ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಮುಂತಾದ ಕಾಲ್ಪನಿಕ ಪಾತ್ರಗಳತ್ತ ಆಕರ್ಶಿತರಾಗುವುದರಿಂದ ಆಗುವ ಪರಿಣಾಮಗಳು.

ಕಾಲ್ಪನಿಕ ಪಾತ್ರಗಳು ವಾಸ್ತವದಲ್ಲಿ ಶಕ್ತಿವಂತರಲ್ಲ, ಆದುದರಿಂದ ಅವುಗಳು ನಮಗೆ ಎಂದಿಗೂ ಸಹಾಯ ಮಾಡದಿರುವುದು

ಈಗೀಗ ಮಕ್ಕಳಿಗಾಗಿ ಸ್ಪೈಡರ್ ಮ್ಯಾನ, ಸುಪರ ಮ್ಯಾನ, ಶಕ್ತಿಮಾನ ಮುಂತಾದ ಕಾಲ್ಪನಿಕ ಪಾತ್ರಗಳಿರುವ ಮನೋರಂಜನಾತ್ಮಕ ಧಾರವಾಹಿಗಳು ದೂರದರ್ಶನದ ಮೇಲೆ ತೋರಿಸಲಾಗುತ್ತದೆ. ಈ ಕಾಲ್ಪನಿಕ ಪಾತ್ರಗಳು ಸಂಕಟ ಕಾಲದಲ್ಲಿ ಸಮಾಜಕ್ಕೆ ಸಹಾಯ ಮಾಡುತ್ತವೆ ಮತ್ತು ಇತರರ ಕಲ್ಯಾಣ ಮಾಡುವುದಕ್ಕೆ ಪ್ರಯತ್ನಿಸುತ್ತವೆ ಎಂದು ತೋರಿಸಲಾಗುತ್ತದೆ. ಈ ಪಾತ್ರಗಳಿಗೆ ಹಕ್ಕಿಗಳಂತೆ ಹಾರಲು, ಅದೃಶ್ಯರಾಗಲು, ಓಡುವ ರೈಲನ್ನು ತಡೆದು ನಿಲ್ಲಿಸಲು ಮತ್ತು ಬೆರಳುಗಳಿಂದ ಬಂದೂಕಿನಂತಹ ಗುಂಡುಗಳನ್ನು ಅಥವಾ ವಿಧ್ವಂಸಕ ಕಿರಣಗಳನ್ನು ಪ್ರಕ್ಷೆಪಿಸುವಂತೆ ಬಿಂಬಿಸಲಾಗುತ್ತದೆ. ಈ ಶಕ್ತಿಗಳನ್ನು ಉಪಯೋಗಿಸಿ ಅವರು ದುರ್ಜನರ ನಾಶ ಮಾಡುವುದನ್ನು ತೋರಿಸಲಾಗುತ್ತದೆ. ಮಕ್ಕಳಲ್ಲಿ ಈ ಪಾತ್ರಗಳ ಬಗ್ಗೆ ತುಂಬಾ ಆಕರ್ಷಣೆ ನಿರ್ಮಾಣ ಆಗುತ್ತದೆ. ಈ ಪಾತ್ರಗಳು ನಮಗೆ ಸಂಕಟ ಕಾಲದಲ್ಲಿ ಸಹಾಯ ಮಾಡಬಹುದು ಎಂದು ಮಕ್ಕಳಿಗೆ ಅನಿಸುತ್ತದೆ. ಆದರೆ ಈ ಎಲ್ಲ ಪಾತ್ರಗಳು ಕೆವಲ ಕಾಲ್ಪನಿಕ, ಅವುಗಳಿಗೆ ನಿಜವಾದ ಅಸ್ತಿತ್ವ ಇಲ್ಲ, ನಾವು ಸಂಕಟ ಕಾಲದಲ್ಲಿ ಅವುಗಳನ್ನು ಕರೆದರೆ, ನಮಗೆ ಎಂದಿಗೂ ಸಹಾಯ ಸಿಗಲು ಸಾಧ್ಯವಿಲ್ಲ.

