ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ |೨|
ಗರಿಗೆ ತಂದರೆ ನೀನು …..ಅ ಅ ಅ ….
ಗರಿಗೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓದುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು
ಗಣಪತಿ ಅಥರ್ವಶೀರ್ಷ
ಸಂಕಟನಾಶನ ಸ್ತೋತ್ರ || ಶ್ರೀ ಗಣಪತೀ ಸ್ತೋತ್ರ
ಜೈ ಗಣೇಶ್ ಜೈ ಗಣೇಶ್ ದೇವ:
ಲಂಬೋದರ ಲಕುಮಿಕರ