, ಮಕ್ಕಳಲ್ಲಿ ರಾಷ್ಟ್ರಾಭಿಮಾನ ನಿರ್ಮಾಣವಾಗಿ ಅವರು ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆಗೆ ಸಿದ್ಧರಾಗುತ್ತಾರೆ

'ವಿದ್ಯಾರ್ಥಿ ಮಿತ್ರರೇ, ನಿಮ್ಮ ಪಠ್ಯಪುಸ್ತಕಗಳ ಮೊದಲನೆಯ ಪುಟದಲ್ಲಿ ಒಂದು ಪ್ರತಿಜ್ಞೆಯನ್ನು ನೀಡಿದ್ದಾರೆ, ಅದು ಏಕೆ ನೀಡಿದ್ದಾರೆ? ನಮ್ಮ ಜೀವನದಲ್ಲಿ ಅಳವಡಿಸಬೇಕಾದ ಪ್ರತಿಯೊಂದು ಮೌಲ್ಯವೂ ಈ ಪ್ರತಿಜ್ಞೆಯಲ್ಲಿದೆ. ಪ್ರತಿಜ್ಞೆಯ ಪ್ರಕಾರ ಜೀವನ ನಡೆಸುವುದೇ ನಿಜವಾದ ಶಿಕ್ಷಣವಾಗಿದೆ. ಈ ಪ್ರತಿಜ್ಞೆಯು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಆತ್ಮಸ್ವಾರೂಪವಾಗಿದೆ. ಇವತ್ತು ನಾವು ಪರೀಕ್ಷಾರ್ಥಿಗಳಾಗಿರುವುದರಿಂದ, ನೈತಿಕ ಮೌಲ್ಯಕ್ಕಿಂತ ಅಂಕಗಳಿಗೆ ಹೆಚ್ಚಿನ ಮಹತ್ತ್ವ ನೀಡುತ್ತೇವೆ. ಪರೀಕ್ಷೆಯಲ್ಲಿ ಈ ಪ್ರತಿಜ್ಞೆಯ ವಿಷಯದಲ್ಲಿ ಪ್ರಶ್ನೆಗಳು ಬರುವುದಿಲ್ಲ, ಆದುದರಿಂದ ನಮಗೆ ಅದರ ಅರ್ಥ ತಿಳಿದುಕೊಂಡು, ಅದರ ಪ್ರಕಾರ ಜೀವಿಸುವುದು ಮಹತ್ತ್ವದ್ದಲ್ಲವೆನಿದುತ್ತದೆ. ಎಲ್ಲಿಯವರೆಗೆ ಈ ಸ್ಥಿತಿ ಬದಲಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗುವುದಿಲ್ಲ ಮತ್ತು ನಾವು ರಾಷ್ಟ್ರದ ರಕ್ಷಣೆಗಾಗಿ ಏನಾದರೂ ಮಾಡಬೇಕೆಂದೂ ನಿಶ್ಚಯಿಸುವುದಿಲ್ಲ. ನಾವೆಲ್ಲರೂ ಈ ಪ್ರತಿಜ್ಞೆಯ ಪ್ರಕಾರ ಜೀವನ ನಡೆಸಲು ಪ್ರಯತ್ನ ಮಾಡಿ ರಾಷ್ಟ್ರ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಸಿದ್ಧರಾಗೋಣ.

