ನಮಸ್ಕಾರ ಹೇಗೆ ಮಾಡುವುದು ?

ದೇವರ ಅಥವಾ ಸಂತರ ಪಾದುಕೆಗಳುಪಾದುಕೆಗಳ ಕುಂಟೆಯ ಮೇಲೆ ತಲೆಯನ್ನಿಡದೇ ಪಾದುಕೆಗಳ ಮುಂದಿನ ಭಾಗದ ಮೇಲೆ (ಹೆಬ್ಬೆರಳಿನ ಜಾಗದಲ್ಲಿ) ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು.

ಹಿರಿಯರುಸೌಭಾಗ್ಯವತಿಯು ಹಿರಿಯರಿಗೆ ಕೆಳಗೆ ಬಗ್ಗಿ ನಮಸ್ಕರಿಸುವಾಗ ೩ ಸಲ ಕೈಗಳನ್ನು ಮೇಲೆ-ಕೆಳಗೆ ಮಾಡಬೇಕು.

ಇತರ ವ್ಯಕ್ತಿಗಳುಪರಸ್ಪರರನ್ನು ಭೇಟಿಯಾಗುವಾಗ ಎದುರುಬದುರಾಗಿ ನಿಂತುಕೊಂಡು ಎರಡೂ ಕೈಗಳನ್ನು ಜೋಡಿಸಿಕೊಂಡು ಹೆಬ್ಬೆರಳುಗಳನ್ನು ಎದೆಯಿಂದ ಸ್ವಲ್ಪ ಅಂತರದಲ್ಲಿರುವಂತೆ ಇಟ್ಟು ಕೈಗಳನ್ನು ಜೋಡಿಸಿ, ಸ್ವಲ್ಪ ಮುಂದಕ್ಕೆ ಬಗ್ಗಿ ನಮಸ್ಕಾರ ಮಾಡಬೇಕು.

ಸಂತರುಸಂತರ ಚರಣಗಳ ಮೇಲೆ ನಮ್ಮ ಕೈಗಳನ್ನಿಡಬೇಕು ಮತ್ತು ಪಾದಗಳ ಹೆಬ್ಬೆರಳುಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಬೇಕು.