ಮಕ್ಕಳೇ, ಪುಸ್ತಕಗಳ ಕಾಳಜಿ ಹೀಗೆ ವಹಿಸಿ!

೧. ಪುಸ್ತಕಗಳಿಗೆ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಿ, ನಂತರವೇ ಉಪಯೋಗಿಸಿ : ಹೀಗೆ ಮಾಡುವುದರಿಂದ ಕೈಗಳ ಮೇಲಿನ ಬೆವರು, ಎಣ್ಣೆಯ ಜಿಡ್ಡು ಅಥವಾ ಧೂಳು ಮುಖಪುಟ ಅಥವಾ ಹಿಂದಿನ ಪುಟಕ್ಕೆ ತಗಲಿ ಅವು ಕೊಳೆಯಾಗುವುದಿಲ್ಲ.

೨. ಸಮರ್ಥ ರಾಮದಾಸ ಸ್ವಾಮಿಗಳು ಶ್ರೀ ದಾಸಬೋಧದಲ್ಲಿ ‘ಯಾರು ಪುಸ್ತಕಗಳ ಕಾಳಜಿ ತೆಗೆದುಕೊಳ್ಳುವುದಿಲ್ಲವೋ ಅವನು ಮೂರ್ಖನಾಗಿದ್ದಾನೆ‘ (ದಶಕ ೨, ಸಮಾಸ ೧) ಎಂದು ಹೇಳಿದ್ದಾರೆ.

೩. ಬೆರಳುಗಳಿಗೆ ಉಗುಳು ಹಚ್ಚಿ ಪುಟಗಳನ್ನು ತಿರುಗಿಸಬೇಡಿರಿ : ಪುಸ್ತಕಕ್ಕೆ ಉಗುಳು ಹಚ್ಚುವುದು ಶ್ರೀ ಸರಸ್ವತಿ ದೇವಿಯ ಅಪಮಾನವಾಗಿದೆ. ಪುಸ್ತಕವನ್ನು ಓದುವ ಇತರ ವಾಚಕರಿಗೆ ಉಗುಳಿನ ಮಾಧ್ಯಮದಿಂದ ರೋಗಾಣುಗಳ ಸಂಪರ್ಕವಾಗುವ ಸಾಧ್ಯತೆಯಿರುತ್ತದೆ.

೪. ಗುರುತು ಹಾಕಲು ಪುಟಗಳ ಮೂಲೆಯನ್ನು ಅಥವಾ ಪುಟಗಳನ್ನು ಮಡಚಿಡಬೇಡಿ : ಮಡಚಿದ ಸ್ಥಳದಲ್ಲಿ ಪುಟಗಳು ಹರಿಯುವ ಸಾಧ್ಯತೆಯಿರುತ್ತದೆ. ಪುಸ್ತಕದಲ್ಲಿ ಗುರುತಿಗಾಗಿರುವ ದಪ್ಪ ದಾರವನ್ನು ಉಪಯೋಗಿಸಿರಿ. ದಾರವಿಲ್ಲದಿದ್ದರೆ ಕಾಗದದ ತುಂಡನ್ನು ಉಪಯೋಗಿಸಿರಿ.

೫. ಪುಸ್ತಕಗಳನ್ನು ಕಪಾಟಿನಲ್ಲಿ ಅಡ್ಡವಾಗಿ ಮಲಗಿಸಿಡಬೇಕು : ಕಪಾಟಿನಲ್ಲಿ ಪುಸ್ತಕಗಳನ್ನು ನಿಲ್ಲಿಸಿಟ್ಟರೆ ಹೊಲಿಗೆಯಿಂದ ಪುಟಗಳು ಹೊರಬರುವ ಸಂಭವವಿರುತ್ತದೆ ಅಥವಾ ಪುಸ್ತಕಗಳನ್ನು ವಾಲಿಸಿ ಇಟ್ಟರೆ ಅವು ಬಾಗುವ ಸಾಧ್ಯತೆಯಿದೆ. ಅದಕ್ಕೆ ಪುಸ್ತಕಗಳನ್ನು ಕಪಾಟಿನಲ್ಲಿ ಅಡ್ಡವಾಗಿ ಮಲಗಿಸಿಡಬೇಕು.

ಇತರ ಸೂಚನೆಗಳು

೧. ಪುಸ್ತಕಗಳ ಮೇಲೆ ನಿಮ್ಮ ಹೆಸರು ಮತ್ತು ವಿಳಾಸವನ್ನಷ್ಟೇ ಬರೆಯಿರಿ.

೨. ಅವುಗಳ ಮೇಲೆ ಅಡ್ಡಾದಿಡ್ಡಿಯಾಗಿ ಗುರುತುಗಳನ್ನು ಹಾಕಬೇಡಿ.

೩. ಪುಸ್ತಕಗಳಲ್ಲಿನ ಚಿತ್ರಗಳನ್ನು ವಿದ್ರೂಪಗೊಳಿಸಬೇಡಿ ಅಥವಾ ಪುಸ್ತಕಗಳಲ್ಲಿನ ಪುಟಗಳನ್ನು ಹರಿಯಬೇಡಿ.

೪. ಓದಿದ ನಂತರ ಪುಸ್ತಕಗಳನ್ನು ಎಸೆಯ ಬೇಡಿ, ಅವುಗಳಿಗೆ ಗೌರವವನ್ನು ನೀಡಲು ನಿಧಾನವಾಗಿ ಕೆಳಗಿಡಬೇಕು.

೫. ಪುಸ್ತಕಗಳಿಗೆ ಕಾಲು ತಾಗಿಸಬೇಡಿ. ತಪ್ಪಿ ಕಾಲು ತಾಗಿದರೆ ನಮಸ್ಕಾರ ಮಾಡಿ.

ವಿದ್ಯಾರ್ಥಿ ಮಿತ್ರರೇ, ಕೇವಲ ತಮ್ಮದಷ್ಟೇ ಅಲ್ಲ, ಇತರರ ಅಥವಾ ಸಾರ್ವಜನಿಕ ಗ್ರಂಥಾಲಯದ ಪುಸ್ತಕಗಳ ಬಗ್ಗೆಯೂ ಇದೇ ರೀತಿಯ ಜಾಗರೂಕತೆಯನ್ನು ವಹಿಸಿರಿ!

Leave a Comment