ಶರಣು ಸಿದ್ದಿ ವಿನಾಯಕ

ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ ||ಅ||

ಶರಣು ಪಾರ್ವತೀತನಯ ಮೂರುತಿ ಶರಣು ಮೂಷಕವಾಹನ ||ಅಪ||

ನಿಟಿಲ ನೆತ್ರನೆ ವರದಪುತ್ರನೆ ನಾಗಭೂಷಣ ಪ್ರಿಯನೇ

ಕಟಕಟಾಂಗದ ಕೋಮಲಾಂಗನೆ ಕರ್ಣ ಕುಂಡಲ ಧಾರನೆ ||೧||

ಬಟ್ಟ ಮುತ್ತಿನ ಹಾರಪದಕನೆ ಬಾಹುಹಸ್ತ ಚತುಷ್ಟನೆ

ಇಟ್ಟ ತೂಡುಗೆಯ ಹೇಮಕಂಕಣ ಪಾಶಅಂಕುಶ ಧಾರನೆ ||೨||

ಕುಕ್ಷಿ ಮಹಲಂಬೋದರನೆ ನೀ ಇಕ್ಷುಚಾಪನ ಗೆಲಿದನೆ

ಪಕ್ಷಿವಾಹನ ಸಿರಿ ಪುರಂಧರ ವಿಠಲನ ನಿಜದಾಸನೆ ||೩||