ತಂಪು ಪಾನೀಯವೆಂದರೆ ಶರೀರದ ಶತ್ರು


ಹಲ್ಲು ಮತ್ತು ಎಲುಬುಗಳ ಶತ್ರು

ಪೇಟೆಯಲ್ಲಿನ ತಂಪು ಪಾನೀಯಗಳು ನಿಮ್ಮ ಹಲ್ಲು ಮತ್ತು ಎಲುಬುಗಳನ್ನು ನಿಷ್ಕ್ರಿಯಗೊಳಿಸುವ ಸಾಧನವಾಗಿವೆ. ಈ ಪದಾರ್ಥಗಳಲ್ಲಿ ಆಮ್ಲತೆಯ ಅಂಶ (ಪಿ.ಎಚ್.) ಸುಮಾರು ೩.೪ ರಷ್ಟಿರುತ್ತದೆ. ಈ ಆಮ್ಲತೆಯು ಹಲ್ಲು ಮತ್ತು ಎಲುಬುಗಳನ್ನು ಕರಗಿಸಲು ಸಾಕಾಗುತ್ತದೆ. ಸಾಮಾನ್ಯವಾಗಿ ಜೀವನದಲ್ಲಿ ಸುಮಾರು ೩೦ ವರ್ಷಗಳು ಕಳೆದ ನಂತರ ನಮ್ಮ ಶರೀರದಲ್ಲಿ ಎಲುಬು ನಿರ್ಮಾಣವಾಗುವ ಪ್ರಕ್ರಿಯೆ ನಿಲ್ಲುತ್ತದೆ. ಅನಂತರ ಆಹಾರ ಪದಾರ್ಥಗಳಲ್ಲಿನ ಆಮ್ಲತೆಯ (ಆಸಿಡಿಟಿಯ) ಪ್ರಮಾಣಕ್ಕನುಸಾರ ಎಲುಬುಗಳು ಕರಗಲು ಪ್ರಾಂಭವಾಗುತ್ತವೆ.

ತಂಪುಪಾನೀಯಗಳಿಂದ ಅನೇಕ ಕಾಯಿಲೆಗಳು ಬರಬಹುದು

ಆರೋಗ್ಯದ ದೃಷ್ಟಿಯಿಂದ ನೋಡಿದರೆ ಈ ತಂಪು ಪಾನೀಯಗಳಲ್ಲಿ ಪ್ರೊಟೀನ್ ಮತ್ತು ಖನಿಜ ತತ್ತ್ವಗಳ ಅಂಶ ಸ್ವಲ್ಪವೂ ಇರುವುದಿಲ್ಲ. ಇದರಲ್ಲಿ ಸಕ್ಕರೆ, ಕಾರ್ಬೋಲಿಕ್ ಆಮ್ಲ ಹಾಗೂ ಇತರ ರಸಾಯನಿಕಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ. ನಮ್ಮ ಶರೀರದ ಉಷ್ಣತೆಯು ಸಾಧಾರಣ ೩೭ಅಂಶ ‘ಸೆಲ್ಸಿಯಸ್’ನಷ್ಟು ಇದ್ದರೆ ತಂಪುಪಾನೀಯಗಳ ಉಷ್ಣತೆಯು ಅತ್ಯಂತ ಕಡಿಮೆ ಅಂದರೆ ಶೂನ್ಯ ಅಂಶದವರೆಗೂ ಇರುತ್ತದೆ. ಶರೀರದ ಉಷ್ಣತೆಯಲ್ಲಿ ಇಷ್ಟು ಹೆಚ್ಚು ವ್ಯತ್ಯಾಸವು ವ್ಯಕ್ತಿಯ ಜೀರ್ಣಾಂಗದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಿಂದಾಗಿ ವ್ಯಕ್ತಿಯು ಸೇವಿಸಿದ ಆಹಾರ ಜೀರ್ಣವಾಗುವುದಿಲ್ಲ ಹಾಗೂ ಅದರಲ್ಲಿ ವಾಯು ಮತ್ತು ದುರ್ಗಂಧ ಉತ್ಪನ್ನವಾಗಿ ಹಲ್ಲುಗಳಿಗೆ ಹರಡುತ್ತದೆ ಹಾಗೂ ಅನೇಕ ಕಾಯಿಲೆಗಳು ಬರುತ್ತವೆ.

ಪ್ರಯೋಗದ ಫಲಿತಾಂಶ

‘ಒಂದು ಪ್ರಯೋಗದಲ್ಲಿ ಒಂದು ತುಂಡಾದ ಹಲ್ಲನ್ನು ಒಂದು ಪಾನೀಯದಲ್ಲಿ ಹಾಕಿ ಮುಚ್ಚಿಡಲಾಯಿತು. ೧೦ ದಿನಗಳ ನಂತರ ಆ ಹಲ್ಲನ್ನು ನಿರೀಕ್ಷಣೆಗಾಗಿ ತೆಗೆಯಬೇಕಿತ್ತು, ಆದರೆ ಅಲ್ಲಿ ನೋಡುವಾಗ ಹಲ್ಲೇ ಇರಲಿಲ್ಲ, ಅಂದರೆ ಅದು ಕರಗಿ ಹೋಗಿತ್ತು. ಇದನ್ನು ಹೇಳುವ ತಾತ್ಪರ್ಯವಿಷ್ಟೇ ಗಟ್ಟಿಯಾಗಿರುವ ಹಲ್ಲು ಸಹ ಹಾನಿಕರವಾದ ಪಾನೀಯದ ದುಷ್ಪ್ರಭಾವದಿಂದ ಕರಗಿ ನಾಶವಾಗುತ್ತದೆ, ಹಾಗಾದರೆ ಈ ಆಹಾರವು ಜೀರ್ಣವಾಗಲು ಅನೇಕ ಗಂಟೆಗಳ ಕಾಲ ಹೊಟ್ಟೆಯಲ್ಲಿರುತ್ತದೆಯೆಂದಾದರೆ ಆ ಕೋಮಲ ಹಾಗೂ ಸೂಕ್ಷ್ಮವಾದ ಕರುಳಿನ ಅವಸ್ಥೆ ಏನಾಗಬಹುದು?’ (ಕೃಪೆ : ಹಿಂದವೀ, ೧೧.೪.೨೦೧೦)

Leave a Comment