ಪ್ರತಿಜ್ಞೆಯಲ್ಲಿರುವ ವಾಕ್ಯಗಳ ಅರ್ಥ

ಈಗ ನಾವು ಈ ಪ್ರತಿಜ್ಞೆಯಲ್ಲಿರುವ ವಾಕ್ಯಗಳ ಅರ್ಥವನ್ನು ತಿಳಿದುಕೊಳ್ಳೋಣ

ಅ. 'ನನ್ನ ದೇಶ ಭಾರತ !' : ನಾವು 'ನನ್ನ ದೇಶ ಭಾರತ' ಎಂದು ಹೇಳುತ್ತೇವೆ; ಆದರೆ ನಮಗೆ ಒಳಗಿನಿಂದ ಅದು 'ನನ್ನ'ದೆಂಬ ಭಾವನೆ ಬರಬೇಕು. ಹೀಗಾದರೆ ಮಾತ್ರ ನಮಗೆ ಅದರ ಜೋಪಾಸನೆ ಮಾಡಿ ಅದನ್ನು ಬೆಳೆಸಲು ಆಗುತ್ತದೆ. ಪ್ರತಿಯೊಬ್ಬರಿಗೂ 'ಈ ದೇಶ ನನ್ನದಾಗಿದೆ' ಎಂದೆನಿಸಿದರೆ ಮಾತ್ರ ಎಲ್ಲರೂ ದೇಶದ ರಕ್ಷಣೆಗಾಗಿ ಸಿದ್ಧರಾಗುತ್ತಾರೆ; ದೇಶದಲ್ಲಿ ಯಾವುದೇ ಸಮಸ್ಯೆ ಇರಲಾರದು; ಮತ್ತು ನಮ್ಮ ದೇಶ ನಿಜವಾಗಿಯೂ 'ಸುಜಲಾಂ ಸುಫಲಾಂ' ಆಗಿ ದೇಶದ ಸರ್ವಾಂಗೀಣ ಅಭಿವೃದ್ಧಿಯಾಗುವುದು.

ಆ. 'ಭಾರತೀಯರೆಲ್ಲರೂ ನನ್ನ ಬಂಧುಗಳು !' : 'ದೇಶದ ಪ್ರತಿಯೊಬ್ಬ ವ್ಯಕ್ತಿಯೂ ನನ್ನ ಸಹೋದರ/ಸಹೋದರಿಗೆ ಸಮಾನ'. 'ಸಂಪೂರ್ಣ ದೇಶವೇ ನನ್ನ ಕುಟುಂಬವಾಗಿದೆ' ಎನ್ನುವ ವ್ಯಾಪಕತೆ ನಮ್ಮಲ್ಲಿರಬೇಕು, ಆದರೆ ನಿಜಜೀವನದಲ್ಲಿ ನಾವು ಹೀಗೆ ವ್ಯವಹರಿಸುತ್ತೆವೆಯೇ? ಇದಕ್ಕೆ ನಕಾರಾತ್ಮಕ ಉತ್ತಾರವೇ ಬರುತ್ತದೆ! ನಾವು ಇಂತಹ ವ್ಯಾಪಕೆತೆನ್ನು ಬೆಳೆಸಿಕೊಂಡರೆ, ನಮ್ಮ ಮಧ್ಯೆ ಯಾವುದೇ ಘರ್ಷಣೆಗಳು ಬರಲಾರವು. ಎಲ್ಲರೂ ಆನಂದದಿಂದ ಇರಬಹುದು. ಈಗ ಶಾಲೆಯ ಮಕ್ಕಳು ಕೂಡ ತರಗತಿಯಲ್ಲಿ ಜಗಳವಾಡುತ್ತಾರೆ, ಇತರರನ್ನು ನಿಂದಿಸುತ್ತಾರೆ. 'ಈ ವಿಶ್ವವೇ ನನ್ನ ಮನೆ' ಎಂಬ ವ್ಯಾಪಕ ವಿಚಾರ ನಮ್ಮೆಲ್ಲೆರಲ್ಲಿ ಬಂದರೆ ರಾಮರಾಜ್ಯವು ಬಂದಂತೆ.

ಇ. 'ನನ್ನ ದೇಶದ ಮೇಲೆ ನನಗೆ ಅಪಾರ ಪ್ರೇಮವಿದೆ' ! : ನನಗೆ ನನ್ನ ದೇಶದ ಮೇಲೆ ಅಪಾರ ಪ್ರೇಮವಿದ್ದರೆ, ನನ್ನ ದೇಶದ ಪ್ರತಿಯೊಂದು ವಸ್ತು ಮತ್ತು ವ್ಯಕ್ತಿಯ ಮೇಲೆಯೂ ನನಗೆ ಪ್ರಾಣಕ್ಕಿಂತ ಹೆಚ್ಚು ಪ್ರೇಮವಿರಬೇಕು. ನಾವು ಈ ಭಾವನೆಯನ್ನು ಬೆಳೆಸಿಕೊಂಡರೆ ನಮ್ಮ ದೇಶದಲ್ಲಿ ಯಾವುದೇ ಸಮಸ್ಯೆ ಇರಲಾರದು. ದೇಶದ ಪ್ರತಿಯೊಂದು ಕುಟುಂಬ, ಪರಿಣಾಮವಾಗಿ ಇಡೀ ದೇಶವೇ ಆನಂದಭರಿತವಾಗುವುದು.

ಈ. 'ನನ್ನ ದೇಶದ ಸಮೃದ್ಧ ಮತ್ತು ವೈವಿಧ್ಯಮಯ ಪರಂಪರೆಯ ಬಗ್ಗೆ ನನಗೆ ಅಭಿಮಾನವಿದೆ !' : ವಿದ್ಯಾರ್ಥಿ ಮಿತ್ರರೇ, ನಮ್ಮ ಪರಂಪರೆ ಅಂದರೆ ನಮ್ಮ ಸಂಸ್ಕೃತಿ. ನಮ್ಮ ಸಂಸ್ಕೃತಿಯು ಇಡೀ ಜಗತ್ತಿಗೆ ಮಾದರಿ ಆಗಬಲ್ಲ ಶ್ರೇಷ್ಠ ಸಂಸ್ಕೃತಿಯಾಗಿದೆ. 'ಪ್ರತಿಯೊಬ್ಬ ವ್ಯಕ್ತಿಯೂ ಆನಂದದಿಂದಿರಬೇಕು' ಎಂದು ನಮ್ಮ ಸಂಸ್ಕೃತಿಯು ಕಲಿಸುತ್ತದೆ. ತ್ಯಾಗವೇ ನಮ್ಮ ಪರಂಪರೆಯಾಗಿದೆ. ನಾವು ಪರಸ್ಪರ ಭೇಟಿಯಾದಾಗ ನಮಸ್ಕರಿಸುತ್ತೇವೆ; ಹಣೆಗೆ ತಿಲಕ ಹಚ್ಚಿಕೊಳ್ಳುತ್ತೇವೆ, ಇಂತಹ ಪರಂಪರೆಯ ಬಗ್ಗೆ ನಮಗೆ ಅಭಿಮಾನವಿರಬೇಕು. ಈ ಪರಂಪರೆಯಿಂದಲೇ ನಮ್ಮಲ್ಲಿ ರಾಷ್ಟ್ರಾಭಿಮಾನ ಜಾಗೃತವಾಗುತ್ತದೆ. ಆಧುನೀಕರಣ ಮತ್ತು ಪಾಶ್ಚಾತ್ಯರ ಅಂಧಾನುಕರಣೆಯಲ್ಲಿ ನಾವು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ.

ಉ. 'ಈ ಪರಂಪರೆಯ ಪಾಲಕನ ಪಾತ್ರಕ್ಕೆ ಅರ್ಹನಾಗಲು ನಾನು ಸತತ ಪ್ರಯತ್ನ ಮಾಡುತ್ತೇನೆ' : ಪರಂಪರೆಯ ಪಾಲನೆ ಮಾಡುವುದೆಂದರೆ, ಪರಂಪರೆಗನುಸಾರ ಆಚರಣೆಗಳನ್ನು ಮಾಡುವುದು. ನಮ್ಮ ಮಾತು, ನಡವಳಿಕೆ ಎಲ್ಲವೂ ನಮ್ಮ ಪರಂಪರೆಗನುಸಾರವಾಗಿರಬೇಕು. ಆದರೆ ನಿಜಜೀವನದಲ್ಲಿ ನಾವು ಹೇಗಿರುತ್ತೇವೆ ನೋಡೋಣ. ನಾವು ದೂರಧ್ವನಿಯಲ್ಲಿ 'ನಮಸ್ಕಾರ' ಎನ್ನದೆ 'ಹಲೋ' ಎನ್ನುತ್ತೇವೆ. ನಮ್ಮ ಹೆಣ್ಣುಮಕ್ಕಳು ಸಂಸ್ಕೃತಿಗನುಸಾರ ಬಟ್ಟೆಗಳನ್ನು ಧರಿಸದೆ ಪುರುಷರ ಹಾಗೆ 'ಜೀನ್ಸ್, ಟೀ ಶರ್ಟ್' ಧರಿಸುತ್ತಾರೆ, ಕುಂಕುಮದ ಬೊಟ್ಟು ಹಚ್ಚುವುದಿಲ್ಲ, ಬಳೆಗಳನ್ನು ಹಾಕಿಕೊಳ್ಳುವುದಿಲ್ಲ. ನಾವು ನಮ್ಮ ಪರಂಪರೆಯನ್ನು ಪಾಲಿಸದಿದ್ದರೆ, ಅದರ ಪಾಲಕನ ಪಾತ್ರಕ್ಕೆ ಹೇಗೆ ತಾನೇ ಅರ್ಹರಾಗುತ್ತೇವೆ?

ಊ. 'ನನ್ನ ಪಾಲಕರನ್ನು, ಗುರುಹಿರಿಯರನ್ನು ಗೌರವಿಸುತ್ತೇನೆ ಮತ್ತು ಅವರನ್ನು ಆದರದಿಂದ ಮಾತನಾಡಿಸುತ್ತೇನೆ !' : ಪ್ರತಿಜ್ಞೆಯ ಈ ಸಾಲಿನಲ್ಲಿ ಹೇಳಿರುವಂತೆ ಪ್ರತಿದಿನ ನಾವು ನಮ್ಮ ತಂದೆ-ತಾಯಿಗೆ ನಮಸ್ಕಾರ ಮಾಡುವುದಿಲ್ಲ. ಗುರುಗಳ ಆದರ ಮಾಡುವುದಿಲ್ಲ. ಕೆಲವು ಮಕ್ಕಳು ತಮ್ಮ ಗುರುಗಳನ್ನು ಹೀಯಾಳಿಸುತ್ತಾರೆ. ಇದೆಲ್ಲವೂ ಪಾಪವಾಗಿದೆ. ಇವತ್ತಿನಿಂದ ನಾವು ನಮ್ಮ ತಂದೆ ತಾಯಿಯನ್ನು ಮತ್ತು ಗುರು ಹಿರಿಯರನ್ನು ಪ್ರತಿದಿನ ವಂದಿಸೋಣ. ನಾವು ಎಲ್ಲರನ್ನೂ ಸೌಜನ್ಯತೆಯಿಂದ ಕಂಡರೆ ಯಾರೂ ನಮ್ಮ ಜೊತೆ ವೈಷಮ್ಯ ಇಟ್ಟುಕೊಳ್ಳುವುದಿಲ್ಲ.

ಋ. 'ನನ್ನ ದೇಶ, ಮತ್ತು ದೇಶದ ಪ್ರಜೆಗಳತ್ತ ನಿಷ್ಠೆಯನ್ನಿಡುವ ಪ್ರತಿಜ್ಞೆಯನ್ನು ಮಾಡುತ್ತೇನೆ !' : ನಾವು ಹೀಗೆ ಪ್ರತಿಜ್ಞೆ ಮಾಡುತ್ತೇವೆ, ಆದರೆ ದೇಶದ ಬಾಂಧವರ ಪ್ರಗತಿ ಮತ್ತು ದೇಶದ ರಕ್ಷಣೆಗಾಗಿ ನಾವು ಏನು ಮಾಡುತ್ತೇವೆ? ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನ ನಮ್ಮ ಮೇಲೆ ಯುದ್ಧ ಸಾರಲು ತಯಾರಿ ನಡೆಸುತ್ತಿವೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ನಮ್ಮ ದೇಶದ, ಸಂಸ್ಕೃತಿಯ ಮತ್ತು ಧರ್ಮದ ರಕ್ಷಣೆಯ ಏಕಮೇವ ಗುರಿಗೆ ನಿಷ್ಠರಾಗಬೇಕು.

ಎ. 'ಇವರ (ರಾಷ್ಟ್ರ ಮತ್ತು ದೇಶ ಬಾಂಧವರ) ಕಲ್ಯಾಣದಲ್ಲಿ ಮತ್ತು ಸಮೃದ್ಧಿಯಲ್ಲಿಯೇ ನನ್ನ ಸುಖವಿದೆ !' : ನಾವು ಮಾಡುವ ಪ್ರತಿಯೊಂದು ಕೃತಿಯೂ ಇತರರಿಗೋಸ್ಕರ ಇರಬೇಕು. ಇತರರ ಪ್ರಗತಿಯಾದರೆ ನಮಗೆ ಆನಂದವಾಗಬೇಕು. ಆದರೆ ಇವತ್ತಿನ ಸಮಾಜದಲ್ಲಿ ನಮಗೆ ಅಸುರೀ ವೃತ್ತಿಯು ಎಲ್ಲೆಡೆ ಕಾಣಸಿಗುತ್ತದೆ.

ವಿದ್ಯಾರ್ಥಿ ಮಿತ್ರರೇ, ನಾವು ಶಾಲೆಯಲ್ಲಿ ಪ್ರತಿದಿವಸ ಈ ಪ್ರತಿಜ್ಞೆಯನ್ನು ಮಾಡುತ್ತೇವೆ, ಆದರೆ 'ಈ ಪ್ರತಿಜ್ಞೆಯ ಪ್ರಕಾರ ಜೀವನ ನಡೆಸಬೇಕು' ಎಂಬ ವಿಚಾರ ಕೂಡ ನಮ್ಮ ಮನಸ್ಸಿನಲ್ಲಿ ಬಂದಿರುವುದಿಲ್ಲ. ಇವತ್ತಿನಿಂದಾದರೂ ನಾವು ಈ ಪ್ರತಿಜ್ಞೆಯಂತೆ ಜೀವಿಸಲು ಪ್ರಯತ್ನ ಮಾಡೋಣ. ಛತ್ತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸುವ ಪ್ರತಿಜ್ಞೆಯನ್ನು ಮಾಡಿ, ಅದನ್ನು ತೀರಿಸಿದರು. ಅವರಿಗದು ಹೇಗೆ ಸಾಧ್ಯವಾಯಿತು? ಶಿವಾಜಿ ಮಹಾರಾಜರು ತಮ್ಮ ಕುಲದೇವತೆಯಾದ ಭವಾನಿ ದೇವಿಯ ಉಪಾಸನೆಯನ್ನು ಮಾಡಿದರು. ನಾವು ಕೂಡ ನಮ್ಮ ಕುಲದೇವರ ಉಪಾಸನೆಯನ್ನು ಮಾಡೋಣ. ಕುಲದೇವರ ನಾಮಜಪವನ್ನು ಮಾಡೋಣ. ಪ್ರತಿಯೊಂದು ಕೃತಿಯನ್ನು ಮಾಡುವುದಕ್ಕಿಂತ ಮುಂಚೆ ದೇವರಿಗೆ ಪ್ರಾರ್ಥಿಸೋಣ. ಮಿತ್ರರೇ, ಭಕ್ತಿಯಲ್ಲೇ ಶಕ್ತಿ ಇದೆ.'

– ಶ್ರೀ ರಾಜೇಂದ್ರ ಪಾವಸ್ಕರ (ಗುರುಜಿ), ಪನವೇಲ