'ಕಾಲ್ಪನಿಕ ಪಾತ್ರಗಳು ಸಹಾಯ ಮಾಡುವವು' ಎಂಬ ನಂಬಿಕೆ ಇಟ್ಟು ಮಕ್ಕಳು ಕೃತಿ ಮಾಡುವುದರಿಂದ ಹಾನಿ ಆಗುವುದು

ಕೆಲವು ಮಕ್ಕಳು ಈ ಕಾಲ್ಪನಿಕ ಪಾತ್ರಗಳ ಕಥೆಗಳನ್ನು ನೋಡುತ್ತಾರೆ ಅಥವಾ ಓದುತ್ತಾರೆ, ಹಾಗೆಯೇ ಅವರಂತೆಯೇ ವೇಷಭೂಷಣವನ್ನು ಮಾಡುತ್ತಾರೆ. ಇಂತಹ ಪಾತ್ರಗಳು ನಿಜವಾಗಿಯೂ ಇದ್ದಾರೆ, ಹೀಗೆ ಅನಿಸುವುದರಿಂದ ಎಷ್ಟು ಹಾನಿ ಆಗುತ್ತದೆ ಎಂಬುವುದರ ಉದಾಹರಣೆಯನ್ನು ನೋಡೋಣ. ದೂರದರ್ಶನದ "ಶಕ್ತಿಮಾನ" ಈ ಧಾರವಾಹಿಯಲ್ಲಿ ಒಬ್ಬ ಕೆಟ್ಟ ವ್ಯಕ್ತಿಯು ಎತ್ತರದ ಕಟ್ಟಡದ ಮೇಲಿನಿಂದ ಮಕ್ಕಳು ಮತ್ತು ದೊಡ್ಡವರನ್ನು ಕೆಳಗೆ ಎಸೆಯುತ್ತಿರುತ್ತಾನೆ. ಆ ವೇಳೆಯಲ್ಲಿ ಶಕ್ತಿಮಾನ ಹಾರುತ್ತ ಬಂದು ಅವರನ್ನು ರಕ್ಷಿಸುತ್ತಾನೆ. ಇದನ್ನು ನೋಡಿದ ಕೆಲವು ಮಕ್ಕಳಿಗೆ "ಶಕ್ತಿಮಾನ ಮಕ್ಕಳ ರಕ್ಷಣೆಗೆ ಬರುತ್ತಾನೆ" ಹೀಗೆ ಅನ್ನಿಸಿ, ಎತ್ತರದ ಕಟ್ಟಡದಿಂದ ಕೆಳಗೆ ಜಿಗಿದರು. ಶಕ್ತಿಮಾನ ಅವರನ್ನು ರಕ್ಷಿಸಲು ಬರಲಿಲ್ಲವೆಂದು ಬೇರೆ ಹೇಳಬೇಕಾಗಿಲ್ಲ.

ಕಾಲ್ಪನಿಕ ಪಾತ್ರಗಳ ವೇಗಕ್ಕಿಂತ ಹನುಮಂತನ ವೇಗ ಅಧಿಕ ಇರುವುದು.

ಕಾಲ್ಪನಿಕ ಸ್ಪೈಡರ್ ಮ್ಯಾನ ಅಥವಾ ಸುಪರ ಮ್ಯಾನ ಎಷ್ಟು ವೇಗವಾಗಿ ಆಕಾಶದಲ್ಲಿ ಹಾರಿ ಹೋಗುತ್ತಾನೆ ಎಂಬುವುದರ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ. ಆದರೆ ಹನುಮಂತನ ವೇಗವು ಕೇವಲ ಈ ಕಾಲ್ಪನಿಕ ಪಾತ್ರಗಳಂತೆ ಇರದೇ ನಮ್ಮ ಮನಸ್ಸಿನ ವೇಗಕ್ಕಿಂತ ಹೆಚ್ಚಾಗಿದೆ. ಪ್ರಭು ರಾಮಚಂದ್ರ ಮತ್ತು ರಾವಣ ಇವರ ಯುದ್ಧದಲ್ಲಿ ಇಂದ್ರಜೀತನು ಉಪಯೋಗಿಸಿದ ಶಕ್ತಿಯಿಂದ ಲಕ್ಷ್ಮಣನು ಮೂರ್ಛಿತನಾದನು. ಆಗ ವೈದ್ಯರು ದ್ರೋಣಗಿರಿ ಪರ್ವತದ ಮೇಲಿರುವ 'ಸಂಜಿವನಿ' ಗಿಡಮೂಲಿಕೆಯನ್ನು ತರಲು ಹೇಳಿದರು. ಅದನ್ನು ತರಲು ಹನುಮಂತನ ರಾತ್ರಿಯೇ ಬಹಳಷ್ಟು ಯೊಜನೆಗಳನ್ನು (ಅಳತೆಯ ಮಾಪಕ) ಕ್ರಮಿಸಿ, ದ್ರೋಣಗಿರಿ ಪರ್ವತವನ್ನೇ ಎತ್ತಿ ತಂದನು ಮತ್ತು ಲಕ್ಷ್ಮಣನಿಗೆ ಉಪಚಾರ ಆದ ನಂತರ ಅದೇ ರಾತ್ರಿ ಆ ಪರ್ವತ ಪುನಃ ಅದೇ ಸ್ಥಳದಲ್ಲಿ ಇಟ್ಟು ಬಂದನು. ಇದೆಲ್ಲವನ್ನು ಅವನು ಪ್ರಚಂಡ ವೇಗದಿಂದ ಮಾಡಿದನು. ಇದರಿಂದ ಅವನು ಎಷ್ಟು ಶಕ್ತಿಶಾಲಿ ಮತ್ತು ಚುರುಕಾಗಿದ್ದಾನೆ ಎಂದು ತಿಳಿಯುತ್ತದೆ.

ಹನುಮಂತನು ಸೀತೆಯೊಂದಿಗೆ ಅಶೋಕವನದಲ್ಲಿ ಭೇಟಿ ಮಾಡಿ ಅವಳಿಗೆ ತನ್ನೊಂದಿಗೆ ಬರಲು ಪ್ರಾರ್ಥನೆ ಮಾಡಿದನು. ಅವನ ಚಿಕ್ಕ ರೂಪ ಕಂಡು ಸೀತೆಗೆ ಅನುಮಾನ ಉಂಟಾಯಿತು, ಆಗ ಮಾರುತಿಯು ಅವಳಿಗೆ ತನ್ನ ವಿಶಾಲ ರೂಪ ಧಾರಣೆ ಮಾಡಿ ತೋರಿಸಿದನು.

– ಕು. ಇಂದ್ರಾಣಿ ಪುರಾಣಿಕ,ಗೋವಾ.

ಮಕ್ಕಳೇ, ಸ್ಪೈಡರ್ ಮ್ಯಾನ, ಸುಪರ ಮ್ಯಾನನಂತಹ ಕಾಲ್ಪನಿಕ ಪಾತ್ರಗಳತ್ತ ಆಕರ್ಷಣೆ ಇಡುವುದಕ್ಕಿಂತ ಸರ್ವಜ್ಞ, ಸರ್ವಶಕ್ತಿಮಾನ ಮತ್ತು ಸರ್ವವ್ಯಾಪಿ ಈಶ್ವರನನ್ನು ತಿಳಿದುಕೊಳ್ಳುವ ಜಿಜ್ಞಾಸೆಯನ್ನು ಇಟ್ಟುಕೊಳ್ಳಿ.